ಇಂದು ಕನ್ನಡ ರಾಜ್ಯೋತ್ಸವ. ಕನ್ನಡಿಗರ ಪಾಲಿನ ಹಬ್ಬ. ಕೊರೊನಾ ಕಾರಣದಿಂದ ಬೀದಿ-ಬೀದಿಯಲ್ಲಿ ಕೆಂಪು-ಹಳದಿ ಬಣ್ಣದೋಕುಳಿ, ಆಳೆತ್ತೆರದ ಬಾವುಟಗಳು ಹಾರದಿದ್ದರೂ ಕನ್ನಡಿಗರ ಮನದಲ್ಲಿ ಕನ್ನಡತನಕ್ಕೇನು ಕೊರತೆಯಿಲ್ಲ. ಇಂತಹ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಟ್ವೀಟ್ ಮಾಡಿ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಿಗರ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಇಂದು ಬೆಳಿಗ್ಗೆ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ನಮ್ಮ ಜಿಎಸ್ಟಿ ದುಡ್ಡು ಕೊಟ್ಟು ಮಾತಾಡಿ ಸ್ವಾಮಿ.
ನವೆಂಬಕ್ ೧ರಂದು ಕನ್ನಡದಲ್ಲಿ ಶುಭಾಶಯ ಹೇಳಿ, ಆಗಾಗ ಎರಡು ಮಾತು ಕನ್ನಡದಲ್ಲಿ ಆಡಿದ್ರೆ ಕರ್ನಾಟಕ ಪ್ರಗತಿ ಕಾಣಲ್ಲ.
ಇವೆಲ್ಲ ಡವ್ ಮಾಡೋದ್ ನಿಲ್ಸಿ, #GST, #FloodRelief ಕೊಡಿ. #IBPSMosa ಸರಿಪಡಿಸಿ. #StopHindiImposition https://t.co/0bKCyGZdZs— Shruthi H M । ಶ್ರುತಿ ಎಚ್ ಎಮ್ (@shruthihm1) November 1, 2020
ಇದಕ್ಕೆ ಪ್ರತಿಕ್ರಿಯಿಸಿದ ಹನುಮನಗೌಡ ಪೊಲೀಸ್ ಪಾಟೀಲ್ “ನಮ್ಮ ನಾಡ ಜನರಿಗೆ ಕನ್ನಡ ನಾಡೊಸಗೆಯ ಕುರಿತು ಹಾರೈಸಿದ ನಮ್ಮ ಭಾರತ ಒಕ್ಕೂಟದ ಪ್ರಧಾನಿಗಳಿಗೆ ನಮಸ್ಕಾರಗಳು. GST ಬಾಕಿ ಪಾವತಿ, IBPS ಮೋಸ ನೆರೆ ಪ್ರವಾಹದ ದುಡ್ಡು ಪಾವತಿ, ರಾಜ್ಯದ ಜಲ ಮತ್ತು ಗಡಿ ವಿವಾದ ಪರಿಹಾರ, ಕೇಂದ್ರ ಮಟ್ಟದ ಪ್ರತಿ ಪರೀಕ್ಷೆಗಳನ್ನು ನಮ್ಮ ನಾಡ ಭಾಷೆಯಲ್ಲಿ ಸಹ ನಡೆಸುವುದು ಇತ್ಯಾದಿ ಸಮಸ್ಯೆಗಳನ್ನು ಸಹ ಪರಿಹರಿಸಿ…!” ಎಂದು ಟ್ವೀಟ್ ಮಾಡಿದ್ದಾರೆ.
ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಎಲ್ಲಾ ಭಾಷೆಗಳಲ್ಲಿಯೂ ಬರೆಯುವ ಅವಕಾಶ ಮೊದಲು ನೀಡಿ. ಈ ನಿಮ್ಮ ಒಂದು ದಿನದ ಶುಭ ಕೋರಿಕೆಯ ಬದಲು ನಮಗೆ ನೀಡಬೇಕಾದ ಜಿ ಎಸ್ ಟಿ ಬಾಕಿಯನ್ನು ನೀಡಿ. ಪರಿಸರ ಕರಡು ನೀತಿಯನ್ನು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸಿ. ಎಲ್ಲಾ ಭಾಷೆಗಳಿಗೂ ಪ್ರಾಮುಖ್ಯತೆ ಭಾಷಾ ವೈವಿಧ್ಯತೆಯನ್ನು ಗೌರವಿಸಿ. ಜೈ ಕರ್ನಾಟಕ ಜೈ ಕನ್ನಡ ಎಂದು ಆದರ್ಶ್ ಎಚ್ ಎಂ ಆಗ್ರಹಿಸಿದ್ದಾರೆ.
ನೆರೆ ಪರಿಹಾರ ಕೊಡ್ಲಿಲ್ಲ, GST ಬಾಕಿ ಕೊಡ್ಲಿಲ್ಲ, IBPS ನಿಯಮ ತಿದ್ದುಪಡಿ ಮಾಡಿ ಕನ್ನಡಿಗರ ಉದ್ಯೋಗವನ್ನು ಕಿತ್ತು ಕೊಂಡ್ರಿ, ಕೇಂದ್ರ ಸರಕಾರದ ಸೇವೆಗಳು ಕನ್ನಡದಲ್ಲಿ ಸಿಗುತ್ತಿಲ್ಲ. ರಾಜ್ಯೋತ್ಸವದಂದು ಕನ್ನಡದಲ್ಲಿ ಶುಭ ಕೋರಿದ್ದು ಬಿಟ್ಟರೆ ನಿಮ್ಮಿಂದ ರಾಜ್ಯಕ್ಕೆ ಇನ್ನೇನು ಸಿಕ್ಕಿಲ್ಲ ಎಂದು ಹರೀಶ್ ಎಂಬುವವರು ಕಿಡಿಕಾರಿದ್ದಾರೆ.
