Homeಅಂಕಣಗಳುಮುಸ್ಲಿಂ ಸಮುದಾಯದ ಪ್ರಮುಖ ಇತಿಹಾಸಕಾರ, ಶಿಕ್ಷಣತಜ್ಞ ಮುಶ್ರಿಲ್ ಹಸನ್ ಕುರಿತು

ಮುಸ್ಲಿಂ ಸಮುದಾಯದ ಪ್ರಮುಖ ಇತಿಹಾಸಕಾರ, ಶಿಕ್ಷಣತಜ್ಞ ಮುಶ್ರಿಲ್ ಹಸನ್ ಕುರಿತು

"ಹಸನ್ ಅವರು ಗಣರಾಜ್ಯದ ಇತಿಹಾಸ ಮತ್ತು ಅದರ ಬಹುಮುಖ್ಯ ಅಲ್ಪಸಂಖ್ಯಾತರ ಇತಿಹಾಸದ ಕಲಿಕೆ, ಬೋದನೆಯನ್ನು ಮಾರ್ಪಡಿಸಿದರು”

- Advertisement -
- Advertisement -

| ಬಿ. ಶ್ರೀಪಾದ ಭಟ್ |

ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ.

10, ಡಿಸೆಂಬರ್ 2018ರಂದು ಅನಾರೋಗ್ಯದ ಕಾರಣದಿಂದ ನಿದನರಾದ ಇತಿಹಾಸಕಾರ, ಮಾಜಿ ಉಪಕುಲಪತಿ ಮುಶ್ರಿಲ್ ಹಸನ್ ಅವರು ವಿಶಿಷ್ಟ ಮಾದರಿಯ ಇತಿಹಾಸಕಾರ, ಶಿಕ್ಷಣ ತಜ್ಞರಾಗಿದ್ದರು ಮತ್ತು ಮಹಾನ್ ಮಾನವತವಾದಿಯಾಗಿದ್ದರು. 2004-2009ರ ಅವದಿಯಲ್ಲಿ ಜಾಮಿಯ ಮಿಲಿಯಾ ಇಸ್ಲಾಮಿಯ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದರು. ಈ ಅವದಿಯಲ್ಲಿ ಶಿಕ್ಷಣ ಮತ್ತು ಕಲಿಕೆಗೆ ಹೊಸ ಸ್ವರೂಪವನ್ನು ತಂದುಕೊಟ್ಟರು. ದೇಶವಿದೇಶಗಳಿಂದ ವಿದ್ವಾಂಸರನ್ನು ಆಹ್ವಾನಿಸಿ ಅದ್ಯಯನ ಮತ್ತು ಸಂಶೋದನೆಗೆ ವಿಬಿನ್ನ ಮಾದರಿಗಳನ್ನು ಪರಿಚಯಿಸಿದರು.

ಇವರ ಕಾಲಘಟ್ಟದಲ್ಲಿ ದಲಿತ ಅದ್ಯಯನ, ತುಲನಾತ್ಮಕ ದರ್ಮ, ನೆಲ್ಸನ್ ಮಂಡೇಲ ಶಾಂತಿ ಕೇಂದ್ರ ಒಳಗೊಂಡಂತೆ ಮೌಲಿಕವಾದ ಅದ್ಯಯನ ಕೇಂದ್ರಗಳನ್ನು ಸ್ಥಾಪಿಸಿದರು ಹಾಗೂ ಬೆಳೆಸಿದರು. ಅದಕ್ಕೂ ಮುಂಚೆ ದಶಕಗಳ ಕಾಲ ಇತಿಹಾಸವನ್ನು ಬೋದಿಸಿದ್ದರು. ಯುಜಿಸಿ ಮತ್ತು ಐಸಿಎಚ್‍ಆರ್ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದರು. ಜವಹರ್‍ಲಾಲ್ ನೆಹರೂ ಸ್ಮಾರಕ ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿದ್ದರು. ಇವೆಲ್ಲಕೂ ಮಿಗಿಲಾಗಿ ಅದ್ಯಯನ ಮತ್ತು ಸಂಶೋದನೆಯ ಕುರಿತಾದ ಅಚಲ ನಿಶ್ಟೆ ಮತ್ತು ಸೂಕ್ಷ್ಮ ಸಂವೇದನೆಯ ಮೂಲಕ ಇತಿಹಾಸ ಕಲಿಕೆಗೆ ವಿಬಿನ್ನ ಆಯಾಮಗಳನ್ನು ರೂಪಿಸಿದರು. ಹಸನ್ ಸಾಬ್ ಮಾಕ್ರ್ಸವಾದಿಯಾಗಿರಲಿಲ್ಲ, ನವ ಎಡಪಂಥೀಯರಾಗಿರಲಿಲ್ಲ, ಇವೆಲ್ಲವನ್ನೂ ಪಕ್ಕಕ್ಕೆ ಸರಿಸಿ ತಾವು ಕಂಡುಕೊಂಡ ಲಿಬರಲ್ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚಿಂತಿಸಿದರು ಮತ್ತು ಅದೆ ರೀತಿ ಬದುಕಿದರು.

