Homeಮುಖಪುಟವಿರೋಧದ ನಡುವೆಯೂ ಎನ್‌ಪಿಆರ್ ಪ್ರಶ್ನಾವಳಿ ಅಂತಿಮಗೊಳಿಸಲಾಗುತ್ತಿದೆ: ಮಾಹಿತಿ ನೀಡಿದ ಆರ್‌ಜಿಐ!

ವಿರೋಧದ ನಡುವೆಯೂ ಎನ್‌ಪಿಆರ್ ಪ್ರಶ್ನಾವಳಿ ಅಂತಿಮಗೊಳಿಸಲಾಗುತ್ತಿದೆ: ಮಾಹಿತಿ ನೀಡಿದ ಆರ್‌ಜಿಐ!

ಕಳೆದ ವರ್ಷ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ದೇಶಾದ್ಯಂತ ಬೃಹತ್ ಹೋರಾಟಗಳು ನಡೆದರೂ, ಸರ್ಕಾರ ಜಾರಿಗೊಳಿಸುವುದಾಗಿ ನಿಶ್ಚಯಿಸಿತ್ತು. ಆದರೆ ಕೊರೊನಾ ಅವೆಲ್ಲವೂಗಳಿಗೂ ವಿರಾಮ ನೀಡಿತ್ತು.

- Advertisement -
- Advertisement -

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ) ಕಚೇರಿಯು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್) ವೇಳಾಪಟ್ಟಿ ಅಥವಾ ಪ್ರಶ್ನಾವಳಿಯನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಹೇಳಿದೆ. 2021 ರ ಜನಗಣತಿಯ ಮೊದಲ ಹಂತದ ನಿರೀಕ್ಷಿತ ದಿನಾಂಕದ ಬಗ್ಗೆ ಮಾಹಿತಿ ’ಲಭ್ಯವಿಲ್ಲ’ ಎಂದು ತಿಳಿಸಿದೆ.

ಜನಗಣತಿ 2021 ರ ಮೊದಲ ಹಂತದ ನಿರೀಕ್ಷಿತ ದಿನಾಂಕ ಮತ್ತು ಎನ್‌ಪಿಆರ್ ನವೀಕರಣದ ಬಗ್ಗೆ ಮಾಹಿತಿ ಕೋರಿ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ದಿ ಹಿಂದೂ ಸಲ್ಲಿಸಿದ ಅರ್ಜಿಗೆ ಆರ್‌ಜಿಐ ಪ್ರತಿಕ್ರಿಯೆ ನೀಡಿದೆ. ಈ ಮೊದಲು 2020 ಏಪ್ರಿಲ್ 1ರಿಂದ ಜನಗಣತಿ ಪ್ರಾರಂಭವಾಗಬೇಕಿತ್ತು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 25 ರಂದು ಮುಂದಿನ ಆದೇಶದವರೆಗೆ ಅನಿರ್ದಿಷ್ಟವಾಗಿ ಮುಂದೂಡಲಾಗಿತ್ತು.

ಎನ್‌ಪಿಆರ್ ನವೀಕರಣ ಮತ್ತು ಮೊದಲ ಹಂತದ ಜನಗಣತಿಯ ಮನೆ ಪಟ್ಟಿ ಮತ್ತು ವಸತಿ ಗಣತಿಯನ್ನು ಏಪ್ರಿಲ್-ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ನಡೆಸಬೇಕಾಗಿತ್ತು. ಆದರೆ, ಏಪ್ರಿಲ್ 1ರಂದು ಮೊದಲ ಹಂತದಲ್ಲಿ ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಪ್ರದೇಶದಲ್ಲಿ ಗಣತಿ ನಡೆಯಬೇಕಿತ್ತು. ಆದರೂ ಹಿಂದೂ ಸಲ್ಲಿಸಿದ್ದ ಆರ್‌ಟಿಐಗೆ ನವೆಂಬರ್ 17 ರಂದು ಉತ್ತರಿಸಿರುವ ಆರ್‌ಜಿಐ ಇನ್ನೂ “ಎನ್‌ಪಿಆರ್ ವೇಳಾಪಟ್ಟಿ ಅಂತಿಮಗೊಳಿಸಲಾಗುತ್ತಿದೆ” ಎಂದು ಉತ್ತರಿಸಿದೆ.

