HomeಮುಖಪುಟMSP ಉಲ್ಲಂಘಿಸಿದರೆ ಜೈಲು; ಹೊಸ ಪರ್ಯಾಯ ಮಸೂದೆ ಅಂಗೀಕರಿಸಿದ ಪಂಜಾಬ್!

MSP ಉಲ್ಲಂಘಿಸಿದರೆ ಜೈಲು; ಹೊಸ ಪರ್ಯಾಯ ಮಸೂದೆ ಅಂಗೀಕರಿಸಿದ ಪಂಜಾಬ್!

ಹೊಸ ಮಸೂದೆಯ ಪ್ರಕಾರ, ಕನಿಷ್ಠ ಬೆಂಬಲ ಬೆಲೆಯನ್ನು (MSP) ಉಲ್ಲಂಘಿಸಿ, ಅದಕ್ಕಿಂತಲೂ ಕಡಿಮೆ ಬೆಲೆಗೆ ಗೋಧಿ ಅಥವಾ ಭತ್ತವನ್ನು ಖರೀದಿಸುವ/ಮಾರಾಟಮಾಡುವ ಯಾವುದೇ ವ್ಯಕ್ತಿಯ ಮೇಲೆ ದಂಡ ಮತ್ತು 3 ವರ್ಷ ಮೀರದಂತೆ ಶಿಕ್ಷೆ ವಿಧಿಸಬಹುದು.

- Advertisement -
- Advertisement -

ಸಂಸತ್ತಿನಲ್ಲಿ ವಿರೋಧದ ಮಧ್ಯೆ ಕೇಂದ್ರ ಕಳೆದ ತಿಂಗಳು ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಔಪಚಾರಿಕವಾಗಿ ತಿರಸ್ಕರಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಂಜಾಬ್ ಪಾತ್ರವಾಗಿದೆ. ಇಂದು ರಾಜ್ಯದ ಅಸೆಂಬ್ಲಿಯಲ್ಲಿ, ಕೇಂದ್ರದ ಕಾನೂನುಗಳ ವಿರುದ್ಧದ 3 ಪರ್ಯಾಯ ಮಸೂದೆಯನ್ನು ರಾಜ್ಯವು ಅಂಗೀಕರಿಸಿತು.

ಕೇಂದ್ರ ಸರ್ಕಾರದ ಮಸೂದೆಗಳಿಗೆ ವಿರುದ್ಧವಾಗಿ ಪಂಜಾಬ್ ಸರ್ಕಾರ 3 ಪರ್ಯಾಯ ಮಸೂದೆಗಳನ್ನು ಪರಿಚಯಿಸಿದ್ದು, ಕನಿಷ್ಠ ಬೆಂಬಲ ಬೆಲೆಯನ್ನು (MSP) ಉಲ್ಲಂಘಿಸಿ, ಅದಕ್ಕಿಂತಲೂ ಕಡಿಮೆ ಬೆಲೆಗೆ ಗೋಧಿ ಅಥವಾ ಭತ್ತವನ್ನು ಖರೀದಿಸುವ/ಮಾರಾಟಮಾಡುವ ಯಾವುದೇ ವ್ಯಕ್ತಿಯ ಮೇಲೆ ದಂಡ ಮತ್ತು 3 ವರ್ಷ ಮೀರದಂತೆ ಶಿಕ್ಷೆ ವಿಧಿಸಲು ಇವುಗಳಲ್ಲಿ ಒಂದು ಮಸೂದೆ ಅವಕಾಶ ನಿಡುತ್ತದೆ.