ಜಾಮಿಯ ಮಿಲಿಯಾ ಇಸ್ಲಾಮಿಯ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಬೋದಿಸುತ್ತಿರುವ ಮುಕುಲ್ ಕೇಶವನ್  ಅವರು “ಹಸನ್ ಅವರು ಗಣರಾಜ್ಯದ ಇತಿಹಾಸ ಮತ್ತು ಅದರ ಬಹುಮುಖ್ಯ ಅಲ್ಪಸಂಖ್ಯಾತರ ಇತಿಹಾಸದ ಕಲಿಕೆ, ಬೋದನೆಯನ್ನು ಮಾರ್ಪಡಿಸಿದರು” ಎಂದು ಹೇಳುತ್ತಾರೆ. ಪ್ರೊ. ಹರಿಶಂಕರ್ ವಾಸುದೇವನ್ ಅವರು “ತನ್ನ ದ್ಯೇಯ ಮತ್ತು ಉದ್ದೇಶಗಳ ಕುರಿತು ಹಸನ್ ಅವರಿಗೆ ಬದ್ದತೆ ಇತ್ತು, ಅವುಗಳ ಮೌಲ್ಯ ಮತ್ತು ಗುಣಾತ್ಮಕತೆ ಬಗ್ಗೆ ಸಂವೇದನೆ, ಸೂಕ್ಷ್ಮತೆ ಹೊಂದಿದ್ದರು. ತನ್ನ ಪತ್ನಿ ಜೋಯ ಹಸನ್ ಜೊತೆಗಿನ ಬೌದ್ದಿಕ ಸಂವಾದ ಮತ್ತು ಕಾಮ್ರೇಡ್‍ತನಗಳು ಆವರ ಚಿಂತನೆಗಳಿಗೆ ಮತ್ತಶ್ಟು ಹೊಳಪು ನೀಡಿದ್ದವು” ಎಂದು ಬರೆಯುತ್ತಾರೆ.

ಅಲಿಘರ್, ಕೇಂಬ್ರಿಜ್ ವಿವಿಗಳಲ್ಲಿ ವ್ಯಾಸಂಗ ಮಾಡಿದ ಹಸನ್ ಅವರು ಕಲೋನಿಯಲಿಸಂ ಸಂದರ್ಬದಲ್ಲಿ ಮುಸ್ಲಿಂರು ಮತ್ತು ಸ್ವಾತಂತ್ರೋತ್ತರ ಬಾರತದಲ್ಲಿ ಮುಸ್ಲಿಂರು ಕುರಿತು ತುಲನಾತ್ಮಕವಾಗಿ ಮತ್ತು ಪ್ರತ್ಯೇಕವಾಗಿ ನಡೆಸಿದ ಸಂಶೋದನೆ, ಪ್ರಬಂದಗಳು ಇಂದಿಗೂ ಅತ್ಯುತ್ತಮ ಪಠ್ಯಗಳಾಗಿವೆ. ಕಲಿಕ ಮಾರ್ಗಗಳಾಗಿವೆ.    ಪ್ರೊ. ಸುಶ್ಮಿತ ಅವರು “ಮುಶ್ರಿಲ್ ಅವರು ತಮ್ಮ ಮುಸ್ಲಿಂ ಬುದ್ದಿಜೀವಿಗಳು, ಸಂಸ್ಥೆಗಳು ಮತ್ತು ಕಲೋನಿಯಲೋತ್ತರ ಅಪಾಯಗಳು ಎನ್ನುವ ಪ್ರಬಂದದಲ್ಲಿ ಅಕಡೆಮಿಕ್ ಮತ್ತು ಇತರ ವಲಯಗಳಲ್ಲಿ ಮುಸ್ಲಿಂರನ್ನು ವಸ್ತುಗಳಾಗಿ ನಿರೂಪಿಸಿದರು ಎಂದು ಟೀಕಿಸಿದರು. ಹಸನ್ ಅವರು ಹೇಳುತ್ತಾರೆ “ ಸ್ವಾತಂತ್ರ ನಂತರದಲ್ಲಿ ಬ್ರಿಟೀಶರು ಉದ್ದೇಶಪೂರ್ವಕವಾಗಿಯೆ ಹಾಕಿಕೊಟ್ಟ ಮತ್ತು ಕೆಲ ರಾಶ್ಟ್ರೀಯವಾದಿ ಲೇಖಕರು ಪ್ರತಿಪಾದಿಸಿದ ಚೌಕಟ್ಟಿನಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಸಂಶೋದನೆ ಮಾಡಲಾಗುತ್ತಿದೆ.

