Homeಮುಖಪುಟರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಎಸ್.ಪಿ. ಜನನಾಥನ್‌ ನಿಧನ

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಎಸ್.ಪಿ. ಜನನಾಥನ್‌ ನಿಧನ

ಅವರು ಇದುವರೆಗೂ ಇಯಾರ್‌‌ಕೈ, ಇ, ಪೇರಾನ್‌ಮೈ, ಪುರಂಬೊಕ್ಕು ಮತ್ತು ಲಾಬಮ್ ಸೇರಿದಂತೆ ಒಟ್ಟು 5 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

- Advertisement -
- Advertisement -

ಸಿನಿಮಾ ನಿರ್ದೇಶಕ ಎಸ್.‌ಪಿ. ಜನನಾಥನ್(61) ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ಹೃದಯಾಘಾತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೇ 7, 1959 ರಂದು ಜನಿಸಿರುವ ಜನನಾಥನ್ 2003 ರಲ್ಲಿ ‘ಇಯಾರ್ಕೈ’ ಸಿನಿಮಾದೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಇದು ತಮಿಳು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ವಿಜಯ್ ಸೇತುಪತಿ ಮತ್ತು ಶ್ರುತಿ ಹಾಸನ್ ಅಭಿನಯದ ಲಾಬಮ್ ಅವರ ಕೊನೆಯ ಸಿನಿಮಾವಾಗಿದ್ದು, ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಅವರು ಇದುವರೆಗೂ ಇಯಾರ್‌‌ಕೈ, , ಪೆರಾನ್‌ಮೈ, ಪುರಂಬೊಕ್ಕು ಮತ್ತು ಲಾಬಮ್ ಸೇರಿದಂತೆ ಒಟ್ಟು 5 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಲಾಬಮ್ ಸಿನಿಮಾ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ಟಿಕ್ರಿ ಗಡಿಯಲ್ಲಿ ಪ್ರಾಣಬಿಟ್ಟ ಮತ್ತೊಬ್ಬ ರೈತ!

ಸಂಗೀತ ಸಂಯೋಜಕ ಡಿ. ಇಮ್ಮನ್, “ಲಾಬಮ್ ನಿರ್ದೇಶಕ ಎಸ್.‌ಪಿ. ಜನನಾಥನ್‌ ಇನ್ನಿಲ್ಲ. ಕಾಕತಾಲಿಯವೆಂದರೆ, ಅವರ ಸ್ಪೂರ್ತಿಯಾಗಿರುವ ಸಾಮಾಜಿಕ ಕ್ರಾಂತಿಕಾರಿ ಕಾರ್ಲ್‌ಮಾರ್ಕ್ಸ್ ಮರಣಿಸಿದ ದಿನದಂದೆ ಅವರು ನಿಧನರಾಗಿದ್ದಾರೆ. ನಾವು ನಿಮ್ಮನ್ನು ಮಿಸ್‌ ಮಾಡುತ್ತಿದ್ದೇವೆ ಸರ್‌” ಎಂದು ಹೇಳಿದ್ದಾರೆ.

ನಿರ್ದೇಶಕ ಜನನಾಥನ್‌ ಅವರ ನಿಧನಕ್ಕೆ ಲಾಬಮ್ ನಟ ವಿಜಯ್ ಸೇತುಪತಿ ನಮನ ಸಲ್ಲಿಸಿದ್ದಾರೆ.

ನಟಿ ಶ್ರುತಿ ಹಾಸನ್, “ಭಾರವಾದ ಹೃದಯದಿಂದ ನಾವು ಎಸ್.‌ಪಿ. ಜನನಾಥನ್ ಸರ್ ಅವರಿಗೆ ವಿದಾಯ ಹೇಳುತ್ತೇವೆ. ನಿಮ್ಮೊಂದಿಗೆ ಕೆಲಸ ಮಾಡಿರುವುದರಲ್ಲಿ ಖುಷಿಯಿದೆ. ನಮ್ಮ ನೆನಪುಗಳಲ್ಲಿ ನೀವು ಯಾವಾಗಲೂ ಇರುತ್ತೀರಿ! ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.

ನಟ ಹರೀಶ್ ಕಲ್ಯಾಣ್ ಕೂಡ ಟ್ವಿಟರ್ ಮೂಲಕ ಗೌರವ ಸಲ್ಲಿಸಿದ್ದು, “ಎಸ್.‌ಪಿ. ಜನನಾಥನ್ ಸರ್ ಅವರ ನಿಧನದ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಅವರು ಅತ್ಯಂತ ಸಂವೇದನಾಶೀಲ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ – ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...