Homeಮುಖಪುಟಮೋದಿಯನ್ನು ಅಂಬೇಡ್ಕರ್‌ರವರಿಗೆ ಹೋಲಿಸಿದ ಸಂಗೀತ ನಿರ್ದೇಶಕ ಇಳಯರಾಜ

ಮೋದಿಯನ್ನು ಅಂಬೇಡ್ಕರ್‌ರವರಿಗೆ ಹೋಲಿಸಿದ ಸಂಗೀತ ನಿರ್ದೇಶಕ ಇಳಯರಾಜ

- Advertisement -
- Advertisement -

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರಿಗೆ ಹೋಲಿಕೆ ಮಾಡಿ ವಿವಾದ ಸೃಷ್ಟಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ‘ಅಂಬೇಡ್ಕರ್ ಮತ್ತು ಮೋದಿ: ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಶನ್’ ಪುಸ್ತಕದ ಮುನ್ನುಡಿಯನ್ನು ಇಳಯರಾಜ ಅವರು ಬರೆದಿದ್ದು, ಮೋದಿ ಹಾಗೂ ಅಂಬೇಡ್ಕರ್‌ರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿದ್ದಾರೆಂದು ಆರೋಪಿಸಲಾಗಿದೆ.

ಇಳಯರಾಜ ಅವರು ತಮ್ಮ ಮುನ್ನುಡಿಯಲ್ಲಿ ಅಂಬೇಡ್ಕರ್ ಮತ್ತು ಮೋದಿಯವರ ನಡುವೆ ಸಮಾನ ಅಂಶಗಳಿವೆ ಎಂದಿದ್ದಾರೆ. “ಬಡತನ ಮತ್ತು ಉಸಿರುಗಟ್ಟಿಸುವ ಸಾಮಾಜಿಕ ರಚನೆಗಳನ್ನು ಹತ್ತಿರದಿಂದ ನೋಡಿದ ವ್ಯಕ್ತಿಗಳಿವರು. ಅವುಗಳ ನಿರ್ಮೂಲನೆಗಾಗಿ ಕೆಲಸ ಮಾಡಿದರು” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಳಯರಾಜ ಅವರ ಬರಹಕ್ಕೆ ವಿರೋಧಗಳು ಬಂದಿವೆ. ಹಲವು ವಿಷಯಗಳಲ್ಲಿ ವಿದ್ವತ್ತು ಪಡೆದ, ಸಮಾನತೆಯ ಹರಿಕಾರ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಮೋದಿಯವರಿಗೆ ಹೋಲಿಸಿರುವುದು ಸರಿಯಲ್ಲ ಎಂದು ಆಕ್ಷೇಪಗಳು ವ್ಯಕ್ತವಾಗಿವೆ.

ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಬಿಡುಗಡೆ ಮಾಡಿದ ಈ ಪುಸ್ತಕವು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವಗಳ ನಡುವಿನ ಕೆಲವು ಗಮನಾರ್ಹ ಸಮಾನಾಂತರಗಳನ್ನು ತೆರೆದಿಡುತ್ತದೆ ಎಂದು ಇಳಯರಾಜ ಅವರ ಮುನ್ನುಡಿ ಹೇಳುತ್ತದೆ.

ಈ ಇಬ್ಬರೂ ವ್ಯಕ್ತಿಗಳು ಸಾಮಾಜಿಕವಾಗಿ ಅಶಕ್ತಗೊಂಡ ವರ್ಗಗಳ ಜನರ ವಿರುದ್ಧ ಧ್ವನಿ ಎತ್ತಿದವರು. ಇಬ್ಬರೂ ಬಡತನ ಮತ್ತು ಉಸಿರುಗಟ್ಟಿಸುವ ಸಾಮಾಜಿಕ ರಚನೆಗಳನ್ನು ಹತ್ತಿರದಿಂದ ನೋಡಿದವರು. ಅವುಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಕೆಲಸ ಮಾಡಿದರು. ಇಬ್ಬರೂ ಭಾರತಕ್ಕಾಗಿ ದೊಡ್ಡ ಕನಸು ಕಂಡರು. ಆದರೆ ಇಬ್ಬರೂ ಕೇವಲ ಚಿಂತನೆಯಲ್ಲಿ ತೊಡಗದೆ ಕ್ರಿಯೆಯನ್ನು ನಂಬಿದವರು ಎಂದಿದ್ದಾರೆ.