ಮುಸ್ಲಿಂರನ್ನು ವಿವರಿಸಲು ಬಳಸಿದ ಪ್ರವರ್ಗಗಳನ್ನು ಪ್ರಶ್ನಿಸಿದ್ದಾರೆ ಆದರೆ ಬದಲಾಯಿಸಿಲ್ಲ. ಈಗಲೂ ಮುಸ್ಲಿಂ ಮನಸ್ಥಿತಿ, ಮುಸ್ಲಿಂ ದೃಶ್ಟಿಕೋನ, ಇಸ್ಲಾಂ ಸುತ್ತ ಮುಸ್ಲಿಂ ಅಸ್ಮಿತೆಯನ್ನು ಕಟ್ಟುವ ಪ್ರಯತ್ನ ಮಾಡಲಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಮೇಲೆ ಒಂದು ಬಗೆಯ ಅನ್ಯತೆಯನ್ನು ಆರೋಪಿಸುವ ಪ್ರಜ್ಞೆಯೂ ಇಲ್ಲಿ ಕೆಲಸ ಮಾಡಿದೆ. ಮುದ್ರಣ ಮಾದ್ಯಮಗಳಲ್ಲಿ, ಸಿನಿಮಾಗಳಲ್ಲಿ, ಸಾಹಿತ್ಯದಲ್ಲಿ ಮುಸ್ಲಿಂರನ್ನು ಇತರರು ಎಂದೇ ಚಿತ್ರಿಸಲಾಗಿದೆ”. ಆದರೆ ಕೇವಲ ಹುಟ್ಟಿನ ಕಾರಣಕ್ಕಾಗಿ, ದರ್ಮದ ಕಾರಣಕ್ಕಾಗಿ ಮಾತ್ರವಲ್ಲದೆ ಅವರ ಆಸ್ತಿತ್ವ, ಕಸುಬು ಮತ್ತು ಬದುಕಿನ ಆದಾರದ ಮೇಲೆ ಅಸ್ಮಿತೆಯನ್ನು ಗುರುತಿಸಬೇಕಾಗಿದೆ ಎಂದು ಹಸನ್ ಪ್ರತಿಪಾದಿಸುತ್ತಿದ್ದರು” ಎಂದು ವಿವರಿಸುತ್ತಾರೆ.

ಮುಸ್ಲಿಂ ಮತ್ತು ಇಸ್ಲಾಂ ಅನ್ನು ಈಗಾಗಲೆ ಒಂದು ಪಡಿಯಚ್ಚು ಚೌಕಟ್ಟಿನಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಆದರೆ ಹಸನ್ ಅವರು ಈ ಏಕರೂಪಿ ಗ್ರಹಿಕೆಯನ್ನು ಮುರಿಯಲು ಶ್ರಮಿಸಿದರು. ಇದಕ್ಕಾಗಿ ವಿದಾನ ಶಾಸ್ತ್ರವನ್ನು ಅಶ್ಟಾಗಿ ಬಳಸಲು ಒಲವು ತೋರುತ್ತಿರಲಿಲ್ಲ. ಬದಲಿಗೆ ತಮ್ಮ ವಿಶ್ಲೇಷಣಾತ್ಮಕ ಅದ್ಯಯನದ ಮೂಲಕ ಹಳ್ಳಿ, ಹೋಬಳಿಗಳಲ್ಲಿನ ಬದುಕು, ವ್ಯವಸ್ಥೆಯ ಮೂಲಕ ಇತಿಹಾಸವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದರು. ಉರ್ದು ಬಾಶೆಯನ್ನು ಇತಿಹಾಸ ನಿರೂಪಣೆ ಮತ್ತು ಕಲಿಕೆಗೆ ಸಮರ್ಥವಾಗಿ ಬಳಸಿಕೊಂಡರು. ಈ ಮೂಲಕ ಇತಿಹಾಸದ ಅದ್ಯಯನದ ಸ್ವರೂಪವನ್ನೆ ಬದಲಿಸಿದರು. ಇಸ್ಲಾಂ ಕುರಿತಾದ ಮಿಥ್ಯೆಗಳನ್ನು ಎಳೆಎಳೆಯಾಗಿ ವಿವರಿಸಿದರು. ಇದು ಹಸನ್ ಅವರ ಮಹತ್ವದ ಕೊಡುಗೆ.