ಇದನ್ನೂ ಓದಿ: ಜನಗಣತಿ ಮತ್ತು NPR ಪ್ರತ್ಯೇಕವಾಗಿರಲಿ: ಕೇಂದ್ರಕ್ಕೆ ಆರ್ಥಿಕ ತಜ್ಞರು ಮತ್ತು ಸಮಾಜ ವಿಜ್ಞಾನಿಗಳಿಂದ ಪತ್ರ

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದಾಗಿ ಎನ್‌ಪಿಆರ್ ನವೀಕರಣವನ್ನು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿರೋಧಿಸಿವೆ. 2003ರಲ್ಲಿ ರೂಪಿಸಲಾದ ಪೌರತ್ವ ನಿಯಮಗಳ ಪ್ರಕಾರ, ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಐಸಿ) ಅಥವಾ ಎನ್‌ಆರ್‌ಸಿಗೆ ಎನ್‌ಪಿಆರ್ ಮೊದಲ ಹೆಜ್ಜೆಯಾಗಿದೆ.

2010ರಲ್ಲಿ ಎನ್‌ಪಿಆರ್ ಮೊದಲ ಬಾರಿಗೆ ಸಂಗ್ರಹಿಸಲಾಯಿತು, ನಂತರ 2015 ರಲ್ಲಿ ಎನ್‌ಪಿಆರ್ ನವೀಕರಿಸಲಾಯಿತು. ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಂತಹ ಕೆಲವು ರಾಜ್ಯಗಳು ಹೊಸ ಎನ್‌ಪಿಆರ್‌ನಲ್ಲಿ ಕೇಳಲಾದ ಹೆಚ್ಚುವರಿ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಉದಾಹರಣೆಗೆ “ತಂದೆ ಮತ್ತು ತಾಯಿಯ ಹುಟ್ಟಿದ ದಿನಾಂಕ ಮತ್ತು ಹುಟ್ಟಿದ ಸ್ಥಳ, ಕೊನೆಯ ವಾಸಸ್ಥಳ ಮತ್ತು ಮಾತೃಭಾಷೆ” ಈ ಪ್ರಶ್ನೆಗಳಿಗೆ ಹಲವು ರಾಜ್ಯಗಳು ಆಕ್ಷೇಪಿಸಿವೆ.

2019 ರಲ್ಲಿ, ಟ್ರಯಲ್ ಎನ್‌ಪಿಆರ್ ಫಾರ್ಮ್ 21 ಮಾನದಂಡಗಳಲ್ಲಿ 30 ಲಕ್ಷ ಜನರಿಂದ “ತಂದೆ ಮತ್ತು ತಾಯಿಯ ಹುಟ್ಟಿದ ಸ್ಥಳ, ಕೊನೆಯ ವಾಸಸ್ಥಳ” ಕುರಿತು ನಿರ್ದಿಷ್ಟ ವಿವರಗಳನ್ನು ಕೋರಿ ಆಧಾರ್ (ಐಚ್ಛಿಕ) , ಮತದಾರರ ಗುರುತಿನ ಚೀಟಿ, ಮೊಬೈಲ್ ಫೋನ್ ಮತ್ತು ಚಾಲನಾ ಪರವಾನಗಿ ಸಂಖ್ಯೆಗಳ ವಿವರಗಳನ್ನು ಸಂಗ್ರಹಿಸಿದೆ. 2010 ಮತ್ತು 2015 ರಲ್ಲಿ, ಎನ್‌ಪಿಆರ್ 14 ಮಾನದಂಡಗಳಲ್ಲಿ ವಿವರಗಳನ್ನು ಸಂಗ್ರಹಿಸಿತ್ತು.

