Homeಕರ್ನಾಟಕಬಾರುಕೋಲ್‌ ನನ್ನ ರೂಲ್‌ ಆಫ್ ಲಾ ಎಂದವರು ಪ್ರೊ.ಎಂಡಿಎನ್‌: ಸಿದ್ದರಾಮಯ್ಯ

ಬಾರುಕೋಲ್‌ ನನ್ನ ರೂಲ್‌ ಆಫ್ ಲಾ ಎಂದವರು ಪ್ರೊ.ಎಂಡಿಎನ್‌: ಸಿದ್ದರಾಮಯ್ಯ

ನಟರಾಜ್‌ ಹುಳಿಯಾರ್‌‌, ರವಿಕುಮಾರ್‌ ಭಾಗಿಯವರು ಸಂಪಾದಿಸಿರುವ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಚಿಂತನೆಗಳ ‘ಬಾರುಕೋಲು’ ಕೃತಿಯನ್ನು ಇಂದು ಬಿಡುಗಡೆ ಮಾಡಲಾಯಿತು.

- Advertisement -
- Advertisement -

“ರೈತ ಬಳಸುವ ಬಾರುಕೋಲನ್ನು ತನ್ನ ರೂಲ್‌ ಆಫ್‌ ಲಾ ಎಂದವರು ಪ್ರೊ.ನಂಜುಂಡಸ್ವಾಮಿ” ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಟರಾಜ್‌ ಹುಳಿಯಾರ್‌‌, ರವಿಕುಮಾರ್‌ ಭಾಗಿಯವರು ಸಂಪಾದಿಸಿರುವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಚಿಂತನೆಗಳ ‘ಬಾರುಕೋಲು’ ಕೃತಿಯನ್ನು ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಪ್ರೊ.ಎನ್‌ಡಿಎಂ ಅವರಿಗೆ ಜಗತ್ತಿನ ಎಲ್ಲ ಸಮಸ್ಯೆಗಳೂ ಗೊತ್ತಿದ್ದವು. ಬಹಳ ಓದಿಕೊಂಡಿದ್ದರು. ಅವರ ಒಂದು ಸ್ವಭಾವ ಏನೆಂದರೆ ಬೇರೆಯವರ ಅಭಿಪ್ರಾಯಕ್ಕೆ ಅಷ್ಟಾಗಿ ಬೆಲೆ ಕೊಡುತ್ತಿರಲಿಲ್ಲ. ಅವರು ಹೇಳಿದ್ದೇ ಸರಿ ಅಂತ ಒಪ್ಪಿಕೊಳ್ಳಬೇಕಿತ್ತು. ಒಪ್ಪಿಕೊಳ್ಳದಿದ್ದರೆ ತೋರು ಬೆರಳು ತೋರಿಸಿ- ನಿನಗೆ ಗೊತ್ತಿಲ್ಲ, ನೀನು ಓದಿಕೊಂಡಿಲ್ಲ ಕುಳಿತುಕೋ ಎನ್ನುತ್ತಿದ್ದರು” ಎಂದು ಪ್ರೊಫೆಸರ್‌ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಾನು ರಾಜಕಾರಣಕ್ಕೆ ಬರಲು ಕಾರಣರಾದವರು ಪ್ರೊ.ಎಂಡಿಎನ್‌. ಅವರೊಂದಿಗೆ ರಾಜಕೀಯ ಚರ್ಚೆಗಳನ್ನು ನಡೆಸುತ್ತಿದ್ದೆವು. ರಾಮಮನೋಹರ್‌ ಲೋಹಿಯಾ ಅವರು ಹೊರತರುತ್ತಿದ್ದ ‘ಮ್ಯಾನ್‌ಕೈಂಡ್‌’ ವಾರ ಪತ್ರಿಕೆಯನ್ನು ಕನ್ನಡದಲ್ಲಿ ‘ಮಾನವ’ ಎಂದು ಪ್ರಕಟಿಸಲಾಗುತ್ತಿತ್ತು. ಆಂದೋಲನ ಪತ್ರಿಕೆಯ ಸಂಸ್ಥಾಪಕರಾದ ರಾಜಶೇಖರ್‌ ಕೋಟಿಯವರು ಮೈಸೂರು ಕೆ.ಆರ್‌.ಸರ್ಕಲ್‌ನಲ್ಲಿ ಮಾನವ ಪತ್ರಿಕೆಯನ್ನು ಮಾರುತ್ತಿದ್ದರು. ನಂತರ ನಂಜುಂಡಸ್ವಾಮಿಯವರು ಬೆಂಗಳೂರಿಗೆ ಬಂದರು ಎಂದು ತಿಳಿಸಿದರು.

