Homeಕರ್ನಾಟಕ'ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾದ್ಲು, ದಯವಿಟ್ಟು ನ್ಯಾಯ ಕೊಡಿಸಿ': ಅನನ್ಯ ಭಟ್ ತಾಯಿ ಕಣ್ಣೀರು

‘ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾದ್ಲು, ದಯವಿಟ್ಟು ನ್ಯಾಯ ಕೊಡಿಸಿ’: ಅನನ್ಯ ಭಟ್ ತಾಯಿ ಕಣ್ಣೀರು

"ಬೆಳ್ತಂಗಡಿ ಠಾಣೆಗೆ ಹೋದಾಗ ದೂರು ಸ್ವೀಕರಿಸಿಲ್ಲ. ಧರ್ಮಸ್ಥಳದಲ್ಲಿ ಯಾರೋ ನನ್ನನ್ನು ಕೂಡಿ ಹಾಕಿ ಥಳಿಸಿದ್ರು. ಮಗಳ ಅಸ್ತಿ ಸಿಕ್ರೆ ಶ್ರಾದ್ಧ ಮಾಡಿ ಪ್ರಾಣ ಬಿಡ್ತೀನಿ"

- Advertisement -
- Advertisement -

ಧರ್ಮಸ್ಥಳದಲ್ಲಿ  2003ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ನಾಪತ್ತೆ ಸಂಬಂಧ ದೂರು ನೀಡಲು ತಾಯಿ ಸುಜಾತಾ ಭಟ್ ಮಂಗಳವಾರ (ಜು.15) ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ.ಅರುಣ್ ಕೆ ಅವರನ್ನು ಭೇಟಿಯಾಗಿದ್ದರು.

ಪ್ರಕರಣ ಈಗಿನ ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಅಲ್ಲಿಯೇ ದೂರು ನೀಡುವಂತೆ ಎಸ್ಪಿ ಸಲಹೆ ನೀಡಿದ್ದರು. ಅದರಂತೆ, ರಾತ್ರಿ 8 ಗಂಟೆಯ ಸುಮಾರಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಸಬ್‌ ಇನ್‌ಸ್ಪೆಕ್ಟರ್ ಸಮರ್ಥ್ ಆರ್.ಗಾಣಿಗೇರ ಅವರಿಗೆ ಸುಜಾತಾ ಭಟ್ ದೂರು ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದು, ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ ವಕೀಲ ಮಂಜುನಾಥ್  ಜೊತೆ ಎಸ್ಪಿಯನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಸುಜಾತಾ ಭಟ್, ” ನನ್ನ ಮಗಳು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆಂದು ಹೋದಾಕೆ ಕಾಣೆಯಾಗಿದ್ದಳು. ಆಗ ನಾನು ಕೋಲ್ಕತ್ತಾದಲ್ಲಿ ಉದ್ಯೋಗದಲ್ಲಿದ್ದೆ. ಅಲ್ಲಿಂದ ಬರುವಾಗ ಎರಡು ದಿನ ಕಳೆದಿತ್ತು. ಬಂದು ಮಗಳನ್ನು ಹುಡುಕಿದೆ. ಆದರೆ, ಆಕೆ ಸಿಗಲಿಲ್ಲ. ಹಾಗಾಗಿ, ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದೆ. ಆಗ ಬೆಳ್ತಂಗಡಿ ಪೊಲೀಸರು “ನೀನೆ ಹುಡ್ಕೋ ಹೋಗಮ್ಮ, ನಿನ್ನ ಮಗಳು ಯಾವನ್ ಜೊತೆಗೋ ಹೋಗಿರಬಹುದು. ನೀನೇ ಹುಡ್ಕೋ, ನಾವು ಹುಡುಕಿ ಕೊಡಲು ನಮಗೇನ್ ಬೇರೆ ಕೆಲ್ಸಾ ಇಲ್ವಾ, ಅದೇ ಕೆಲ್ಸಾನಾ?” ಎಂದು ಗದರಿಸಿ ನನ್ನ ಕಳಿಸಿದರು” ಎಂದು ಹೇಳಿದರು.

