Homeಕರ್ನಾಟಕಉಡುಪಿಯ ಬೋಳ ಗ್ರಾಪಂ ವ್ಯಾಪ್ತಿಯಲ್ಲಿ ‘ನಾಥೂರಾಮ್‌ ಗೋಡ್ಸೆ ರಸ್ತೆ’!

ಉಡುಪಿಯ ಬೋಳ ಗ್ರಾಪಂ ವ್ಯಾಪ್ತಿಯಲ್ಲಿ ‘ನಾಥೂರಾಮ್‌ ಗೋಡ್ಸೆ ರಸ್ತೆ’!

- Advertisement -
- Advertisement -

ಉಡುಪಿ ಜಿಲ್ಲೆಯು ಇತ್ತೀಚಿನ ದಿನಗಳಲ್ಲಿ ಒಂದಲ್ಲೊಂದು ವಿವಾದಗಳಿಗೆ ಕಾರಣವಾಗುತ್ತಲೇ ಇದೆ. ಹಿಜಾಬ್‌, ಮುಸ್ಲಿಮರ ವ್ಯಾಪಾರಕ್ಕೆ ವಿರೋಧ ಮೊದಲಾದ ಸಂಗತಿಗಳಿಂದ ವಿವಾದದ ಕೇಂದ್ರವಾಗಿದ್ದ ಉಡುಪಿಯಲ್ಲಿ ‘ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶ’ ಜರುಗಿ ಯಶಸ್ವಿ ಕೂಡ ಆಗಿತ್ತು. ಆದರೀಗ ಮತ್ತೊಂದು ವಿವಾದ ಉಡುಪಿಯಿಂದ ಮುನ್ನೆಲೆಗೆ ಬಂದಿದೆ.

ಉಡುಪಿ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮ ಪಂಚಾಯಿತಿಗೆ ಸೇರಿದ ರಸ್ತೆಯೊಂದಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ‘ನಾಥೂರಾಮ್‌ ಗೋಡ್ಸೆ’ ಹೆಸರನ್ನು ಇಡಲಾಗಿದೆ. ‌ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್ ಆಗುತ್ತಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್‌ಕುಮಾರ್‌ ಪ್ರತಿನಿಧಿಸುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಬೋಳ ಗ್ರಾಮ ಪಂಚಾಯತ್‌- ಪಡುಗಿರಿ ನಾಥೂರಾಮ್‌ ಗೋಡ್ಸೆ ರಸ್ತೆ” ಎಂದು ಬರೆಯಲಾಗಿರುವ ಮಾರ್ಗಸೂಚಿ ಫಲಕವನ್ನು ವೈರಲ್‌ ಫೋಟದಲ್ಲಿ ಕಾಣಬಹುದು. ಈ ಫೋಟೋದ ಅಧಿಕೃತತೆಯನ್ನು ‘ನಾನುಗೌರಿ.ಕಾಂ’ ಪರಿಶೀಲಿಸಿದ್ದು, ‘ಪಡುಗಿರಿ’ಯಲ್ಲಿ ಇಂತಹದ್ದೊಂದು ಫಲಕ ಇರುವುದು ದೃಢಪಟ್ಟಿದೆ.

ಬೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧಾ ಎಸ್.ಪೂಜಾರಿ ಅವರೊಂದಿಗೆ ‘ನಾನುಗೌರಿ.ಕಾಂ’ ಪ್ರತಿನಿಧಿ ಮಾತನಾಡಿದಾಗ, “ಹೌದು ಈ ಫಲಕ ಇರುವುದು ನಿಜ. ಆದರೆ ಯಾರು ಇದನ್ನು ಹಾಕಿದ್ದಾರೆಂಬ ಮಾಹಿತಿ ಇಲ್ಲ. ಯಾರೋ ಖಾಸಗಿ ವ್ಯಕ್ತಿಗಳು ಈ ರೀತಿಯ ಫಲಕವನ್ನು ಪಡುಗಿರಿ ರಸ್ತೆಯಲ್ಲಿ ನೆಟ್ಟಿದ್ದಾರೆ” ಎಂದು ತಿಳಿಸಿದರು.

