ವೆಲ್ಲಿಂಗ್ಟನ್: ನಿರಂತರವಾಗಿ ಕಾರ್ಮಿಕರ ಕೊರತೆಗಳ ಮಧ್ಯೆ, ವಲಸೆ ಕಾರ್ಯವಿಧಾನಗಳನ್ನು ಸುಗಮಗೊಳಿಸಲು ನ್ಯೂಜಿಲೆಂಡ್ ತನ್ನ ವೀಸಾ ಮತ್ತು ಉದ್ಯೋಗದ ಅವಶ್ಯಕತೆಗೆ ಅನುಗುಣವಾಗಿ ಗಮನಾರ್ಹವಾದ ಮಾರ್ಪಡುಗಳೊಂದಿಗೆ ಹೊಸ ನಿಯಮಗಳನ್ನು ಹೊರಡಿಸಿದೆ. ಈ ನಿಯಮ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ವಲಸೆ ದಾರಿಗಳನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ.
ಕಾರ್ಮಿಕರ ಕೊರತೆಯನ್ನು ನಿವಾರಿಸಲು, ನ್ಯೂಜಿಲೆಂಡ್ ಸರ್ಕಾರವು ವಲಸಿಗರಿಗೆ ಕೆಲಸದ ಅನುಭವದ ಮಾನದಂಡವನ್ನು ಮೂರರಿಂದ ಎರಡು ವರ್ಷಗಳವರೆಗೆ ಇಳಿಕೆ ಮಾಡಿದೆ. ಈ ಕ್ರಮವು ಸಮರ್ಥ ಕೆಲಸಗಾರರಿಗೆ ನ್ಯೂಜಿಲೆಂಡ್‌ನಲ್ಲಿ ತಮ್ಮ ಕೌಶಲ್ಯಕ್ಕೆ ಅನುಗುಣವಾಗಿ ಹೆಚ್ಚು ಸುಲಭದ ಉದ್ಯೋಗವನ್ನು ಹುಡುಕಲು ಅನುವು ಮಾಡಿಕೊಡುತ್ತದೆ. ಈ ಹೊಸ ನಿಯಮಗಳು ನ್ಯೂಜಿಲೆಂಡ್‌ನಲ್ಲಿ ಉದ್ಯೋಗಾವಕಾಶಗಳನ್ನು ಬಯಸುವ ಭಾರತೀಯ ವಲಸಿಗರಿಗೆ ಸಹಾಯ ಮಾಡುವ ನಿರೀಕ್ಷೆಯಿದೆ.
ಋತುಮಾನಕ್ಕನುಗುಣವಾದ ಕೆಲಸಗಾರರಿಗೆ ನ್ಯೂಜಿಲೆಂಡ್‌ನಲ್ಲಿ ಉಳಿಯಲು ದೇಶವು ಎರಡು ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಅನುಭವಿಗಳಾದ ಋತುಮಾನಕ್ಕನುಗುಣದ ಕೆಲಸಗಾರರಿಗೆ ಮೂರು ವರ್ಷಗಳ ಬಹುಪ್ರವೇಶ ವೀಸಾ ಮತ್ತು ಕಡಿಮೆ ಕುಶಲ ಕೆಲಸಗಾರರಿಗೆ ಏಳು ತಿಂಗಳ ಏಕಪ್ರವೇಶ ವೀಸಾವನ್ನು ಪರಿಚಯಿಸಲಾಗಿದೆ. ಕಾಲಕ್ಕನುಗುಣವಾದ ಕಾರ್ಮಿಕರ ಬೇಡಿಕೆಗಳನ್ನು ಸರಿಹೊಂದಿಸಲು ಈ ನಿಯಮಗಳನ್ನು ಮಾಡಲಾಗಿದೆ.
ಇದಲ್ಲದೆ, ಮಾನ್ಯತೆ ಪಡೆದ ಉದ್ಯೋಗದಾತರ ಕೆಲಸದ ವೀಸಾ (AEWV) ಮತ್ತು ನಿರ್ದಿಷ್ಟ ಉದ್ದೇಶದ ಕೆಲಸದ ವೀಸಾ (SPWV) ಗಾಗಿ ಸರಾಸರಿ ವೇತನ ಮಾನದಂಡಗಳನ್ನು ಸರ್ಕಾರವು ತೆಗೆದುಹಾಕಿದೆ. ಹೊಸ ನಿಯಮಗಳ ಅಡಿಯಲ್ಲಿ ಉದ್ಯೋಗದಾತರು ಉದ್ಯೋಗಾವಕಾಶಗಳನ್ನು ಒದಗಿಸುವಾಗ ಮಾರುಕಟ್ಟೆ ದರದ ಪ್ರಕಾರ ಸಂಬಳವನ್ನು ನೀಡಲು ನಿರ್ಬಂಧಿತರಾಗಿದ್ದರೂ, ಅವರು ಇನ್ನು ಮುಂದೆ ಪೂರ್ವನಿರ್ಧರಿತ ಸಂಬಳದ ಮಾನದಂಡವನ್ನು ಪೂರೈಸುವ ಅಗತ್ಯವಿಲ್ಲ. ಇದು ಉದ್ಯೋಗದಾತರಿಗೆ ಸಮಾನವಾದ ಕಾರ್ಮಿಕರ ಸಂಭಾವನೆಯನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತದೆ.
