Homeಮುಖಪುಟಇಂದಿನ ಪ್ರಧಾನಿ ಮೋದಿ ಭಾಷಣಕ್ಕೆ ಡಿಸ್‌ಲೈಕ್‌ಗಳ ಸುರಿಮಳೆ: ಸಂಖ್ಯೆ ಮರೆಮಾಚಿದ ಬಿಜೆಪಿ

ಇಂದಿನ ಪ್ರಧಾನಿ ಮೋದಿ ಭಾಷಣಕ್ಕೆ ಡಿಸ್‌ಲೈಕ್‌ಗಳ ಸುರಿಮಳೆ: ಸಂಖ್ಯೆ ಮರೆಮಾಚಿದ ಬಿಜೆಪಿ

ಒಂದು ಹಂತದಲ್ಲಿ ಲೈಕ್‌ಗಳ ಸಂಖ್ಯೆ 2.8 ಸಾವಿರ ಇದ್ದರೆ ಡಿಸ್‌ಲೈಕ್‌ಗಳ ಸಂಖ್ಯೆ 4.5 ಸಾವಿರಕ್ಕೆರಿತ್ತು. ಇದರಿಂದ ಮುಖಭಂಗಕ್ಕೊಳಗಾದ ಬಿಜೆಪಿ ಪಕ್ಷವು ಕೂಡಲೇ ಲೈಕ್ ಮತ್ತು ಡಿಸ್‌ಲೈಕ್‌ಗಳ ಸಂಖ್ಯೆ ವೀಕ್ಷಕರಿಗೆ ಕಾಣದಂತೆ ತಡೆಹಿಡಿಯಿತು.

- Advertisement -
- Advertisement -

ಇಂದು ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಿದರು. ಹಬ್ಬಗಳ ಹಿನ್ನೆಲೆಯಲ್ಲಿ ಕೊರೊನಾ ಕುರಿತು ಹೆಚ್ಚು ಜಾಗೃತರಾಗಬೇಕೆಂದು ಕರೆ ನೀಡಿದರು. ಆದರೆ ಮೋದಿಯವರ ಮಾತು ಮತ್ತು ನೀತಿಗಳ ಕುರಿತು ಸಿಟ್ಟಿಗೆದ್ದಿರುವ ಸಾಮಾಜಿಕ ಜಾಲತಾಣಿಗರು ಯೂಟ್ಯೂಬ್‌ನಲ್ಲಿ ಮೋದಿ ಭಾಷಣಕ್ಕೆ ಡಿಸ್‌ಲೈಕ್ ಒತ್ತುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿಯೂ ಸಹ ಮೋದಿಯವರ ಭಾಷಣ ಬಿತ್ತರವಾಯಿತು. ಮೋದಿಯವರ ಲೈವ್ ಭಾಷಣ ಆರಂಭವಾದೊಡನೆ ಡಿಸ್‌ಲೈಕ್‌ಗಳ ಸಂಖ್ಯೆ ಏರುತ್ತಲೇ ಹೋಯಿತು. ಒಂದು ಹಂತದಲ್ಲಿ ಲೈಕ್‌ಗಳ ಸಂಖ್ಯೆ 2.8 ಸಾವಿರ ಇದ್ದರೆ ಡಿಸ್‌ಲೈಕ್‌ಗಳ ಸಂಖ್ಯೆ 4.5 ಸಾವಿರಕ್ಕೆರಿತ್ತು. ಮಾತ್ರವಲ್ಲದೇ ಡಿಸ್‌ಲೈಕ್‌ಗಳು ಒಂದೇ ಸಮನೆ ಏರುವುದನ್ನು ತಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಮುಖಭಂಗಕ್ಕೊಳಗಾದ ಬಿಜೆಪಿ ಪಕ್ಷವು ಕೂಡಲೇ ಲೈಕ್ ಮತ್ತು ಡಿಸ್‌ಲೈಕ್‌ಗಳ ಸಂಖ್ಯೆ ವೀಕ್ಷಕರಿಗೆ ಕಾಣದಂತೆ ತಡೆಹಿಡಿಯಿತು.


ಇದನ್ನೂ ಓದಿ: ದೇಶವನ್ನುದ್ದೇಶಿಸಿ ಮೋದಿ ಭಾಷಣಕ್ಕೆ ಟ್ರೋಲ್: ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ!


ಈಗಲೂ ಬಿಜೆಪಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಮೋದಿ ವಿಡಿಯೋಗೆ ಲೈಕ್ ಮತ್ತು ಡಿಸ್‌ಲೈಕ್‌ಗಳ ಸಂಖ್ಯೆ ಕಾಣದಂತೆ ತಡೆಹಿಡಿಯಲಾಗಿದೆ. ಅಲ್ಲದೇ ಅದೇ ಭಾಷಣದ ಮೂರು ವಿಡಿಯೋ ತುಣುಕುಗಳನ್ನು ಬಿಜೆಪಿ ಅಪ್‌ಲೋಡ್‌ ಮಾಡಿದ್ದು ಅಲ್ಲಿಯೂ ಸಹ ಲೈಕ್‌ಗಳಿಗಿಂತ ಡಿಸ್‌ಲೈಕ್‌ಗಳ ಸಂಖ್ಯೆ ಅಧಿಕವಾಗಿರುವುದನ್ನು ನೋಡಬಹುದಾಗಿದೆ.

ಇನ್ನು ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರದ ಭಾಷಣಕ್ಕೆ 6.6 ಸಾವಿರ ಜನ ಡಿಸ್‌ಲೈಕ್ ಮಾಡಿದ್ದಾರೆ. ಮಾಧ್ಯಮಗಳಿಗೆ ಮನವಿ ಸೇರಿ ಚಿಕ್ಕ ಚಿಕ್ಕ ವಿಡಿಯೋಗಳಲ್ಲಿ ಲೈಕ್‌ಗಿಂತ ಡಿಸ್‌ಲೈಕ್‌ಗಳ ಸಂಖ್ಯೆ ಹೆಚ್ಚಾಗಿದೆ.

ಒಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ವಿಶೇ‍ಷವಾಗಿ ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳ ವಿರೋಧದ ನಡುವೆಯೂ ನೀಟ್ ಮತ್ತು ಜೆಇಇ ಪರೀಕ್ಷೆ ನಡೆಸಿದ್ದು, ಉದ್ಯೋಗ ಕುಸಿತ ತಡೆಯಲು ವಿಫಲವಾಗಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಇನ್ನು ಇಂದಿನ ಮೋದಿ ಭಾಷಣಕ್ಕೆ ಹಲವರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹಬ್ಬಗಳ ಹಿನ್ನೆಲೆಯಲ್ಲಿ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳಿಕೊಡಲು ಮೋದಿಯವರೇ ಬೇಕಾಗಿತ್ತೇ? ನಮಗದು ತಿಳಿದಿರಲಿಲ್ಲವೇ? ಅದರ ಬದಲು ಜಿಡಿಪಿ, ಉದ್ಯೋಗ ಕುಸಿತ, ಪ್ರವಾಹ ಪರಿಹಾರ, ಜಿಎಸ್‌ಟಿ ಪರಿಹಾರದ ಬಗ್ಗೆ ಮಾತನಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: #StudentsDislikePMModi: ವಿದ್ಯಾರ್ಥಿಗಳಿಂದ ಟ್ವಿಟರ್ ನಲ್ಲಿ ಅಭಿಯಾನ ಟ್ರೆಂಡಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...