ಧನ್ಯವಾದಗಳು ಮಾನ್ಯ ಪ್ರಧಾನ ಮಂತ್ರಿಗಳೇ. ನಿಮ್ಮ ನಿಷ್ಕಲ್ಮಶ ಭಾಷಾಭಿಮಾನ ಜಗತ್ತಿಗೆ ಗೊತ್ತು. ಭವ್ಯ ಇತಿಹಾಸದ, ಶ್ರೀಮಂತ ಪರಂಪರೆಯ, ಸಾಂಸ್ಕೃತಿಕ ವೈವಿಧ್ಯದ, ಗಂಧದ ಗುಡಿಯ ನುಡಿ ಕನ್ನಡವನ್ನ ಉಳಿಸಿ ಬೆಳೆಸುವುದಕ್ಕಿಂತಲೂ ಹೆಚ್ಚಾಗಿ ಎಲ್ಲೆಡೆ ಕನ್ನಡವನ್ನೇ ಬಳಸಿ. ಕನ್ನಡ ಕುಲದ ನನ್ನೆಲ್ಲ ಬಂಧುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಪ್ರಶಾಂತ್ ವಿಪಿ ಸಂತಸ ವ್ಯಕ್ತಪಡಿಸಿದ್ದಾರೆ.
ನೀವು ಪ್ರಾಥಿಸುವುದನ್ನು ಬಿಟ್ಟು, ನಮ್ಮ ತೆರಿಗೆ ನಮಗೆ ನೀಡಿ, ನೆರೆ ಪರಿಹಾರ ನೀಡಿ, ಮಹಾದಾಯಿ, ಕಾವೇರಿ ವಿಚಾರದಲ್ಲಿ ನಮಗೆ ನ್ಯಾಯ ಒದಗಿಸಿದರೆ ಸಾಕು ಎಂದು ಕಬ್ಬಿನಕೆರೆ ಅಶ್ವಿನ್ ಟ್ವೀಟ್ ಮಾಡಿದ್ದಾರೆ.
ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಎಲ್ಲಾ ಭಾಷೆಗಳಲ್ಲಿಯೂ ಬರೆಯುವ ಅವಕಾಶ ಮೊದಲು ನೀಡಿ. ಈ ನಿಮ್ಮ ಒಂದು ದಿನದ ಶುಭ ಕೋರಿಕೆಯ ಬದಲು ನಮಗೆ ನೀಡಬೇಕಾದ ಜಿ ಎಸ್ ಟಿ ಬಾಕಿಯನ್ನು ನೀಡಿ. ಪರಿಸರ ಕರಡು ನೀತಿಯನ್ನು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸಿ. ಎಲ್ಲಾ ಭಾಷೆಗಳಿಗೂ ಪ್ರಾಮುಖ್ಯತೆ ಭಾಷಾ ವೈವಿಧ್ಯತೆಯನ್ನು ಗೌರವಿಸಿ.
ಜೈ ಕರ್ನಾಟಕ ಜೈ ಕನ್ನಡ.— ಆದರ್ಶ ಹೆಚ್ ಎಂ | Adarsh H M (@iAdarshAdi) November 1, 2020
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡದಲ್ಲೇ ಟ್ವೀಟ್ ಮಾಡಿದ ದೇಶದ ಪ್ರಧಾನ ಸೇವಕರಿಗೆ ಧನ್ಯವಾದಗಳು ಎಂದು ಎಚ್.ಎಸ್ ನವೀನ್ ತಿಳಿಸಿದ್ದಾರೆ.
ನಮ್ಮ ಜಿಎಸ್ಟಿ ದುಡ್ಡು ಕೊಟ್ಟು ಮಾತಾಡಿ ಸ್ವಾಮಿ. ನವೆಂಬರ್ 1 ರಂದು ಕನ್ನಡದಲ್ಲಿ ಶುಭಾಶಯ ಹೇಳಿ, ಆಗಾಗ ಎರಡು ಮಾತು ಕನ್ನಡದಲ್ಲಿ ಆಡಿದ್ರೆ ಕರ್ನಾಟಕ ಪ್ರಗತಿ ಕಾಣಲ್ಲ. ಇವೆಲ್ಲ ಡವ್ ಮಾಡೋದ್ ನಿಲ್ಸಿ, #GST, #FloodRelief ಕೊಡಿ. #IBPSMosa ಸರಿಪಡಿಸಿ. #StopHindiImposition ಎಂದು ಶ್ರುತಿ ಎಚ್.ಎಂ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಇಂದಿನ ಪ್ರಧಾನಿ ಮೋದಿ ಭಾಷಣಕ್ಕೆ ಡಿಸ್‌ಲೈಕ್‌ಗಳ ಸುರಿಮಳೆ: ಸಂಖ್ಯೆ ಮರೆಮಾಚಿದ ಬಿಜೆಪಿ


