Homeಮುಖಪುಟಇಲ್ಲಿ ಯಾರೂ ಕಾಳಜಿ ವಹಿಸುತ್ತಿಲ್ಲ; ಕೊರೊನಾದಿಂದ ಮೃತಪಟ್ಟ ಪತ್ರಕರ್ತನ ಕೊನೆಯ ಸಂದೇಶ

ಇಲ್ಲಿ ಯಾರೂ ಕಾಳಜಿ ವಹಿಸುತ್ತಿಲ್ಲ; ಕೊರೊನಾದಿಂದ ಮೃತಪಟ್ಟ ಪತ್ರಕರ್ತನ ಕೊನೆಯ ಸಂದೇಶ

- Advertisement -
- Advertisement -

“ಇಲ್ಲಿ ಐಸಿಯು ಉತ್ತಮವಾಗಿಲ್ಲ. ದಯವಿಟ್ಟು, ನಾವು ಖಾಸಗಿ ಆಸ್ಪತ್ರೆಗೆ ಹೋಗೋಣ. ಇಲ್ಲಿ ಯಾರೂ ಕಾಳಜಿ ವಹಿಸುತ್ತಿಲ್ಲ.”

ಇದು ಕಳೆದ ವಾರ ಕೊರೊನಾ ವೈರಸ್‌ಗೆ ಬಲಿಯಾದ ಹೈದರಾಬಾದ್‌ನ ಪತ್ರಕರ್ತ ಮನೋಜ್ ಕುಮಾರ್(33) ಕಳುಹಿಸಿದ ಕೊನೆಯ ಸಂದೇಶಗಳಲ್ಲಿ ಒಂದು. ಅವರು ಸರ್ಕಾರಿ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಜೂನ್ 6 ರಂದು ಮಧ್ಯಾಹ್ನ 3.46 ಕ್ಕೆ ಈ ಸಂದೇಶವನ್ನು ಅವರ ಸಹೋದರ ಸಾಯಿನಾಥ್ ಅವರಿಗೆ ಕಳುಹಿಸಿದ 24 ಗಂಟೆಯ ಒಳಗಾಗಿ ಅವರು ಮೃತಪಟ್ಟಿದ್ದಾರೆ.

ಈ ಒಂದು ಸಂದೇಶ, ಮನೋಜ್ ಅನುಭವಿಸುತ್ತಿದ್ದ ಹತಾಶೆಯನ್ನು ತೋರಿಸುತ್ತದೆ. ಅವರು ಆಮ್ಲಜನಕ ಬೇಕೆಂದು ಕೇಳಿದಾಗ ಆಸ್ಪತ್ರೆಯ ಕಡೆಯಿಂದ ಸರಿಯಾದ ಪ್ರತಿಕ್ರಿಯೆ ಬರದೇ ಇರುವ ಕಾರಣ, ತನ್ನ ಸಹೋದರನಿಗೆ “ದಯವಿಟ್ಟು, ನಾವು ಇಲ್ಲಿಂದ ಹೋಗೋಣ” ಎಂದು ಸಂದೇಶ ಕಳುಹಿಸಿದ್ದರು.

ಕೊರೊನಾ ವೈರಸ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ನೋಡಲ್ ಕೇಂದ್ರವಾಗಿರುವ ಗಾಂಧಿ ಆಸ್ಪತ್ರೆಯ ಕೊರೊನಾ ವಾರ್ಡ್‌ನ ಅವ್ಯವಸ್ಥೆಯನ್ನು ಎತ್ತಿ ತೋರಿಸುವ ವೀಡಿಯೊವನ್ನು ಸಾಯಿನಾಥ್ ಬಿಡುಗಡೆ ಮಾಡಿದಂತೆಯೇ ಈ ಚಾಟ್‌ಗಳನ್ನೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಸಾಯಿನಾಥ್ ಕೂಡಾ ಮನೋಜ್ ಜೊತೆ ಕೊರೊನಾ ವೈರಸ್‌ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿರುವ ಸಾಯಿನಾಥ್ ಸೋಮವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಸಾಯಿನಾಥ್ ವೀಡಿಯೊಗಳಲ್ಲಿ ದಾಖಲಾಗಿರುವಂತೆ ಘಟನೆಗಳ ಅನುಕ್ರಮವನ್ನು ಎತ್ತಿ ತೋರಿಸುತ್ತಾ, “ಜೂನ್ 3 ರಂದು ಬೆಳಿಗ್ಗೆ 11 ಗಂಟೆಗೆ ಮನೋಜ್‌ನಲ್ಲಿ ಸೋಂಕಿನ ಲಕ್ಷಣ ಗೋಚರಿಸಿದರಿಂದ ನಾವು ಜ್ವರ ಆಸ್ಪತ್ರೆಗೆ ಹೋದೆವು. ಮಧ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮಿಬ್ಬರನ್ನು ಪರೀಕ್ಷೆ ನಡೆಸಲಾಯಿತು. ನಂತರ ನಾವು ಮನೆಗೆ ಹೋದೆವು. ಅದೇ ದಿನ ರಾತ್ರಿ 10 ಗಂಟೆಯ ನಂತರ ನಾವಿಬ್ಬರೂ ಕೊರೊನಾ ಪಾಸಿಟಿವ್ ಎಂದು ಕರೆ ಬಂದು, ನಾವು ತಕ್ಷಣ ಜ್ವರ ಆಸ್ಪತ್ರೆಗೆ ಹೋದೆವು. ಮುಂಜಾನೆ 1 ರ ಹೊತ್ತಿಗೆ ನಮ್ಮನ್ನು ಏಳನೇ ಮಹಡಿಯಲ್ಲಿರುವ ವಾರ್ಡ್‌ಗೆ ಸ್ಥಳಾಂತರಿಸಲಾಯಿತು.” ಎಂದು ಹೇಳಿದ್ದಾರೆ.


