ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಹೋಲಿಕೆ ಮಾಡಿ ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘ಅಂಬೇಡ್ಕರ್ ಮತ್ತು ಮೋದಿ: ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಶನ್’ ಪುಸ್ತಕದ ಮುನ್ನುಡಿಯನ್ನು ಇಳಯರಾಜ ಅವರು ಬರೆದಿದ್ದು, ಮೋದಿ ಹಾಗೂ ಅಂಬೇಡ್ಕರ್‌ರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿದ್ದಾರೆಂದು ಆರೋಪಿಸಲಾಗಿದೆ.
ಇಳಯರಾಜ ಅವರು ತಮ್ಮ ಮುನ್ನುಡಿಯಲ್ಲಿ ಅಂಬೇಡ್ಕರ್ ಮತ್ತು ಮೋದಿಯವರ ನಡುವೆ ಸಮಾನ ಅಂಶಗಳಿವೆ ಎಂದಿದ್ದಾರೆ. “ಬಡತನ ಮತ್ತು ಉಸಿರುಗಟ್ಟಿಸುವ ಸಾಮಾಜಿಕ ರಚನೆಗಳನ್ನು ಹತ್ತಿರದಿಂದ ನೋಡಿದ ವ್ಯಕ್ತಿಗಳಿವರು. ಅವುಗಳ ನಿರ್ಮೂಲನೆಗಾಗಿ ಕೆಲಸ ಮಾಡಿದರು” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಳಯರಾಜ ಅವರ ಬರಹಕ್ಕೆ ವಿರೋಧಗಳು ಬಂದಿವೆ. ಹಲವು ವಿಷಯಗಳಲ್ಲಿ ವಿದ್ವತ್ತು ಪಡೆದ, ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮೋದಿಯವರಿಗೆ ಹೋಲಿಸಿರುವುದು ಸರಿಯಲ್ಲ ಎಂದು ಆಕ್ಷೇಪಗಳು ವ್ಯಕ್ತವಾಗಿವೆ.
ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಬಿಡುಗಡೆ ಮಾಡಿದ ಈ ಪುಸ್ತಕವು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವಗಳ ನಡುವಿನ ಕೆಲವು ಗಮನಾರ್ಹ ಸಮಾನಾಂತರಗಳನ್ನು ತೆರೆದಿಡುತ್ತದೆ ಎಂದು ಇಳಯರಾಜ ಅವರ ಮುನ್ನುಡಿ ಹೇಳುತ್ತದೆ.
On the occasion of Dr. Babasaheb Ambedkar’s Jayanti, BlueKraft Digital Foundation would like to pay tributes to his ideals through an announcement.
Here is the first glimpse of our book 'Ambedkar & Modi – Reformer’s Ideas, Performer’s Implementation'. pic.twitter.com/bVBuSU4UZn
— BlueKraft Digital Foundation (@BlueKraft) April 14, 2022
ಈ ಇಬ್ಬರೂ ವ್ಯಕ್ತಿಗಳು ಸಾಮಾಜಿಕವಾಗಿ ಅಶಕ್ತಗೊಂಡ ವರ್ಗಗಳ ಜನರ ವಿರುದ್ಧ ಧ್ವನಿ ಎತ್ತಿದವರು. ಇಬ್ಬರೂ ಬಡತನ ಮತ್ತು ಉಸಿರುಗಟ್ಟಿಸುವ ಸಾಮಾಜಿಕ ರಚನೆಗಳನ್ನು ಹತ್ತಿರದಿಂದ ನೋಡಿದವರು. ಅವುಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಕೆಲಸ ಮಾಡಿದರು. ಇಬ್ಬರೂ ಭಾರತಕ್ಕಾಗಿ ದೊಡ್ಡ ಕನಸು ಕಂಡರು. ಆದರೆ ಇಬ್ಬರೂ ಕೇವಲ ಚಿಂತನೆಯಲ್ಲಿ ತೊಡಗದೆ ಕ್ರಿಯೆಯನ್ನು ನಂಬಿದವರು ಎಂದಿದ್ದಾರೆ.
ತ್ರಿವಳಿ ತಲಾಖ್ ಮತ್ತು ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮ ಸೇರಿದಂತೆ ‘ಮಹಿಳೆಯರ ಪ್ರಗತಿಗಾಗಿ’ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಕೆಲಸದ ಬಗ್ಗೆ ಅಂಬೇಡ್ಕರ್‌ರವರು “ಹೆಮ್ಮೆಪಡುತ್ತಿದ್ದರು” ಎಂದು ಮುನ್ನುಡಿ ಹೇಳುತ್ತದೆ. ಮಹಿಳೆಯರ ವಿವಾಹದ ವಯಸ್ಸು 18 ರಿಂದ 21ಕ್ಕೆ ಏರಿಸುವ ಉದ್ದೇಶಿತ ಶಾಸನವನ್ನು ಪ್ರಶಂಸಿಸಲಾಗಿದೆ.
