Homeಕರ್ನಾಟಕನಂದಿನಿ ವರ್ಸಸ್ ಅಮುಲ್ ಪ್ರಶ್ನೆ ಮಾರುಕಟ್ಟೆ ಆಕ್ರಮಣವಲ್ಲ; ಇದು ವಿಲೀನದ ಆಕ್ರಮಣ

ನಂದಿನಿ ವರ್ಸಸ್ ಅಮುಲ್ ಪ್ರಶ್ನೆ ಮಾರುಕಟ್ಟೆ ಆಕ್ರಮಣವಲ್ಲ; ಇದು ವಿಲೀನದ ಆಕ್ರಮಣ

- Advertisement -
- Advertisement -

ಇಂದು ನಮ್ಮ ದೇಶ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬದುಕುತ್ತಿದೆ. ಅಮುಲ್ ಉತ್ಪನ್ನಗಳು (ಐಸ್‌ಕ್ರೀಮ್, ಚೀಸ್, ಬೆಣ್ಣೆ, ತುಪ್ಪ, ಪನ್ನೀರ್, ಪಿಜ್ಜಾ, ಚೀಸ್ ಪಿಜ್ಜಾ, ಚಾಕಲೇಟ್, ಭಾರತೀಯ ಸಿಹಿ ಪದಾರ್ಥಗಳು ಇತ್ಯಾದಿ) ಕರ್ನಾಟಕದಲ್ಲಿ ಬಹಳ ಹಿಂದಿನಿಂದ ಮಾರಾಟವಾಗುತ್ತಿವೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ, ದೊಡ್ಡ ನಗರಗಳಾದ ಮೈಸೂರು-ಬೆಂಗಳೂರು-ಮಂಗಳೂರುಗಳಲ್ಲಿ ಅಮುಲ್ ಉತ್ಪನ್ನಗಳು ಮಾರಾಟವಾಗುತ್ತಿವೆ. ಇದೀಗ ಬೆಂಗಳೂರಿನಲ್ಲಿ ಹಾಲು-ಮೊಸರು ಮಾರಾಟವನ್ನು ಆರಂಭಿಸುವುದರ ಬಗ್ಗೆ ಅಮುಲ್ ಸಾರ್ವಜನಿಕ ಹೇಳಿಕೆ ನೀಡಿದೆ. ಕರ್ನಾಟಕದಲ್ಲಿ ಅಮುಲ್‌ನ ಮಾರುಕಟ್ಟೆ ವಿಸ್ತರಣೆ ಮಾಡಿದರೆ ನಮ್ಮ ಅಭ್ಯಂತರಕ್ಕೆ ಕಾರಣವಿಲ್ಲ. ಈ ವಿವಾದದಲ್ಲಿನ ಮೂಲದಲ್ಲಿರುವ ’ನಂದಿನಿ-ಅಮುಲ್’ ವಿಲೀನದ ಪ್ರಶ್ನೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮಾರುಕಟ್ಟೆ ಪ್ರವೇಶ ಮತ್ತು ವಿಲೀನಗಳ ನಡುವೆ ನಾವು ಗೊಂದಲ ಮಾಡಿಕೊಳ್ಳಬಾರದು. ಈಗ ನಂದಿನಿ ರಕ್ಷಣೆಯ ಬಗ್ಗೆ ಮತ್ತು ಅಮುಲ್ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವುದು ಅದರ ಮಾರುಕಟ್ಟೆ ಪ್ರವೇಶದ ಬಗ್ಗೆಯಲ್ಲ. ಆದರೆ ಕರ್ನಾಟಕದ ಆಳುವ ಪಕ್ಷವು ಅಮಿತ್ ಷಾ ಹಮ್ಮಿಕೊಂಡಿರುವ ವಿಲೀನದ ಪ್ರಶ್ನೆಯನ್ನು ಮರೆಮಾಡಿ ಅಮುಲ್ ಮಾರುಕಟ್ಟೆ ಪ್ರವೇಶದ ಬಗ್ಗೆ ಮಾತ್ರ ಮಾತನಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಯಾಗಿ ವಿಲೀನದ ಪ್ರಶ್ನೆಯನ್ನು ಮುಂಚೂಣಿಗೆ ತಂದಿದ್ದಾರೆ. ಅಮಿತ್ ಷಾ ಅವರು ಒಕ್ಕೂಟ ಸರ್ಕಾರದ ಸಹಕಾರ ಮಂತ್ರಿ. ಇವರು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ, ವಿನಾಕಾರಣವಾಗಿ-ಉದ್ದೇಶರಹಿತವಾಗಿ ಅಮುಲ್-ನಂದಿನಿ ವಿಲೀನದ ಯೋಜನೆಯನ್ನು ಮುಂದಿಡುವವರಲ್ಲ. ಇಲ್ಲಿರುವ ಅಪಾಯವನ್ನು ನಾವು ಗುರುತಿಸಬೇಕು.

