ಗುಜರಾತ್ ಬಳಿಯ ಕೇಂದ್ರಾಡಳಿತ ಪ್ರದೇಶವಾದ ದಾನಾದ ಸಿಲ್ವಾಸಾದಲ್ಲಿ 139 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ‘ನಮೋ’ ವೈದ್ಯಕೀಯ ಕಾಲೇಜಿನ ಮೇಲ್ಚಾವಣಿ ನಿಮಾರ್ಣ ಹಂತದಲ್ಲೆ ಕುಸಿದು ಬಿದ್ದಿದೆ. ಇದನ್ನು ಪ್ರಧಾನಿ ಮೋದಿಗೆ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿರುವ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್, ‘ಇದ ಮುಂಬರುವ ದಿನಗಳ ಚಿತ್ರಣವೇ’ ಎಂದು ಪ್ರಶ್ನಿಸಿದ್ದಾರೆ.
ಗುರುವಾರದಂದು ಈ ಘಟನೆ ನಡೆದಿದೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆ ವರದಿ ಮಾಡಿದ್ದು, ಯಾವುದೆ ಜೀವ ಹಾನಿ ಆಗಿಲ್ಲ ಎಂದು ಅದು ಹೇಳಿದೆ. ನಿರ್ಮಾಣ ಕಾರ್ಯದ ಗುಣಮಟ್ಟ ಮತ್ತು ಭವಿಷ್ಯದಲ್ಲಿ ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಜನರಲ್ಲಿ ವಿವಿಧ ಪ್ರಶ್ನೆಗಳು ಉಧ್ಭವಿಸಿದೆ ಎಂದು ಪತ್ರಿಕೆ ಉಲ್ಲೇಖಿಸಿದೆ.
ಇದನ್ನೂ ಓದಿ: ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ 66% ರಿಂದ 24% ಕ್ಕೆ ಕುಸಿತ: ಇಂಡಿಯಾ ಟುಡೆ ಸಮೀಕ್ಷೆ
ಘಟನೆ ವರದಿಯಾದ ತಕ್ಷಣ ದಾನ ಆಡಳಿತ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಆದರೆ ಈ ಸಮಯದಲ್ಲಿ ಸ್ಥಳದಲ್ಲೆ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ದೈನಿಕ್ ಭಾಸ್ಕರ್ ಹೇಳಿದೆ.
ಘಟನೆ ಬಗ್ಗೆ ಟ್ವಿಟರ್‌ನಲ್ಲಿ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ, “ಆತ್ಮೀಯ ಪ್ರಧಾನಿ ನರೇಂದ್ರ ಮೋದಿಯವರೆ, ಸಿಲ್ವಾಸಾದಿಂದ ಸಂಕಷ್ಟಕರ ಸುದ್ದಿ ಬರುತ್ತಿದೆ. ನಿರ್ಮಾಣ ಹಂತದಲ್ಲಿರುವ ‘ನಮೋ’ ವೈದ್ಯಕೀಯ ಕಾಲೇಜಿನ ಮುಂಭಾಗ ಕುಸಿದು ಬಿದ್ದಿದೆ. ಇದ ಮುಂಬರುವ ದಿನಗಳ ಚಿತ್ರಣವೇ? ಅಥವಾ ನಿಮ್ಮ ಬ್ರ್ಯಾಂಡ್ ಅನ್ನು ವ್ಯಾಖ್ಯಾನಿಸುವ ಅಗ್ಗದ ವಸ್ತುಗಳ ಸಂಕೇತವೇ?” ಎಂದು ಚಿತ್ರದ ಸಮೇತ ಟ್ವೀಟ್ ಮಾಡಿದ್ದಾರೆ.
Dear PM @narendramodi, a distressing news coming from Silvassa.
The facade of the "NAMO" medical college under construction collapses to ground.
Is it a sign of times to come?
Or a sign of cheap material that defines your brand? pic.twitter.com/mPnx0dwzYR
— Kannan Gopinathan (@naukarshah) August 20, 2021
139 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವೈದ್ಯಕೀಯ ಕಾಲೇಜಿನ ನಿರ್ಮಾಣ ಕಾರ್ಯ ಆರಂಭವಾದಾಗಿನಿಂದಲೂ, ದಾನಾ ಮತ್ತು ದಮನ್-ದಿಯು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಮತ್ತು ಇತರ ಅಧಿಕಾರಿಗಳು ಕಾಲಕಾಲಕ್ಕೆ ಈ ನಿರ್ಮಾಣ ಕಾರ್ಯವನ್ನು ಪರಿಶೀಲಿಸುತ್ತಲೆ ಇದ್ದರು. ಅದಾಗ್ಯೂ, ಅವಘಡ ಸಂಭವಿಸಿದ್ದು ರಾಜ್ಯದಲ್ಲಿ ಚರ್ಚೆಯಾಗುತ್ತಿದೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆ ಹೇಳಿದೆ.
ಇದನ್ನೂ ಓದಿ: ಅಬಕಾರಿ ಶುಂಕ: ಮೋದಿ ಸರ್ಕಾರದಿಂದ 4 ಲಕ್ಷ ಕೋಟಿ ಬೃಹತ್ ದೇಶದ್ರೋಹಿ ಭ್ರಷ್ಟಾಚಾರ?


