Homeಚಳವಳಿಸುಧಾ ಭಾರದ್ವಾಜ್‌ರವರಿಗೆ ನೀಡಿದ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಎನ್‌ಐಎ

ಸುಧಾ ಭಾರದ್ವಾಜ್‌ರವರಿಗೆ ನೀಡಿದ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಎನ್‌ಐಎ

- Advertisement -
- Advertisement -

ಹೋರಾಟಗಾರ್ತಿ ಸುಧಾ ಭಾರದ್ವಾಜ್‌ರವರಿಗೆ ಬುಧವಾರ ಬಾಂಬೆ ಹೈಕೋರ್ಟ್‌ ನೀಡಿದ ಡೀಫಾಲ್ಟ್‌ ಜಾಮೀನನ್ನು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಬಂಧನವಾಗಿ ಮೂರು ವರ್ಷಗಳು ಕಳೆದರೂ ಪೊಲೀಸರು ಯಾವುದೆ ದೋಷಾರೋಪ ಪಟ್ಟಿಯನ್ನು ಸಲ್ಲಿಸದೇ ಇರುವ ಕಾರಣ ಭೀಮಾ ಕೊರೆಗಾಂವ್‌‌‌ – ಎಲ್ಗರ್‌ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ, ವಕೀಲೆ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಡೀಫಾಲ್ಟ್ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ತನಿಖೆಗಾಗಿ ಒದಗಿಸಲಾದ ಗರಿಷ್ಠ ಅವಧಿ ಮುಗಿದ ನಂತರವೂ ಪೊಲೀಸರು ಯಾವುದೇ ಆರೋಪ ಪಟ್ಟಿಯನ್ನು ಸಲ್ಲಿಸದಿದ್ದರೆ, ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹನಾಗುತ್ತಾರೆ. ಇನ್ನು ಡೀಫಾಲ್ಟ್‌ ಜಾಮೀನು ಎಂದು ಕರೆಯುತ್ತಾರೆ.

ಡಿಸೆಂಬರ್ 8 ರಂದು ಮುಂಬೈನ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ಮುಂದೆ ತನ್ನ ಜಾಮೀನಿನ ಷರತ್ತುಗಳ ನಿರ್ಧಾರಕ್ಕಾಗಿ ಸುಧಾ ಭಾರದ್ವಾಜ್‌ರವರು ಹಾಜರಾಗಬೇಕಾಗುತ್ತದೆ. ಇದರ ನಂತರ ಬೈಕುಲ್ಲಾ ಮಹಿಳಾ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಗುತ್ತದೆ.

ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಸುಧಾ ಭಾರದ್ವಾಜ್‌ರವರು ನವೆಂಬರ್ 26, 2018 ರಂದು ಡೀಫಾಲ್ಟ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ವಿರುದ್ಧ ಫೆಬ್ರವರಿ 21, 2019 ರಂದು ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಹಾಗಾಗಿ ಅವರಿಗೆ ಜಾಮೀನು ಲಭ್ಯವಾಗಿದೆ.

ಮೇ 2019ರಲ್ಲಿ ಅಂದರೆ ಚಾರ್ಜ್‌ಶೀಟ್‌ ಸಲ್ಲಿಸಿದ ನಂತರ ಜಾಮೀನಿಗೆ ಅರ್ಜಿ ಹಾಕಿದ ವರವರರಾವ್, ಅರುಣ್ ಫೆರಾರ, ವೆರ್ನನ್ ಗೊನ್ಸಾಲ್ವ್ಸ್ ರವರಿಗೆ ಜಾಮೀನು ನೀಡಲಾಗಿಲ್ಲ. ಆದರೆ ವರವರರಾವ್‌ರವರು ತಮ್ಮ ಅನಾರೋಗ್ಯದ ಕಾರಣಕ್ಕೆ ಡಿಸೆಂಬರ್ 06ರವರೆಗೆ ಜಾಮೀನು ಪಡೆದಿದ್ದಾರೆ. ಸದ್ಯಕ್ಕೆ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ; ಭೀಮಾ ಕೊರೆಗಾಂವ್‌: ವರವರ ರಾವ್ ಅವರ ಜಾಮೀನು ವಿಸ್ತರಣೆ ಅರ್ಜಿ ವಿಚಾರಣೆ ಸೆ.6 ಕ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕಾಲ ಆಕ್ರಮಿಸುವ ಮೊದಲು ಮೋದಿ, ಬಿಜೆಪಿ ತನ್ನ ತಪ್ಪನ್ನು ಅರಿತು ಮುನ್ನಡೆಯಬೇಕಿದೆ..

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...