2023ರಲ್ಲಿ ಈಶಾನ್ಯ ಭಾರತದ ಕೇವಲ 38 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯ ಮುಂದೆ ಇತ್ತೀಚೆಗೆ ಮಂಡಿಸಿದ ವರದಿಯಲ್ಲಿ ಹೇಳಿಕೊಂಡಿದೆ ಎಂದು ದಿ ಹಿಂದೂ ಮಂಗಳವಾರ ವರದಿ ಮಾಡಿದೆ. ಅದಾಗ್ಯೂ, ಈ ಅಂಕಿ ಅಂಶಗಳ ಬಗ್ಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದೆ. 2023ರ ಮೇ 3 ರಿಂದ 2023 ಡಿಸೆಂಬರ್ 31ರ ನಡುವೆ ಮಣಿಪುರ ರಾಜ್ಯವೊಂದರಲ್ಲೆ ಒಟ್ಟು 160 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರವೆ ಸಂಸತ್ತಿನಲ್ಲಿ ಮಂಡಿಸಿತ್ತು. ಈಶಾನ್ಯ ಭಾರತದಲ್ಲಿ
ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಸ್ಥಾಯಿ ಸಮಿತಿ ಮುಂದೆ ವರದಿಯನ್ನು ಮಂಡಿಸಿದ್ದು, ಅವರು ಮೇ 2023 ರಲ್ಲಿ ಮಣಿಪುರದ ಮೈತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ಸಂಭವಿಸಿದ ಜನಾಂಗೀಯ ಘರ್ಷಣೆಗಳ ಸಂಖ್ಯೆಯನ್ನು ಉಲ್ಲೇಖಿಸಲು ವಿಫಲರಾಗಿದ್ದಾರೆ. ಈ ವರೆಗೆ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 237 ಜನರನ್ನು ಕೊಲ್ಲಲ್ಪಟ್ಟಿದ್ದು, ಸುಮಾರು 59,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಂಡಿದ್ದಾರೆ. ಈಶಾನ್ಯ ಭಾರತದಲ್ಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
2014 ರಿಂದ ಈಶಾನ್ಯದಲ್ಲಿ ನಾಗರಿಕ ಹತ್ಯೆಗಳಲ್ಲಿ 82% ಕಡಿಮೆಯಾಗಿದೆ, 212 ಸಾವುಗಳು ದಾಖಲಾಗಿವೆ ಎಂದು ಮೋಹನ್ ತಮ್ಮ ಪ್ರಸ್ತುತಿಯಲ್ಲಿ ಹೇಳಿಕೊಂಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಈ ಪ್ರಸ್ತುತಿಯನ್ನು ಪ್ರತಿಪಕ್ಷದ ಸಂಸದರು ತೀವ್ರವಾಗಿ ಟೀಕಿಸಿದ್ದಾರೆ. ಸ್ಥಾಯಿ ಸಮಿತಿಯ ಭಾಗವಾಗಿರುವ ಸಂಸದರೊಬ್ಬರು ಮಾತನಾಡಿ, “ಇದು ಲಜ್ಜೆಗೆಟ್ಟ ಲೋಪವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಣಿಪುರದ ಬಗ್ಗೆ ಮಾತನಾಡದೆ ಗೃಹ ಸಚಿವಾಲಯವು ಈಶಾನ್ಯ ಭಾರತದ ಬಗ್ಗೆ ಹೇಗೆ ಹೇಳುತ್ತದೆ? ಎಂದು ಅವರು ಕೇಳಿದ್ದಾರೆ.
