ಸರಣಿ ಅಪಘಾತದ ವೇಳೆ ಕಂಟೇನರ್‌ವೊಂದು ವೋಲ್ವೋ ಕಾರಿನ ಮೇಲೆ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಇಂದು (ಡಿ.21) ಬೆಳಿಗ್ಗೆ ನಡೆದಿದೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಅಪಘಾತ ಸಂಭವಿಸಿದೆ.
ಮೃತರನ್ನು ವಿಜಯಪುರ ಮೂಲದ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಾಸವಿದ್ದ ಚಂದ್ರಯಾಗಪ್ಪ ಗೌಳ್ (48), ಗೌರಾಬಾಯಿ (42), ವಿಜಯಲಕ್ಷ್ಮಿ (36), ಜಾನ್ (16), ದೀಕ್ಷಾ (12), ಆರ್ಯಾ(6) ಎಂದು ಗುರುತಿಸಲಾಗಿದೆ.
ಐಟಿ ಉದ್ಯಮಿಯಾಗಿದ್ದ ಚಂದ್ರಯಾಗಪ್ಪ ಅವರು ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಎಂಬ ಕಂಪನಿಯ ಮಾಲೀಕರಾಗಿದ್ದರು. ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆಯಲ್ಲಿ ಈ ಕಂಪನಿ ಕಚೇರಿಯನ್ನು ಹೊಂದಿದೆ ಎಂದು ತಿಳಿದು ಬಂದಿದೆ.
ಎರಡು ತಿಂಗಳ ಹಿಂದೆ ವೋಲ್ವೋ ಕಾರು ಖರೀದಿಸಿದ್ದ ಚಂದ್ರಯಾಗಪ್ಪ ಅವರು, ಇಂದು ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟಿದ್ದರು. ಈ ವೇಳೆ ಅವಘಡ ಸಂಭವಿಸಿದೆ ಎಂಬ ಮಾಹಿತಿ ದೊರೆತಿದೆ.
ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 10 ಕಿ.ಮೀ ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ನೆಲಮಂಗಲ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಪೊಲೀಸರ ಮುಂದೆಯೆ ವ್ಯಾಪಾರಿಯ ಮೇಲೆ ದಾಳಿಗೆ ಯತ್ನ – ಬಿಜೆಪಿಯ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್


