ಏಪ್ರಿಲ್ 1 ರಿಂದ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಗುರುವಾರ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ನಂದಿನಿ ಹಾಲು ಬೆಲೆ ಏರಿಕೆ
ಈ ವಾರದ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಲಿಮಿಟೆಡ್ (ಕೆಎಂಎಫ್) ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಸಚಿವ ಸಂಪುಟದಲ್ಲಿ ಚರ್ಚೆಯ ನಂತರ ಬೆಲೆ ಏರಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.
ಹಾಲು ಮತ್ತು ಮೊಸರಿಗೆ ಲೀಟರ್‌ಗೆ ಕನಿಷ್ಠ 3 ರೂ. ಹೆಚ್ಚಳಕ್ಕೆ ಒಕ್ಕೂಟಗಳು ವಿನಂತಿಸಿದ್ದವು. ಮೊಸರಿನ ಬೆಲೆಯೂ ಪ್ರತಿ ಕೆಜಿಗೆ 4 ರೂ. ಹೆಚ್ಚಾಗಲಿದೆ.
ನಂದಿನಿ ಹಾಲಿನ ಪರಿಷ್ಕೃತ ಬೆಲೆಗಳು ಕೆಳಗಿನಂತಿರಲಿವೆ (ಆವರಣಗಳಲ್ಲಿ ಪ್ರಸ್ತುತ ಬೆಲೆಗಳು)
-
- ಟೋನ್ಡ್ (ನೀಲಿ ಪ್ಯಾಕೆಟ್): ರೂ 46 (ರೂ 42)
- ಹೋಮೋಜನೈಸ್ಡ್ ಟೋನ್ಡ್: ರೂ 47 (ರೂ 43)
- ಹಸಿರು ಪ್ಯಾಕೆಟ್: ರೂ 50 (ರೂ 46)
- ಶುಭಮ್ (ವಿಶೇಷ/ಕಿತ್ತಳೆ ಪ್ಯಾಕೆಟ್): ರೂ 52 (ರೂ 48)
- ಮೊಸರು: ರೂ. 54 (ರೂ 50)
- ಸಮೃದ್ಧಿ (ಗುಲಾಬಿ ಪ್ಯಾಕೆಟ್, ಪೂರ್ಣ ಕ್ರೀಮ್): ರೂ 60 (56) ನಂದಿನಿ ಹಾಲು ಬೆಲೆ ಏರಿಕೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಎರಡು ವರ್ಷದಿಂದಲೇ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ: ಕೆಎಂಎಫ್ ಎಂಡಿ, ಅಧ್ಯಕ್ಷರ ಹೇಳಿಕೆ
ಎರಡು ವರ್ಷದಿಂದಲೇ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ: ಕೆಎಂಎಫ್ ಎಂಡಿ, ಅಧ್ಯಕ್ಷರ ಹೇಳಿಕೆ

