ರಸಾಯನಶಾಸ್ತ್ರದಲ್ಲಿನ ಸಾಧನೆಗಾಗಿ 2024 ರ ನೊಬೆಲ್ ಪ್ರಶಸ್ತಿಯ ಅರ್ಧವನ್ನು ಡೇವಿಡ್ ಬೇಕರ್ ಅವರಿಗೆ “ಕಂಪ್ಯೂಟೇಶನಲ್ ಪ್ರೊಟೀನ್ ವಿನ್ಯಾಸಕ್ಕಾಗಿ” ಹಾಗೂ ಉಳಿದ ಅರ್ಧವನ್ನು ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ “ಭವಿಷ್ಯದ ಪ್ರೋಟೀನ್ ರಚನೆಗಾಗಿ” ‘ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್’ ಬುಧವಾರ ಜಂಟಿಯಾಗಿ ನೀಡಿತು.
‘ಪ್ರೋಟೀನ್‌ಗಳು ದೊಡ್ಡ ಹಾಗೂ ಸಂಕೀರ್ಣ ಅಣುಗಳಾಗಿವೆ; ಅದು ದೇಹದಲ್ಲಿ ಅನೇಕ ನಿರ್ಣಾಯಕ ಪಾತ್ರಗಳನ್ನು ವಹಿಸುತ್ತದೆ. ಅವು ಅಮೈನೋ ಆಮ್ಲಗಳೆಂದು ಕರೆಯಲ್ಪಡುವ ಸಣ್ಣ ಘಟಕಗಳಿಂದ ಮಾಡಲ್ಪಟ್ಟಿವೆ. ಅವುಗಳು ದೀರ್ಘ ಸರಪಳಿಗಳಲ್ಲಿ ಒಟ್ಟಿಗೆ ಜೋಡಿಸಲ್ಪಟ್ಟಿರುತ್ತವೆ. 20 ವಿವಿಧ ರೀತಿಯ ಅಮೈನೋ ಆಮ್ಲಗಳಿವೆ, ಅವು ಜೋಡಿಸಲಾದ ನಿರ್ದಿಷ್ಟ ಅನುಕ್ರಮವು ಪ್ರೋಟೀನ್‌ನ ರಚನೆ ಮತ್ತು ಕಾರ್ಯವನ್ನು ನಿರ್ಧರಿಸುತ್ತದೆ’
2003 ರಲ್ಲಿ, ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡೇವಿಡ್ ಬೇಕರ್ ಅವರು ಈ ಬ್ಲಾಕ್‌ಗಳನ್ನು ಬಳಸಿಕೊಂಡು ಬೇರೆ ಪ್ರೋಟೀನ್‌ಗಿಂತ ಭಿನ್ನವಾದ ಹೊಸ ಪ್ರೋಟೀನ್ ಅನ್ನು ವಿನ್ಯಾಸಗೊಳಿಸಲು ಯಶಸ್ವಿಯಾದರು. ಅಂದಿನಿಂದ, ಅವರ ಸಂಶೋಧನಾ ಗುಂಪು ಒಂದರ ನಂತರ ಒಂದರಂತೆ ಕಾಲ್ಪನಿಕ ಪ್ರೋಟೀನ್ ಸೃಷ್ಟಿಯನ್ನು ಉತ್ಪಾದಿಸಿದೆ.
BREAKING NEWS
The Royal Swedish Academy of Sciences has decided to award the 2024 #NobelPrize in Chemistry with one half to David Baker “for computational protein design” and the other half jointly to Demis Hassabis and John M. Jumper “for protein structure prediction.” pic.twitter.com/gYrdFFcD4T— The Nobel Prize (@NobelPrize) October 9, 2024
ಪ್ರಶಸ್ತಿ ಘೋಷಣೆ ಬಳಿಕ ಮಾತನಾಡಿರುವ ಅವರು, ಪ್ರಶಸ್ತಿಯನ್ನು ಸ್ವೀಕರಿಸಲು ತಾನು ತುಂಬಾ ಉತ್ಸುಕರಾಗಿದ್ದೇನೆ ಎಂದು ಹೇಳಿದ್ದಾರೆ.
2020 ರಲ್ಲಿ, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಜಂಪರ್ ಅವರು ಗೂಗಲ್‌ನ ‘ಡೀಪ್ ಮೈಂಡ್’ ಯೋಜನೆಯ ಭಾಗವಾಗಿ ಆಲ್ಫಾಫೋಲ್ಡ್2 ಎಂಬ ಯೈ ಮಾದರಿಯನ್ನು ಅಭಿವೃದ್ಧಿಪಡಿಸಿದರು. ಇದು ಸಂಶೋಧಕರು ಗುರುತಿಸಿರುವ ಎಲ್ಲ 200 ಮಿಲಿಯನ್ ಪ್ರೋಟೀನ್‌ಗಳ ರಚನೆಯನ್ನು ಊಹಿಸಲು ಸಾಧ್ಯವಾಯಿತು. ಡೆಮಿಸ್ ಹಸ್ಸಾಬಿಸ್ ಲಂಡನ್‌ನಲ್ಲಿ ಗೂಗಲ್ ಡೀಪ್‌ಮೈಂಡ್‌ನ ಸಿಇಒ ಆಗಿದ್ದರೆ, ಜಾನ್ ಎಂ. ಜಂಪರ್ ಡೀಪ್‌ಮೈಂಡ್‌ನಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿದ್ದಾರೆ.
ಬಹುನಿರೀಕ್ಷಿತ ನೊಬೆಲ್ ವೀಕ್ ಆರು ವಿಭಿನ್ನ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸುವಿಕೆಯನ್ನು ಮುಂದುವರಿಯುತ್ತಿರುವ ಕಾರಣ, ಸ್ಟಾಕ್‌ಹೋಮ್‌ನಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.
ಇದನ್ನೂ ಓದಿ; ರಾಹುಲ್ ಗಾಂಧಿ ಪೌರತ್ವ ವಿವಾದ: ದಾಖಲೆ ಸಲ್ಲಿಸಲು ಸುಬ್ರಮಣಿಯನ್ ಸ್ವಾಮಿಗೆ ಸಮಯಾವಕಾಶ ನೀಡಿದ ದೆಹಲಿ ಹೈಕೋರ್ಟ್


