Homeಮುಖಪುಟಬಿಹಾರ: 'ವಲಸೆ ಕಾರ್ಮಿಕರು' ನಿತೀಶ್‌ ಕುಮಾರ್ ವಿರುದ್ಧ ಮತಚಲಾಯಿಸಿದ್ದಾರೆ- ತಜ್ಞರು

ಬಿಹಾರ: ‘ವಲಸೆ ಕಾರ್ಮಿಕರು’ ನಿತೀಶ್‌ ಕುಮಾರ್ ವಿರುದ್ಧ ಮತಚಲಾಯಿಸಿದ್ದಾರೆ- ತಜ್ಞರು

- Advertisement -
- Advertisement -

ವಿಧಾನಸಭಾ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯ ಸ್ಥಾನಗಳನ್ನು ಪಡೆಯುವಲ್ಲಿ ಎನ್‌ಡಿಎ ಯಶಸ್ವಿಯಾಗಿದ್ದರೂ, ಕೊರೊನಾ ಕಾರಣದಿಂದ ಲಾಕ್‌ಡೌನ್ ಹೇರಿದ ನಂತರ, ತಮ್ಮ ಮನೆಗಳಿಗೆ ಮರಳಲು ಶ್ರಮಿಸುತ್ತಿರುವ ಸಾವಿರಾರು ವಲಸೆ ಕಾರ್ಮಿಕರ ಬಗೆಗಿನ ನಿರ್ಲಕ್ಷ್ಯದಿಂದಾಗಿ ಜೆಡಿಯು ಆನೇಕ ಸ್ಥಾನಗಳನ್ನು ಕಳೆದುಕೊಳ್ಳಬೆಕಾಯಿತು. ಜೆಡಿಯು ಸೋತಿರುವ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರ ಹೆಚ್ಚಿನ ಒಳಹರಿವು ಇತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರಂಭದಲ್ಲಿ ಸಿಎಂ ನಿತೀಶ್ ಕುಮಾರ್ ವಲಸಿಗರ ಕಡೆ ಗಮನಹರಿಸಿರಲಿಲ್ಲ. ನಂತರ ಸಾಕಷ್ಟು ಒತ್ತಡ ತಂದಾಗ ಬಿಜೆಪಿಯು ವಲಸಿಗರ ಕುರಿತು ಕೆಲಸ ಮಾಡಲು ಕಾರ್ಯಪ್ರವೃತ್ತವಾಯಿತು.

ಇದನ್ನೂ ಓದಿ: 119 ಕ್ಷೇತ್ರಗಳಲ್ಲಿ ಗೆದ್ದರೂ ಸರ್ಟಿಫಿಕೆಟ್ ನೀಡದ ಚುನಾವಣಾ ಆಯೋಗ: ಅಕ್ರಮ ನಡೆಯುತ್ತಿದೆಯೆಂದು RJD ಆರೋಪ

ಎನ್‌ಡಿಎ ಅಜ್ಞಾನದಿಂದಾಗಿ ಶಹಬಾದ್ ಮತ್ತು ಭೋಜ್‌ಪುರ ಬೆಲ್ಟ್‌ಗಳಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

“ವಲಸಿಗರನ್ನು ನಿತೀಶ್ ಸರ್ಕಾರವು ನಡೆಸಿಕೊಂಡ ರೀತಿ, ವಲಸಿಗರು ಖಂಡಿತವಾಗಿಯೂ ಬಿಹಾರ ಚುನಾವಣೆಯನ್ನು ಲಘುವಾಗಿ ಪರಿಗಣಿಸಲಿಲ್ಲ” ಎಂದು ರಾಜಕೀಯ ವಿಶ್ಲೇಷಕ ಲಾ ಕುಮಾರ್ ಮಿಶ್ರಾ ಹೇಳಿದ್ದಾರೆ.

ಬಕ್ಸರ್, ರೋಹ್ತಾಸ್, ಜಹಾನಾಬಾದ್, ರಾಮಗಡ್, ಮೋಹಾನಿಯಾ ಮತ್ತು ಗಯಾ, ಔರಂಗಾಬಾದ್, ಶೇಖ್‌ಪುರ ಮತ್ತು ಮುಜಾಫರ್‌ಪುರ ಸೇರಿದಂತೆ ಇತರ ಗಡಿ ಜಿಲ್ಲೆಗಳಲ್ಲೂ ಎನ್‌ಡಿಎ ಕಳಪೆ ಪ್ರದರ್ಶನ ನೀಡಿತು ಎಂದು ಅವರು ಹೇಳಿದರು.

ಇದನ್ನೂ ಓದಿ: Bihar Election Results: ಸರಳ ಬಹುಮತ ಪಡೆದ NDA; 5 ನೇ ಭಾರಿಗೆ ಮುಖ್ಯಮಂತ್ರಿಯಾಗಲಿದ್ದಾರ…

ಮುಜಾಫರ್‌ಪುರದಂತಹ ಕೆಲವು ಹಿಂದುಳಿದ ಜಿಲ್ಲೆಗಳ ಜನರ ಅಭಿಪ್ರಾಯದಲ್ಲಿ ಕೂಡ ವಲಸಿಗರ ವಿಷಯದಲ್ಲಿ ನಿತೀಶ್‌ ಕುಮಾರ್ ವಿಫಲರಾಗಿದ್ದಾರೆ ಎಂಬ ಅಭಿಪ್ರಾಯವಿತ್ತು.

“ವಲಸಿಗರನ್ನು ಮರಳಿ ಕರೆತರುವಲ್ಲಿ ನಿತೀಶ್ ಕುಮಾರ್ ವಿಫಲವಾಗಿದ್ದರು. ಇದೇ ಈ ಚುನಾವಣೆಯಲ್ಲಿ ಪ್ರಮುಖ ವಿಷಯವಾಯಿತು. ಇದನ್ನು ಪ್ರತಿಪಕ್ಷಗಳು ಕೂಡ ಉಪಯೋಗಿಸಿಕೊಂಡವು” ಎಂದು ಮುಜಾಫರ್‌ಪುರದ ಕಾಮ್ಟೌಲ್ ಗ್ರಾಮದ ನಿವಾಸಿ ಅಶೋಕ್ ಸಾಹಿ ಹೇಳಿದರು.


ಇದನ್ನೂ ಓದಿ: ತಮಿಳಿನಲ್ಲೂ ಕ್ರಾಂತಿ ಸೃಷ್ಟಿಸಿದ ‘ಮಹಾನಾಯಕ’- ನಟ ಕಮಲ ಹಾಸನ್ ಪ್ರತಿಕ್ರಿಯೆ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...