ಮುಂದುವರಿದು, “ನಾನು ಬೇರೆ ದಾರಿ ತೋಚದೆ ಧರ್ಮಸ್ಥಳಕ್ಕೆ ಹೋದೆ. ಅಲ್ಲಿ ಮಗಳಿಗಾಗಿ ಹುಡುಕಾಡಿ ಒಂದು ಕಡೆ ಕುಳಿತಿದ್ದೆ. ಆಗ ಯಾರೋ ನಾಲ್ಕು ಜನರು ಬಂದು “ನಿಮ್ಮ ಮಗಳನ್ನು ನೋಡಿದ್ದೀವಿ, ಹುಡುಕಿ ಕೊಡ್ತೀವಿ” ಎಂದು ಕರೆದುಕೊಂಡು ಹೋಗಿ ಕೂಡಿ ಹಾಕಿದ್ರು. ನಂತರ ಮರುದಿನ ಬೆಳಿಗ್ಗೆ ಸುಮಾರು 5 ಗಂಟೆಯ ಹೊತ್ತಿಗೆ ನನ್ನನ್ನು ಹೊರಗಡೆ ಕರೆದುಕೊಂಡು ಬಂದು ಬಿಟ್ರು. ನನ್ನನ್ನು ಕೂಡಿ ಹಾಕಿದವರು ನನ್ನ ತಲೆಗೆ ಹೊಡೆದಿದ್ರು. ಅದರ ಮಾರ್ಕ್ ಈಗಲೂ ಇದೆ. ನನ್ನನ್ನು ಕಟ್ಟಿ ಹಾಕಿದ್ದ ಮಾರ್ಕ್‌ಗಳು ಕೈಯ್ಯಲ್ಲಿ ಇವೆ. ಎರಡೂ ಕೈಗಳಲ್ಲಿ ಮಾರ್ಕ್‌ಗಳು ಇವೆ, ಕೈ ಬೆಂಡಾಗಿವೆ” ಎಂದು ತಲೆ ಮತ್ತು ಕೈಗಳನ್ನು ಸುಜಾತಾ ಭಟ್ ಮಾಧ್ಯಮಗಳ ಮುಂದೆ ತೋರಿಸಿದರು.

“ಹೊಡೆದವರು ಯಾರು? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಭಟ್, “ಯಾರು ಅಂತ ನನಗೆ ಗೊತ್ತಿಲ್ಲ. ಅವರು ಹೊಡೆದಾಗ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಆ ಬಳಿಕ ಯಾರೋ ವ್ಯಕ್ತಿ ಬಂದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಅನಿಸುತ್ತೆ. ನಾನು ಕೋಮಾಗೆ ಹೋಗಿದ್ದೆ. ಎಚ್ಚರ ಬಂದಾಗ ಆಸ್ಪತ್ರೆಯಲ್ಲಿ ಇದ್ದೆ. ನನ್ನನ್ನು ಆವತ್ತು ಆಸ್ಪತ್ರೆಗೆ ಸೇರಿಸಿದ ಆ ಪುಣ್ಯಾತ್ಮನಿಗೆ ನಾನು ಚಿರಋಣಿ” ಎಂದರು.

ಮಗಳು ಯಾರ ಜೊತೆ ದೇವಸ್ಥಾನಕ್ಕೆ ಹೋಗಿದ್ದರು? ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, “ಆಕೆ ಗೆಳೆಯರೊಂದಿಗೆ ಹೋಗಿರಬಹುದು. ಆ ಬಳಿಕ ಕಾಣೆಯಾಗಿದ್ದಾಳೆ ” ಎಂದು ತಿಳಿಸಿದರು.

“ಮೊನ್ನೆ ಸಾಕ್ಷಿ ದೂರುದಾರ ಹೇಳಿದಂತೆ ಪೊಲೀಸರು ಹುಡುಕಿದಾಗ ತಲೆ ಬುರುಡೆ ಸಿಕ್ಕಿದೆ. ಅದನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಅದು ನನ್ನ ಮಗಳದ್ದಾಗಿರಬಹುದು ಅಥವಾ ನನ್ನ ಮಗಳದ್ದು ಅದೇ ರೀತಿ ಸಿಗಬಹುದು ಎಂಬ ಆಶಾ ಭಾವನೆಯೊಂದಿಗೆ ಎಸ್ಪಿಗೆ ದೂರು ಕೊಟ್ಟಿದ್ದೇನೆ. ನನ್ನ ಮಗಳ ಅಸ್ತಿ ಏನಾದರು ಸಿಕ್ಕಿದರೆ, ಸನಾತನ ಬ್ರಾಹ್ಮಣ ಹಿಂದೂ ಸಂಪ್ರದಾಯದಂತೆ ನಾನು ಅದರ ಅಂತ್ಯಕ್ರಿಯೆ ಮಾಡಬೇಕು. ಈ ಮೂಲಕ ಆಕೆಯ ಆತ್ಮಕ್ಕೆ ಶಾಂತಿ ಸಿಗಬೇಕು” ಎಂದು ಹೇಳಿದರು.