“ಈಶಾನ್ಯ ಭಾರತದಲ್ಲಿ 2014ರಲ್ಲಿ 824 ಹಿಂಸಾಚಾರ ಘಟನೆಗಳು ನಡೆದಿದ್ದು, 2023 ರಲ್ಲಿ ಇದು 243 ಕ್ಕೆ ಅಂದರೆ 71% ರಷ್ಟು ಕಡಿಮೆಯಾಗಿದೆ” ಎಂದು ಗೃಹ ಸಚಿವಾಲಯವು ಹೇಳಿಕೊಂಡಿದೆ. ಜೊತೆಗೆ, ಭದ್ರತಾ ಸಿಬ್ಬಂದಿಯ ಸಾವಿನಲ್ಲಿ 60% ಇಳಿಕೆಯಾಗಿದೆ ಎಂದು ಅದು ಹೇಳಿದೆ. 2014 ರಲ್ಲಿ 20 ಸಿಬ್ಬಂದಿ ಸಾವಿಗೀಡಾಗಿದ್ದು, ಈ ಸಂಖ್ಯೆ 2023 ರಲ್ಲಿ 8 ಕ್ಕೆ ಇಳಿದಿದೆ ಎಂದು ಸಚಿವಾಲಯ ಹೇಳಿಕೊಂಡಿದೆ.
ಮಹಿಳಾ ಸುರಕ್ಷತೆಗಾಗಿ ಕೇಂದ್ರ ಸರ್ಕಾರದ ಉಪಕ್ರಮಗಳು ಚರ್ಚೆಗೆ ಬಂದಾಗ, ವಿರೋಧ ಪಕ್ಷದ ಸಂಸದರು ಮಣಿಪುರದ ವಿಷಯಕ್ಕೆ ಸಂವಾದವನ್ನು ತಿರುಗಿಸಿದ್ದಾರೆ. ಕಳೆದ ವಾರವಷ್ಟೇ ಮಣಿಪುರದಲ್ಲಿ ನಡೆದ ಇಬ್ಬರು ಮಹಿಳೆಯರ ಹತ್ಯೆಯ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರು ಸಭೆಯಲ್ಲಿ ಮಾತನಾಡಿದ್ದಾರೆ ದಿ ಹಿಂದೂ ವರದಿ ಮಾಡಿದೆ.
ನವೆಂಬರ್ 7 ರಂದು, ಜಿರಿಬಾಮ್ ಜಿಲ್ಲೆಯ ಝೈರೋನ್ ಹ್ಮಾರ್ ಗ್ರಾಮದಲ್ಲಿ ಝೋಸಾಂಗ್ಕಿಮ್ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ಶಂಕಿತ ಮೈತೇಯಿ ಉಗ್ರಗಾಮಿಗಳು ಕೊಂದಿದ್ದರು ಎಂದು ವರದಿಯಾಗಿದೆ. ಮೃತರು ಹ್ಮಾರ್ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ರಿಶ್ಚಿಯನ್ ಮಿಷನರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಸ್ತ್ರಸಜ್ಜಿತ ಮೈತೇಯಿ ಗುಂಪಿನ ಅರಂಬೈ ತೆಂಗೋಲ್‌ನ ಸದಸ್ಯರು ಅವರನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅದಾಗಿ ಎರಡು ದಿನಗಳ ನಂತರ, ಬಿಷ್ಣುಪುರ್ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ಮೈತೇಯಿ ಸಮುದಾಯದ ಮಹಿಳಾ ರೈತರೊಬ್ಬರನ್ನು ಗುಂಡಿಕ್ಕಿ ಕೊಂದಿದ್ದರು. ಮೃತ ಮಹಿಳೆಯು ಇತರ ರೈತರೊಂದಿಗೆ ಸೈಟನ್ ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾಗ, ಉಗ್ರರು ಬೆಟ್ಟದ ಕಡೆಯಿಂದ ಗುಂಡಿನ ದಾಳಿ ನಡೆಸಿದ್ದರು.
ಇದನ್ನೂ ಓದಿ: FACT CHECK | ಹಿಂದೂ ಸಾಧುಗಳ ವೇಷದಲ್ಲಿ ಭಿಕ್ಷೆ ಬೇಡಿದ ಮುಸಲ್ಮಾನರು ಎಂದು ಸುಳ್ಳು ಸುದ್ದಿ ಹಬ್ಬಿದ ಮಾಧ್ಯಮಗಳು
FACT CHECK | ಹಿಂದೂ ಸಾಧುಗಳ ವೇಷದಲ್ಲಿ ಭಿಕ್ಷೆ ಬೇಡಿದ ಮುಸಲ್ಮಾನರು ಎಂದು ಸುಳ್ಳು ಸುದ್ದಿ ಹಬ್ಬಿದ ಮಾಧ್ಯಮಗಳು


