Homeಮುಖಪುಟಹರಿಯಾಣ: ಹಾಡಹಗಲೇ ಯುವತಿಯನ್ನು ಗುಂಡಿಟ್ಟು ಕೊಂದ ದುರ್ಷ್ಕಮಿ

ಹರಿಯಾಣ: ಹಾಡಹಗಲೇ ಯುವತಿಯನ್ನು ಗುಂಡಿಟ್ಟು ಕೊಂದ ದುರ್ಷ್ಕಮಿ

ತೌಸೀಫ್‌ ನನ್ನ ಮಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ನಾವು 2018 ರಲ್ಲಿ ದೂರು ನೀಡಿದ್ದೆವು ಮತ್ತು ನಮ್ಮ ಮಗಳ ಮರ್ಯಾದೆಗೆ ಅಂಜಿ ನಾವು ದೂರನ್ನು ಹಿಂತೆಗೆದುಕೊಂಡಿದ್ದೇವು.- ಮೃತಳ ತಂದೆ

- Advertisement -
- Advertisement -

ಹರಿಯಾಣ ರಾಜ್ಯದ ಫರೀದಾಬಾದ್​ನಲ್ಲಿ 21 ವರ್ಷದ ಯುವತಿಯನ್ನು ತನ್ನ ಕಾಲೇಜಿನ ಹೊರಗಡೆ ಹಾಡಹಗಲೇ ಗುಂಡಿಟ್ಟು ಕೊಲ್ಲಲಾಗಿದೆ. ದೆಹಲಿಯಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಬೀದಿಯಲ್ಲಿ ನಡೆದಿರುವ ಘಟನೆಯ ಭಯಾನಕ ವೀಡಿಯೊದಲ್ಲಿ ಜನರಲ್ಲಿ ಆತಂಕ ಉಂಟುಮಡಿದೆ.

ಸೋಮವಾರ(ಅ.26) ಮಧ್ಯಾಹ್ನ 3.40 ರ ಸುಮಾರಿಗೆ ಫರೀದಾಬಾದ್‌ನ ಬಲ್ಲಾಬ್‌ಗಢದ ಕಾಲೇಜೊಂದರ ಹೊರಗೆ ಈ ಘಟನೆ ನಡೆದಿದ್ದು, ನಿಖಿತಾ ತೋಮರ್ ಎಂಬ ಯುವತಿ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಈ ದುರಂತ ಸಂಭವಿಸಿದೆ. ಕೃತ್ಯ ನಡೆಸಿದ ಆರೋಪಿ ತೌಸೀಫ್ ಎಂಬುವವ​ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ತೌಸೀಫ್ ಮತ್ತು ಆತನ ಸ್ನೇಹಿತ ರೆಹಾನ್, ನಿಖಿತಾರನ್ನು ಅಪಹರಿಸಲು ಆಕೆ ಕಾಲೇಜಿನಿಂದ ಹೊರಬರುವುದನ್ನೇ ಕಾಯುತ್ತಾ ಕಾರಿನಲ್ಲಿ ಕುಳಿತ್ತಿದ್ದರು. ತೌಸೀಫ್ ಮತ್ತು ನಿಖಿತಾ ಒಬ್ಬರಿಗೊಬ್ಬರು ಪರಿಚಯವಿದ್ದರು ಜೊತೆಗೆ ಆರೋಪಿ ತೌಸೀಫ್ ಈ ಹಿಂದೆ ಕೂಡ 2018 ರಲ್ಲಿ ಆಕೆಯನ್ನು ಅಪಹರಿಸಿದ್ದರು ಎಂದು ಫರೀದಾಬಾದ್ ಪೊಲೀಸ್ ಅಧಿಕಾರಿ ಒ.ಪಿ.ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ನವರಾತ್ರಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ

ಯುವತಿಯನ್ನು ಅಪಹರಿಸಲು ಯತ್ನಿಸುವ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿ ಬಂದೂಕು ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಗುಂಡಿನ ದಾಳಿಗೆ ಒಳಗಾಗಿದ್ದ ನಿಖಿತಾರನ್ನು ಆಸ್ಪತ್ರೆಗೆ ಕೊಂಡೊಯ್ಯಲಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಮೃತ ನಿಖಿತಾ ತಂದೆ 2018 ರಲ್ಲಿ ಆತನ ವಿರುದ್ಧ ದೂರು ನೀಡಿದ್ದರೂ ಅದನ್ನು ಹಿಂತೆಗೆದುಕೊಂಡಿದ್ದರು. ಸದ್ಯ ಆರೋಪಿಗಳಾದ ತೌಸೀಫ್‌ ಮತ್ತು ರೆಹಾನ್ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ತೌಸೀಫ್‌ ನನ್ನ ಮಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ನಾವು 2018 ರಲ್ಲಿ ದೂರು ನೀಡಿದ್ದೆವು ಮತ್ತು ನಮ್ಮ ಮಗಳ ಮರ್ಯಾದೆಗೆ ಅಂಜಿ ನಾವು ದೂರನ್ನು ಹಿಂತೆಗೆದುಕೊಂಡಿದ್ದೇವು. ಆದರೆ ಈಗ ಅವರು ನನ್ನ ಮಗಳನ್ನು ಕೊಂದಿದ್ದಾರೆ” ಎಂದು ತಂದೆ ಎನ್‌ಡಿಟಿವಿಗೆ ತಿಳಿಸಿದ್ದಾರೆ. “ನನ್ನ ಮಗಳಿಗೆ ನ್ಯಾಯ ಬೇಕು. ಆಕೆಯನ್ನು ಕೊಂದ ರೀತಿಯೇ ಅವರಿಗು ಶಿಕ್ಷೆಯಾಗಬೇಕು ಎಂದು ನಿಖಿತಾ ಅವರ ತಾಯಿ ಆಕ್ರೋಶ ಹೊರಹಾಕಿದ್ದಾರೆ.

ಇದರ ಜೊತೆಗೆ ಯುವತಿಯ ಕುಟುಂಬ ಆಕೆಯ ಹತ್ಯೆಯನ್ನು ‘ಲವ್ ಜಿಹಾದ್’ ಎಂದು ಆರೋಪಿಸಿದೆ. ಘಟನೆ ಸಂಬಂಧ ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವಲ್ಲಿ ಸಫಲರಾಗಿದ್ದಾರೆ.

ಇಂಡಿಯಾ ಟುಡೆ ಜೊತೆ ಮಾತನಾಡಿರುವ ಸಂತ್ರಸ್ತೆಯ ಸಹೋದರಿ, “ಆರೋಪಿ 2018 ರಲ್ಲಿ ನಮ್ಮ ಸಹೋದರಿಯನ್ನು ಅಪಹರಿಸಲು ಯತ್ನಿಸಿದಾಗ, ಪೊಲೀಸರು ಏನನ್ನೂ ಮಾಡಲಿಲ್ಲ ಮತ್ತು ಬದಲಿಗೆ ನಮಗೆ ರಾಜಿ ಮಾಡಿಕೊಳ್ಳಲು  ಹೇಳಿದರು” ಎಂದು ಆರೋಪಿಸಿದ್ದಾರೆ.

ಜೊತೆಗೆ “ಆರೋಪಿ ತೌಸೀಫ್ ನಿಖಿತಾರನ್ನು ಮತಾಂತರಗೊಳಿಸಲು ಮತ್ತು ಮದುವೆಯಾಗಲು ಕೇಳುತ್ತಿದ್ದನು. ನಮ್ಮ ಸಹೋದರಿ ಒಪ್ಪಿರಲಿಲ್ಲ” ಎಂದು ಸಂತ್ರಸ್ತೆಯ ಸಹೋದರಿ ಆರೋಪಿಸಿದ್ದಾಳೆ.

ಇನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದಿಂದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯನ್ನು ಗಮನಿಸಿದ್ದು, ಇತರ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹರಿಯಾಣ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದೆ.


ಇದನ್ನೂ ಓದಿ:  ಯುಪಿ: ಬಂದೂಕು ತೋರಿಸಿ 22 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...