2003ರಿಂದ ಏಕೆ ಸುಮ್ಮನ್ನಿದ್ದಿರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, “ನಾನು ಭಯದಿಂದ ಸುಮ್ಮನಿದ್ದೆ. ನನಗೆ ಯಾರ ಬೆಂಬಲವೂ ಇಲ್ಲ. ಬಂದು ಇಲ್ಲ, ಬಳಗವೂ ಇಲ್ಲ. ಇದ್ದ ಒಬ್ಬಳು ಮಗಳನ್ನು ಕಳೆದುಕೊಂಡಿದ್ದೇನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ” ಎಂದು ಕಣ್ಣೀರು ಹಾಕಿದರು.

“ನನ್ನ ಮಗಳು ಮಣಿಪಾಲ್‌ ಕೆಎಂಸಿಯಲ್ಲಿ ಎಂಬಿಬಿಎಸ್‌ ಓದುತ್ತಿದ್ದಳು. ಆಕೆ ಕೋರ್ಸ್‌ಗೆ ಸೇರಿ ಕೇವಲ ಆರು ತಿಂಗಳು ಆಗಿತ್ತು. ಆಕೆ ತುಂಬಾ ಕಷ್ಟಪಟ್ಟು ಓದುತ್ತಿದ್ದಳು. ಇವತ್ತು ಅವಳು ನನ್ನ ಜೊತೆಗಿಲ್ಲ. ಅವಳ ಆತ್ಮ ನನ್ನನ್ನು ಕಾಡ್ತಿದೆ. ಹಾಗಾಗಿ, ಅವಳ ಅಸ್ತಿ ಸಿಕ್ಕಿದರೆ ಪುಣ್ಯ ಬರುತ್ತದೆ ಎಂದು ಎಸ್ಪಿಯವರಿಗೆ ಹೇಳಿದ್ದೇನೆ. ಆಯ್ತಮ್ಮ ಎಂದು ಎಸ್ಪಿ ಹೇಳಿದ್ದಾರೆ. ಅವರಿಗೂ ನಾನು ಚಿರಋಣಿಯಾಗಿರುತ್ತೇನೆ” ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಸುಜಾತಾ ಭಟ್ ಕೈ ಮುಗಿದರು.

2003ರಿಂದ ಏನು ಭಯ ಇತ್ತು ಮೇಡಂ? ಎಂಬ ಪ್ರಶ್ನೆಗೆ ಉತ್ತರಿಸಿ ಸುಜಾತಾ ಭಟ್, “ನನಗೆ ಯಾರ ಬೆಂಬಲವೂ ಇಲ್ಲ ಸರ್, ನಾನು ಒಂಟಿಯಾಗಿ ಹೋರಾಟ ಮಾಡಬೇಕಿದೆ ಸರ್ ಎಂದರು. ಮಣಿಪಾಲದ ಪರ್ಕಳದ ಹತ್ತಿರ ಪರಿಕ್ಕಾ ಅಂತ ಒಂದು ಊರಿದೆ. ಅಲ್ಲಿದ್ದ ನನ್ನ ಮನೆ ದೇವರು, ಆಸ್ತಿ ಎಲ್ಲವನ್ನೂ ಕಿತ್ತುಕೊಂಡಿದ್ದಾರೆ. ತಂದೆಯಿಂದ ಬಂದ ನನ್ನ ಪಿತ್ರಾರ್ಜಿತ ಆಸ್ತಿಯನ್ನು ನನ್ನ ಸಹಿಯೂ ಇಲ್ಲದೆ ಖರೀದಿ ಮಾಡಿದ್ದಾರೆ. ಆ ಆಸ್ತಿನೂ ನನ್ನ ಒಂದು ಭಾಗ ಆಗಿತ್ತು. ಈಗ ಅದೂ ಇಲ್ಲ. ನನಗೆ ಯಾರು ಇಲ್ಲ ಸರ್” ಎಂದು ಹೇಳಿದರು.