ಓದಿ: ದುಡ್ಡು ಕಟ್ಟಲಾಗದಿದ್ದರೆ ಸತ್ತೋಗಿ; ಕೊರೊನಾ ಸಮಯದಲ್ಲೂ ರಕ್ತ ಹೀರುತ್ತಿರುವ ಫೈನಾನ್ಸ್‌ಗಳು


ಪ್ರವೇಶ ಪಡೆದ ನಂತರ ಅವರಿಗೆ ಬೆಡ್‌ಶೀಟ್, ಸೋಪ್ ಬಾರ್ ಮತ್ತು ಮಲ್ಟಿ-ವಿಟಮಿನ್ ಟ್ಯಾಬ್ಲೆಟ್‌ಗಳ ಜೊತೆಗೆ ಕೆಲವು ಟೂತ್‌ಪೇಸ್ಟ್ ನೀಡಲಾಗಿದೆ ಎಂದು ಹೇಳಿದ ಸಾಯಿನಾಥ್, “ನಾವು ವಾರ್ಡ್‌ಗೆ ಕಾಲಿಟ್ಟ ಸಮಯದಿಂದ ಸರಿಯಾದ ಸೌಲಭ್ಯಗಳಿಲ್ಲ. ರೋಗಿಗಳಿಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳಲಿಲ್ಲ” ಎಂದು ಆರೋಪಿಸಿದ್ದಾರೆ.

“ಅದೇ ರಾತ್ರಿ ಮನೋಜ್‌ಗೆ ಉಸಿರಾಟದ ತೊಂದರೆಯಾಗಿ, ಅಲ್ಲಿ ಯಾರಿಗಾದರೂ ತಿಳಿಸುತ್ತೇನೆ ಎಂದರೂ ವಾರ್ಡ್‌ನಲ್ಲಿ ಅಥವಾ ಲಾಬಿಯಲ್ಲಿ ಯಾರೂ ಇರಲಿಲ್ಲ. ನಾನು ಹೊರಗೆ ಹೋಗಿ ನೋಡಿದಾಗ ಕೂಡ ಸ್ವಚ್ಚತಾ ಸಿಬ್ಬಂದಿ ಮಾತ್ರ ಇದ್ದರು. ನಾವು ಹೊರಗೆ ಹೋಗುವಂತಿಲ್ಲ ಮತ್ತು ವೈದ್ಯರು ಮರುದಿನ ಬರುತ್ತಾರೆ ಎಂದು ಅವರು ಹೇಳಿದರು” ಎಂದು ಸಾಯಿನಾಥ್ ಹೇಳಿದ್ದಾರೆ.

