Homeಮುಖಪುಟಮಾಸ್ಟರ್‌ ಡಿಗ್ರಿ, ಪಿ.ಎಚ್.ಡಿ.ಗೆ ಬೆಲೆ ಇಲ್ಲ: ತಾಲಿಬಾನಿನ ನೂತನ ಶಿಕ್ಷಣ ಸಚಿವ ಹೇಳಿಕೆ

ಮಾಸ್ಟರ್‌ ಡಿಗ್ರಿ, ಪಿ.ಎಚ್.ಡಿ.ಗೆ ಬೆಲೆ ಇಲ್ಲ: ತಾಲಿಬಾನಿನ ನೂತನ ಶಿಕ್ಷಣ ಸಚಿವ ಹೇಳಿಕೆ

- Advertisement -
- Advertisement -

ಬದಲಾವಣೆಗೆ ತೆರೆದುಕೊಂಡು, ಜಾಗತಿಕ ಮನ್ನಣೆಯನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ತಾಲಿಬಾನ್, ತನ್ನ ಮೂಲ ಸ್ವರೂಪವನ್ನು ಎಂದಿಗೂ ತಿದ್ದಿಕೊಳ್ಳುವುದಿಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಅಧಿಕಾರ ಹಿಡಿದಿರುವ ತಾಲಿಬಾನ್ ಶರಿಯಾ ಕಾನೂನುಗಳಿಗೆ ಅನುಗುಣವಾಗಿ ಆಡಳಿತ ನಡೆಸುತ್ತದೆ ಎಂದು ತಾಲಿಬಾನಿನ ಸರ್ವೋಚ್ಛ ನಾಯಕ ಹೈಬುತ್ ಉಲ್ಲಾ ಅಖುಂಡಜ್ಡಾ ಹೇಳಿಕೆ ನೀಡಿದ್ದು, ದಕ್ಷಿಣ ಏಷಿಯಾ ರಾಷ್ಟ್ರಗಳಲ್ಲಿ ಆತಂಕ ಹುಟ್ಟಿಸಿದೆ. ಹೈಬುತ್‌ ಉಲ್ಲಾನ ಹೇಳಿಕೆಯ ಮುಂದುವರಿದ ಭಾಗವಾಗಿ ನೂತನ ಶಿಕ್ಷಣ ಸಚಿವನ ಹೇಳಿಕೆ ಆತಂಕವನ್ನು ಉಂಟು ಮಾಡಿದೆ.

“ಸ್ನಾತಕೋತ್ತರ ಪದವಿಗಳು ಹಾಗೂ ಪಿ.ಡಿ.ಎಚ್. ಪದವಿಗಳಿಗೆ ಯಾವುದೇ ಬೆಲೆ ಇಲ್ಲ. ಮುಲ್ಲಾಗಳು ಹಾಗೂ ತಾಲಿಬಾನ್ ಅಧಿಕಾರದಲ್ಲಿರುವುದನ್ನು ನೋಡಿ. ಇಲ್ಲಿರುವವರು ಪಿಎಚ್ಡಿ ಮಾಡಿಲ್ಲ, ಸ್ನಾತಕೋತ್ತರ ಪದವಿ ಪಡೆದಿಲ್ಲ, ಕೊನೆಯ ಪಕ್ಷ ಹೈಸ್ಕೂಲ್ ಹಂತಕ್ಕೂ ಹೋಗಿಲ್ಲ. ಆದರೆ ಇವರೆಲ್ಲ ನಮ್ಮ ನಡುವೆ ಎತ್ತರಕ್ಕೇರಿದ್ದಾರೆ” ಎಂದು ಶಿಕ್ಷಣ ಸಚಿವ ಶೇಖ್ ಮೊಲ್ವಿ ನೂರುಲ್ಲಾ ಮುನೀರ್ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

“ಈ ಮನುಷ್ಯ ಶಿಕ್ಷಣದ ಕುರಿತು ಏಕೆ ಮಾತನಾಡುತ್ತಿದ್ದಾನೆ” ಎಂದು ಟ್ಟೀಟರ್‌ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. “ಉನ್ನತ ಶಿಕ್ಷಣಕ್ಕೆ ಯಾವುದೇ ಬೆಲೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ.

“ಶಿಕ್ಷಣ ವ್ಯವಸ್ಥೆಯ ಕುರಿತು ಇಷ್ಟು ಕೆಟ್ಟ ಅಭಿಪ್ರಾಯ ಹೊಂದಿರುವವರು ಅಧಿಕಾರಕ್ಕೆ ಬಂದಿರುವುದು ಅಫಘಾನಿಸ್ತಾನದ ಮಕ್ಕಳು ಮತ್ತು ಯುವಜನರ ದುರಂತ” ಎಂದು ಮತ್ತೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RSS, ವಿಎಚ್‌ಪಿ, ತಾಲಿಬಾನ್ ಒಂದೇ ಮನಸ್ಥಿತಿಯವು: ಸಾಹಿತಿ ಜಾವೇದ್ ಅಖ್ತರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...