ಹೊಸ ಐಟಿ ನಿಯಮಗಳು ಸರ್ಕಾರಕ್ಕೆ ಯಾವುದೇ “ಮಾರ್ಗಸೂಚಿಗಳು ಮತ್ತು ಗಾರ್ಡ್‌ರೈಲ್‌ಗಳು ಇಲ್ಲದೆಯೇ “ಅನಿಯಂತ್ರಿತ ಅಧಿಕಾರ” ನೀಡುತ್ತದೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಗಮನಿಸಿದೆ.
ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು ಐಟಿ ನಿಯಮದ ತಿದ್ದುಪಡಿಗಳನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಪೀಠವು, ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್ ಚೆಕ್‌ನ್ನು ಸ್ಥಾಪಿಸಿದ್ದರೂ ತಿದ್ದುಪಡಿ ಮತ್ತು ಪ್ರತ್ಯೇಕ ಸತ್ಯ ಪರಿಶೀಲನಾ ಘಟಕದ ಅಗತ್ಯತೆ ಏನಿದೆ? ಎಂದು ಸರ್ಕಾರವನ್ನು ಪ್ರಶ್ನಿಸಿತು.
”ನೀವು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ PIB ಇದೆ, ಹಾಗಿದ್ದಾಗ ಈ ತಿದ್ದುಪಡಿ ಏಕೆ ಅಗತ್ಯವಿತ್ತು ಮತ್ತು ಫ್ಯಾಕ್ಟ್‌ಚೆಕ್ ಘಟಕ ಯಾಕೆ ಸ್ಥಾಪಿಸಬೇಕು? ಈ ತಿದ್ದುಪಡಿಯು ಉದ್ದೇಶವೇ ಬೇರೆ ಎಂದು ನಮಗೆ ಅನಿಸುತ್ತಿದೆ. ಸರ್ಕಾರವು “ಯಾವುದೇ ಫ್ಯಾಕ್ಟ್‌ಚೆಕ್ ಮಾಡಲು ಮಾರ್ಗಸೂಚಿ ಹೊಂದಿರುವುದು ಅಗತ್ಯವಿದೆ” ಎಂದು ನ್ಯಾಯಮೂರ್ತಿ ಪಟೇಲ್ ಹೇಳಿದರು.
ಈ ಮಧ್ಯೆ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪಿಐಬಿಯ ಫ್ಯಾಕ್ಟ್ ಚೆಕ್ ಯುನಿಟ್ “ಹಲ್ಲಿಲ್ಲ ಹಾವಿನಂತೆ” ಎಂದು ಹೇಳಿದರು.
”ಐಟಿ ನಿಯಮಗಳು ವಾಕ್ ಸ್ವಾತಂತ್ರ್ಯವನ್ನು ನಿಗ್ರಹಿಸುವುದಕ್ಕೆ ಸಂಬಂಧಿಸಿಲ್ಲ. ಅಭಿಪ್ರಾಯ, ಟೀಕೆ ಅಥವಾ ತುಲನಾತ್ಮಕ ವಿಶ್ಲೇಷಣೆಯ ಯಾವುದೇ ಅಭಿವ್ಯಕ್ತಿಯನ್ನು ನಿಷೇಧಿಸಲು ಸರ್ಕಾರ ಪ್ರಯತ್ನಿಸುತ್ತಿಲ್ಲ… ವಾಸ್ತವವಾಗಿ ನಾವು ಅಂತವರನ್ನು ಸ್ವಾಗತಿಸುತ್ತೇವೆ, ಅವರಿಗೆ ಪ್ರೋತ್ಸಾಹಿಸುತ್ತೇವೆ ಮತ್ತು ಅವರಿಂದ ಕಲಿಯುತ್ತೇವೆ” ಎಂದು ಅವರು ಹೇಳಿದರು.
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಪ್ರಕರಣದಲ್ಲಿ ಈ ನಿಯಮಗಳನ್ನು ಅನಿಯಂತ್ರಿತ ಮತ್ತು ಅಸಂವಿಧಾನಿಕವಾಗಿ ಬಳಸಲಾಗಿದೆ ಎಂದು ಉಲ್ಲೇಖಿಸಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಅಸೋಸಿಯೇಷನ್ ಆಫ್ ಇಂಡಿಯನ್ ಮ್ಯಾಗಜೀನ್‌ಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆ ಅರ್ಜಿಗಳ ವಿಚಾರಣೆ ಬುಧವಾರವೂ ಮುಂದುವರಿಯಲಿದೆ.
ಈ ತಿದ್ದುಪಡಿಯನ್ನು ಏಪ್ರಿಲ್ 6ರಂದು ತಿಳಿಸಲಾಗಿದೆ, ಸರ್ಕಾರಿ ಸತ್ಯ-ಪರಿಶೀಲನಾ ಘಟಕದಿಂದ ನಕಲಿ ಎಂದು ಪರಿಗಣಿಸಲ್ಪಟ್ಟ ವಿಷಯವನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ಮತ್ತು ಇತರ ಮಧ್ಯವರ್ತಿಗಳು ತೆಗೆದುಹಾಕಬೇಕು ಎಂದು ಹೇಳಿದರು. ಇದನ್ನು ಪತ್ರಿಕಾ ಗುಂಪುಗಳು, ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರು ವ್ಯಾಪಕವಾಗಿ ವಿರೋಧಿಸಿದರು.
ಇದನ್ನೂ ಓದಿ: ‘ಇಸ್ಕಾನ್’ ಅತಿ ದೊಡ್ಡ ಮೋಸದ ಸಂಸ್ಥೆ, ಹಸುಗಳನ್ನು ಕಟುಕರಿಗೆ ಮಾರಿದೆ: ಬಿಜೆಪಿ ಸಂಸದೆ ಮನೇಕಾ ಗಾಂಧಿ