ಜೂನ್ 4 ರ ಮುಂಜಾನೆ ತನ್ನ ಸಹೋದರನ ಪರಿಸ್ಥಿತಿ ಹದಗೆಟ್ಟಿದ್ದನ್ನು ನೋಡಿ ಸಹಿಸಿಕೊಳ್ಳಲಾರದೆ ವೈದ್ಯರಿಗೆ ತಿಳಿಸಲು ಪ್ರಯತ್ನಿಸಿದೆ. ನನ್ನ ಸಹೋದರ ಪತ್ರಕರ್ತನಾಗಿರುವುದರಿಂದ ಅವರ ಕೆಲವು ಸಹೋದ್ಯೋಗಿಗಳನ್ನು ಸಂಪರ್ಕಿಸಿ, ಆಸ್ಪತ್ರೆಯ ಅಧೀಕ್ಷಕರ ಮೇಲೆ ಒತ್ತಡ ಹೇರಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಯು ಅವರನ್ನು ಐಸಿಯುಗೆ ಸ್ಥಳಾಂತರಿಸುವುದಾಗಿ ತಿಳಿಸಿದರು. ಆದರೆ ಸುಮಾರು 4 ಗಂಟೆಗಳು ಕಳೆದರೂ ಅದು ನಡೆಯದಿದ್ದಾಗ ಕಾರಣ ಕೇಳಿದೆ. ಆಸ್ಪತ್ರೆಯ ಐಸಿಯುವಿನಲ್ಲಿ ಸಾಕಷ್ಟು ಹಾಸಿಗೆಗಳಿಲ್ಲ ಎಂದು ಅವರು ಹೇಳಿದರು. ಆಮ್ಲಜನಕದ ಸಿಲಿಂಡರ್ ಅನ್ನು ವಾರ್ಡ್‌ನಲ್ಲಿಯೇ ಇಡಬಹುದೇ ಎಂದು ಕೇಳಿದರೆ ಅಲ್ಲಿ ಅದು ಕೂಡ ಲಭ್ಯವಿಲ್ಲ ಎಂದು ಹೇಳಿದರು. ಇದು ಇಲ್ಲಿಯ ಪರಿಸ್ಥಿತಿ, ” ಎಂದು ಸಾಯಿನಾಥ್ ಹೇಳಿದ್ದಾರೆ.

“ಜೂನ್ 4 ರಂದು ಸಂಜೆ 4 ಗಂಟೆ ಸುಮಾರಿಗೆ ಅವರು ಅವನನ್ನು ವಾರ್ಡ್‌ನಿಂದ ಹೊರಗೆ ಕರೆದೊಯ್ದು ಸುಮಾರು 1.5 ಗಂಟೆಗಳ ಕಾಲ, ಗಾಲಿಕುರ್ಚಿಯಲ್ಲಿ ಕೂರಿಸಿದ್ದಾರೆ ಹಾಗೂ ಅವನಿಗೆ ಚಿಕಿತ್ಸೆ ನೀಡಲಿಲ್ಲ” ಎಂದು ಸಾಯಿನಾಥ್  ಆರೋಪಿಸಿದ್ದಾರೆ.

ಈ ಸಮಯದಲ್ಲಿಯೇ ಮನೋಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದಾನೆಂದು ಹೇಳಲಾಗಿದೆ. ಮಾಧ್ಯಮಗಳಲ್ಲಿ ಮನೋಜ್ ಅವರ ಸ್ನೇಹಿತರು ಆರೋಗ್ಯ ಸಚಿವರಿಗೆ ಕರೆ ಮಾಡಿದ ನಂತರವೇ ಅವರು ಮನೋಜ್ ನನ್ನು ಸರಿಯಾಗಿ ನೋಡಿಕೊಳ್ಳಲು ಪ್ರಾರಂಭಿಸಿದರು ಹಾಗೂ ಅವರನ್ನು ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಿದರು ಎಂದು ಸಾಯಿನಾಥ್ ಹೇಳಿದ್ದಾರೆ.

ಜೂನ್ 7 ರ ಬೆಳಿಗ್ಗೆ 9.30 ರ ಸುಮಾರಿಗೆ ನಿಮ್ಮ ಸೋದರ ವೆಂಟಿಲೇಟರ್‌ಗೆ ಸ್ಥಳಾಂತರವಾಗಿದ್ದಾರೆ ಎಂದು ಆಸ್ಪತ್ರೆಯಿಂದ ಸಾಯಿನಾಥ್‌‌ಗೆ ಕರೆ ಬಂದಿದ್ದು, ಅದಾಗಿ ಸ್ವಲ್ಪ ಹೊತ್ತಿಗೆ ಸಹೋದರ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಇಲಾಖೆ ಕರೆ ಮಾಡಿದೆ. ಆದರೆ ಯಾವುದೇ ವೈದ್ಯರು ತನಗೆ ಮಾಹಿತಿ ನೀಡಿರಲಿಲ್ಲ ಎಂದು ಸಾಯಿನಾಥ್ ಹೇಳುತ್ತಾರೆ. “ಆಸ್ಪತ್ರೆಯ ಪರಿಸ್ಥಿತಿ ಹೀಗಿದೆ. ನಮ್ಮಂತವರೇ ಚಿಕಿತ್ಸೆಗೆ ಒತ್ತಡ ಹೇರಬೇಕಾಗುವ ಪರಿಸ್ಥಿತಿ ಇದೆ. ಇನ್ನು ಸಾಮಾನ್ಯ ಜನರಿಗೆ ಇದು ತುಂಬಾ ಕಷ್ಟ” ಎಂದು ಅವರು ಹೇಳಿದ್ದಾರೆ.

