ಅಸ್ಸಾಂನಲ್ಲಿ ಪಕ್ಷವನ್ನು ಕಣಕ್ಕಿಳಿಸಲು ಆರ್‌ಜೆಡಿಯ ತೇಜಸ್ವಿ ಯಾದವ್ ಸಜ್ಜು..!
PC: Times Of India

ನಿತೀಶ್‌ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಈ ಚುನಾವಣೆಯಲ್ಲಿ ಸೋಲಿಸಲು ವಿಫಲರಾದ ತೇಜಸ್ವಿ ಯಾದವ್, “ಇಂದು ಜನಾದೇಶವು ನನ್ನ ಪರವಾಗಿದೆ. ಬೇರೊಬ್ಬರು ಮುಖ್ಯಮಂತ್ರಿ ಕುರ್ಚಿಯಲ್ಲಿದ್ದರೂ ಸಹ ಗೆದ್ದಿರುವುದು ನಾನೇ” ಎಂದು ಹೇಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಸೇರಿ ನನ್ನ ವಿರುದ್ಧ ಹಣ, ತೋಳ್ಬಲ ಮತ್ತು ಅನೇಕ ತಂತ್ರಗಳನ್ನು ಬಳಸಿದರು. ಆದರೂ ಈ 31 ವರ್ಷ ವಯಸ್ಸಿನ ವ್ಯಕ್ತಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ಆರ್‌ಜೆಡಿಯನ್ನು ಏಕೈಕ ಅತಿದೊಡ್ಡ ಪಕ್ಷವಾಗುವುದನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ” ಎಂದು ತೇಜಸ್ವಿ ಯಾದವ್ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಬಿಹಾರ: ‘ವಲಸೆ ಕಾರ್ಮಿಕರು’ ನಿತೀಶ್‌ ಕುಮಾರ್ ವಿರುದ್ಧ ಮತಚಲಾಯಿಸಿದ್ದಾರೆ- ತಜ್ಞರು

“ನಿತೀಶ್ ಕುಮಾರ್ ಅವರ ವರ್ಚಸ್ಸು ಯಾವ ಮಟ್ಟಕ್ಕೆ ಇಳಿದಿದೆ ನೋಡಿ. ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿದೆ. ಇದು ಬದಲಾವಣೆಯ ಸಂದೇಶವಾಗಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ, ಆದರೆ ನಾವು ಜನರ ಹೃದಯದಲ್ಲಿದ್ದೇವೆ” ಎಂದು ಹೇಳಿದರು.

243 ಕ್ಷೇತ್ರಗಳಿರುವ ಬಿಹಾರ ವಿಧಾನಸಭೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 74 ಸ್ಥಾನಗಳನ್ನು ಗೆದ್ದುಕೊಂಡಿದೆ.

ಆದರೆ, ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ ಕೇವಲ 43 ಸ್ಥಾನಗಳನ್ನು ಗೆದ್ದು ಮೂರನೇ ಸ್ಥಾನ ಗಳಿಸಿದ್ದು, ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾದಳ 75 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಮೋದಿ-ಶಾ ಜೋಡಿಗೆ ಬೆವರಿಳಿಸಿದ ಬಿಹಾರ! – ಡಿ.ಉಮಾಪತಿ

“ತೇಜಶ್ವಿ ಯಾದವ್ ಬಿಹಾರದ ಮತಗಳ ಮರು ಎಣಿಕೆಗೆ ಒತ್ತಾಯಿಸಿ, ಅಂಚೆ ಮತಪತ್ರಗಳನ್ನು ಆರಂಭದಲ್ಲಿ ಏಕೆ ಎಣಿಸಲಾಗಿಲ್ಲ ಎಂದು ಪ್ರಶ್ನಿಸಿದರು. ಅನೇಕ ಸ್ಥಾನಗಳಲ್ಲಿ ಅವುಗಳನ್ನು ಅಮಾನ್ಯವೆಂದು ಘೋಷಿಸಲಾಗಿದೆ. ಮುಖ್ಯಮಂತ್ರಿ ಕಳ್ಳದಾರಿಯಿಂದ ಬರಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಈ ಚುನಾವಣೆಯಲ್ಲಿನ ಹಲವು ಸಮೀಕ್ಷೆಗಳು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದವು. ಆದರೆ ಎನ್‌ಡಿಎ ಮತ್ತು ನಿತೀಶ್ ಕುಮಾರ್ ಸ್ಪಷ್ಟ ಬಹುಮತ ಗಳಿಸಿ ಅಧಿಕಾರ ಹಿಡಿದಿದ್ದಾರೆ.


ಇದನ್ನೂ ಓದಿ: ಬಿಹಾರ: ಈ ಗೆಲುವು ಮೋದಿಯವರದ್ದು; ನಿತೀಶ್‌ಗೆ ಒಳ ಏಟು ನೀಡಿದ ಚಿರಾಗ್ ಪಾಸ್ವಾನ್?

LEAVE A REPLY

Please enter your comment!
Please enter your name here