ದೇಶದ ಐಟಿ ರಾಜಧಾನಿ ಎಂದು ಹೆಸರಾಗಿರುವ ಬೆಂಗಳೂರಿನಲ್ಲಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಕೆಲಸ ಮಾಡುತ್ತಾರೆ. ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ನಗರದಲ್ಲಿ ವಾಸಿಸುವ ಅನ್ಯ ರಾಜ್ಯದ ಜನರು ಕನ್ನಡ ಕಲಿಯಬೇಕು ಎಂದು ಬಹಳಷ್ಟು ಜನರು ಪದೇಪದೆ ಒತ್ತಾಯಿಸಿದ್ದಾರೆ. ಆದರೆ. ಉತ್ತರ ಭಾರತದ ವಲಸಿಗರು ಈ ವಾದವನ್ನು ಒಪ್ಪುತ್ತಿಲ್ಲ.
ಆಟೋ ಚಾಲಕನೊಬ್ಬನಿಗೆ ಹಿಂದಿಯಲ್ಲಿ ಮಾತನಾಡುವಂತೆ ಹಿಂದಿ ಭಾಷಿಕನೊಬ್ಬ ಧಮ್ಕಿ ಹಾಕುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇದು ಮತ್ತೆ ಭಾಷಾ ಚರ್ಚೆಗೆ ನಾಂದಿ ಹಾಡಿದೆ. ವೀಡಿಯೊದಲ್ಲಿ, ಆ ವ್ಯಕ್ತಿ “ಬೆಂಗಳೂರಿನಲ್ಲಿ ಉಳಿಯಲು ಬಯಸಿದರೆ ಹಿಂದಿಯಲ್ಲಿ ಮಾತನಾಡಿ” ಎಂದು ಹೇಳುವುದನ್ನು ಕಾಣಬಹುದು. ಮತ್ತೋರ್ವ ವ್ಯಕ್ತಿ ವಾಗ್ವಾದವನ್ನು ರೆಕಾರ್ಡ್ ಮಾಡಿದ್ದಾರೆ. ಇತರರು ಹಿಂದಿ ಭಾಷಿಕನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ.
ಆಟೋ ಚಾಲಕ “ನೀವು ಬೆಂಗಳೂರಿಗೆ ಬಂದಿದ್ದೀರಿ, ನೀವು ಕನ್ನಡದಲ್ಲಿ ಮಾತನಾಡಿ; ನಾನು ಹಿಂದಿಯಲ್ಲಿ ಮಾತನಾಡುವುದಿಲ್ಲ” ಎಂದು ಪ್ರತಿಕ್ರಿಯಿಸುತ್ತಾನೆ. ವಾಗ್ವಾದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದರೂ, ಆ ವ್ಯಕ್ತಿಯ ಮಾತುಗಳು ಕನ್ನಡಿಗರಲ್ಲಿ ಆಕ್ರೋಶವನ್ನು ಹುಟ್ಟುಹಾಕಿವೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊ 537.6K ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕಾಮೆಂಟ್ ಮಾಡಿದ್ದಾರೆ.
ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. pic.twitter.com/sKBlGmbdX0
— ವಿನಯ್. ಎಸ್. ರೆಡ್ಡಿ (@Vinayreddy71) April 18, 2025
“ಹಿಂದಿಯೊಂದಿಗೆ ದುರಹಂಕಾರ ಮತ್ತು ದ್ವೇಷ ಬರುತ್ತದೆ! ಇತರ ಭಾಷೆ ಮಾತನಾಡುವವರನ್ನು ತಮ್ಮದೇ ಭಾಷೆಯಲ್ಲಿ ಮಾತನಾಡಲು ಕೇಳುವಷ್ಟು ಧೈರ್ಯ ಬೇರೆ ಯಾವುದೇ ಭಾಷೆ ಮಾತನಾಡುವವರಲ್ಲಿ ಇಲ್ಲ. ಹೊಂದಿಕೊಳ್ಳುವಿಕೆ ಯಾವುದೇ ಭಾಷೆಯ ಸ್ವಭಾವವಾಗಿರಬೇಕು. ಆದರೆ, ಹಿಂದಿ ಇತರರನ್ನು ಆವರಿಸಲು ಮಾತ್ರ ತಿಳಿದಿದೆ” ಎಂದು ಎಕ್ಸ್ ಬಳಕೆದಾರರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
“ಇತ್ತೀಚೆಗೆ ನಾನು ಮನೆಯಂತಹ ಸಣ್ಣ ಹೋಟೆಲ್‌ನಲ್ಲಿ ಉಪಾಹಾರ ಖರೀದಿಸಲು ಹೋಗಿದ್ದೆ, ನನ್ನ 7 ತಿಂಗಳ ಮಗುವನ್ನು ಕರೆದುಕೊಂಡು ಹೋಗಿದ್ದೆ. ಅಂಗಡಿಯ ಮಹಿಳೆ ನನ್ನ ಮಗುವಿನೊಂದಿಗೆ ಆಟವಾಡಿದಳು, ನಂತರ ಅದು ‘ತಮಾಷೆಗೆ’ ಹೊರಬಂದಿತು. ಅವಳು ನನ್ನ ಚಿಕ್ಕ ಮಗುವಿಗೆ, ‘ನೀನು ಕನ್ನಡ ಮಾತ್ರ ಮಾತನಾಡಬೇಕು’ ಎಂದು ಹೇಳಿದಳು. ಅವರು ಚಿಕ್ಕ ಮಗುವನ್ನು ಸಹ ಬಿಡುವುದಿಲ್ಲ” ಹಿಂದಿ ಭಾಷಿಕನೊಬ್ಬ ಪ್ರತಿಕ್ರಿಯಿಸಿದ್ದಾನೆ.
“ನಾನು ಕನ್ನಡ ಪರ ಗೂಂಡಾಗಿರಿಯನ್ನು ಬೆಂಬಲಿಸುವುದಿಲ್ಲ. ಆದರೆ, ವೀಡಿಯೊದಲ್ಲಿರುವ ಹಿಂದಿ ವ್ಯಕ್ತಿ ಬೆಲ್ಟ್ ಚಿಕಿತ್ಸೆಗೆ ಅರ್ಹ, ಅವನು ಬೇರೆಡೆಯಿಂದ ಇಲ್ಲಿಗೆ ಬಂದಿದ್ದಾನೆ ಮತ್ತು ಸ್ಥಳೀಯರು ತನ್ನ ಭಾಷೆಯನ್ನು ಮಾತನಾಡಬೇಕೆಂದು ಅವನು ನಿರೀಕ್ಷಿಸುತ್ತಿದ್ದಾನೆಯೇ” ಎಂದು ಪ್ರಶ್ನಿಸಿದ್ದಾರೆ.
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣ: ಆರೋಪ ಸಾಬೀತಾದರೆ ಕಠಿಣ ಕ್ರಮ; ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್