ಅಮುಲ್-ನಂದಿನಿ ಪೈಪೋಟಿ

ಇದು ಕೇವಲ ಮಾರುಕಟ್ಟೆ ಪ್ರವೇಶದ ಬಗ್ಗೆಯಾಗಿದ್ದರೆ ನಾವು ಭಯ ಪಡಬೇಕಾಗಿರಲಿಲ್ಲ. ಏಕೆಂದರೆ ಮಾರುಕಟ್ಟೆ ಪೈಪೋಟಿಯಲ್ಲಿ ನಂದಿನಿಯು ಅಮುಲ್‌ಗಿಂತ ಉತ್ತಮ ಸ್ಥಾನದಲ್ಲಿದೆ. ಅಮುಲ್ ಹಾಲು ಲೀಟರ್‌ಗೆ ರೂ. 65; ನಂದಿನಿ ಹಾಲು ರೂ. 49. ಅಮುಲ್ ಮೊಸರು ಲೀಟರ್‌ಗೆ ರೂ. 67; ನಂದಿನಿ ಮೊಸರು ರೂ. 47. ಕೆನೆಭರಿತ ಹಾಲಿನ ಬೆಲೆ ಅಮುಲ್ ರೂ. 64. ನಂದಿನಿಯದ್ದು 900 ಮಿಲಿಲೀಟರ್‌ಗೆ ರೂ. 50. ಅಮುಲ್ ದೇಶದಲ್ಲಿ ಪ್ರಥಮ ಸ್ಥಾನದಲ್ಲಿರುವ ಹಾಲು ಸಹಕಾರ ಸಂಸ್ಥೆಯಾದರೆ ನಂದಿನಿ ದೇಶದಲ್ಲಿ ಎರಡನೆಯ ಸ್ಥಾನದಲ್ಲಿದೆ. ಅಮುಲ್ ಹೇಗೆ ಗುಜರಾತಿನ ಹೊರಗೆ ತನ್ನ ವ್ಯವಹಾರವನ್ನು ಬೆಳೆಸುತ್ತಿದೆಯೋ ಅದೇ ರೀತಿಯಲ್ಲಿ ನಂದಿನಿಯು ತನ್ನ ವ್ಯಾಪಾರವನ್ನು ರಾಜ್ಯದ ಹೊರಗೆ ಬೆಳೆಸುತ್ತಿದೆ. ಉದಾ: ಪ್ರತಿ ದಿನ ನಂದಿನಿ 2.5 ಲಕ್ಷ ಲೀಟರ್ ಹಾಲನ್ನು ಮುಂಬೈಗೆ ರವಾನಿಸುತ್ತಿದೆ. ಹೈದರಾಬಾದಿಗೆ ದಿನನಿತ್ಯ 1.5 ಲಕ್ಷ ಲೀಟರ್ ಹಾಲನ್ನು ರವಾನಿಸುತ್ತಿದೆ. ತಮಿಳುನಾಡಿನಲ್ಲಿಯೂ ಮಾರಾಟ ಮಾಡುತ್ತಿದೆ.

ಅಮಿತ್ ಷಾ ಸೃಷ್ಟಿಸಿದ ವಿವಾದ!