“ಬಾವೈಕ್ಯತೆ ಮತ್ತು ಅಸ್ಮಿತೆಯ ಹುಡುಕಾಟ : ಸ್ವಾತಂತ್ರ್ಯ ನಂತರದ ಭಾರತೀಯ ಮುಸ್ಲಿಂರು” (1988) ಎನ್ನುವ ದೀರ್ಘ ಲೇಖನದಲ್ಲಿ ಸೆಕ್ಯುಲರ್ ಪ್ರಯೋಗಗಳನ್ನು ಮತ್ತೆ ಮತ್ತೆ ಪುನವಿಮರ್ಶೆಗೆ ಒಳಪಡಿಸಬೇಕೆಂದು ಹೇಳುತ್ತಾರೆ. ಭಾರತದಲ್ಲಿನ ಕೋಮುವಾದಕ್ಕೆ ಇಂದಿಗೂ ನೆಹರೂ ಅವರ ಸೆಕ್ಯುಲರ್ ಮಾದರಿ ಮತ್ತು ಮತ್ತು ಬಹು-ರಾಶ್ಟ್ರೀಯ ಬಾವೈಕ್ಯತೆ ಪ್ರಸ್ತುತವಾಗಿದೆ ಎಂದು ನಲವತ್ತು ವರ್ಶಗಳ ಹಿಂದೆ ಅಬಿಪ್ರಾಯಪಡುತ್ತಾರೆ.

ಇತ್ತೀಚಿನವರೆಗೂ ಈ ನಿಲುವಿನಲ್ಲಿ ಬದಲಾವಣೆ ಆಗಿರಲಿಲ್ಲ ಎಂದು ಕಾಣುತ್ತದೆ. ಮತಾಂದ ರಾಶ್ಟ್ರೀಯವಾದಿ ಮತ್ತು ಬದ್ದತೆಯುಳ್ಳ ಸೆಕ್ಯುಲರ್ ಚಿಂತಕರ ನಡುವಿನ ಬೇದ ಮತ್ತು ಅಂತರಗಳನ್ನು ಗುರುತಿಸುತ್ತ ಮುಖ್ಯವಾಹಿನಿ ರಾಶ್ಟ್ರೀಯತೆಯು ಈ ಅಂತರವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ಅಬಿಪ್ರಾಯಪಡುತ್ತಾರೆ. ಈ ಕಾರಣಕ್ಕಾಗಿಯೆ ಸ್ವಾತಂತ್ರ್ಯ ನಂತರ ಪಾಕಿಸ್ತಾನ ಇಸ್ಲಾಂ ರಾಶ್ಟ್ರವಾಯಿತು ಆದರೆ ಭಾರತವು ಪ್ರಜಾಪ್ರಬುತ್ವ ಗಣರಾಜ್ಯವಾಗಿ ಕಟ್ಟಲ್ಪಟ್ಟಿತು ಎಂದು ಉದಾಹರಿಸುತ್ತಾರೆ. ಆಸ್ತಿತ್ವದ ಕಾರಣವಾಗಿ ಮುಸ್ಲಿಂರಿಗೆ ಸ್ವತಃ ಮುಸ್ಲಿಂರಾಗಿ ಸೆಕ್ಯುಲರ್ ಇಂಡಿಯಾದಲ್ಲಿ ರಾಜಕಾರಣ ಮಾಡುವುದು ಇಂದು ಅನಿವಾರ್ಯತೆಯಾಗಿ ಉಳಿದಿಲ್ಲ. ಮುಸ್ಲಿಂ ಲೀಗ್ ದುರ್ಬಲಗೊಂಡು ಇತರೆ ಮುಸ್ಲಿಮ ಸಂಘಟನೆಗಳು ಅಗೋಚರವಾಗಿರುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಜಾಪ್ರಬುತ್ವ ಮತ್ತು ಸೆಕ್ಯುಲರ್ ಚೌಕಟ್ಟಿನಲ್ಲಿಯೇ ರಾಜಕಾರಣ ಮಾಡಬೇಕಾಗಿದೆ ಎಂದು ಪ್ರತಿಪಾದಿಸುತ್ತಾರೆ. ಅಂದರೆ ಐಡೆಂಟಿಟಿ ರಾಜಕಾರಣವು ಇಂದು ತನ್ನ ಪ್ರಸ್ತುತತೆ ಕಳೆದುಕೊಂಡಿದೆ ಎನ್ನುವ ಅವರ ಅಬಿಪ್ರಾಯವು ಸಹ ಸಂಕೀರ್ಣವಾಗಿದೆ. ಏಕೆಂದರೆ ಇಂದು ಐಡೆಂಟಿಟಿ ರಾಜಕಾರಣವನ್ನು ಹಸನ್ ಅವರ ದೃಶ್ಟಿಕೋನದಲ್ಲಿ ಏಕಪಕ್ಷೀಯವಾಗಿ ನೋಡಲು ಸಾದ್ಯವಿಲ್ಲವೇನೊ.