ದೇಶದಾದ್ಯಂತ ಕೇಂದ್ರದ ಕಾನೂನುಗಳ ವಿಮರ್ಶಕರು ಉಲ್ಲೇಖಿಸಿದ್ದ ಪ್ರಮುಖ ಅಂಶಗಳಲ್ಲಿ MSPಯನ್ನು ತೆಗೆದುಹಾಗಲಾಗುತ್ತದೆ ಎಂಬುದು ಒಂದಾಗಿತ್ತು. ಬರಗಾಲ ಮತ್ತು ಬೆಳೆ ವೈಫಲ್ಯದಂತಹ ಕಠಿಣ ಕಾಲದಲ್ಲಿ ಸಾಲದ ಮೂಲವಾಗಿರುವ ಖಾತರಿಪಡಿಸಿದ ಮಾರಾಟದ ಬೆಲೆಗಳು ಮತ್ತು ಅದನ್ನು ತೆಗೆದುಹಾಕುವುದರಿಂದ ಸಣ್ಣ ಮತ್ತು ಅಲ್ಪ ರೈತರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸರ್ಕಾರಿ ನಿಯಂತ್ರಿತ ಸಗಟು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಿಂತ ಹೆಚ್ಚಾಗಿ ಸಾಂಸ್ಥಿಕ ಖರೀದಿದಾರರಿಗೆ ಮಾರಾಟ ಮಾಡಲು ರೈತರಿಗೆ ಅವಕಾಶ ನೀಡುವ ಕೇಂದ್ರದ ಕಾನೂನುಗಳಿಂದ ಖಾಸಗಿ ವ್ಯಕ್ತಿಗಳ ಪ್ರವೇಶವು ರೈತರ ಬೆಲೆ ನಿರ್ಣಯ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಕೇಂದ್ರದ ಕಾನೂನುಗಳ ವಿಮರ್ಶಕರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಇದು ಮಹತ್ವದ ಮಸೂದೆಯಾಗಿದೆ.

ಇದನ್ನೂ ಓದಿ: 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ: ಖಾಸಗೀ ಶಾಲಾ ಶಿಕ್ಷಕನ ಬಂಧನ!

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ಕೇಂದ್ರಬಿಂದುವಾಗಿ ಪಂಜಾಬ್ ಹೊರಹೊಮ್ಮಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೃಷಿ ಕಾನೂನುಗಳ ವಿರುದ್ಧ ರಾಜ್ಯದಲ್ಲಿ ಪ್ರಮುಖ ಟ್ರಾಕ್ಟರ್ ರ್ಯಾಲಿಗಳನ್ನು ನಡೆಸಿದ್ದರು.

ಕಳೆದ ತಿಂಗಳು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರದ ಈ ಕಾನೂನುಗಳನ್ನು ಜಾರಿ ಮಾಡಬಾರದು ಎಂದು ಹೇಳಿದ್ದರು.

ಇಂದು ಪಂಜಾಬ್ ವಿಧಾನಸಭೆಯಲ್ಲಿ ಅಂಗೀಕರಿಸಿದ ಮೂರು ಪರ್ಯಾಯ-ಮಸೂದೆಗಳು ಈಗ ಕಾನೂನು ಆಗುವ ಮೊದಲು ರಾಜ್ಯಪಾಲ ವಿ.ಪಿ.ಸಿಂಗ್ ಬದ್ನೋರ್ ಅವರ ಒಪ್ಪಿಗೆಯನ್ನು ಪಡೆಯುವ ಅಗತ್ಯವಿದೆ.

ಇದನ್ನೂ ಓದಿ: ಬಸನಗೌಡ ಪಾಟೀಲ್ ಹೇಳಿಕೆ ಬಿಜೆಪಿ ಸರ್ಕಾರದ ಬಣ್ಣ ಬಯಲು ಮಾಡಿದೆ: ಡಿ.ಕೆ ಶಿವಕುಮಾರ್

MSPಯನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಪದೇ ಪದೇ ಭರವಸೆ ನೀಡಿದ್ದಾರೆ. ಆದರೆ ಈ ಮೌಖಿಕ ಆಶ್ವಾಸನೆಗಳು ರೈತರ ಕಳವಳವನ್ನು ಕಡಿಮೆ ಮಾಡಿಲ್ಲ.

ಇಂದು ಪಂಜಾಬ್ ಅಸೆಂಬ್ಲಿಯಿಂದ ಅಂಗೀಕಾರವಾದ ಮೂರು ಮಸೂದೆಗಳು ಇಂತಿವೆ;

  1. ರೈತರ ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆಯ ವಿಶೇಷ ನಿಬಂಧನೆಗಳು (ಪ್ರಚಾರ ಮತ್ತು ಸೌಲಭ್ಯ) ಮತ್ತು ಪಂಜಾಬ್ ತಿದ್ದುಪಡಿ ಮಸೂದೆ 2020.
  2. ಅಗತ್ಯ ಸರಕುಗಳು (ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ) ಮಸೂದೆ 2020, ಮತ್ತು
  3. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ರೈತ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ ಮಸೂದೆ 2020.

ಇದನ್ನೂ ಓದಿ: ಶಿರಾ: ಹಣದ ಹೊಳೆ! ನೆಲೆ ಕಾಣುವುದೇ ಕಮಲ, ಬಲಗೊಳ್ಳುವುದೇ ತೆನೆ, ಒಲವು ಗಳಿಸುವುದೇ ಹಸ್ತ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...