ಕಳೆದ ಕೆಲವು ತಿಂಗಳುಗಳ ಹಿಂದೆ ಒಕ್ಕೂಟ ಸರ್ಕಾರದ ಗೃಹ-ಸಹಕಾರ ಮಂತ್ರಿ ಅಮಿತ್ ಷಾ ಅವರು ಮಂಡ್ಯದಲ್ಲಿ ಮಾತನಾಡುತ್ತಾ ’ನಂದಿನಿ-ಅಮುಲ್ ಸಹಕಾರಿ ಸಂಘಗಳನ್ನು ವಿಲೀನಗೊಳಿಸಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುವಂತೆ ಮಾಡುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಇವರು ರಾಷ್ಟ್ರದ ಸಹಕಾರಿ ಮಂತ್ರಿ. ಆದರೆ ಇವರು ’ವಿಲೀನ’ದ ಮಾತನಾಡಿ ಕರ್ನಾಟಕ-ಗುಜರಾತ್ ನಡುವೆ ಅಸಹಕಾರ ಬೆಳೆಯುವಂತೆ ಮಾಡ್ಡಿದ್ದಾರೆ. ಈ ವಿಲೀನ ಎನ್ನುವುದು ಕರ್ನಾಟಕದ ಸಂದರ್ಭದಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ. ಸರ್ ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ್ದ, ಕರ್ನಾಟಕದ ಆರ್ಥಿಕತೆಯ ಪ್ರತೀಕವಾಗಿದ್ದ ಮೈಸೂರು ಬ್ಯಾಂಕನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಯಿತು. ಈಗ ಮೈಸೂರು ಬ್ಯಾಂಕು ಇಲ್ಲ. ಅದು ಕೇವಲ ಒಂದು ಹಣಕಾಸಿನ ಬ್ಯಾಂಕಾಗಿರಲಿಲ್ಲ. ಕರ್ನಾಟಕದ ಅಸ್ಮಿತೆಯಾಗಿತ್ತು. ಬೆಂಗಳೂರಿನ ಒಂದು ಕೇಂದ್ರ ಸ್ಥಾನದಲ್ಲಿ ಮೈಸೂರು ಬ್ಯಾಂಕ್ ವೃತ್ತ ಇದೆ. ನಮಗೆ ಮೈಸೂರು

ಅಮಿತ್ ಶಾ

ಬ್ಯಾಂಕನ್ನು ಉಳಿಸಿಕೊಳ್ಳಲಾಗಲಿಲ್ಲ; ಮೈಸೂರು ಬ್ಯಾಂಕ್ ವೃತ್ತವನ್ನಾದರೂ ಉಳಿಸಿಕೊಳ್ಳೋಣ. ಇದನ್ನೂ ಬದಲಾಯಿಸಲು ಬಿಡಬಾರದು. ವಿಜಯ ಬ್ಯಾಂಕನ್ನು ಗುಜರಾತಿನ ಬರೋಡ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಗಿದೆ. ಕರ್ನಾಟಕದ ಬಂದರುಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಮುಂತಾದವುಗಳ ನಿರ್ಮಾಣದ ಕ್ರಾಂಟ್ರಾಕ್ಟ್‌ಅನ್ನು ಗುಜರಾತಿನ ಆದಾನಿ ಎಂಬ ವ್ಯಾಪಾರಿಗೆ ನೀಡಲಾಗಿದೆ. ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಸಂಸ್ಥೆಯನ್ನು ಐಐಟಿ ರೀತಿಯ ಸಂಸ್ಥೆಯನ್ನಾಗಿ ಮಾಡುತ್ತೇವೆ ಎಂದು ಅದನ್ನು ನಾಶ ಮಾಡಲಾಗುತ್ತಿದೆ. ಸರ್ ಎಂ. ವಿಶ್ವೇಶ್ವರಯ್ಯ-ನಾಲ್ವಡಿ ಕೃಷ್ಣರಾಜ ಒಡೆಯರ್ 1924ರಲ್ಲಿ ಸ್ಥಾಪಿಸಿದ್ದ ’ವಿಐಎಸ್‌ಎಲ್’ ಸ್ಟೀಲ್ ಕಾರ್ಖಾನೆಯನ್ನು ಇಂದು ಮುಚ್ಚಲಾಗುತ್ತಿದೆ. ಇದೇ ರೀತಿಯ ಭಯಾನಕ ಸ್ಥಿತಿಯು ’ವಿಲೀನ’ ವಿವಾದದಿಂದ ನಂದಿನಿಗೂ ಬರಬಹುದು ಎಂಬ ಆತಂಕ ಜನತೆಯ ಮನದಲ್ಲಿ ಉಂಟಾಗಿದ್ದರೆ ಅದರಲ್ಲಿ ಸತ್ಯಾಂಶವಿಲ್ಲದಿಲ್ಲ.

