Homeಮುಖಪುಟನ್ಯೂಸ್‌ಕ್ಲಿಕ್ ಪತ್ರಿಕಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ

ನ್ಯೂಸ್‌ಕ್ಲಿಕ್ ಪತ್ರಿಕಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ

ನ್ಯೂಸ್‌ಕ್ಲಿಕ್ ಒಂದು ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿದ್ದು, ‘ಭಾರತ ಮತ್ತು ಇತರೆಡೆಗಳಿಂದ  ಪ್ರಗತಿಪರ ಚಳುವಳಿಗಳ ಸುದ್ದಿಗಳ' ಮೇಲೆ ಕೇಂದ್ರೀಕರಿಸಲು ಮೀಸಲಾಗಿದೆ.

- Advertisement -
- Advertisement -

ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನ್ಯೂಸ್‌ಕ್ಲಿಕ್ ಕಚೇರಿ ಮತ್ತು ನಿರ್ದೇಶಕರುಗಳ ನಿವಾಸಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ದಿ ವೈರ್ ವರದಿ ಮಾಡಿದೆ.

ದೆಹಲಿ ಮೂಲದ ಸ್ವತಂತ್ರ ಮಾಧ್ಯಮ ಸಂಸ್ಥೆಯಾದ ನ್ಯೂಸ್‌ಕ್ಲಿಕ್.ಇನ್‌ಗೆ ಸಂಬಂಧಿಸಿದ ಹಲವಾರು ನಿರ್ದೇಶಕರು ಮತ್ತು ಸಂಪಾದಕರ ನಿವಾಸಗಳ ಮೇಲೆ ಮಂಗಳವಾರ ಬೆಳಿಗ್ಗೆ 10 ಗಂಟೆಯ ಸುಮಾರಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ದೆಹಲಿಯ ಸೈದುಲಾಜಾಬ್‌ನಲ್ಲಿರುವ ಸಂಸ್ಥೆಯ ಕಚೇರಿಯ ಮೇಲೆ ದಾಳಿ ನಡೆದಿದ್ದು, ಮಾಲೀಕ ಪ್ರಬೀರ್ ಪುರ್ಕಯಸ್ಥ ಮತ್ತು ಸಂಪಾದಕ ಪ್ರಂಜಲ್ ಮನೆ ಮೇಲೆಯೂ ದಾಳಿ ನಡೆದಿದೆ. ಎಲ್ಲವೂ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿವೆ ಮತ್ತು ವಿದೇಶದ “ಸಂಶಯಾಸ್ಪದ ಕಂಪನಿಗಳಿಂದ” ಸಂಸ್ಥೆಗೆ ದೊರೆತ ಹಣದ ಕುರಿತು ಪರಿಶೀಲಿಸಲಾಗುತ್ತಿದೆ ಎಂಬ ಇಡಿ ಹೇಳಿಕೆ ಉಲ್ಲೇಖಿಸಿ ದಿ ಕ್ವಿಂಟ್ ವರದಿ ಮಾಡಿದೆ.

ನ್ಯೂಸ್‌ಕ್ಲಿಕ್ ಒಂದು ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿದ್ದು, ‘ಭಾರತ ಮತ್ತು ಇತರೆಡೆಗಳಿಂದ  ಪ್ರಗತಿಪರ ಚಳುವಳಿಗಳ ಸುದ್ದಿಗಳ’ ಮೇಲೆ ಕೇಂದ್ರೀಕರಿಸಲು ಮೀಸಲಾಗಿದೆ.


ಇದನ್ನೂ ಓದಿ: ಪತ್ರಿಕೋದ್ಯಮದಲ್ಲಿ ಆತ್ಮಸಾಕ್ಷಿ & ಸಮಗ್ರತೆಗಾಗಿ ಲೂಯಿಸ್ ಎಂ. ಲಿಯಾನ್ಸ್ ಪ್ರಶಸ್ತಿ ಪಡೆದ ಕಾರವಾನ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...