ತ್ರಿವಳಿ ತಲಾಖ್ ಮತ್ತು ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮ ಸೇರಿದಂತೆ ‘ಮಹಿಳೆಯರ ಪ್ರಗತಿಗಾಗಿ’ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಕೆಲಸದ ಬಗ್ಗೆ ಅಂಬೇಡ್ಕರ್‌‌ರವರು “ಹೆಮ್ಮೆಪಡುತ್ತಿದ್ದರು” ಎಂದು ಮುನ್ನುಡಿ ಹೇಳುತ್ತದೆ. ಮಹಿಳೆಯರ ವಿವಾಹದ ವಯಸ್ಸು 18 ರಿಂದ 21ಕ್ಕೆ ಏರಿಸುವ ಉದ್ದೇಶಿತ ಶಾಸನವನ್ನು ಪ್ರಶಂಸಿಸಲಾಗಿದೆ.

“ಡಾ ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳು, ದೂರದೃಷ್ಟಿಯ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ”ಯನ್ನು ಬೆಸೆಯುವ ಪ್ರಯತ್ನವನ್ನು ಪುಸ್ತಕ ಮಾಡುವುದಾಗಿ ಇಳಯರಾಜ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ಶಾಸಕ ಎನ್‌.ಮಹೇಶ್‌ ಸೂಚನೆ ಮೇರೆಗೆ ದಲಿತ ವ್ಯಕ್ತಿಯ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ; ಆರೋಪ

“ಸಾಮಾಜಿಕವಾಗಿ ಅಂಚಿನಲ್ಲಿರುವ ಸಮುದಾಯಗಳಿಗೆ ಕಾನೂನು ರಕ್ಷಣೆಯನ್ನು ಹಲವು ರೀತಿಯಲ್ಲಿ ನೀಡಲಾಗಿದೆ” ಎಂದು ಮುನ್ನುಡಿ ಹೇಳುತ್ತದೆ. “ಶೌಚಾಲಯಗಳನ್ನು, ಮನೆಗಳನ್ನು ನಿರ್ಮಿಸುವ ಮೂಲಕ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ” ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಜನರಿಗೆ ಸಹಾಯ ಮಾಡಲು ಪ್ರಧಾನಿ ಪ್ರಯತ್ನಿಸಿದ್ದಾರೆ ಎಂದು ಶ್ಲಾಘಿಸಲಾಗಿದೆ.

ಮುನ್ನುಡಿಯಲ್ಲಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಡಿಎಂಕೆಯ ರಾಜ್ಯಸಭಾ ಸಂಸದ ಟಿಕೆಎಸ್ ಇಳಂಗೋವನ್, ಮೋದಿ ಮತ್ತು ಅಂಬೇಡ್ಕರ್ ಅವರನ್ನು ಹೋಲಿಸುವುದು ತಪ್ಪು ಎಂದಿದ್ದಾರೆ.

ಅಂಬೇಡ್ಕರ್ ಅವರು ವರ್ಣ ವ್ಯವಸ್ಥೆಯಿಂದ ತುಳಿತಕ್ಕೊಳಗಾದವರ ಪರ ಕೆಲಸ ಮಾಡಿದರೆ, ಮೋದಿಯವರು ಅಂಬೇಡ್ಕರ್ ವಿರುದ್ಧ ಹೋರಾಡುತ್ತಿದ್ದ ಮನುಧರ್ಮ ವ್ಯವಸ್ಥೆಗೆ ಸೇರಿದ್ದಾರೆ ಎಂದು ಇಳಂಗೋವನ್ ಸ್ಪಷ್ಟಪಡಿಸಿದ್ದಾರೆ.

ಇಳಯರಾಜಾ ಅವರು ಶ್ಲಾಘಿಸಿದ ತ್ರಿವಳಿ ತಲಾಖ್ ಕಾನೂನಿನಂತಹ ನೀತಿಗಳು ಮತ್ತು ಕಾನೂನುಗಳು ದೋಷಪೂರಿತವಾಗಿವೆ, ಮುಸ್ಲಿಮರಿಗೆ ಹಾನಿಕಾರಕವಾಗಿದೆ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಇಳೆಯ ರಾಜ ನೀವು! ನಿಮ್ಮ ಮಿದುಳಿಗೆ ಏನಾಗಿದೆ? ಅಂಬೇಡ್ಕರ್ ರಿಗೆ ಮೋದಿಯವರು ಸಾಟಿಯಾಗಬಲ್ಲರೇ?

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...