“ಗಾಂಧೀಜಿಯವರನ್ನು ಹತ್ಯೆ ಮಾಡಿದ ಭಯೋತ್ಪಾದಕ ಗೋಡ್ಸೆಯ ಹೆಸರನ್ನು ಇಂದು ಯಾವನೋ ರಸ್ತೆಗೆ ಇಡುತ್ತಾನೆ, ಮತ್ತೊಬ್ಬ ಇನ್ಯಾರೋ ಬಂದು ಇನ್ನೊಬ್ಬ ಭಯೋತ್ಪಾದಕನ ಹೆಸರನ್ನು ಹಾಕಿ ಹೋಗುತ್ತಾನೆ. ಇದಕ್ಕೆಲ್ಲ ಯಾರು ಹೊಣೆ?” ಎಂದು ‘ನಾನುಗೌರಿ.ಕಾಂ’ ಕೇಳಿದಾಗ, “ಎರಡು ಮೂರು ದಿನಗಳ ಹಿಂದೆ ಈ ರೀತಿಯ ಬೋರ್ಡ್ ಅನ್ನು ಯಾರೋ ಹಾಕಿದ್ದಾರೆ. ನಾಳೆ ಗ್ರಾಮ ಪಂಚಾಯಿತಿ ಸಭೆ ಇರುತ್ತದೆ. ಸಭೆಯಲ್ಲಿ ಮಾತನಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಫಲಕವನ್ನು ಬೋಳ ಗ್ರಾಮ ಪಂಚಾಯಿತಿ ಹಾಕಿರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಹಿರಿಯ ಪರ್ತಕರ್ತರಾದ ದಿನೇಶ್‌ ಅಮಿತ್‌ ಮಟ್ಟು ಅವರು ಈ ಕುರಿತು ಪೋಸ್ಟ್ ಮಾಡಿದ್ದು, “ನಮ್ಮ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಅವರ ಕ್ಷೇತ್ರದಲ್ಲಿ ಇಂತಹದ್ದೊಂದು ರಸ್ತೆ ಫಲಕ ಬಿದ್ದಿದೆ. ಇದಕ್ಕೆ ಸಚಿವರ ಒಪ್ಪಿಗೆ ಇಲ್ಲ ಎಂದಾದರೆ, ಅವರೇ ಮುಂದೆ ನಿಂತು ಇದನ್ನು ಒಡೆದು ಹಾಕಿ,‌ ಸಂಬಂಧಿತ ದುರುಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಬೇಕು. (ಅಚ್ಚರಿಯ ಸಂಗತಿ ಎಂದರೆ ಈ ಫಲಕವನ್ನು ವಿರೋಧಿಸಿ ಚಿತ್ರವನ್ನು ಕಳಿಸಿದವರು ಸ್ಥಳೀಯ ಬಿಜೆಪಿ ಕಾರ್ಯಕರ್ತರು)” ಎಂದಿದ್ದಾರೆ.

“ರಸ್ತೆಗೆ ಬಂದ ಗೋಡ್ಸೆ, ಪುಸ್ತಕಕ್ಕೆ ಯಾವಾಗ ಬರುತ್ತಾನೋ; ಇಂತಹದೊಂದು ಅನಾಹುತ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಕ್ಷೇತ್ರದಲ್ಲಿ ನಡೆದಿದೆ” ಎಂದು ಜೆಡಿಎಸ್‌ ಮುಖಂಡರಾದ ಗಂಗಾಧರಮೂರ್ತಿಯವರು ಫೇಸ್‌ಬುಕ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಯುವ ಬರಹಗಾರ ಚರಣ್‌ ಐವರ್ನಾಡು ಅವರು ಘಟನೆಯನ್ನು ಖಂಡಿಸಿದ್ದು, “ಸಚಿವ ಸುನಿಲ್ ಕುಮಾರ್ ಅವರೇ, ಇದನ್ನು ಕಿತ್ತು ನಿಮ್ಮ ಅಪ್ಪ ಇಲ್ಲವೇ ಅಮ್ಮನ ಹೆಸರನ್ನೇ ರಸ್ತೆಗೆ ಇಡಿ. ಅದಕ್ಕೆ ಒಂದು ಮರ್ಯಾದೆ ಇದೆ! ಶ್ರಮಿಕರ ಹೆಸರು ರಸ್ತೆಗೆ ಇರಲಿ. ಇದು ತುಳುನಾಡಿನ ಮಾಡಿದ ಅವಮಾನ. ಗಾಂಧಿಯನ್ನು ತುಳುನಾಡು ಗೌರವಿಸಿದ ರೀತಿ ನಿಮಗೆ ಗೊತ್ತಿಲ್ಲ! ಗೊತ್ತಿದ್ದರೆ ಇಂದೇ ಪಿಕ್ಕಾಸು ತೆಗೊಂಡು ಇದನ್ನು ಜರಿದು ಹಾಕಬೇಕಿತ್ತು” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...