HomeಮುಖಪುಟPFI ಕಚೇರಿಗಳ ಮೇಲೆ NIA ದಾಳಿ ನಡೆದಿಲ್ಲ: ಪ್ರಧಾನ ಕಾರ್ಯದರ್ಶಿ ಸ್ಪಷ್ಟನೆ

PFI ಕಚೇರಿಗಳ ಮೇಲೆ NIA ದಾಳಿ ನಡೆದಿಲ್ಲ: ಪ್ರಧಾನ ಕಾರ್ಯದರ್ಶಿ ಸ್ಪಷ್ಟನೆ

ಪಿಎಫ್‌ಐ ಕಚೇರಿಗೆ ಯಾವುದೇ ಏಜೆನ್ಸಿಗಳಿಂದ ಯಾವುದೇ ದಾಳಿಗಳು ನಡೆದಿಲ್ಲ. ಇಂತಹ ಪೂರ್ವಗ್ರಹ ವರದಿಗಳು ಸಾರ್ವಜನಿಕರ ದಾರಿ ತಪ್ಪಿಸುವ ಪ್ರಯತ್ನವಾಗಿದೆ.

- Advertisement -
- Advertisement -

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿ NIA ಅಧಿಕಾರಿಗಳು PFI ಕಚೇರಿಗೆ ದಾಳಿ ನಡೆಸಿದ್ದಾರೆಂಬ ಕೆಲವು ಮಾಧ್ಯಮಗಳ ವರದಿಯು ಸತ್ಯಕ್ಕೆ ದೂರವಾದ ವಿಚಾರವಾಗಿದೆ. PFI ಕಚೇರಿ ಮೇಲೆ ಯಾವುದೇ ದಾಳಿ ನಡೆದಿರುವುದಿಲ್ಲ ಎಂದು PFI ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷಾ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು “ಪಿಎಫ್‌ಐ ಕಚೇರಿಗೆ ಯಾವುದೇ ಏಜೆನ್ಸಿಗಳಿಂದ ಯಾವುದೇ ದಾಳಿಗಳು ನಡೆದಿಲ್ಲ. ಇಂತಹ ಪೂರ್ವಗ್ರಹ ವರದಿಗಳು ಸಾರ್ವಜನಿಕರ ದಾರಿ ತಪ್ಪಿಸುವ ಪ್ರಯತ್ನವಾಗಿದೆ” ಎಂದು ಆರೋಪಿಸಿದ್ದಾರೆ.

“ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲೂ ಭೀತಿಯನ್ನು ಉಂಟುಮಾಡಿತ್ತು. ಜೊತೆಗೆ ಸಮಾಜದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿತ್ತು. ಹಾಗಾಗಿ SDPI/PFI ನ ಹಲವು ಕಛೇರಿಗಳ ಮೇಲಿನ ದಾಳಿ ವೇಳೆ ಕೆಲ ಮಾರಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದು NIA ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಬೆಂಗಳೂರಿನಲ್ಲಿPFI/ SDPIಗೆ ಅಷ್ಟೊಂದು ಕಚೇರಿಗಳೆ ಇಲ್ಲ ನಾಸಿರ್ ಹೇಳಿದ್ದಾರೆ. ಥಣಿಸಂದ್ರ ವಾರ್ಡ್ ಕಚೇರಿ ಬಳಿ ತನಿಖೆ ನಡೆಸುತ್ತೇವೆಂದು ಬಂದಿದ್ದರು. ಅಲ್ಲಿಂದ ಏನನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಮಹಜರು ಕಾಪಿ ಕೊಡಬೇಕಿತ್ತು. ಅದನ್ನು ಸಹ ಕೊಟ್ಟಿಲ್ಲ. ಅದರಿಂದ NIA ಪತ್ರಿಕಾ ಪ್ರಕಟಣೆ ಸತ್ಯಕ್ಕೆ ದೂರವಾದುದ್ದು ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...