ಇದನ್ನೂ ಓದಿ: ಅಮುಲ್‌ v/s ನಂದಿನಿಯಲ್ಲ, ಎರಡೂ ಒಂದಾಗಿ ನಡೆಯುತ್ತವೆ: ಅಮುಲ್ ಎಂಡಿ ಪ್ರತಿಕ್ರಿಯೆ

ಗುಜರಾತ್ ಹೇಳಿ ಕೇಳಿ ವ್ಯಾಪಾರಿಗಳ ನಾಡು. ಕರ್ನಾಟಕದ ಎಲ್ಲ ನಗರಗಳಲ್ಲಿಯೂ ಗುಜರಾತಿ ವ್ಯಾಪಾರಿಗಳಿದ್ದಾರೆ. ಇದರಿಂದ ನಮ್ಮ ಸಹಬಾಳ್ವೆಗೆ ಸಮಸ್ಯೆ ಉಂಟಾಗಿಲ್ಲ. ಆದರೆ ’ವಿಲೀನ’ ಇದೆಯಲ್ಲ ಇದು ಲಕ್ಷಾಂತರ ಕರ್ನಾಟಕಸ್ಥರ ಬಾಳಿಗೆ ಮಣ್ಣು ಹಾಕಲಿದೆ. ನಂದಿನಿ ಬ್ರಾಂಡಿನಲ್ಲಿ ವ್ಯವಹಾರ ನಡೆಸುತ್ತಿರುವ ಕರ್ನಾಟಕ ಮಿಲ್ಕ್ ಫೆಡರೇಶನ್ನಿನ ವಾರ್ಷಿಕ ವ್ಯವಹಾರ ರೂ.20000 ಕೋಟಿ. ಲಕ್ಷಾಂತರ ಹೈನುಗಾರರು, ವಿಶೇಷವಾಗಿ ಮಹಿಳೆಯರು ನಂದಿನಿಯ ಸುತ್ತ ಬೆಳೆದಿರುವ ಹಾಲು ಒಕ್ಕೂಟಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರವು ಪ್ರತಿ ಲೀಟರ್ ಹಾಲಿಗೆ ಸಬ್ಸಿಡಿ ನೀಡುತ್ತಿದೆ. ಪಶು ಆಹಾರದ ಉದ್ದಿಮೆಯೂ ಬೆಳೆಯುತ್ತಿದೆ.

’ವಿಲೀನ’ವು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ!

ಅಮಿತ್ ಷಾ ಪ್ರತಿನಿಧಿಸುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ನಮ್ಮ ಸಂವಿಧಾನದತ್ತ ಒಕ್ಕೂಟ ತತ್ವದ ಬಗ್ಗೆ ನಂಬಿಕೆಯಿಲ್ಲ. ಸೈದ್ಧಾಂತಿಕವಾಗಿ ಅವರದ್ದು ಏಕರೂಪದ-ಕೇಂದ್ರೀಕೃತ ರಾಜಕೀಯದಲ್ಲಿ ನಂಬಿಕೆಯಿರುವ ಪಕ್ಷ. ರಾಜ್ಯಗಳ ಸ್ವಾಯತ್ತ ಬೆಳವಣಿಗೆಗೆ ’ವಿಲೀನ’ವು ಕಂಟಕಪ್ರಾಯವಾಗುತ್ತದೆ. ನಂದಿನಿ ಮತ್ತು ಅಮುಲ್ ಎರಡೂ ತಮ್ಮ ತಮ್ಮ ವ್ಯಾಪಾರ-ವ್ಯವಹಾರ, ಉತ್ಪಾದನೆ ನಡೆಸಿಕೊಂಡಿದ್ದರೆ ಅಮಿತ್ ಷಾಗೆ ಏನು ತೊಂದರೆ? ಇದೇ ರೀತಿಯ ಸಹಕಾರಿ ಹಾಲಿನ ಸಂಸ್ಥೆಗಳನ್ನು ಎಲ್ಲಾ ರಾಜ್ಯಗಳಲ್ಲೂ ಬೆಳೆಸಲು ಒಕ್ಕೂಟ ಸರ್ಕಾರ ಶ್ರಮ ಪಡಬೇಕೇ ವಿನಾ ನಂದಿನಿ-ಅಮುಲ್ ವಿಲೀನದ ಬಗ್ಗೆ ತಂತ್ರಗಾರಿಕೆ ಮಾಡುವುದಲ್ಲ. ಒಕ್ಕೂಟ ಸರ್ಕಾರ ನಂದಿನಿ ಬೆಳವಣಿಗೆಗೆ ಒಂದು ಬಿಡಿಗಾಸೂ ನೀಡುತ್ತಿಲ್ಲ. ಆದರೆ ಇದನ್ನು ಆಪೋಶನ ಮಾಡಿಕೊಳ್ಳಲು ಕಾಲು ಕೆರೆದುಕೊಂಡು ನಿಂತಿದೆ.