 

ಇಷ್ಟೇ ಅಲ್ಲದೆ ಸ್ಥಳೀಯ ಮಾಧ್ಯಮಗಳ ಮತ್ತೊಂದು ವೀಡಿಯೊದಲ್ಲಿ ಗಾಂಧಿ ಆಸ್ಪತ್ರೆಯ ವಾರ್ಡ್‌ನ ಒಂದು ಮೂಲೆಯಲ್ಲಿ ಸಿರಿಂಜಿನ ಪಕ್ಕದಲ್ಲೇ ನೀರಿನ ಬಾಟಲಿಗಳು ಇರುವುದನ್ನು ತೋರಿಸಲಾಗಿದೆ. ಹಲವಾರು ವಸ್ತುಗಳು ನೆಲದ ಮೇಲೆ ಹರಡಿಕೊಂಡಿವೆ.

ಆದರೆ ಇದನ್ನು ತೆಲಗಾಂಣ ಸರ್ಕಾರ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.

ರಾಜ್ಯ ಸರ್ಕಾರ ಯಾರನ್ನೂ ನೇರವಾಗಿ ಹೆಸರಿಸದೆ ಸೋಮವಾರ ಮುಖ್ಯಮಂತ್ರಿ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು “ಗಾಂಧಿ ಆಸ್ಪತ್ರೆ ಕೊರೊನಾ ವೈರಸ್ ರೋಗಿಗಳಿಂದ ತುಂಬಿಹೋಗಿದೆ ಎಂದು ಕೆಲವರು ಸುಳ್ಳು ಹರಡುತ್ತಿದ್ದಾರೆ. ಕೆಲವು ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಈ ನಕಲಿ ಸುದ್ದಿಯನ್ನು ವರದಿ ಮಾಡುತ್ತಿವೆ. ಆದರೆ ಇದೊಂದು ಸುಳ್ಳು ಸುದ್ದಿಯಾಗಿದೆ. ಗಾಂಧಿ ಆಸ್ಪತ್ರೆಯಲ್ಲಿ, 2,150 ರೋಗಿಗಳಿಗೆ ಚಿಕಿತ್ಸೆ ನೀಡಲು ಸೌಲಭ್ಯವಿದ್ದು, ಆಮ್ಲಜನಕ ಪೂರೈಕೆ ಸೌಲಭ್ಯದೊಂದಿಗೆ 1,000 ಹಾಸಿಗೆಗಳನ್ನು ಹೊಂದಿದೆ. ಅದಲ್ಲದೆ ಆಸ್ಪತ್ರೆಯಲ್ಲಿ ಕೇವಲ 247 ಕೊರೊನ ರೋಗಿಗಳಿದ್ದಾರೆ” ಎಂದಿದೆ.

ಇದಕ್ಕೂ ಮುಂಚೆ ಹೇಳಿಕೆ ಕೊಟ್ಟಿದ್ದ ಗಾಂಧಿ ಆಸ್ಪತ್ರೆಯ ಅಧೀಕ್ಷಕ ರಾಜ ರಾವ್, “ಮನೋಜ್ ಅವರಿಗೆ ವೈದ್ಯರು, ಅರಿವಳಿಕೆ ತಜ್ಞರು ಮತ್ತು ಶ್ವಾಸಕೋಶ ತಜ್ಞರು ಸೇರಿದಂತೆ ವೈದ್ಯರ ತಂಡವು ಚಿಕಿತ್ಸೆ ನೀಡಿದೆ. ಆದರೆ ಅವರಿಗೆ ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟರು” ಎಂದಿದ್ದರು.


ಓದಿ: ಮುಂಬೈಯಲ್ಲಿ ಕೊರೊನಾ ಸೋಂಕಿತ ಶವ ಆಸ್ಪತ್ರೆಯಿಂದ ನಾಪತ್ತೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...