ಬಿಜೆಪಿಯ ಮೌನದಿಂದ ನೋವಾಗುತ್ತಿದೆ: ಚಿರಾಗ್ ಪಾಸ್ವಾನ್
PC: The Economic Times

ಬಿಹಾರ ಚುನಾವಣೆಯಲ್ಲಿ ನಿರೀಕ್ಷೆಗಿಂತ ಉತ್ತಮ ಸಾಧನೆ ತೋರಿದ ಬಿಜೆಪಿಯನ್ನು ಹೊಗಳಿರುವ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್, ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. “ಈ ಫಲಿತಾಂಶವು ಬಿಜೆಪಿಯ ಮೇಲೆ ಜನರಿಗಿರುವ ನಿರಂತರ ನಂಬಿಕೆಯನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.

“ಬಿಹಾರದ ಸಾರ್ವಜನಿಕರು ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ತಮ್ಮ ನಂಬಿಕೆಯನ್ನು ತೋರಿಸಿದ್ದಾರೆ. ಜನರು ಇನ್ನೂ ಬಿಜೆಪಿಯ ಬಗ್ಗೆ ಉತ್ಸಾಹದಿಂದಿದ್ದಾರೆ ಎಂಬುದನ್ನು ಈ ಫಲಿತಾಂಶಗಳು ಸ್ಪಷ್ಟಪಡಿಸಿವೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಗೆಲುವು” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Bihar Election Results: ಸರಳ ಬಹುಮತ ಪಡೆದ NDA; 5 ನೇ ಭಾರಿಗೆ ಮುಖ್ಯಮಂತ್ರಿಯಾಗಲಿದ್ದಾರ…

ಚಿರಾಗ್ ಪಾಸ್ವಾನ್ ಅವರ ಪಕ್ಷವು ಕೇವಲ ಒಂದು ಸ್ಥಾನವನ್ನು ಗೆದ್ದಿದೆ.

119 ಕ್ಷೇತ್ರಗಳಲ್ಲಿ ಗೆದ್ದರೂ ಸರ್ಟಿಫಿಕೆಟ್ ನೀಡದ ಚುನಾವಣಾ ಆಯೋಗ: ಅಕ್ರಮ ನಡೆಯುತ್ತಿದೆಯೆಂದು RJD ಆರೋಪ

ಬಿಜೆಪಿ 74 ಸ್ಥಾನಗಳನ್ನು ಗೆದ್ದಿದ್ದರೆ, ಪ್ರಮುಖ ಪ್ರತಿಸ್ಪರ್ಧಿ, ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿಯ 75 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತಾರೂಢ ಎನ್‌ಡಿಎ 125 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಜೆಡಿಯು 43 ಸ್ಥಾನಗಳನ್ನು, ಕಾಂಗ್ರೆಸ್ 19 ಸ್ಥಾನಗಳನ್ನು ಮತ್ತು ಸಿಪಿಐ-ಎಂಎಲ್ 11 ಸ್ಥಾನಗಳನ್ನು ಗೆದ್ದಿದೆ.

ಈ ಗೆಲುವಿನ ಕುರಿತು ಟ್ವೀಟ್ ಮಾಡಿರುವ ಮೋದಿ, “ಬಿಹಾರದ ಜನತೆ ಅಭಿವೃದ್ಧಿಗೆ ನೀಡಿದ ಪ್ರಾಶಸ್ತ್ಯವೇ ಈ ಫಲಿತಾಂಶವಾಗಿದೆ” ಎಂದು ಟ್ವೀಟ್ ಮಾಡಿದ್ದರು

ಚಿರಾಗ್ ಪಾಸ್ವಾನ್ ಮೊದಲಿನಿಂದಲೂ ನಿತೀಶ್‌ ಕುಮಾರ್ ವಿರೋಧವಾಗಿಯೇ ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರ ಮೇಲಿನ ಮುನಿಸಿನಿಂದಲೇ ಎನ್‌ಡಿಎ ಮೈತ್ರಿ ಕೂಟವನ್ನು ಬಿಟ್ಟು ಹೊರನಡೆದಿದ್ದರು. ಚುನಾವಣೆಯ ನಂತರ ಬಿಜೆಪಿಯೊಟ್ಟಿಗೆ ಸೇರಿ ಸರ್ಕಾರ ರಚಿಸುವುದಾಗಿಯೂ ಹೇಳಿದ್ದರು.

ಇದೇ ಸಮಯದಲ್ಲಿ ತೇಜಸ್ವಿ ಯಾದವ್ ಪರ ಸಕಾರಾತ್ಮಕ ನಿಲುವನ್ನೂ ತಳೆದಿದ್ದರು. ಆದರೂ ಚಿರಾಗ್ ಪಾಸ್ವಾನ್ ಪಕ್ಷವು ಈ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದೆ.


ಇದನ್ನೂ ಓದಿ: ಬಿಹಾರ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ’ಎಣಿಕೆ ನಿಲ್ಲಿಸಿ’ ಟ್ರೋಲ್!

LEAVE A REPLY

Please enter your comment!
Please enter your name here