Homeಕರ್ನಾಟಕನಾನು ಪಕ್ಷದ ಆದೇಶ ಉಲ್ಲಂಘಿಸಿಲ್ಲ. ಇದು ಕಮ್ಯುನಿಕೇಷನ್ ಗ್ಯಾಪ್ ನಿಂದ ಹೀಗೆ ಆಗಿದೆ: ಎನ್.ಮಹೇಶ್

ನಾನು ಪಕ್ಷದ ಆದೇಶ ಉಲ್ಲಂಘಿಸಿಲ್ಲ. ಇದು ಕಮ್ಯುನಿಕೇಷನ್ ಗ್ಯಾಪ್ ನಿಂದ ಹೀಗೆ ಆಗಿದೆ: ಎನ್.ಮಹೇಶ್

- Advertisement -
- Advertisement -

ನಿನ್ನೆ ಸದನದಲ್ಲಿ ನಡೆದ ವಿಶ್ವಾಸಮತ ಯಾಚನೆಯ ಪ್ರಕ್ರಿಯೆಗೆ ಗೈರು ಹಾಜರಾಗುವ ಮೂಲಕ ಬಿ.ಎಸ್.ಪಿ ಪಕ್ಷದಿಂದ ಉಚ್ಚಾಟಿತರಾಗಿದ್ದ ಎನ್ ಮಹೇಶ್ ರವರು ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಲ್ಲಿ ನಾನು ಪಕ್ಷದ ಆದೇಶ ಉಲ್ಲಂಘಿಸಿಲ್ಲ. ಇದು ಕಮ್ಯುನಿಕೇಷನ್ ಗ್ಯಾಪ್ ನಿಂದ ಹೀಗೆ ಆಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಎನ್ ಮಹೇಶ್ ರವರು ಮಾತಾಡಿದ ಪೂರ್ಣ ವಿವರ ಇಲ್ಲಿದೆ.

ನಾನು ಬೆಂಗಳೂರಿಗೆ ಬಂದಾಗ ಪ್ರಿಂಟ್ ಮಾಧ್ಯಮಗಳಲ್ಲಿ ನನ್ನನ್ನು ಉಚ್ಚಾಟನೆ ಮಾಡಿರುವ ಮಾಹಿತಿ ತಿಳಿಯಿತು. ಮುದ್ರಣ ಮಾಧ್ಯಮಗಳಲ್ಲಿ ಟ್ವಿಟ್ಟರ್ ಮೂಲಕ ಹೇಳಿದ್ದಾರೆ ಎಂದು ಗಮನಿಸಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಸದನದ ವಿಶ್ವಾಸಮತ ಮತದಾನದ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿಲ್ಲ.. ಆ ಕಾರಣಕ್ಕೆ ಉಚ್ಚಾಟನೆ ಮಾಡಲಾಗಿದೆ ಎನ್ನಲಾಗಿದೆ. ಅದಕ್ಕೆ ಸ್ಪಷ್ಟೀಕರಣ ಕೊಡಲು ಈ ಪತ್ರಿಕಾಗೋಷ್ಠಿ ಆಯೋಜಿಸಿದ್ದೇನೆ.

ಮೊದಲನೇಯದಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದೆವು. 20:204 ಆಧಾರದಲ್ಲಿ 20 ರಲ್ಲಿ ಕೊಳ್ಳೇಗಾಲ ಒಂದು ಕ್ಷೇತ್ರದಲ್ಲಿ ನಾನು ಗೆದ್ದಿದ್ದೆ. ಅತಂತ್ರ ವಿಧಾನಸಭೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮತ್ತು ಬಿಎಸ್‍ಪಿ ಮೈತ್ರಿ ಸರ್ಕಾರ ರಚನೆಯಾಯಿತು. ಬೆಹನ್ ಮಾಯಾವತಿಯವರ ಆದೇಶದ ಮೇರೆಗೆ ನಾನು ನಾಲ್ಕು ತಿಂಗಳ ಕಾಲ ಶಿಕ್ಷಣ ಸಚಿವನಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ

