ಬಿಹಾರ ಚುನಾವಣಾ ಸಮಯದಲ್ಲಿ ಎನ್‌ಡಿಎ ಗೆದ್ದರೆ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಂಬಿಸಲ್ಪಟ್ಟಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್, ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದು, “ಎನ್‌ಡಿಎ ಮೈತ್ರಕೂಟದ ಮುಖ್ಯಮಂತ್ರಿ ಯಾರು ಎಂಬ ನಿರ್ಧಾರವನ್ನು ಎನ್‌ಡಿಎ ತೆಗೆದುಕೊಳ್ಳಬೇಕಾಗಿದೆ” ಎಂದಿದ್ದಾರೆ.
ಚಿರಾಗ್ ಪಾಸ್ವಾನ್ ಅವರಿಂದಾಗಿ ರಾಜ್ಯ ಚುನಾವಣೆಯಲ್ಲಿ ಜೆಡಿಯುಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಿರುವ ಅವರು, ಅವರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಬಿಜೆಪಿಗೆ ಬಿಟ್ಟಿದ್ದು. ಮುಖ್ಯಮಂತ್ರಿ ಯಾರು ಎಂಬ ನಿರ್ಧಾರವನ್ನು ಎನ್‌ಡಿಎ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ
ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್ ಕುಮಾರ್ ಅವರಿಗೆ ಉಳಿಸಿಕೊಳ್ಳುವುದಾಗಿ ಬಿಜೆಪಿ ಈ ಹಿಂದೆ ಭರವಸೆ ನೀಡಿದ್ದರೂ ಈ ವಿಷಯದ ಬಗ್ಗೆ ಮರುಪರಿಶೀಲನೆ ಆಗಬಹುದಾದ ಸಾಧ್ಯತೆಯಿದೆ ಎಂದು ಈ ಹೇಳಿಕೆ ಸೂಚಿಸುತ್ತದೆ ಎಂದು ಎನ್‌ಡಿಟಿವಿ ಬರೆದಿದೆ.
ಚಿರಾಗ್ ಪಾಸ್ವಾನ್ ನಿತೀಶ್ ವಿರುದ್ದ ಬಂಡಾಯವೆದ್ದು ಏಕಾಂಗಿಯಾಗಿ ಸ್ಫರ್ಧಿಸಿರುವುದು ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ದುಭಾರಿಯಾಗಿ ಪರಿಣಮಿಸಿ, ಎನ್‌ಡಿಎಯಲ್ಲಿ ಇದುವರೆಗಿನ ಅತೀ ಕಡಿಮೆ ಸ್ಥಾನಗಳನ್ನು ಪಡೆಯವಂತೆ ಮಾಡಿತು. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದರೂ,ನಿತೀಶ್ ಅವರ 30 ಸ್ಥಾನಗಳಿಗೆ ಅದು ಹೊಡೆತ ನೀಡಿತು. 2015 ರಲ್ಲಿ 71 ಸ್ಥಾನಗಳಿದ್ದ, ಜೆಡಿಯು 43 ಸ್ಥಾನಗಳಿಗೆ ಕುಗ್ಗಿದೆ.
ಎನ್‌ಡಿಎಯಲ್ಲಿ ನಿತೀಶ್ ಕುಮಾರ್ ಪಕ್ಷದ ಕಳಪೆ ಸಾಧನೆಯಿಂದಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬಾರದು ಎಂಬ ವಾದಗಳು ಎದ್ದಿದೆ.
ಇದನ್ನೂ ಓದಿ: ಬಿಹಾರ: ಜನಾದೇಶ ನನ್ನ ಪರವಾಗಿದೆ, ಗೆದ್ದಿರುವುದು ನಾನೇ- ತೇಜಸ್ವಿ ಯಾದವ್