ಅಭಿವೃದ್ಧಿಯಲ್ಲಿ ಮುಂದಿರುವ ಕರ್ನಾಟಕ

ಅನೇಕ ಅಭಿವೃದ್ಧಿ ಸೂಚಿಗಳಲ್ಲಿ ಕರ್ನಾಟಕವು ಗುಜರಾತ್‌ಗಿಂತ ಮುಂದಿದೆ. ಉದಾ: 2020-21ರಲ್ಲಿ ಗುಜರಾತಿನ ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ರೂ.14.59 ಲಕ್ಷ ಕೋಟಿಯಾದರೆ ಕರ್ನಾಟಕದ್ದು ರೂ.15.75 ಲಕ್ಷ ಕೋಟಿ. ತಲಾ ವರಮಾನ ಗುಜರಾತಿನದ್ದು ರೂ. 212821ರಷ್ಟಿದ್ದರೆ ಕರ್ನಾಟಕದ್ದು ರೂ.236451. ಜನಸಂಖ್ಯಾ ದಶಕವಾರು ಬೆಳವಣಿಗೆ (2001-2011) ಗುಜರಾತನಲ್ಲಿ ಶೇ.19.3ರಷ್ಟಿದ್ದರೆ ಕರ್ನಾಟಕದಲ್ಲಿ ಶೇ.15.6ರಷ್ಟಿದೆ. ಲಿಂಗ ಅನುಪಾತ ಗುಜರಾತಿನಲ್ಲಿ (2011) 919, ಕರ್ನಾಟಕದಲ್ಲಿ ಇದು 973. ಸಾಕ್ಷರತೆಯಲ್ಲಿ ಲಿಂಗ ಸಂಬಂಧಿ ಅಂತರ ಕರ್ನಾಟಕದಲ್ಲಿ ಶೇ.14.7 ಅಂಶಗಳಷ್ಟಿದ್ದರೆ ಗುಜರಾತಿನಲ್ಲಿ ಇದು ಶೇ.16.5 ಅಂಶಗಳಷ್ಟಿದೆ. ಶಿಶು ಮರಣ ಪ್ರಮಾಣ 2019-20ರಲ್ಲಿ ಪ್ರತಿ ಸಾವಿರ ಜನನಗಳಿಗೆ ಗುಜರಾತಿನಲ್ಲಿ 31ರಷ್ಟಿದ್ದರೆ ಕರ್ನಾಟಕದಲ್ಲಿ 25. ಗುಜರಾತ್ ಅಭಿವೃದ್ಧಿ ಮಾದರಿ ಎನ್ನುವುದು ಕೃತವಾಗಿ ಕಟ್ಟಿದ್ದೇ ವಿನಾ ನಿಜಸ್ಥಿತಿಯು ಮಾದರಿಯಾಗಿಲ್ಲ. ಆರ್ಥಿಕ ಅಭಿವೃದ್ಧಿಯಲ್ಲಿ, ಸಾಮಾಜಿಕ ನ್ಯಾಯದಲ್ಲಿ ಮತ್ತು ಲಿಂಗ ಸಮಾನತೆಯಲ್ಲಿ ಕರ್ನಾಟಕದಿಂದ ಗುಜರಾತ್ ಪಾಠ ಕಲಿಯಬೇಕೇ ವಿನಾ ಗುಜರಾತಿನಿಂದ ಕರ್ನಾಟಕ ಕಲಿಯಬೇಕಾದುದೇನಿಲ್ಲ. ಆದ್ದರಿಂದ ನಂದಿನಿಯನ್ನು ಅದರ ಪಾಲಿಗೆ ಅದನ್ನು ಬಿಡುವುದು ಒಳ್ಳೆಯದು. ಅವರು ತಮ್ಮ ತವರು ರಾಜ್ಯದ ಅಭಿವೃದ್ಧಿಯ ಬಗ್ಗೆ ಕರ್ನಾಟಕದಿಂದ, ತಮಿಳುನಾಡಿನಿಂದ, ಕೇರಳದಿಂದ ಪಾಠ ಕಲಿತು ಅದನ್ನು ಉತ್ತಮಪಡಿಸಲಿ. ಅಮುಲ್-ನಂದಿನಿ ಮಾರುಕಟ್ಟೆ ಪೈಪೋಟಿಗೆ ಸ್ವಾಗತ. ಎರಡರ ವಿಲೀನಕ್ಕೆ ನಮ್ಮ ವಿರೋಧವಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...