Homeಮುಖಪುಟನನ್ನ ಪ್ರತಿಕ್ರಿಯೆಗೂ ರಾಜಕೀಯಕ್ಕೂ ಸಂಬಂಧವಿಲ್ಲ, ನಾನು ರಾಜಕಾರಣಿಯಾಗಲ್ಲ: ಕಂಗನಾ‌

ನನ್ನ ಪ್ರತಿಕ್ರಿಯೆಗೂ ರಾಜಕೀಯಕ್ಕೂ ಸಂಬಂಧವಿಲ್ಲ, ನಾನು ರಾಜಕಾರಣಿಯಾಗಲ್ಲ: ಕಂಗನಾ‌

- Advertisement -
- Advertisement -

ಸಾಮಾಜಿಕ ಜಾಲತಾಣದಲ್ಲಿ ತಾನು ಎಲ್ಲವನ್ನು ಸಾಮಾನ್ಯ ಪ್ರಜೆಯಾಗಿ ಪ್ರತಿಕ್ರಿಯಸುತ್ತೇನೆ, ನನ್ನ ಪ್ರತಿಕ್ರಿಯೆಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್‌‌ ಅವರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಮುಂಬೈನಲ್ಲಿ ‘ತಲೈವಿ’ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಮಾತನಾಡುತ್ತಾ, “ಇಂದು ನಾನು ದೇಶ, ರಾಷ್ಟ್ರೀಯತೆ, ರೈತರು ಅಥವಾ ನನ್ನ ಮೇಲೆ ನೇರವಾಗಿ ಪರಿಣಾಮ ಬೀರುವ ಕಾನೂನುಗಳ ಬಗ್ಗೆ ಮಾತನಾಡುತ್ತಿದ್ದರೆ, ನಾನು ರಾಜಕಾರಣಿಯಾಗಲು ಬಯಸುತ್ತಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ನಾನು ಹಾಗೆ ಅಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಸಾಕ್ಷರತೆಯಿದೆ, ಜನ ಯೋಚಿಸುತ್ತಾರೆ ಹಾಗಾಗಿ ಪಕ್ಷ ಬೆಳೆದಿಲ್ಲ: ಬಿಜೆಪಿಯ ಏಕೈಕ ಶಾಸಕ

“ನಾನು ಸಾಮಾನ್ಯ ಪ್ರಜೆಯಾಗಿ ಎಲ್ಲದಕ್ಕೂ ಪ್ರತಿಕ್ರಿಯಿಸುತ್ತೇನೆ. ನನಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ. ಹಾಗಾಗಿ ನಾನು ಈ ವಿಷಯಗಳ ಬಗ್ಗೆ ಮಾತನಾಡುವಾಗ ಜನರು ಕೋಪಗೊಳ್ಳುತ್ತಾರೆ ಮತ್ತು ‘ತಮಾಷೆ’ ಮಾಡುತ್ತಾರೆ” ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ಈ ಹಿಂದೆ ಅಂತಾರಾಷ್ಟ್ರೀಯ ಪಾಪ್‌ ತಾರೆ ರಿಹಾನ್ನಾ ಅವರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಮಾಡಿದ್ದ ಟ್ವೀಟ್‌ಗೆ ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದರು. ನಂತರ ಈ ಟ್ವೀಟ್‌ ಅನ್ನು ಟ್ವೀಟ್ಟರ್‌ ಮಾರ್ಗಸೂಚಿ ಉಲ್ಲಂಘನೆ ಆಧಾರದಲ್ಲಿ ಡಿಲೀಟ್ ಮಾಡಿತ್ತು.

34 ವರ್ಷದ ಕಂಗನಾ ಇತ್ತೀಚೆಗೆ ‘ಮಣಿಕರ್ನಿಕಾ-ದಿ ಕ್ವೀನ್ ಆಫ್ ಝಾನ್ಸಿ’ ಮತ್ತು ‘ಪಂಗಾ’ ಚಿತ್ರಗಳಿಗಾಗಿ ನಾಲ್ಕನೇ ರಾಷ್ಟ್ರೀಯ ಚಲನಚಿತ್ರ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಎ.ಎಲ್.ವಿಜಯ್ ನಿರ್ದೇಶನದ ಮತ್ತು ಖ್ಯಾತ ಬರಹಗಾರ ಕೆ.ವಿ. ವಿಜೇಂದ್ರ ಪ್ರಸಾದ್ ಬರೆದಿರುವ ‘ತಲೈವಿ’ ಏಪ್ರಿಲ್ 23 ರಂದು ಝೀ ಸ್ಟುಡಿಯೋಸ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ: ಸದನದಲ್ಲಿ ಸಿಡಿ ಗಲಾಟೆ: ಏಕಪತ್ನಿ ವ್ರತಸ್ಥರ ಪ್ರಶ್ನೆ – ಬಿಜೆಪಿ, ಕಾಂಗ್ರೆಸ್ ಗದ್ದಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...