ಪ್ರೊ.ನಂಜುಂಡಸ್ವಾಮಿಯವರ ಪರಿಚಯವಾದದ್ದು 1969ನೇ ಇಸವಿಯಲ್ಲಿ. ನಂಜುಂಡಸ್ವಾಮಿಯವರು ಶಾರದಾ ವಿಲಾಸ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರು ನಮಗೆ ತರಗತಿಯಲ್ಲಿ ಪಾಠ ಮಾಡಿದ ಗುರುಗಳಾಗಿರಲಿಲ್ಲ. ರಾಜಕೀಯ ಗುರುಗಳಾಗಿದ್ದರು. ನಾನು, ಬಸವರಾಜು, ನರೇಂದ್ರ, ಲಿಂಗಪ್ಪ, ಅಣ್ಣೇಗೌಡ ಯಾವಾಗಲೂ ಎಂಡಿಎನ್‌ ಜೊತೆ ಇರುತ್ತಿದ್ದೆವು. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದ್ದ ಸ್ಟುಡೆಂಟ್ ಯೂನಿಯನ್‌ ಚುನಾವಣೆಯನ್ನು ಪ್ರಶ್ನಿಸುವಂತೆ ಎಂಡಿಎನ್‌ ನಮಗೆ ಸೂಚಿಸಿದ್ದರು. ನಮ್ಮ ಆಗ್ರಹಕ್ಕೆ ಮಣಿದು ಒಂದು ವರ್ಷದ ನಂತರ ಬದಲಾವಣೆ ತರಲಾಯಿತು ಎಂದು ನೆನಪಿಸಿಕೊಂಡರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನು ಸಿದ್ದರಾಮಯ್ಯನವರು ಧರಿಸಿದ್ದು ಹೀಗೆ…

ತರಗತಿ ಮುಗಿದ ಮೇಲೆ ನಂಜುಂಡಸ್ವಾಮಿ ಅವರ ಜೊತೆಯಲ್ಲಿ ಕ್ಯಾಂಟೀನ್‌ಗೆ ಹೋಗುತ್ತಿದ್ದೆವು. ನಮಗೆ ಚಾರ್‌ಮಿನಾರ್‌ ಸಿಗರೇಟ್ ಹಾಗೂ ಅರ್ಧ ಗಂಟೆಗೊಮ್ಮೆ ಟೀ ಕೊಡಿಸುತ್ತಿದ್ದರು. ಚರ್ಚಿಸುತ್ತಿದ್ದರು. ಅಲ್ಲಿಯವರೆಗೆ ರಾಜಕಾರಣದ ಗಂಧಗಾಳಿ ಗೊತ್ತಿರಲಿಲ್ಲ. ನಾನು ರಾಜಕೀಯಕ್ಕೆ ಬರಲು ಎನ್‌ಡಿಎಂ ಕಾರಣಕರ್ತರು. ನಂತರ ಸಮಾಜವಾದಿ ಯುವಜನ ಸಭಾ ಸೇರಿದೆ. ಅಲ್ಲಿಂದ ರಾಜಕೀಯ ಶುರುವಾಯಿತು ಎಂದು ಹೇಳಿದರು.