“ಬಹುತ್ವದಿಂದ ಪ್ರತ್ಯೇಕತೆಯವರೆಗೆ : ಕಲೋನಿಯಲ್ ಬಾರತದಲ್ಲಿ ಕಸಬಾಸ್” (2003) ಮುಶ್ರಿಲ್ ಹಸನ್ ಅವರ ಮತ್ತೊಂದು ಮಹತ್ವದ ಪುಸ್ತಕ. ಕಲೋನಿಯಲ್ ಕಾಲದ ಅವಧ್‍ನಲ್ಲಿ ಕಸಬಾಸ್‍ನ ಬಹುಸಂಸ್ಕøತಿ ಮತ್ತು ಬಹುತ್ವದ ಕುರಿತು ಆಳವಾಗಿ ಚರ್ಚಿಸುತ್ತಾರೆ. ಸ್ಥಳೀಯ ಇತಿಹಾಸವನ್ನು ರಾಶ್ಟ್ರದೊಮದಿಗೆ ಸಮೀಕರಿಸುತ್ತ ಕಲೋನಿಯಲ್  ಉತ್ತರ ಬಾರತದಲ್ಲಿ ಸಮಾಜೊ-ಸಾಂಸ್ಕøತಿಕ ಚಹರೆಗಳು ಬದಲಾಗುತ್ತ ಹೋಗುವುದನ್ನು ವಿವರಿಸುತ್ತಾರೆ.

