Homeಮುಖಪುಟವಿವಾಹಕ್ಕಾಗಿ ಮತಾಂತರವಾದರೆ ಮಾನ್ಯವಲ್ಲ- ಅಲಹಾಬಾದ್ ಹೈಕೋರ್ಟ್

ವಿವಾಹಕ್ಕಾಗಿ ಮತಾಂತರವಾದರೆ ಮಾನ್ಯವಲ್ಲ- ಅಲಹಾಬಾದ್ ಹೈಕೋರ್ಟ್

ಧಾರ್ಮಿಕ ಮತಾಂತರದ ಸಂದರ್ಭದಲ್ಲಿ ಮೂಲ ಧರ್ಮದ ಸಿದ್ಧಾಂತಗಳ ಬದಲಾಗಿ ಹೊಸ ಧರ್ಮದ ಸಿದ್ಧಾಂತಗಳಲ್ಲಿ ಪ್ರಾಮಾಣಿಕ ನಂಬಿಕೆ ಇರಬೇಕು ಎಂದು ನ್ಯಾಯಾಲಯ ಹೇಳಿದೆ.

- Advertisement -
- Advertisement -

ಪೊಲೀಸ್ ರಕ್ಷಣೆ ಕೋರಿ ವಿವಾಹಿತ ದಂಪತಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿ, ಕೇವಲ ವಿವಾಹದ ಉದ್ದೇಶದಿಂದ ಆದ ಮತಾಂತರವು ಮಾನ್ಯವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದ ಎಂದು ಲೈವ್ ಲಾ ವರದಿ ಮಾಡಿದೆ.

ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ, ಅವರು 2014 ರ ತೀರ್ಪನ್ನು ಉಲ್ಲೇಖಿಸಿ, ಮುಸ್ಲಿಂ ಮಹಿಳೆ ಮದುವೆಯಾಗಲು ಒಂದು ತಿಂಗಳ ಮೊದಲಷ್ಟೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ರಿಟ್ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಭಾರತದ ಸಂವಿಧಾನದ 226 ನೇ ವಿಧಿ ಅನ್ವಯ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಒಲವು ತೋರುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಕಳೆದ ತಿಂಗಳು ಪ್ರಿಯಾನ್ಶಿ ಅಲಿಯಾಸ್ ಸಮ್ರೀನ್ ಮತ್ತು ಆಕೆಯ ಪತಿ ತಮ್ಮ ವೈವಾಹಿಕ ಜೀವನಕ್ಕೆ ತೊಂದರೆ ನೀಡದಂತೆ ಮಹಿಳೆಯ ತಂದೆಗೆ ನಿರ್ದೇಶನ ನೀಡಲು ಕೋರಿ ದಂಪತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಈ ಆದೇಶವನ್ನು ನೀಡಿದ್ದಾರೆ.

ಇದನ್ನೂ ಓದಿ: ’ಏಕತ್ವಂ’; ಇದು ತನಿಷ್ಕ್‌‌ನ ಜಾಹಿರಾತಲ್ಲ, ನಿಜ ಜೀವನದ ’ವಿಶ್ವಕುಟುಂಬ’!

ಅರ್ಜಿದಾರರು ಜೂನ್ 29, 2020 ರಂದು ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಜುಲೈ 31, 2020 ರಂದು ತಮ್ಮ ಮದುವೆಯನ್ನು ದೃಢೀಕರಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಮತಾಂತರವು ಮದುವೆಯ ಉದ್ದೇಶಕ್ಕಾಗಿ ಮಾತ್ರ ನಡೆದಿದೆ ಎಂದು ಅರ್ಜಿ ವಜಾಗೊಳಿಸಿದೆ.

2014ರಲ್ಲಿ ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿರುವ ನೂರ್ ಜಹಾನ್ ಬೇಗಂ ಅವರ ಪ್ರಕರಣವನ್ನು ನ್ಯಾಯಾಲಯ ಉಲ್ಲೇಖಿಸಿದೆ. 2014 ರಲ್ಲಿ, ಮಹಿಳೆ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗಿದ್ದ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ್ದ ರಿಚ್ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು.

ಒಂದು ಮತಾಂತರವು ಧರ್ಮದ ಭಾವನೆಯಿಂದ ಪ್ರೇರಿತವಾಗದಿದ್ದರೆ ಮತ್ತು ತನ್ನದೇ ಆದ ಉದ್ದೇಶಕ್ಕೆ ಒಳಗಾಗಿದ್ದರೆ ಅದು ಮತಾಂತರವಲ್ಲ ಎಂದಿದೆ. ಧಾರ್ಮಿಕ ಮತಾಂತರದ ಸಂದರ್ಭದಲ್ಲಿ ಮೂಲ ಧರ್ಮದ ಸಿದ್ಧಾಂತಗಳ ಬದಲಾಗಿ ಹೊಸ ಧರ್ಮದ ಸಿದ್ಧಾಂತಗಳಲ್ಲಿ ಪ್ರಾಮಾಣಿಕ ನಂಬಿಕೆ ಇರಬೇಕು” ಎಂದು ನ್ಯಾಯಾಲಯ ಹೇಳಿದೆ.


ಇದನ್ನೂ ಓದಿ: ಹರಿಯಾಣ: ಹಾಡಹಗಲೇ ಯುವತಿಯನ್ನು ಗುಂಡಿಟ್ಟು ಕೊಂದ ದುರ್ಷ್ಕಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...