“ನನ್ನ ಮಗಳು ಧರ್ಮಸ್ಥಳದಲ್ಲೇ ಕಾಣೆಯಾಗಿದ್ದು, ಈ ಬಗ್ಗೆ ನಾನು 2003ರಲ್ಲೇ ಬೆಳ್ತಂಗಡಿ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಆದರೆ, ಅವರು ತೆಗೆದುಕೊಂಡಿಲ್ಲ. ಈಗ ನಾನು ಎಸ್ಪಿ ಬಳಿ ದೂರು ಕೊಟ್ಟಿದ್ದೇನೆ. ಅವರು ಧರ್ಮಸ್ಥಳ ಠಾಣೆಗೆ ಹೋಗಲು ಹೇಳಿದ್ದಾರೆ” ಎಂದು ತಿಳಿಸಿದರು.

ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಮಾತನಾಡಿ, “ಸಾಕ್ಷಿ ದೂರುದಾರ ಮೊನ್ನೆ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ಕೊಟ್ಟ ಬಳಿಕ ಸುಜಾತಾ ಭಟ್ ನನ್ನನ್ನು ಸಂಪರ್ಕಿಸಿದರು. “ಧರ್ಮಸ್ಥಳದ ಪ್ರಕರಣ ನಡೆಯುತ್ತಿದೆಯಲ್ಲ, ನನ್ನ ಮಗಳದ್ದು ಆ ರೀತಿಯ ಪ್ರಕರಣ ನಡೆದಿದೆ” ಎಂದರು. ಆಗ ನಾನು ಕಾನೂನಿನ ಪ್ರಕಾರ ದೂರು ಕೊಡೋಣ ಎಂದೆ. ಈಗ ದೂರು ಕೊಟ್ಟಿದ್ದೇವೆ. ಇವರ (ಸುಜಾತಾ ಭಟ್) ಬೇಡಿಕೆ ಏನೆಂದರೆ, ಇವರು ಯಾರನ್ನೂ ಜೈಲಿಗೆ ಹಾಕಿ ಎಂದು ಹೇಳುತ್ತಿಲ್ಲ. ಇವರಿಗೆ ಯಾರೂ ಇಲ್ಲ. ಇಲ್ಲಿ ಹೂಳಲಾಗಿದೆ ಎನ್ನಲಾದ ಹೆಣಗಳ ಬಗ್ಗೆ ಹುಡುಕಾಟ ನಡೆಸುವಾಗ ನನ್ನ ಮಗಳ ಅಸ್ತಿ ಏನಾದರು ಸಿಕ್ಕಿ, ಅದು ಡಿಎನ್‌ಎ ಮೂಲಕ ಖಚಿತವಾದರೆ ನನಗೆ ಕೊಡಿ. ಅದಕ್ಕೆ ಶ್ರಾದ್ಧ ಮಾಡಿ, ತಾನೂ ಜೀವ ಬಿಡುತ್ತೇನೆ ಎಂಬ ಸ್ಥಿತಿಯಲ್ಲಿ ಇದ್ದಾರೆ” ಎಂದರು.

“ಎಸ್ಪಿಯವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ. ಕಾನೂನಿನ ಪ್ರಕಾರ ಏನು ಮಾಡಬೇಕೋ ಅದು ಮಾಡುತ್ತೇವೆ ಎಂದಿದ್ದಾರೆ. ಎಸ್ಪಿ ಹೇಳಿದಂತೆ ನಾವು ಧರ್ಮಸ್ಥಳ ಠಾಣೆಗೆ ದೂರು ಕೊಡುತ್ತೇವೆ” ಎಂದರು.

ಸುಜಾತಾ ಭಟ್ ಅವರ ಆಸ್ತಿ ವಿಚಾರ ಪ್ರಸ್ತಾಪಿಸಿದಾಗ, “ಅದು ಸಿವಿಲ್ ವ್ಯಾಜ್ಯವಾಗಿದೆ. ಅದನ್ನು ಇಲ್ಲಿ ಪ್ರಸ್ತಾಪಿಸಲು ಆಗುವುದಿಲ್ಲ ಎಂದು ಹೇಳಿದರು.

ದೂರಿನ ಬಗ್ಗೆ ವಿಚಾರಣೆ ನಡೆಸಿ ಕ್ರಮ: ಎಸ್ಪಿ ಡಾ.ಅರುಣ್ 

2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಣ್ಮರೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಯುವತಿಯ ತಾಯಿ ಜುಲೈ 15ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಬೆಂಗಳೂರು| ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಇಬ್ಬರು ಉಪನ್ಯಾಸಕರು ಸೇರಿ ಮೂವರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...