ತಮ್ಮ ಮಕ್ಕಳನ್ನು ನ್ಯೂಜಿಲೆಂಡ್‌ಗೆ ಕರೆತರಲು ಬಯಸುವ ವಲಸಿಗರಿಗೆ, AEWV ಹೊಂದಿರುವವರು ಈಗ ವಾರ್ಷಿಕವಾಗಿ ಕನಿಷ್ಠ NZ$55,844 ಗಳಿಸಬೇಕು. ಈ ಕನಿಷ್ಠ ಮಿತಿಯನ್ನು 2019ರಿಂದ ಬದಲಾಯಿಸಲಾಗಿಲ್ಲ, ವಲಸೆ ಕುಟುಂಬಗಳು ದೇಶದಲ್ಲಿ ವಾಸಿಸುತ್ತಿರುವಾಗ ಆರ್ಥಿಕವಾಗಿ ತಮ್ಮನ್ನು ತಾವು ಆರ್ಥಿಕವಾಗಿ ಸಬಲರಾಗುವುದನ್ನು ಖಚಿತಪಡಿಸಿಕೊಳ್ಳುವುದೇ ಈ ಉದ್ದೇಶದ ಹಿಂದೆ ಆಡಗಿದೆ.
ಇದಲ್ಲದೆ, ಆಸ್ಟ್ರೇಲಿಯನ್ ಮತ್ತು ನ್ಯೂಜಿಲೆಂಡ್ ಸ್ಟ್ಯಾಂಡರ್ಡ್ ಕ್ಲಾಸಿಫಿಕೇಶನ್ ಆಫ್ ಆಕ್ಯುಪೇಷನ್ಸ್ (ANZSCO) ಕೌಶಲ್ಯ ಮಟ್ಟದಲ್ಲಿ 4 ಅಥವಾ 5 ರೊಳಗೆ ಬರುವ ಉದ್ಯೋಗಿಗಳಿಗೆ ನ್ಯೂಜಿಲೆಂಡ್ ಎರಡು ವರ್ಷಗಳ ವೀಸಾ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಿದೆ. ಎರಡು ವರ್ಷಗಳ ವೀಸಾ ಹೊಂದಿರುವ ಈ ಉದ್ಯೋಗಗಳಲ್ಲಿ ಪ್ರಸ್ತುತ ಉದ್ಯೋಗಿಗಳು ಒಂದು ವರ್ಷದ ವಿಸ್ತರಣೆಯನ್ನು ಕೋರಬಹುದಾಗಿದೆ.
ಕೌಶಲ್ಯ ಮಟ್ಟ 4 ಅಥವಾ 5 ಗಾಗಿ ಉದ್ಯೋಗಾವಕಾಶಗಳನ್ನು ಒದಗಿಸುವಾಗ ಉದ್ಯೋಗದಾತರು 21 ದಿನದ ಕಡ್ಡಾಯ ನೇಮಕಾತಿ ಅವಧಿಯನ್ನು ಅನುಸರಿಸುವ ಅಗತ್ಯವಿಲ್ಲ. ಅವರು ಸ್ಥಳೀಯವಾಗಿ ನೇಮಕ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತೋರಿಸಲು ಅರ್ಹ ಅಭ್ಯರ್ಥಿಗಳಿಗಾಗಿ ಜಾಹೀರಾತು ಮತ್ತು ಸಂದರ್ಶನ ಮಾಡಬಹುದಾಗಿದೆ.
ಕಟ್ಟಡದಂತಹ ನಿರ್ಮಾಣ ಉದ್ಯಮದಲ್ಲಿನ ಕಾರ್ಮಿಕರ ಕೊರತೆಯನ್ನು ಪರಿಹರಿಸುವ ಸಲುವಾಗಿ ಸರ್ಕಾರವು ದೇಶೀಯ ಉದ್ಯೋಗಿಗಳ ಮಾನದಂಡವನ್ನು %35ರಿಂದ % 15ಕ್ಕೆ ಇಳಿಕೆ ಮಾಡಿದೆ.
ಈ ವರ್ಷದಿಂದ ಮಾನ್ಯತೆ ಪಡೆದ ಉದ್ಯೋಗದಾತರು ನ್ಯೂಜಿಲೆಂಡ್ ಒದಗಿಸಿದ ಆನ್‌ಲೈನ್ ತರಬೇತಿ ಮಾನದಂಡಗಳನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ಬದಲಿಗೆ ಉದ್ಯೋಗ ಹಕ್ಕುಗಳು ಮತ್ತು ಜವಾಬ್ದಾರಿಗಳ ಮೇಲೆ ಸುಲಭ ಪ್ರವೇಶದ ಕೊಡುಗೆಯನ್ನು ಅದು ನೀಡಿದೆ.
ಏಪ್ರಿಲ್ 2025ರಿಂದ ವಿದ್ಯಾರ್ಥಿ ವೀಸಾ ಅಥವಾ ಯಾವುದೇ ಇತರ ಕೆಲಸದಿಂದ AEWVಗೆ ಪರಿವರ್ತನೆ ಮಾಡಲು ಬಯಸುವ ವಲಸಿಗರಿಗೆ ಮಧ್ಯಂತರ ಕೆಲಸದ ಹಕ್ಕುಗಳನ್ನು ನೀಡಲಾಗುತ್ತದೆ.
ಭಾಷಣದ ವೇಳೆ ಕೈಕೊಟ್ಟ ಟೆಲಿಪ್ರಾಂಪ್ಟರ್, ಪ್ರಧಾನಿ ಮೋದಿ ಕಕ್ಕಾಬಿಕ್ಕಿ!


