ಗಿರ್‌ ಅಭಯಾರಣ್ಯದಲ್ಲಿ ಸಿಂಹಗಳ ಸಂಖ್ಯೆ ಏರಿಕೆ: ಅಭಿನಂಧನೆ ಸಲ್ಲಿಸಿದ ಮೋದಿ

ಗುಜರಾತಿನ ಸೌರಾಷ್ಟ್ರದ ಗಿರ್ ಅಭಯಾರಣ್ಯದಲ್ಲಿ ಏಷಿಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಇದಕ್ಕಾಗಿ ಕೆಲಸ ಮಾಡಿರುವ ಎಲ್ಲರಿಗೂ ಅಭಿನಂಧನೆ ಸಲ್ಲಿಸಿದ್ದಾರೆ. ಭಾರತದಲ್ಲಿ ಸಿಂಹಗಳು ಕಂಡು ಬರುವ ಒಂದೇ ಪ್ರದೇಶ ಅದಾಗಿದೆ.

ಈ ಅಭಯಾರಣ್ಯದಲ್ಲಿ ಸಿಂಹಗಳ ಸಂಖ್ಯೆ 29% ಹೆಚ್ಚಳಗೊಂಡಿದ್ದು ಒಟ್ಟು 674 ಸಿಂಹಗಳಿವೆ ಎಂದು ಗುಜರಾತ್ ಅರಣ್ಯ ಇಲಾಖೆ ಬುಧವಾರ ಹೇಳಿದೆ. ಜೂನ್ 5 ಮತ್ತು ಜೂನ್ 6 ರ ರಾತ್ರಿ ಹುಣ್ಣಿಮೆಯಲ್ಲಿ ಸಿಂಹಗಳ ಎಣಿಕೆ ಕಾರ್ಯವನ್ನು ಅರಣ್ಯ ಇಲಾಖೆ ನಡೆಸಿದೆ. 2015 ರ ಗಣತಿ ಪ್ರಕಾರ ಗಿರ್ ನಲ್ಲಿ 523 ಏಷಿಯಾಟಿಕ್ ಸಿಂಹಗಳು ಇದ್ದವು.

ಇದರ ಬಗ್ಗೆ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು “ಎರಡು ಒಳ್ಳೆಯ ಸುದ್ದಿಗಳು. ಗುಜರಾತಿನ ಗಿರ್ ಅರಣ್ಯದಲ್ಲಿ ವಾಸಿಸುವ ಭವ್ಯ ಏಷಿಯಾಟಿಕ್ ಸಿಂಹಗಳ ಸಂಖ್ಯೆ ಸುಮಾರು 29% ಹೆಚ್ಚಳಗೊಂಡಿದೆ. ಅಲ್ಲದೆ ಅಭಯಾರಣ್ಯದ ಭೂ ವಿಸ್ತೀರ್ಣ 36% ಹೆಚ್ಚಳಗೊಂಡಿದೆ. ಇಂತಹ ಅದ್ಭುತ ಕೆಲಸಕ್ಕೆ ಶ್ರಮ ವಹಿಸಿದ ಎಲ್ಲರಿಗೂ ಹಾಗೂ ಗುಜರಾತ್ ನ ನಾಗರಿಕರಿಗೂ ಅಭಿನಂದನೆಗಳು” ಎಂದು ಬರೆದಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ “ಕಳೆದ ಕೆಲವು ವರ್ಷಗಳಿಂದ ಗುಜರಾತಿನಲ್ಲಿ ಸಿಂಹಗಳ ಸಂಖ್ಯೆ ಏರುಗತಿಯಲ್ಲಿ ಇದೆ. ಸಮುದಾಯ ಶ್ರಮ, ತಂತ್ರಜ್ಞಾನದ ಬಳಕೆ, ವನ್ಯಜೀವಿಗಳ ಆರೋಗ್ಯ ಸೇವೆ, ಮನುಷ್ಯ-ಸಿಂಹಗಳ ಘರ್ಷಣೆಯನ್ನು ತಡೆಯಲು ಸರಿಯಾದ ಕ್ರಮಗಳಿಂದ ಇದು ಸಾಧ್ಯವಾಗಿದೆ. ಈ ಒಳ್ಳೆಯ ಬೆಳವಣಿಗೆ ಮುಂದುವರೆಯುವ ಭರವಸೆ ಇದೆ” ಎಂದು ಕೂಡ ಅವರು ಬರೆದಿದ್ದಾರೆ.

1965 ರಲ್ಲಿ ಸೌರಾಷ್ಟ್ರದ ಗಿರ್ ಅರಣ್ಯದ 1412.21 ಚದರ ಕಿ.ಮಿ. ಅನ್ನು ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಲಾಗಿತ್ತು.


ಓದಿ: ಫ್ಯಾಕ್ಟ್ ಚೆಕಿಂಗ್‌ ಮಾಡಲು ಏಜೆನ್ಸಿಗಳಿಗೆ ಟೆಂಡರ್‌ ಕರೆದ ಕೇಂದ್ರ ಸರ್ಕಾರ


 

 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here