4 ತಿಂಗಳ ನಂತರ ಬೆಹನ್ ಜಿ ದೆಹಲಿಗೆ ಕರೆಸಿಕೊಂಡರು ಮತ್ತು ಮಂತ್ರಿ ಪದವಿಗೆ ರಾಜೀನಾಮೆ ಕೊಡು ಎಂದರು. ಕಾರಣ: ಮಧ್ಯಪ್ರದೆಶ ಮತ್ತು ರಾಜಸ್ಥಾನದಲ್ಲಿ ಮಹಾಘಟಬಂಧನ್ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ನವರು ಬದ್ಧರಾಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಜೊತೆಗಿರುವ ಕ್ಯಾಬಿನೆಟ್ ನಲ್ಲಿ ನೀನಿರುವುದು ಬೇಡ ಎಂದರು. ನಾನು ದೂಸರಾ ಮಾತಾಡದೇ ರಾಜೀನಾಮೆ ನೀಡಿದೆ.

ಮೂರ್ನಾಲ್ಕು ದಿನ ಮುಖ್ಯಮಂತ್ರಿಗಳು ರಾಜೀನಾಮೆ ಒಪ್ಪಿರಲಿಲ್ಲ. ಕೊನೆಗೆ ಮಾಯಾವತಿಯವರ ಸೂಚನೆಯ ಮೇರೆಗೆ ಒಪ್ಪಿಕೊಂಡರು. ಅದಾದಮೇಲೆ ನಾನು ನನ್ನ ಕ್ಷೇತ್ರದಲ್ಲಿ ಜನರ ಜೊತೆ ಕೆಲಸ ಮಾಡುತ್ತಿದ್ದೆ

2019ರ ಲೋಕಸಭಾ ಚುನಾವಣೆಯಲ್ಲಿ ಬೆಹನ್ ಮಾಯಾವತಿಯವರ ಆದೇಶದ ಮೇರೆಗೆ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳದೇ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಹಾಕಿ ಸ್ವತಂತ್ರವಾಗಿ ಸ್ಪರ್ಧಿಸಿದೆವು. ಆಗ 4,12,382 ಮತ ಪಡೆದೆವು. 1.5% ಮತಪ್ರಮಾಣ ಬಂದಿತ್ತು. ಚುನಾವಣೆಯ ನಂತರ ರಿವ್ಯೂ ಮಾಡಲಿಕ್ಕೆ ಜೂನ್ 23ಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು.

ಅಲ್ಲಿ ನಾನು ಮುಂಚೆ ಈ ಸಮ್ಮಿಶ್ರ ಸರ್ಕಾರಕ್ಕೆ ನಾನು ಬೆಂಬಲಿಗನಾಗಿ ಇದ್ದೆ. ಲೋಕಸಭೆಯಲ್ಲಿ ಅವರ ವಿರುದ್ಧ ಹೋರಾಟ ಮಾಡಿರುವುದರಿಂದ ಈಗ ನಾನು ಏನು ಮಾಡಬೇಕೆಂದು ಕೇಳಿದ್ದೆ. ಆಗ ಅವರು ಸ್ವತಂತ್ರವಾಗಿರು ಎಂದಿದ್ದರು. ವಿರೋಧ ಪಕ್ಷಕ್ಕೂ ಬೆಂಬಲ ಕೊಡಬೇಡ ಅಂದಿದ್ದರು.
ಹಾಗಾಗಿ ನಾನು ಸ್ಪೀಕರ್ ರವರಿಗೆ ಪತ್ರ ಬರೆದು ಪ್ರತ್ಯೇಕ ಆಸನ ಕೊಡಿ ಎಂದು ಕೇಳಿದ್ದೆ. ಅದು ನಿಗಧಿಯಾಯಿತು. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಶುರುವಾಯಿತು.

ಡಾ. ಅಶೋಕ್ ಸಿದ್ಧಾರ್ಥ್ ಸಾಹೇಬರು, ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯರು. ನಮಗೆ ಉಸ್ತುವಾರಿ ಅವರೆ. ಅವರ ಬಳಿ ಈ ವಿಶ್ವಾಸಮತ ಯಾಚನೆಯಲ್ಲಿ ನಾನು ಏನು ಮಾಡಬೇಕು ಎಂದು ಕೇಳಿದೆ. ಅವರು ಮಾಯಾವತಿಯವರೊಡನೆ ಮಾತನಾಡಿ ಹೇಳುತ್ತೇನೆ ಎಂದಿದ್ದರು. ಕೊನೆಗ ಮಾತನಾಡಿ ಅವರು ತಟಸ್ಥವಾಗಿರು ಎಂದು ಹೇಳಿದ್ದರು. ಅವರು ತಟಸ್ಥವಾಗಿರುವಂತೆ ಹೇಳಿದ್ದರಿಂದ ನಾನು ವಿಧಾನಸಭೆಗೆ ಭಾಗವಹಿಸಲಿಲ್ಲ. ನಾನು ನನ್ನ ಕ್ಷೇತ್ರದಲ್ಲಿದ್ದೆ.

15 ನೇ ಸೋಮವಾರ ನನ್ನ ಕ್ಷೇತ್ರದ ಅಗರ ಗ್ರಾ.ಪಂ ಸದಸ್ಯ ಅಪಘಾತದಲ್ಲಿ ಅಕಾಲಿಕ ಮರಣದಲ್ಲಿ ತುತ್ತಾಗಿದ್ದರಿಂದ ಅವರ ಕುಟುಂಬದ ಜೊತೆ ಇದ್ದೆ. ಅಸೆಂಬ್ಲಿಗೆ ಹಾಜರಾಗುವುದಿಲ್ಲ ಎಂದು ಮೊದಲೇ ತಿಳಿಸಿದ್ದೆ. ಇಷ್ಟು ದಿನ ನಾನು ಹೊರಗೆ ಇದ್ದೆ. ಇಂದು ಬೆಂಗಳೂರಿಗೆ ಬಂದಿದ್ದೇನೆ.

ನಾನು ನಮ್ಮ ಹೈಕಮಾಂಡ್ ನ ಯಾವುದೇ ಆದೇಶವನ್ನು ಉಲ್ಲಂಘನೆ ಮಾಡಿಲ್ಲ. ನಾನು ಅಶಿಸ್ತಿನಿಂದ ನಡೆದುಕೊಂಡಿಲ್ಲ. ಮಯಾವತಿಯವರು ಟ್ವೀಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ನನಗೆ ಟ್ವಿಟ್ ಎಲ್ಲಾ ಗೊತ್ತಾಗೋಲ್ಲ. ಅದು ನನಗೆ ಬರೋದು ಇಲ್ಲ.

ನಾನು ಪಕ್ಷದ ಆದೇಶ ಉಲ್ಲಂಘಿಸಿಲ್ಲ. ಇದು ಕಮ್ಯುನಿಕೇಷನ್ ಗ್ಯಾಪ್ ನಿಂದ ಹೀಗೆ ಆಗಿದೆ. ಇದು ಸರಿ ಹೋಗುತ್ತೆ. ನಾನು ರಾಜ್ಯದ ಮೂರು ಪಕ್ಷಗಳಲ್ಲಿ ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ತಟಸ್ಥನಾಗಿದ್ದೇನೆ. ಇದನ್ನು ಮಹಾಜನತೆಗೆ ತಿಳಿಸಬೇಕೆಂದು ಕೋರುತ್ತೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆ ಬಹಿಷ್ಕರಿಸಬೇಡಿ: ಜಮ್ಮು-ಕಾಶ್ಮೀರದ ಜನತೆಗೆ ಮೆಹಬೂಬಾ ಮುಫ್ತಿ ಮನವಿ

0
'ದಕ್ಷಿಣ ಕಾಶ್ಮೀರದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳನ್ನು ಬಂಧಿತ ಕಾರ್ಮಿಕರನ್ನಾಗಿ ಮಾಡಲು ಅನಾಮಧೇಯ ಶಕ್ತಿಗಳು ಪ್ರಯತ್ನಿಸುತ್ತಿವೆ' ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ರಜೌರಿ...