ರೈತ ಚಳವಳಿಯ ಬಹಳ ಎತ್ತರಕ್ಕೆ ಹೋಗಿತ್ತು. ನನ್ನನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದರು. ಎರಡು ವರ್ಷ ಸಕ್ರಿಯವಾಗಿ ರೈತ ಸಂಘದಲ್ಲಿ ಇದ್ದೆ. ಈ ಧೈರ್ಯಕ್ಕೆ, ಅಧಿಕಾರಿಗಳ ವಿರುದ್ಧ ಮಾತನಾಡಲಿಕ್ಕೆ ಪ್ರೊಫೆಸರ್‌ ಕಾರಣ. ಸರ್ಕಾರಿ ವಾಹನಗಳನ್ನು ವೈಯಕ್ತಿಕ ಕೆಲಸಗಳಿಗೆ ಅಧಿಕಾರಿಗಳು ಬಳಸಿದರೆ ಚೆಕ್‌ ಮಾಡಲು ನಮಗೆ ಪ್ರೊಫೆಸರ್‌ ತಿಳಿಸಿದ್ದರು. ನಾವು ತಾಲ್ಲೂಕು ಕಚೇರಿಗೆ ಹೋದರೆ ಎಲ್ಲ ಅಧಿಕಾರಿಗಳು ಅಲರ್ಟ್ ಆಗುತ್ತಿದ್ದರು. ಅಧಿಕಾರಿಗಳು ಲಂಚ ತೆಗೆದುಕೊಳ್ಳಲು ಹೆದರುತ್ತಿದ್ದರು. ಅದಕ್ಕೆ ನಂಜುಂಡಸ್ವಾಮಿಯವರು ಕಾರಣ ಎಂದು ಶ್ಲಾಘಿಸಿದರು.

ರೈತ ಸಂಘವು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಆಗ್ರಹಿಸಿದೆವು. ಎನ್‌.ಡಿ.ಸುಂದರೇಶ್‌, ಕಡಿದಾಳು ಶಾಮಣ್ಣ ವಿರೋಧಿಸಿದರು. ನಾವು ಚುನಾವಣೆಗೆ ನಿಲ್ಲಬೇಕೆಂದು ಆಗ್ರಹಿಸಿ ವಾಕ್‌ಔಟ್ ಮಾಡಿದೆವು. ಅದಾದ ಮೇಲೆ ಸಂಪರ್ಕ ಕಡಿಮೆಯಾಯಿತು ಎಂದು ವಿಷಾದಿಸಿದರು.

ರೈತರೊಂದಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಒಂದು ಸಭೆ ಏರ್ಪಾಡು ಮಾಡಿದ್ದರು. ಸರ್ಕಾರದ ಪ್ರಧಾನ ಕಾರ್ಯದರ್ಶಿಯನ್ನು ಉದ್ದೇಶಿಸಿ ಪ್ರೊಫೆಸರ್‌, ಆ ದೊಡ್ಡ ಕೂಲಿ ಇದ್ದಾನಲ್ಲ, ಆತ ಎದ್ದು ಹೋದರೆ ಮಾತ್ರ ನಾನು ಮಾತನಾಡೋದು ಎಂದು ಮುಖ್ಯಮಂತ್ರಿಗೆ ತಿಳಿಸಿದ್ದರು.  ಅಷ್ಟು ಧೈರ್ಯ ಅವರಿಗಿತ್ತು ಎಂದು ಸ್ಮರಿಸಿದರು.

