Homeಮುಖಪುಟ’ನರೇಂದ್ರಜಿ ನಿಮಗೆ ಅಧಿಕಾರದ ಮದ ಏರಿದೆ’: ಕಿಡಿಕಾರಿದ ಆರೆಸ್ಸೆಸ್ ಮುಖಂಡ

’ನರೇಂದ್ರಜಿ ನಿಮಗೆ ಅಧಿಕಾರದ ಮದ ಏರಿದೆ’: ಕಿಡಿಕಾರಿದ ಆರೆಸ್ಸೆಸ್ ಮುಖಂಡ

ನಿಮ್ಮ ಉದ್ದೇಶ ರೈತರಿಗೆ ಸಹಾಯ ಮಾಡುವ ಉದ್ದೇಶವಾಗಿರಬಹುದು, ಆದರೆ ಕೆಲವು ಜನರಿಗೆ ಅದು ಅಗತ್ಯವಿಲ್ಲದಿದ್ದರೆ, ನೀವು ಮಾಡುವುದರಿಂದ ಏನು ಪ್ರಯೋಜನವಿದೆ?

- Advertisement -
- Advertisement -

ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರನ್ನು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನಡೆಸುತ್ತಿರುವ ರೀತಿಯ ಕುರಿತು ಹಿರಿಯ ಆರೆಸ್ಸೆಸ್ ಮುಖಂಡ ರಘುನಂದನ್ ಶರ್ಮಾ ವಾಗ್ದಾಳಿ ನಡೆಸಿದ್ದಾರೆ. ಅವರು ನಿಮಗೆ ಅಧಿಕಾರದ ಮದ ಏರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ಬಿಜೆಪಿ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯರಾಗಿರುವ ರಘುನಂದನ್ ಶರ್ಮಾ ರೈತ ಹೋರಾಟದ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದಿದ್ದು, “ರಾಷ್ಟ್ರೀಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು” ಸಚಿವರಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ’ಟ್ರಾಕ್ಟರ್‌ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್‌ ಕರೆ

“ನರೇಂದ್ರ ಅವರೆ, ನೀವು ಸರ್ಕಾರದ ಭಾಗವಾಗಿದ್ದೀರಿ” ಎಂಬ ಸಾಲಿನಿಂದ ಪ್ರಾರಂಭವಾಗುವ ಶರ್ಮಾ ಅವರ ಫೇಸ್‌‌ಬುಕ್‌ ಪೋಸ್ಟ್‌ನಲ್ಲಿ, “ನಿಮ್ಮ ಉದ್ದೇಶ ರೈತರಿಗೆ ಸಹಾಯ ಮಾಡುವ ಉದ್ದೇಶವಾಗಿರಬಹುದು, ಆದರೆ ಕೆಲವು ಜನರಿಗೆ ಅದು ಅಗತ್ಯವಿಲ್ಲದಿದ್ದರೆ, ನೀವು ಮಾಡುವುದರಿಂದ ಏನು ಪ್ರಯೋಜನವಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಯಾರಾದರೂ ಬೆತ್ತಲೆಯಾಗಿರಲು ಬಯಸಿದರೆ, ಅವರಿಗೆ ಬಲವಂತವಾಗಿ ಬಟ್ಟೆ ತೊಡಿಸುವುದರಿಂದ ಏನು ಪ್ರಯೋಜನ” ಎಂದು ಅವರು ಹೇಳಿದ್ದಾರೆ.

ಗೌರಿ ಲಂಕೇಶ್ ಇಂಗ್ಲಿಷ್‌ ಯುಟ್ಯೂಬ್ ಚಾನೆಲ್ Gauri Lankesh News Subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ.

“ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತಿದ್ದೀರಿ ಎಂಬ ಆಲೋಚನೆಯನ್ನು ನೀವು ಹೊಂದಿದ್ದೀರಿ, ಆದರೆ ಅದು ನಿಮ್ಮ ಭ್ರಮೆ, ಅಧಿಕಾರದ ಮದ ನಿಮ್ಮ ತಲೆಗೆ ಏರಿದೆ. ನೀವು ಜನಾದೇಶವನ್ನು ಏಕೆ ಕಳೆದುಕೊಳ್ಳುತ್ತಿದ್ದೀರಿ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಾಷ್ಟ್ರೀಯತೆಯನ್ನು ಬಲಪಡಿಸಲು ಎಲ್ಲ ಶಕ್ತಿಯನ್ನು ಬಳಸಿಕೊಳ್ಳಿ, ಇಲ್ಲದಿದ್ದರೆ ನಾವು ವಿಷಾದಿಸಬೇಕಾಗುತ್ತದೆ. ನಮ್ಮ ಸಿದ್ಧಾಂತವನ್ನು ಕಾಪಾಡುವ ಸೂಚನೆಯನ್ನು ನೀವು ಓದಿರಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ:  ಕಾರ್ಮಿಕ ಮುಖಂಡರನ್ನು ಬಂಧಿಸುತ್ತಿರುವ ದೆಹಲಿ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ..’; ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪಕ್ಷದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ,...