Homeಮುಖಪುಟಹಲ್ದ್‌ವಾನಿ ಒಕ್ಕಲೆಬ್ಬಿಸುವಿಕೆ: ಬೀದಿಗೆ ಬಿದ್ದ ಮುಸ್ಲಿಂ ಕುಟುಂಬಗಳು - ಇಂದು ಸುಪ್ರೀಂ ವಿಚಾರಣೆ

ಹಲ್ದ್‌ವಾನಿ ಒಕ್ಕಲೆಬ್ಬಿಸುವಿಕೆ: ಬೀದಿಗೆ ಬಿದ್ದ ಮುಸ್ಲಿಂ ಕುಟುಂಬಗಳು – ಇಂದು ಸುಪ್ರೀಂ ವಿಚಾರಣೆ

- Advertisement -
- Advertisement -

“ನಮ್ಮನ್ನು ಇಲ್ಲಿಂದ ಹೊರದೂಡಬೇಡಿ. ನಮ್ಮ ಮನೆ, ಶಾಲೆ ಎಲ್ಲ ಇಲ್ಲೇ ಇವೆ. ನಾವು ಎಲ್ಲಿಗೂ ಹೋಗುವುದಿಲ್ಲ. ಬೇರೆಡೆ ಹೋಗಿ ನಾವು ಓದುವುದಾದರೂ ಹೇಗೆ? ಈ ಚಳಿಯಲ್ಲಿ ನಮ್ಮ ತಮ್ಮ- ತಂಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು?” ಈ ರೀತಿಯಾಗಿ ಅಳುತ್ತಾ ಪರಿ ಪರಿಯಾಗಿ ಬೇಡಿಕೊಳ್ಳುವ ಪುಟ್ಟ ಬಾಲಕಿಯ ವಿಡಿಯೋ ಇಂಟರ್ನೆಟ್‌ನಲ್ಲಿ ಹಲವರ ಮನಕರಗಿಸುತ್ತಿದೆ. ಆದರೆ ಉತ್ತರಾಖಂಡ ರಾಜ್ಯದ ಹಲ್ದ್‌ವಾನಿ ಸ್ಲಂ ತೆರವುಗೊಳಿಸಬಾರದೆಂಬ ವಿಚಾರವಾಗಿ ಸುಪ್ರೀಂ ಕೋರ್ಟ್‌ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಇಂದು ನಿರ್ಧಾರವಾಗಲಿದೆ.

ಉತ್ತರಾಖಂಡ ರಾಜ್ಯದ ಹಲ್ದ್‌ವಾನಿ ಜಿಲ್ಲೆಯ ಬನ್‌ಭೂಲ್‌ಪುರ ಪ್ರದೇಶದ ರೈಲು ನಿಲ್ದಾಣದ ಪಕ್ಕದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು, ಮನೆ ಕಟ್ಟಿಕೊಂಡು ತಲೆಮಾರುಗಳಿಂದ ವಾಸಿಸುತ್ತಿದ್ದು ಸುಮಾರು 4,000ಕ್ಕೂ ಹೆಚ್ಚು ಕುಟುಂಬಗಳನ್ನು ಅಲ್ಲಿಂದ ಒಕ್ಕಲಿಬ್ಬಿಸಬೇಕು, ಅದು ರೈಲ್ವೆ ಇಲಾಖೆಗೆ ಸೇರಿದ ಜಾಗ ಎಂದು ಉತ್ತರಾಖಂಡ ಹೈಕೋರ್ಟ್ ಆದೇಶಿಸಿದೆ. ಈ ಆದೇಶದಿಂದ ತತ್ತರಿಸಿರುವ ಅಲ್ಲಿನ ನಿವಾಸಿಗಳು ಇದು ರೈಲ್ವೆ ಇಲಾಖೆಯ ಜಾಗವಲ್ಲ ಎಂದು ವಾದಿಸಿ, ಒಕ್ಕಲೆಬ್ಬಿಸುವಿಕೆಯನ್ನು ನಿಲ್ಲಿಸಬೆಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಕೋರ್ಟ್ ಇಂದು ಅರ್ಜಿ ವಿಚಾರಣೆ ನಡೆಸಲಿದೆ.

ನಾವಿಲ್ಲಿ ಹಲವಾರು ತಲೆಮಾರುಗಳಿಂದ ವಾಸಿಸುತ್ತಿದ್ದೇವೆ. ನಮ್ಮ ಮನೆಗಳಿಗೆ ತೆರಿಗೆ ಕಟ್ಟುತ್ತಿದ್ದೇವೆ. ಈ ಪ್ರದೇಶದಲ್ಲಿ ಐದು ಸರ್ಕಾರಿ ಶಾಲೆಗಳು, ಒಂದು ಆಸ್ಪತ್ರೆ ಮತ್ತು ಎರಡು ಓವರ್‌ಹೆಡ್ ನೀರಿನ ಟ್ಯಾಂಕ್‌ಗಳಿವೆ. ಇಂತಹ ಪ್ರದೇಶವನ್ನು ಅಕ್ರಮವೆಂದು ನೆಲಸಮ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಭೂಮಿಯ ಒಡೆತನದ ವ್ಯಾಜ್ಯ ಇನ್ನು ಜಿಲ್ಲಾ ಕೋರ್ಟ್‌ನಲ್ಲಿರುವಾಗ ಒಕ್ಕಲೆಬ್ಬಿಸುವಿಕೆಗೆ ಹೈಕೋರ್ಟ್ ಆದೇಶಿಸಿರುವುದು ಕಾನೂನುಬಾಹಿರ ಎಂದು ಅಲ್ಲಿನ ನಿವಾಸಿಗಳು ವಾದಿಸಿದ್ದಾರೆ.

ಈ ಪ್ರದೇಶದಲ್ಲಿ ಬಹುತೇಕ ಮುಸ್ಲಿಂ ಸಮುದಾಯಗಳು ವಾಸಿಸುತ್ತಿರುವ ಕಾರಣ ಹಗೆತನದಿಂದಾಗಿ ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಲೆಮಾರುಗಳಿಂದ ಇಲ್ಲಿ ಬದುಕಿದ ನಮಗೆ ಈ ಜಾಗದ ಒಡೆತನದ ಹಕ್ಕಿದೆ. ನಮ್ಮನ್ನು ಒಕ್ಕಲೆಬ್ಬಿಸುವುದು ಬೇಡ ಎಂದು ಅಲ್ಲಿನ ಸಾವಿರಾರು ಮಹಿಳೆಯರು ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...