ಇದನ್ನೂ ಓದಿ: ಗಾಂಧಿ ನೆನಪಿನಲ್ಲಿ ರಾಜ್ಯದ್ಯಂತ ಉಪವಾಸ ಸತ್ಯಾಗ್ರಹ : NPR ಜಾರಿಗೊಳಿಸದಂತೆ ತಡೆಯುವ ಪ್ರತಿಜ್ಞೆ

“ಜನನ, ಮರಣ ಮತ್ತು ವಲಸೆಯ ಕಾರಣದಿಂದಾಗಿ ಆಗುವ ಬದಲಾವಣೆಗಳನ್ನು ಸಂಯೋಜಿಸಲು” ಮತ್ತು “ಆಧಾರ್ ವೈಯಕ್ತಿಕ ದತ್ತಾಂಶ ಆದರೆ ಎನ್‌ಪಿಆರ್ ಕುಟುಂಬವಾರು ದತ್ತಾಂಶವನ್ನು ಒಳಗೊಂಡಿರುತ್ತದೆ” ಎಂದು ಗೃಹ ಸಚಿವಾಲಯ ಎನ್‌ಪಿಆರ್ ಅನ್ನು ನವೀಕರಿಸುವ ಅವಶ್ಯಕತೆಯಿದೆ ಎಂದು ಈ ವರ್ಷದ ಆರಂಭದಲ್ಲಿ ಸಂಸದೀಯ ಸಮಿತಿಗೆ ತಿಳಿಸಿತು.

ಕೇಂದ್ರ ಸರ್ಕಾರ 2021ರ ಜನಗಣತಿ ಮತ್ತು ರಾಷ್ಟ್ರೀಯ ಜನಗಣತಿ ನೊಂದಣಿ (ಎನ್‌ಪಿಆರ್) ಪಕ್ರಿಯೆಗಳನ್ನು ಒಟ್ಟಿಗೆ ನಡೆಸಲು ನಿಶ್ಚಯಿಸಿರುವುದು ಹಲವು ವಲಯಗಳಿಂದ ಟೀಕೆಗೆ ಗುರಿಯಾಗಿದೆ. ಎನ್‌ಪಿಆರ್ ಪ್ರಕ್ರಿಯೆಯು ಎನ್‌ಆರ್‌ಸಿ (ರಾಷ್ಟ್ರೀಯ ನಾಗರಿಕರ ನೋಂದಣಿ) ಪ್ರಕ್ರಿಯೆಗೆ ಪೂರ್ವಭಾವಿ ಅಭ್ಯಾಸ ಎಂದು ಹಲವು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆಗಳು ದಾಖಲಾಗಿದ್ದವು. ಬೃಹತ್ ಹೋರಾಟಗಳು ಭುಗಿಲೆದ್ದರು ಸರ್ಕಾರ ಜಾರಿಗೊಳಿಸುವುದಾಗಿ ನಿಶ್ಚಯಿಸಿತ್ತು. ಆದರೆ ಕೊರೊನಾ ಅವೆಲ್ಲವೂಗಳಿಗೂ ವಿರಾಮ ನೀಡಿದೆ.

ಮಹಾತ್ಮ ಗಾಂಧೀಜಿಯವರು ನಡೆಸಿದ ದಂಡಿ (ಉಪ್ಪಿನ) ಸತ್ಯಾಗ್ರಹದ 90ನೇ ವರ್ಷಾಚರಣೆಯ ಸ್ಫೂರ್ತಿಯಲ್ಲಿ ಸಂವಿಧಾನ ಹಾಗೂ ಪೌರತ್ವದ ಹಕ್ಕುಗಳನ್ನು ಉಳಿಸಿಕೊಳ್ಳಲು ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ, NPR ಜಾರಿಗೊಳಿಸದಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರಗಳನ್ನು ಸಲ್ಲಿಸಲಾಗಿತ್ತು.


ಇದನ್ನೂ ಓದಿ: ನಿರ್ಣಾಯಕ ಹಂತದತ್ತ ಎನ್‌ಪಿಆರ್ ಹೋರಾಟ: ಮುಂದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...