ಪ್ರಜಾಪ್ರಭುತ್ವ, ಸಮಾಜವಾದ, ಸಂವಿಧಾನ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅವರದ್ದೇ ಆದ ಚಿಂತನೆಗಳಿದ್ದವು. ಅವರ ಎಲ್ಲ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಆಗದಿದ್ದರೂ ಕೆಲವೊಂದು ವಿಚಾರಗಳನ್ನು ಮೈಗೂಡಿಸಿಕೊಂಡಿದ್ದೇವೆ. ಇಂದಿಗೂ ನಂಜುಂಡಸ್ವಾಮಿಯವರ ಚಿಂತನೆಗಳು ಬಹಳ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಕೈಯಲಿದ್ದ ಚಾಟಿಯನ್ನು ಜನರ ಕೈಗೆ ನೀಡಿದ ಎಂಡಿಎನ್‌: ಪ್ರೊ.ರವಿವರ್ಮ ಕುಮಾರ್‌

ಸಿದ್ದರಾಮಯ್ಯನವರಿಗೂ ಮೊದಲು ಮಾತನಾಡಿದ ಕರ್ನಾಟಕ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್‌ ಅವರು ಪ್ರೊಫೆಸರ್‌ ಎಂಡಿಎನ್‌ ಅವರ ಧೈರ್ಯ ಹಾಗೂ ಪ್ರಭಾವಕ್ಕೆ ಸಂಬಂಧಿಸಿದಂತೆ ಘಟನೆಯೊಂದನ್ನು ಮೆಲುಕುಹಾಕಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ರೈತ ಸಂಘದ ಪ್ರಾರಂಭದ ದಿನಗಳಲ್ಲಿ ನರಗುಂದ, ನವಲಗುಂದದಲ್ಲಿ ಗೋಲಿಬಾರ್‌ ಆಗಿ ಮೂರು ಜನ ರೈತರನ್ನು ಕೊಲ್ಲಲಾಯಿತು. ಆ ಸನ್ನಿವೇಶದಲ್ಲಿ ಶಿವಮೊಗ್ಗದಲ್ಲಿ ಎಂ.ಡಿ.ಸುಂದರೇಶ್‌, ಕಡಿದಾಳ್ ಶಾಮಣ್ಣ, ಎಚ್‌.ಎಸ್‌.ರುದ್ರಪ್ಪ ನೇತೃತ್ವದಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಳ್ಳಲಾಗಿತ್ತು. ರೈತರ ದೊಡ್ಡ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಎಲ್ಲ ದರ್ಪ, ದವಲತ್ತು ಪ್ರದರ್ಶಿಸಬಹುದಾಗಿದ್ದ ಒಬ್ಬ ಪೊಲೀಸ್‌ ಅಧಿಕಾರಿ ಕುದುರೆ ಮೇಲೆ ಬಂದ. ಆತನ ಕೈಯಲ್ಲಿ ಒಂದು ಚಾಟಿ ಇರುತ್ತದೆ. ದಾರಿಯುದ್ಧಕ್ಕೂ ಜನರ ಮೇಲೆ ಜಳಪಿಸುತ್ತಿದ್ದ. ಪ್ರೊಫೆಸರ್‌ ನೋಡಿದರು. ಪೊಲೀಸ್ ಸೂಪರಿಡೆಂಟ್, ಡೆಪ್ಯೂಟಿ ಕಮಿಷನರ್‌ ಎಲ್ಲರೂ ಇದ್ದರು. ಆಗ ನಂಜುಂಡಸ್ವಾಮಿಯವರು ಒಂದು ಮಾತು ಹೇಳಿದರು. ಡಿಸಿ ಆದಿಯಾಗಿ ಖಾಕಿ ಧರಿಸಿರುವ ನೀವೆಲ್ಲ ಪ್ರಜಾ ಸೇವಕರು. ಪ್ರಜೆಗಳು ನಿಮ್ಮನ್ನು ನೇಮಕ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಸೇವಕರಂತೆ ನೀವು ನಡೆದುಕೊಳ್ಳಬೇಕು. ಈ ದರ್ಪ, ದೌಲತ್ತು ನಡೆಸುವ ಚಾಳಿಯನ್ನು ಬಿಡಿ. ಯಾರು ಈ ಅಧಿಕಾರಿ, ಇವನ ಕೈಗೆ ಚಾಟಿ ಕೊಟ್ಟಿದ್ದು ಯಾರು? ಡಿಸಿಯವರೇ ನಿಮಗೆ ಐದು ನಿಮಿಷ ಸಮಯ ಕೊಡುತ್ತೇನೆ. ಇನ್ನೈದು ನಿಮಿಷದಲ್ಲಿ ಆ ಅಧಿಕಾರಿ ಕೈಯಿಂದ ಆ ಚಾಟಿಯನ್ನು ಕಿತ್ತುಕೊಳ್ಳದೆ ಹೋದರೆ ಆರನೇ ನಿಮಿಷಕ್ಕೆ ರೈತರು ಆ ಕೆಲಸವನ್ನು ಮಾಡುತ್ತಾರೆ ಎಂದರು. ಈ ಮಾತು ಕೇಳಿದ ತಕ್ಷಣ ರೈತರು ಎದ್ದು ನಿಂತರು. ಆ ಅಧಿಕಾರಿ ಎಲ್ಲಿ ಓಡಿ ಹೋದನೋ ಗೊತ್ತಿಲ್ಲ. ಆ ರೀತಿ ನಂಜುಂಡಸ್ವಾಮಿಯವರು ಸರ್ಕಾರದ ಕೈಯಲ್ಲಿದ್ದ ಚಾಟಿಯನ್ನು ಕಿತ್ತುಕೊಂಡು ರೈತರ ಕೈಗೆ ಕೊಟ್ಟರು” ಎಂದು ಪ್ರೊ.ರವಿವರ್ಮಕುಮಾರ್‌ ತಿಳಿಸಿದರು.