“ಡಾ ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳು, ದೂರದೃಷ್ಟಿಯ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ”ಯನ್ನು ಬೆಸೆಯುವ ಪ್ರಯತ್ನವನ್ನು ಪುಸ್ತಕ ಮಾಡುವುದಾಗಿ ಇಳಯರಾಜ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿರಿ: ಶಾಸಕ ಎನ್.ಮಹೇಶ್ ಸೂಚನೆ ಮೇರೆಗೆ ದಲಿತ ವ್ಯಕ್ತಿಯ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ; ಆರೋಪ
“ಸಾಮಾಜಿಕವಾಗಿ ಅಂಚಿನಲ್ಲಿರುವ ಸಮುದಾಯಗಳಿಗೆ ಕಾನೂನು ರಕ್ಷಣೆಯನ್ನು ಹಲವು ರೀತಿಯಲ್ಲಿ ನೀಡಲಾಗಿದೆ” ಎಂದು ಮುನ್ನುಡಿ ಹೇಳುತ್ತದೆ. “ಶೌಚಾಲಯಗಳನ್ನು, ಮನೆಗಳನ್ನು ನಿರ್ಮಿಸುವ ಮೂಲಕ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ” ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಜನರಿಗೆ ಸಹಾಯ ಮಾಡಲು ಪ್ರಧಾನಿ ಪ್ರಯತ್ನಿಸಿದ್ದಾರೆ ಎಂದು ಶ್ಲಾಘಿಸಲಾಗಿದೆ.
ಮುನ್ನುಡಿಯಲ್ಲಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಡಿಎಂಕೆಯ ರಾಜ್ಯಸಭಾ ಸಂಸದ ಟಿಕೆಎಸ್ ಇಳಂಗೋವನ್, ಮೋದಿ ಮತ್ತು ಅಂಬೇಡ್ಕರ್ ಅವರನ್ನು ಹೋಲಿಸುವುದು ತಪ್ಪು ಎಂದಿದ್ದಾರೆ.
ಅಂಬೇಡ್ಕರ್ ಅವರು ವರ್ಣ ವ್ಯವಸ್ಥೆಯಿಂದ ತುಳಿತಕ್ಕೊಳಗಾದವರ ಪರ ಕೆಲಸ ಮಾಡಿದರೆ, ಮೋದಿಯವರು ಅಂಬೇಡ್ಕರ್ ವಿರುದ್ಧ ಹೋರಾಡುತ್ತಿದ್ದ ಮನುಧರ್ಮ ವ್ಯವಸ್ಥೆಗೆ ಸೇರಿದ್ದಾರೆ ಎಂದು ಇಳಂಗೋವನ್ ಸ್ಪಷ್ಟಪಡಿಸಿದ್ದಾರೆ.
ಇಳಯರಾಜಾ ಅವರು ಶ್ಲಾಘಿಸಿದ ತ್ರಿವಳಿ ತಲಾಖ್ ಕಾನೂನಿನಂತಹ ನೀತಿಗಳು ಮತ್ತು ಕಾನೂನುಗಳು ದೋಷಪೂರಿತವಾಗಿವೆ, ಮುಸ್ಲಿಮರಿಗೆ ಹಾನಿಕಾರಕವಾಗಿದೆ ಎಂದಿದ್ದಾರೆ.



ಇಳಯರಾಜ ಈ ಮಟ್ಟದ ಚಮಚಾಗಿರಿಗೆ ಇಳಿಯಬಾರದಿತ್ತು.
ನಿಮಗೆ ಇರುವ ಗೌರವ ಉಳಿಸಿಕೊಳ್ಳಿ
ಕೆಳ ಮಟ್ಟಕೆ ಇಳಿಯಾಬೇಡಿ
No body can replace of ambedkar he is world person great leader also ok don’t compare modi ok
ಇಳೆಯ ರಾಜ ನೀವು! ನಿಮ್ಮ ಮಿದುಳಿಗೆ ಏನಾಗಿದೆ? ಅಂಬೇಡ್ಕರ್ ರಿಗೆ ಮೋದಿಯವರು ಸಾಟಿಯಾಗಬಲ್ಲರೇ?