ಕೊನೆಯ ಹಂತದ ಚುನಾವಣೆಗಳು ಮುಗಿಯುವ ವೇಳೆಗೆ ರಾಜಕೀಯ ಪಲ್ಲಟಗಳು ನಡೆಯುತ್ತಿವೆ. ಒಂದು ಕಡೆ ಮೋಡ-ರಾಡಾರ್, ಡಿಜಿಟಲ್ ಕ್ಯಾಮೆರ – ಮೇಲ್ ಅಂತ ಮೋದಿ ತೀವ್ರ ಟೀಕೆಗೆ, ಟ್ರೋಲ್‍ಗೆ ಒಳಗಾಗುತ್ತಿದ್ದರೆ ಇತ್ತ ರಾಹುಲ್, ಪ್ರಿಯಾಂಕ ಅಣ್ಣ-ತಂಗಿ ಇಬ್ಬರೂ ತಮ್ಮ ಧೈರ್ಯ ಮತ್ತು ಮಾನವೀಯ ನಡವಳಿಕೆಗಳಿಂದ ಪ್ರಶಂಸೆಯ ಸುರಿಮಳೆ ಪಡೆಯುತ್ತಿದ್ದಾರೆ.
ನವದೆಹಲಿಯಲ್ಲಿ ಪ್ರಿಯಾಂಕ ಗಾಂಧಿ ಕಾರಿನಲ್ಲಿ ತೆರಳುತ್ತಿದ್ದ ಮಾರ್ಗದಲ್ಲಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಪ್ರಿಯಾಂಕ ಕಾರು ಬಂದಕೂಡಲೇ ಮೋದಿ-ಮೋದಿ, ಮತ್ತೊಮ್ಮೆ ಎಂದು ಜೋರಾಗಿ ಕೂಗಿದ್ದಾರೆ. ತಕ್ಷಣವೇ ಕಾರು ನಿಲ್ಲಿಸಲು ಹೇಳಿ, ಕಾರಿನಿಂದಿಳಿದ ಪ್ರಿಯಾಂಕ ಗಾಂಧಿ ಅವರತ್ತ ಹಸ್ತಲಾಘವ ಚಾಚುತ್ತಾರೆ. “ನಿಮ್ಮ ನಿಲುವು ನಿಮ್ಮದು, ನನ್ನ ನಿಲುವು ನನ್ನದು, ಆಲ್ ದಿ ಬೆಸ್ಟ್” ಎಂದು ಪ್ರಿಯಾಂಕ ಗಾಂಧಿ ಹೇಳಿದೊಡನೆಯೇ ಅವರೆಲ್ಲರೂ ಖುಷಿಯಿಂದ ಹಸ್ತಲಾಘವ ಮಾಡಿದ್ದಲ್ಲದೇ ಆಲ್ ದಿ ಬೆಸ್ಟ ಮೇಡಂ, ಬೆಸ್ಟ್ ಆಫ್ ಲಕ್ ಎಂದು ಶುಭ ಹಾರೈಸಿದ್ದಾರೆ. ಅಷ್ಟೆ ಅಲ್ಲದೇ ಆ ಕಾರ್ಯಕರ್ತುರು ಪ್ರಿಯಾಂಕರ ಫೋಟೊ ಜೊತೆಗೆ ಸೆಲ್ಫಿ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಿಯಾಂಕಾ ಗಾಂಧಿಯವರ ಧೈರ್ಯ ಮತ್ತು ಹೃದಯವೈಶಾಲ್ಯತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಇದು ಪ್ರಿಯಾಂಕರವರ ‘ಗಾಂಧಿಗಿರಿ’ ಎಂದು ಬಿರುದ್ದು ನೀಡಿದ್ದಾರೆ.
ವಿಡಿಯೋ ನೋಡಿ
ಪ್ರಿಯಾಂಕ ಕಾರು ಬಂದಕೂಡಲೇ ಮೋದಿ-ಮೋದಿ ಎಂದು ಜೋರಾಗಿ ಕೂಗಿದ್ದಾರೆ. ತಕ್ಷಣವೇ ಇಳಿದ ಪ್ರಿಯಾಂಕ ಗಾಂಧಿ ಅವರತ್ತ ಹಸ್ತಲಾಘವ ಚಾಚಿ “ನಿಮ್ಮ ನಿಲುವು ನಿಮ್ಮದು, ನನ್ನ ನಿಲುವು ನನ್ನದು, ಆಲ್ ದಿ ಬೆಸ್ಟ್” ಎಂದು ಹೇಳಿದೊಡನೆಯೇ ಅವರೆಲ್ಲರೂ ಖುಷಿಯಿಂದ ಹಸ್ತಲಾಘವ ಮಾಡಿದ್ದಲ್ಲದೇ ಆಲ್ ದಿ ಬೆಸ್ಟ ಮೇಡಂ, ಬೆಸ್ಟ್ ಆಫ್ ಲಕ್ ಎಂದು ಶುಭ ಹಾರೈಸಿದ್ದಾರೆ. pic.twitter.com/TSVXWhJL1y
— Mutturaju (@Mutturaju7) May 14, 2019
ಇನ್ನೊಂದು ಕಡೆ ಮೋದಿಯ ಸ್ಕ್ರಿಪ್ಟೆಡ್ ಪ್ರಶ್ನೆಗಳ ಸಂದರ್ಶನದ ಕಾರಣಕ್ಕಾಗಿ, ಮೋಡ-ರಾಡಾರ್, ಡಿಜಿಟಲ್ ಕ್ಯಾಮೆರ – ಮೇಲ್ ವಿಷಯದ ಕಾರಣಕ್ಕಾಗಿ ಭಾರೀ ಸದ್ದು ಮಾಡಿದ್ದ ನ್ಯೂಸ್ ನೇಷನ್ ಚಾನಲ್ ಇಂದು ಪಂಜಾಬ್‍ನ ಬಹಿರಂಗ ಮೈದಾನದಲ್ಲಿ ಸ್ಕ್ರಿಪ್ಟೆಡ್ ಪ್ರಶ್ನೆಗಳಿಲ್ಲದೆ ರಾಹುಲ್ ಗಾಂಧಿಯವರ ಸಂದರ್ಶನ ಮಾಡಿದೆ.