“ನೈತಿಕತೆಯ ಗುರುತಿಸುವಿಕೆ : 19ನೆ ಶತಮಾನದ ದೆಹಲಿಯಲ್ಲಿ ಮುಸ್ಲಿಂಬುದ್ದಿಜೀವಿಗಳು” (2005) ಪುಸ್ತಕದಲ್ಲಿ 19ನೆ ಶತಮಾನದ ಅತ್ಯಂತ ಪ್ರಮುಖ ಮುಸ್ಲಿಂ ಬುದ್ದಿಜೀವಿಗಳು, ದಾರ್ಶನಿಕರಾದ ಮಹಮ್ಮದ್ ಜಕವುಲ್ಲ, ನಜೀರ್ ಅಹ್ಮದ್, ಸೈಯದ್ ಅಹ್ಮದ್ ಖಾನ್, ಮಿರ್ಜಾ ಗಾಲಿಬ್, ಕ್ವಾಜ ಅಲ್ಪಾಫ್ ಹುಸೇನ್ ಹಾಲಿಯವರ ಬದುಕು, ವರ್ತನೆ ಕಲೋನಿಯಲ್ ಸಾಮ್ರಾಜ್ಯಕ್ಕೆ ಅವರ ಪ್ರತಿಕ್ರಿಯೆ, ಅವರ ಸಾಂಸ್ಕøತಿಕ ಐಡೆಂಟಿಟಿ ಮತ್ತು ತಮ್ಮ ನಡೆಗಳ ಮೂಲಕ ಮುಸ್ಲಿಂ ಸಮುದಾಯವನ್ನು ರೂಪಿಸಿದ್ದರ ಕುರಿತು ವಿವರಿಸುತ್ತಾರೆ.
ನವೆಂಬರ್ 2014ರಲ್ಲಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಮಶ್ರುಲ್ ಹಸನ್ ಅವರು ನಂತರ ಚೇತರಿಸಿಕೊಳ್ಳಲಿಲ್ಲ. ದಿನದಿಕ್ಕೂ ದೈಹಿಕವಾಗಿ ಕುಸಿಯುತ್ತ ಹೋದರು.
ಪ್ರಬಾತ್ ಪಟ್ನಾಯಕ್ ಅವರು “ಹಸನ್ ಅವರು ಸಂಸ್ಥೆಯ ಕಟ್ಟಿದ ಕಟ್ಟಕಡೆಯ ವ್ಯಕ್ತಿ. ಇಂದು ನಮ್ಮ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಕಶ್ಟದ ದಿನಗಳಿಂದ ಹೊರಬಂದರೂ ಮರಳಿ ಹಸನ್‍ರಂತಹ ವ್ಯಕ್ತಿ ದೊರಕುವುದಿಲ್ಲ. ಅವರು ಆಸ್ತಿತ್ವಕ್ಕೆ ಒಂದು ಘನತೆ, ಉದಾತ್ತತೆಯನ್ನು ತಂದುಕೊಟ್ಟರು ಎಂದು ವಿವರಿಸುತ್ತಾರೆ. ಸಲ್ಮಾನ್ ರಶ್ದಿಯ ಸಟಾನಿಕ್ ವರ್ಸಸ್ ಪುಸ್ತಕವನ್ನು ಮೂಲಬೂತವಾದಿಗಳ ಬೆದರಿಕೆಗೆ ಮಣಿದು ರಾಜೀವ್ ಗಾಂದಿ ಸರಕಾರ ನಿಶೇದಿಸಿದಾಗ ಇದನ್ನು ಮುಶ್ರಿಲ್ ಹಸನ್ ವಿರೋದಿಸುತ್ತಾರೆ. ಸಟಾನಿಕ್ ವರ್ಸಸ್ ಪುಸ್ತಕವನ್ನು ಓದಿ ಚರ್ಚಿಸಬೇಕು ಎಂದು ಹೇಳುವುದರ ಮೂಲಕ ಮೂಲಬೂತವಾದಿಗಳ ಕೋಪಕ್ಕೆ ಗುರಿಯಾಗುತ್ತಾರೆ. ಅವರನ್ನು ಜಾಮಿಯ ಮಿಲಿಯ ವಿವಿಯಿಂದ ಬಹಿಶ್ಕರಿಸಬೇಕು ಎನ್ನುವ ಒತ್ತಡ ಹೇರಲಾಗುತ್ತದೆ. ಆದರೆ ಇದಾವುದಕ್ಕೂ ಹಸನ್ ಸಾಬ್ ಮೈಟ್ ಮಾಡುವುದಿಲ್ಲ.
