Homeಮುಖಪುಟಉತ್ತರ ಪ್ರದೇಶ ಆಸ್ಪತ್ರೆಯ ಹೊರಗೆ ಫುಟ್‌ಪಾತ್‌ನಲ್ಲಿ ಗಂಟೆಗಟ್ಟಲೆ ಕಾದ 69 ಕೊರೊನಾ ಸೋಂಕಿತರು

ಉತ್ತರ ಪ್ರದೇಶ ಆಸ್ಪತ್ರೆಯ ಹೊರಗೆ ಫುಟ್‌ಪಾತ್‌ನಲ್ಲಿ ಗಂಟೆಗಟ್ಟಲೆ ಕಾದ 69 ಕೊರೊನಾ ಸೋಂಕಿತರು

- Advertisement -
- Advertisement -

69 ಕೊರೊನಾ ರೋಗಿಗಳ ಗುಂಪು ಗುರುವಾರ ಬೆಳಿಗ್ಗೆ ಕನಿಷ್ಠ ಒಂದು ಗಂಟೆಗಳ ಕಾಲ ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಬೀಗ ಹಾಕಿದ ಗೇಟುಗಳ ಹೊರಗೆ ಫುಟ್‌ಪಾತ್‌ನಲ್ಲಿ ಕಾಯಬೇಕಾದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಆಸ್ಪತ್ರೆಯು ಕೊರೊನಾ ರೋಗಿಗಳಿಗಾಗಿ ಮೀಸಲಾದ ಆಸ್ಪತ್ರೆಯಾಗಿದ್ದು, ಸಮರ್ಪಕ ಸಂವಹನದ ಕೊರತೆಯಿಂದಾಗಿ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ.

ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಸೈಫೈನ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಫ್ಲೂ ಹೊರರೋಗಿ ವಿಭಾಗದ ಗೇಟ್‌ಗಳ ಹೊರಗೆ ವಿಲಕ್ಷಣ ಘಟನೆ ನಡೆದಿದ್ದು, ಗುರುವಾರ ಮುಂಜಾನೆ COVID-19 ಬಾಧಿತ 69 ರೋಗಿಗಳನ್ನು ಕರೆತಂದ ಬಸ್ ಆಸ್ಪತ್ರೆಯ ಗೇಟ್‌ಗಳನ್ನು ಮುಂದೆ ಇಳಿಸಿದೆ.

ರೋಗಿಗಳನ್ನು ಪಶ್ಚಿಮ ಯುಪಿ ನಗರವಾದ ಆಗ್ರಾದಿಂದ ಸೈಫೈನ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿತ್ತು. ಇದು ಈ ಪ್ರದೇಶದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ರೋಗಿಗಳನ್ನು ಯುಪಿ ಸಾರಿಗೆ ಬಸ್‌ನಲ್ಲಿ 116 ಕಿ.ಮೀ ದೂರದಲ್ಲಿರುವ ಆಗ್ರಾದಿಂದ ಕಳುಹಿಸಲಾಗಿತ್ತು. ಬೆಂಗಾವಲು ತಂಡವನ್ನು ಬಸ್‌ನೊಂದಿಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಈ ದೃಶ್ಯಗಳನ್ನು ದೂರದಿಂದ ಸ್ಥಳೀಯರು ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಅದರಂತೆ ಆಸ್ಪತ್ರೆಯ ಮುಚ್ಚಿದ ಗೇಟ್‌ಗಳ ಹೊರಗೆ ಫುಟ್‌ಪಾತ್‌ನಲ್ಲಿ ರೋಗಿಗಳು ಕುಳಿತಿದ್ದಾರೆ. ಮುಖವನ್ನು ಮರೆಮಾಡಲು ಮಾಸ್ಕ್‌ ಮಾತ್ರ ಧರಿಸಿದ್ದಾರೆ. ಇಬ್ಬರು ಪೊಲೀಸರು ರಕ್ಷಣೆಗಿದ್ದು ಅಂತರ ಕಾಯ್ದುಕೊಳ್ಳಿ ಎಂದು ನಿರ್ದೇಶನ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಆನಂತರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಉತ್ತರ ಪ್ರದೇಶದ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ದ್ವಾರಗಳನ್ನು ತಲುಪಿ ಅಲ್ಲಿನ ಬಾಧಿತರನ್ನು ಉದ್ದೇಶಿಸಿ ಮಾತನಾಡಿರುವುದು ಸಹ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ.