ನಂಜುಂಡಸ್ವಾಮಿಯವರ ಪುತ್ರಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, “ನಮ್ಮ ತಂದೆಯವರು ದೈಹಿಕವಾಗಿ ನಿರ್ಗಮನವಾಗಿ 18 ವರ್ಷಗಳಾದವು. ರೈತ ಸಂಘ ಕವಲುಗಳಾಗಿದೆ. ಎಂಡಿಎನ್‌ ಅವರ ಭಾವಚಿತ್ರವನ್ನು ಎಲ್ಲರೂ ಬಳಸುತ್ತಾರೆ. ಆದರೆ ಅವರಿಗಿದ್ದ ವೈಚಾರಿಕ ಬದ್ಧತೆ, ಆತ್ಮಸ್ಥೈರ್ಯ, ರಾಜೀ ಇಲ್ಲದೆ ಸತ್ಯಕ್ಕಾಗಿ ನಿಲ್ಲುವ ಗುಣ ಯಾರಲ್ಲಿ ಇದೆ ಎಂದು ಹುಡುಕಾಡುತ್ತಿದ್ದಾಗ ಸಿದ್ದರಾಮಯ್ಯನವರಲ್ಲಿ ಕಂಡೆ” ಎಂದರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನು ಚುಕ್ಕಿ ನಂಜುಂಡಸ್ವಾಮಿಯವರು ಸಿದ್ದರಾಮಯ್ಯನವರಿಗೆ ನೀಡಿದರು. ಬಳಿಕ ಚಾಟಿಯನ್ನು ಬೀಸಿದ ಅವರು, ಹೆಗಲಿಗೆ ಬಾರುಕೋಲನ್ನು ಧರಿಸಿ ಎನ್‌ಡಿಎಂ ಅವರ ಹೋರಾಟವನ್ನು ಮೆಲುಕು ಹಾಕಿದರು.

ಕೃತಿಯ ಸಂಪಾದಕರಾದ ನಟರಾಜ್‌ ಹುಳಿಯಾರ್‌, ರವಿಕುಮಾರ್ ಬಾಗಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ಡಾ.ವೆಂಕಟೇಶ್ ನೆಲ್ಲುಕುಂಟೆ, ಮುಖಂಡರಾದ ರಾಠೋಡ್‌, ನಾಗರಾಜ್‌ ರೆಡ್ಡಿ ಹಾಗೂ ಇತರ ಮುಖಂಡರು ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...