ಮುಶ್ರಿಲ್ ಹಸನ್ ಬರೆಯುತ್ತಾರೆ ‘ಫ್ರೆಂಚ್ ಕ್ರಾಂತಿಯ ಇತಿಹಾಸಕಾರ ಅಲ್ಫ್ರಡ್ ಗೊಬ್ಬನ್ ಐತಿಹಾಸಿಕ ನಿರ್ವಚನೆಯ ಕುರಿತು ಹೇಳುತ್ತ ಅದು ತನ್ನ ಸಾಕ್ಷಿಯ ಸ್ಥಿರತೆಯೊಂದಿಗೆ ಜೊತೆಗಿರಬೇಕಾಗುತ್ತದೆ ಅಥವ ಬಿಟ್ಟುಕೊಡಬೇಕಾಗುತ್ತದೆ ಎನ್ನುತ್ತಾನೆ. ಕಥಾವಸ್ತುವೊಂದಕ್ಕೆ ತನ್ನ ಮನಸ್ಸನ್ನು ಕೊಟ್ಟುಕೊಂಡವರಿಗೆ ಮತ್ತಶ್ಟು ಸರಕನ್ನು ಪೂರೈಸುತ್ತಿರುವಂತೆ ಇತಿಹಾಸವನ್ನು ಪ್ರಬಾವಿಸಬಹುದು. ದಿನನಿತ್ಯದ ಬದುಕಿನಲ್ಲಿ ದರ್ಮವು ಅತ್ಯಂತ ಪ್ರಬಾವಶಾಲಿಯಾಗಿ ಕಾರ್ಯನಿರ್ವಹಿಸುವ ಸಮಾಜದಲ್ಲಿ ಸೆಕ್ಯುಲರಿಸಂ ಅನ್ನು ಕಟ್ಟುವುದು ಇತಿಹಾಸಕಾರನ ಕರ್ತವ್ಯ ಮತ್ತು ದೇಶದ ಬವಿಶ್ಯಕ್ಕಾಗಿ ಸೆಕ್ಯುಲಸಂನ ಜೀವಂತಿಕೆಯನ್ನ ಮತ್ತು ಅದರ ಸಿಂದುತ್ವವನ್ನ ನಿರಂತರವಾಗಿ ಕಾಪಾಡಿಕೊಂಡು ಬರುವುದು ಇತಿಹಾಸಕಾರನ ಹೊಣೆಗಾರಿಕೆಯಾಗಿದೆ. ಇಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವುದೆಂದರೆ ದೇಶವನ್ನು ಅಪಾಯದ ಅಂಚಿಗೆ ತಳ್ಳಿದಂತೆ’
ಅವರ ಸಹೊದ್ಯೋಗಿಗಳು, ಸ್ನೇಹಿತರು ಹಸನ್ ಸಾಬ್ ಅವರನ್ನು ಪ್ರೀತಿಯಿಂದ “ಶಹಜಹಾ ಆಫ್ ಜಾಮಿಯ” ಎಂದು ಕರೆಯುತ್ತಿದ್ದರು. ಇಂದು ಜಾಮಿಯಾ ಮಿಲಿಯ ವಿಶ್ವವಿದ್ಯಾಲಯ ಈ ಮಟ್ಟಕ್ಕೆ ತಲುಪಲು ಹಸನ್ ಅವರ ಶ್ರಮ ಬಲು ಮುಖ್ಯ ಕಾರಣ ಎಂದು ವಿವಿಯಲ್ಲಿ ಅವರ ಸಹಾಯಕ ಮೊಹಮ್ಮದ್ ಶಕೀರ್ ಹೇಳುತ್ತಾರೆ. ಇಂದು ರಾಶ್ಟ್ರೀಯತೆಯ ಹೆಸರಿನಲ್ಲಿ, ದರ್ಮದ ಹೆಸರಿನಲ್ಲಿ ವಿಶ್ವವಿದ್ಯಾಲಯಗಳನ್ನು ದ್ವಂಸಗೊಳಿತ್ತಿರುವುದನ್ನು ಕಂಡಾಗ ಮುಶ್ರಿಲ್ ಹಸನ್ ಅವರ ಬದುಕು, ಸೆಕ್ಯುಲರಿಸಂ ಮತ್ತು ಮಾನವತಾವಾದ ಮತ್ತೆ ಮತ್ತೆ ಕಾಡುತ್ತದೆ.
ಎಪ್ರಿಲ್ 2014ರಲ್ಲಿ ರಾಬಿನ್ ಜೆಫ್ರಿ ಸಂಪಾದಕತ್ವದಲ್ಲಿನ “ದಕ್ಷಿಣ ಬಾರತದಲ್ಲಿ ಒಬ್ಬ ಮುಸ್ಲಿಂನಾಗಿ ಎನ್ನುವ ಪುಸ್ತಕದ ಬಿಡುಗಡೆ ಮಾಡುತ್ತ ಹಸನ್ ಅವರು ‘ಮೇ 16ರ ನಂತರ ಒಬ್ಬ ಮುಸ್ಲಿಂ ಆಗಿ ಬದುಕುವುದು ತುಂಬಾ ಕಶ್ಟವಾಗುತ್ತದೆ” ಎಂದು ವ್ಯಥೆಪಟ್ಟಿದ್ದರು. ಇಂದು ಆ ಆತಂಕ ನಿಜವಾಗಿದೆ. ಅವರು ನಿರ್ಗಮನದಿಂದ ಉಂಟಾದ ಶೂನ್ಯತೆಯನ್ನ ತುಂಬುವುದು ತ್ರಾಸದಾಯಕ
ಆದರೂ ಯೆ ಹಿ ಜಿಂದಗೀ ಹೈ,
ಅಲ್ವಿದ ಮುಶ್ರಿಲ್ ಸಾಬ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...