Homeಅಂತರಾಷ್ಟ್ರೀಯಅನಿಶ್ಚಿತ ಆರ್ಥಿಕತೆ: 18,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್

ಅನಿಶ್ಚಿತ ಆರ್ಥಿಕತೆ: 18,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್

- Advertisement -
- Advertisement -

ಆನ್‌ಲೈನ್ ಮಾರುಕಟ್ಟೆಯ ದೈತ್ಯ ಸಂಸ್ಥೆ ಅಮೆಜಾನ್ ಅನಿಶ್ಚಿತ ಆರ್ಥಿಕತೆಯ ಕಾರಣ ನೀಡಿ ಮತ್ತೆ 18,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ.

ನವೆಂಬರ್ ತಿಂಗಳಿನಲ್ಲಿ 10,000 ಉದ್ಯೋಗಿಗಳನ್ನು ಮನೆಗೆ ಕಳಿಸಿದ್ದ ಅಮೆಜಾನ್ ಕಂಪನಿಯು ಈಗ ಮತ್ತೆ 18,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಇದು ಜಾಗತಿಕ ಆರ್ಥಿಕ ಕುಸಿತದ ಕರಾಳ ಪರಿಣಾಮವಾಗಿದ್ದು ಲಕ್ಷಾಂತರ ಜನರ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

“ನಾವು ಕೇವಲ 18,000 ಉದ್ಯೋಗಿಗಳನ್ನು ತೆಗೆದುಹಾಕಲು ಯೋಜಿಸಿದ್ದೇವೆ” ಎಂದು ಅಮೆಜಾನ್ ಸಿಇಒ ಆಂಡಿ ಜಸ್ಸಿ ತಮ್ಮ ಸಿಬ್ಬಂದಿಗೆ ಕಳಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಈ ರೀತಿಯ ಉದ್ಯೋಗ ಕಡಿತ ಜನರಿಗೆ ಕಷ್ಟಕರವಾಗಲಿದೆ ಎಂಬುದು ನಮಗೆ ಆಳವಾಗಿ ತಿಳಿದಿದೆ. ನಾವು ಈ ನಿರ್ಧಾರಗಳನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ ಕೆಲಸ ಕಳೆದುಕೊಂಡವರಿಗೆ ಬೇರ್ಪಡಿಕೆಯ ಪಾವತಿ, ಆರೋಗ್ಯ ವಿಮೆ ಮತ್ತು ಪರ್ಯಾಯ ಕೆಲಸಕ್ಕೆ ಸಹಾಯ ಮಾಡುವ ಪ್ಯಾಕೇಜ್‌ ಅನ್ನು ನೀಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಅಮೆಜಾನ್‌ ಕಂಪನಿಗೆ ಆರ್ಥಿಕ ಹಿಂಜರಿತದ ಹೊಡೆತ ಬಿದ್ದಿದ್ದು, ಅದು ಈಗಲೂ ಮುಂದುವರೆಯುತ್ತಿದೆ. ಮುಂದಿನ ಅನಿಶ್ಚಿತ ಆರ್ಥಿಕತೆಯ ದೃ‍ಷ್ಟಿಯಿಂದ ಈ ಕ್ರಮಗಳು ಅನಿವಾರ್ಯವಾಗಿದೆ. ಜನವರಿ 18 ರಿಂದ ಕೆಲಸ ಕಡಿತ ಯೋಜನೆ ಜಾರಿಗೊಳ್ಳಲ್ಲಿದೆ. ನಮ್ಮ ಕಂಪನಿಯ ಉದ್ಯೋಗಿಯೊಬ್ಬರು ಈ ವಿಷಯವನ್ನು ಬಹಿರಂಗಗೊಳಿಸಿರುವುದರಿಂದ ನಾವು ದಿಢೀರ್ ಎಂದು ಘೋಷಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಆಂಡಿ ಜಸ್ಸಿ ತಿಳಿಸಿದ್ದಾರೆ.

ಸುಮಾರು 15 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿರುವ ಅಮೆಜಾನ್ ಕೊರೊನಾ ಸಾಂಕ್ರಾಮಿಕದ ಕಾರಣಕ್ಕಾಗಿ ಹೇರಲಾದ ಲಾಕ್‌ಡೌನ್‌ ಸಂದರ್ಭದಲ್ಲಿ ಅಮೆಜಾನ್ ಅತಿ ಹೆಚ್ಚು ಕೆಲಸಗಾರರನ್ನು ನೇಮಿಸಿಕೊಂಡಿತ್ತು. ಆಗಿನ ಜನರ ಬೇಡಿಕೆಗೆ ಕೆಲಸಗಾರರ ಅಗತ್ಯವಿತ್ತು. ಆದರೆ ಎರಡು ವರ್ಷಗಳ ನಂತರ ಆನ್‌ಲೈನ್ ಬೇಡಿಕೆ ಕುಗ್ಗಿದಂತೆ ಕೆಲಸಗಾರರನ್ನು ತೆಗೆಯುವ ಪರಿಪಾಠ ಆರಂಭವಾಗಿದೆ. ಅಮೆಜಾನ್ ಮಾತ್ರವಲ್ಲದೆ ಹಲವಾರು ಕಂಪನಿಗಳು ಸಹ ಉದ್ಯೋಗಿಗಳ ವಜಾದಲ್ಲಿ ನಿರತವಾಗಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿರುದ್ಯೋಗದ ಪ್ರಮಾಣ ತೀವ್ರತರದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ; ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...