“ಇಲ್ಲಿಯೇ ಇರಿ. ವೈದ್ಯಕೀಯ ತಂಡ ಶೀಘ್ರದಲ್ಲೇ ಇಲ್ಲಿಗೆ ಬರಲಿದೆ ಮತ್ತು ಒಂದು ಪಟ್ಟಿಯನ್ನು ತಯಾರಿಸಿ ನಿಮ್ಮನ್ನು ಕರೆದೊಯ್ಯುತ್ತದೆ. ನೀವು ಇಲ್ಲಿ ಸುತ್ತಾಡಬೇಡಿ ಮತ್ತು ಓಡಿಹೋಗಲು ಪ್ರಯತ್ನಿಸಬೇಡಿ. ಒಂದು ವೇಳೆ ಓಡಿಹೋದರೆ ನಿಮ್ಮನ್ನು ಹಿಡಿಯಲಾಗುತ್ತದೆ. ನೀವು ಇದ್ದಕ್ಕಿದ್ದಂತೆ ಬಂದಿದ್ದೀರಿ. ನಿಮ್ಮ ಕುರಿತು ಇಲ್ಲಿ ಯಾವುದೇ ಮಾಹಿತಿ ಇರಲಿಲ್ಲ, ಇದಿದ್ದರೆ ಪಟ್ಟಿಗಳನ್ನು ತಯಾರಿಸಬಹುದಿತ್ತು ಎಂದು ಪೊಲೀಸ್ ಅಧಿಕಾರಿ ಚಂದ್ರ ಪಾಲ್ ಸಿಂಗ್ ಮೊಬೈಲ್ ವೀಡಿಯೊದಲ್ಲಿ ಹೇಳುತ್ತಾರೆ.

ಈ ಕುರಿತು ಆಸ್ಪತ್ರೆಯನ್ನು ನಡೆಸುತ್ತಿರುವ ವಿಶ್ವವಿದ್ಯಾಲಯದ ಉಪಕುಲಪತಿ ಸಂವಹನದ ಕೊರತೆಯಿಂದ ಹೀಗಾಗಿದೆ ಎಂದು ಒಪ್ಪಿಕೊಂಡರು. ಆದರೆ ಇದಕ್ಕಾಗಿ ಸೈಫೈ ಆಸ್ಪತ್ರೆಯ ವೈದ್ಯರು ಅಥವಾ ಅರೆವೈದ್ಯಕೀಯ ಸಿಬ್ಬಂದಿಯನ್ನು ದೂಷಿಸಬಾರದು ಎಂದು ಹೇಳಿದರು.

“ಯಾರು ನಿರ್ಲಕ್ಷ್ಯ ವಹಿಸಿದ್ದಾರೆಂದು ನಾನು ಹೇಳಲಾರೆ. ಆದರೆ ರೋಗಿಗಳು ಒಂದು ದಿನ ಮುಂಚಿತವಾಗಿ (ಬುಧವಾರ) ತಲುಪಬೇಕಾಗಿತ್ತು ಮತ್ತು ರೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವರ್ಗಾವಣೆ ಮಾಡಿದಾಗ, ಕಾರ್ಯವಿಧಾನವು ಜವಾಬ್ದಾರಿಯುತ ಅಧಿಕಾರಿ ಅಥವಾ ವೈದ್ಯರ ಪಟ್ಟಿಯೊಂದಿಗೆ ಬರುತ್ತದೆ. ನಂತರ ನಾವು ರೋಗಿಗಳನ್ನು ಒಳಗೆ ಕರೆದೊಯ್ಯುತ್ತೇವೆ. ನಮ್ಮ ತಂಡವು ಜಾಗರೂಕತೆಯಿಂದ ಕೂಡಿತ್ತು. ಆದರೆ ಸಂವಹನದ ಕೊರತೆಯುಂಟಾಗಿದೆ. ಈ ಕಾರಣದಿಂದಾಗಿ ಅವರು ನಿಗದಿತ ದಿನದಂದು ತಲುಪಲಿಲ್ಲ ಆದರೆ ಮರುದಿನ ಬಂದಿರುವುದರಿಂದ ನಮ್ಮ ತಂಡಕ್ಕೆ ಮಾಹಿತಿ ಇಲ್ಲ. ಆದರೆ ನಮ್ಮ ಯಾವುದೇ ದಾಖಲೆಗಳನ್ನು ಹೊಂದಿರದಿದ್ದರೂ ತಂಡವು ಅವರನ್ನು ಕರೆದೊಯ್ಯಿತು. ಇದು 30 ನಿಮಿಷದಿಂದ ಒಂದು ಗಂಟೆಯವರೆಗೆ ಸಮಯದ ತೆಗೆದುಕೊಂಡಿತು. ಆ ಸಮಯದಲ್ಲಿ ಅವರು ಎಲ್ಲಿಯಾದರೂ ತಿರುಗಾಡಿದ್ದಾರೆ ಎಂದು ನನಗೆ ಖಾತ್ರಿಯಿಲ್ಲ ಎಂದು ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜ್ ಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ: ಬೀಡಿಯೊಳಗೆ ಸುರುಟುವ ಬದುಕಿನ ಬವಣೆಗಳು : ದ.ಕ ಜಿಲ್ಲೆಯ ಸ್ಥಿತಿಗತಿ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...