ಈ ಐದು ವರ್ಷದ ಮೋದಿಜಿ ಆಡಳಿತದಲ್ಲಿ ಒಬ್ಬ ವ್ಯಕ್ತಿಯ ಸರ್ಕಾರವಾಗಿದೆ. ಅವರು ಯಾರ ಮಾತನ್ನು ಕೇಳಿಲ್ಲ. ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿ ಮಾಡುವಾಗ ಮೋದಿ ಯಾರ ಸಲಹೆಯನ್ನು ಪಡೆಯದೇ ಏಕಾಏಕಿ ನಿರ್ಧಾರ ಮಾಡಿದರು. ಭಾರತದಲ್ಲಿ ಆರ್ಥಿಕ ಇಲಾಖೆ ಇದೆ, ಅರ್ಥ ಸಚಿವರಿದ್ದಾರೆ, ಸಮರ್ಥ ಅಧಿಕಾರಿಗಳಿದ್ದಾರೆ, ಆರ್‍ಬಿಐ ಗವರ್ನರ್ ಇದ್ದಾರೆ, ಯಾರನ್ನು ಕೇಳದೆ ಹೇಳದೆ ಜಾರಿ ಮಾಡಿದುದು ಸರಿ ಅಲ್ಲ, ಭಾರತದ ಜನರ ದನಿಗೆ ಅನುಗುಣವಾಗಿ ಸರ್ಕಾರ ನಡೆಸಬೇಕೆ ಹೊರತು ಒಬ್ಬ ವ್ಯಕ್ತಿಯ ಮನಸ್ಸಿಗೆ ಬಂದ ಹಾಗೆ ಅಲ್ಲ ಎಂದು ರಾಹುಲ್ ಹೇಳಿದರು.
ಅದಕ್ಕೆ ಸಂದರ್ಶಕ, ನೀವು ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ವಿರುದ್ಧ ಮಾತಾಡುತ್ತೀರಿ ಅವನ್ನು ಜಾರಿಗೆ ತಂದ ನಂತರವೂ ಉತ್ತರ ಪ್ರದೇಶ ಮತ್ತು ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದೆ ಎಂದು ಮೋದಿ ನಮ್ಮ ಸಂದರ್ಶನದಲ್ಲಿ ಉತ್ತರಿಸಿದ್ದರಲ್ಲ ಎಂದು ಕೇಳಿದರು. ಆಗ “ಮೋದಿಜಿಯವರು ಸ್ಕ್ರಿಪ್ಟೆಡ್ ಫೈಲ್‍ನಲ್ಲಿ ಈ ಉತ್ತರವನ್ನು ಬರೆದುಕೊಂಡು ಬಂದಿದ್ದರ?” ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ. ಅದಕ್ಕೆ ಸಂದರ್ಶಕ ಇಲ್ಲ ಮೋದಿಯವರು ಕೇವಲ ಕವನ ಮಾತ್ರ ಫೈಲ್‍ನಲ್ಲಿ ಬರೆದುಕೊಂಡು ಬಂದಿದ್ದರು ಎಂದಾಗ, ಮೋದಿಯವರ ಫೈಲ್‍ನಲ್ಲಿ ಪ್ರಶ್ನೆ, ಉತ್ತರ ಎರಡು ಇರುವುದನ್ನು ಇಂಟರ್‍ನೆಟ್‍ನಲ್ಲಿ ಎಲ್ಲರೂ ನೋಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದೇ ಸಂದರ್ಶನದಲ್ಲಿ ನಾವು ಭಾರತವನ್ನು ಪ್ರೀತಿ, ಸಹೋದರತೆ, ನ್ಯಾಯ, ನಾವೆಲ್ಲ ಒಂದು ಎನ್ನುವ ಮನೋಭಾವದ ಆಧಾರದಲ್ಲಿ ಕಟ್ಟಲು ಬಯಸಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.
ಸಂದರ್ಶನ ನೋಡಿ


