Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ. ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

- Advertisement -
- Advertisement -

ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ. ಪ್ರಸ್ತುತ ಭಾರತದ ಸ್ಥಿತಿಯ ಬಗ್ಗೆ ಎಚ್. ಎಸ್. ದೊರೆಸ್ವಾಮಿಯವರು ಹೀಗೆ ಬರೆಯುತ್ತಾರೆ.

ಅಂದು ದೇಶದ ಸ್ವಾತಂತ್ರಕ್ಕಾಗಿ ದುಡಿದ ಕ್ರಾಂತಿವೀರರು ಇಂದಿನ ಯುವಕರ ಹೀರೋಗಳಾಗಲಿ ಎಂದು ದಿಶಾಭಾರತ್ ಕೈಗೊಂಡಿರುವ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಫೇಸ್‌ಬುಕ್‌ನಲ್ಲಿ ದಿಶಾಭಾರತ್ ಪದಾಧಿಕಾರಿ ಗೋಖಲೆ ಉಪನ್ಯಾಸ ಮಾಡಿದರೆಂದು ಪ್ರಜಾವಾಣಿ ಪ್ರಕಟಿಸಿದೆ. ಬ್ರಿಟಿಷರನ್ನು ಮಣಿಸಲು ಶ್ಯಾಮಜಿ ಕೆ ವರ್ಮ ಯುವಕರನ್ನು ಲಂಡನ್ನಿಗೆ ಕಳಿಸಿ ಶಿಕ್ಷಣ ಕೊಡಿಸಿದರು. ಸಾವರ್ಕರ್ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿದರು. ಮದನ್‌ಲಾಲ್ ಡಿಂಗ್ರಾ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆಗೈದರು.

ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸೇಡುತೀರಿಸಿಕೊಳ್ಳಲು ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್ ಮುಂತಾದವರು ಮುಂದಾದರು. ಭಗತ್‌ಸಿಂಗ್ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದು ಬ್ರಿಟಿಷ್ ಅಧಿಕಾರಿಯೊಬ್ಬ ಸತ್ತ. ಭಗತ್‌ಸಿಂಗ್ ಮತ್ತು ಅವನ ಇಬ್ಬರು ಸಹಚರರನ್ನು ಬ್ರಿಟಿಷರು ಗಲ್ಲಿಗೇರಿಸಿದರು.

ಚಂದ್ರಶೇಖರ್ ಅಜಾದ್, ಜಲಿಯಾಲಾಲಾಬಾಗ್ ಪೊದೆಯಲ್ಲಿ ಅಡಗಿಕೊಂಡಿದ್ದಾಗ ಬ್ರಿಟಿಷ್ ಸೈನಿಕರ ಗುಂಡಿಗೆ ಬಲಿಯಾದರು. ಇವರೆಲ್ಲರೂ ದೇಶಭಕ್ತರು ಎಂಬುದರಲ್ಲಿ ಎರಡು ಮಾತಿಲ್ಲ. ಸಾರ್ವಕರ್ ಅವರು ಕ್ರಾಂತಿಕಾರರಾಗಿದ್ದು ಮಾಂಡಲೆ ಸೆರೆಮನೆಯಲ್ಲಿ ಕರಿನೀರಿನ ಶಿಕ್ಷೆ ಅನುಭವಿಸುತ್ತಿದ್ದವರು. ಹಠಾತ್ತನೆ ಬ್ರಿಟಿಷರ ಕ್ಷಮಾಪಣೆ ಕೇಳಿ ಅವರು ಹಾಕಿದ ಕರಾರುಗಳಿಗೆ ಒಪ್ಪಿಕೊಂಡು ಸೆರೆಮನೆಯಿಂದ ಹೊರಬಿದ್ದದ್ದು ಕ್ರಾಂತಿಕಾರಿಯ ಲಕ್ಷಣವಲ್ಲದಿದ್ದರೂ ಅವರು ದೇಶಭಕ್ತರೇ. ಇರಲಿ.

ಸ್ವಾತಂತ್ರ್ಯ ಸಂಗ್ರಾಮ ಒಂದು ಮಹಾ ಸಮುದ್ರ. ಆ ಮಹಾಸುಮದ್ರದಲ್ಲಿ ಗಾಂಧಿಯವರದ್ದು ಮತ್ತು ಕಾಂಗ್ರೆಸ್ಸಿನವರದ್ದು ಸಿಂಹಪಾಲು. ಉಳಿದ ನೂರಾರು ಸಣ್ಣ ದೊಡ್ಡ ತೊರೆಗಳು ಸ್ವಾತಂತ್ರ್ಯ ಸಂಗ್ರಾಮವೆಂಬ ಮಹಾಸಮುದ್ರದಲ್ಲಿ ಲೀನವಾಗಿ ಪಾಲ್ಗೊಂಡವು. ಇವರೆಲ್ಲರ ಒಟ್ಟಿನ ಶ್ರಮದಿಂದ ಸಮರ್ಪಣ ಮನೋಭಾವದಿಂದ ಈ ಹೋರಾಟದಲ್ಲಿ ಜಯ ಲಭಿಸಿತು. ಈ ಹೋರಾಟಗಾರರು ಮಾತ್ರವಲ್ಲ ಕೊನೆಯ ಘಟ್ಟದಲ್ಲಿ ನೌಕಾದಳದ ಭಾರತೀಯ ಯೋಧರು ಬ್ರಿಟಿಷರ ಮೇಲೆ ಬಂಡಾಯ ಹೂಡಿದರು. ಆಗ ಲೇಬರ್ ಪಕ್ಷದ ನಾಯಕ ಅಟ್ಲೀ ಬ್ರಿಟಿಷ್ ಪ್ರಧಾನಿಯಾಗಿದ್ದರು.

ಅಟ್ಲೀ ಭಾರತ ಸ್ವಾತಂತ್ರ್ಯ ಘೋಷಿಸಿದಾಗ ಹಿಂದಿನ ಪ್ರಧಾನಿ ಚರ್ಚಿಲ್ ‘ಅನಾಯಾಸವಾಗಿ ಭಾರತದ ರಾಸ್ಕಲ್ಸ್ ಮತ್ತು ಸ್ಕೌಂಡ್ರೆಲ್‌ಗಳ ಕೈಲಿ ಅಧಿಕಾರ ನೀಡಿ ಹೊರಬಂದೆ’ ಎಂದು ಅಟ್ಲೀಯವರನ್ನು ಟೀಕಿಸಿದರು. ಆಗ ಅಟ್ಲೀ ‘ಭಾರತ ನೌಕಾಪಡೆ ಬಂಡಾಯ ಎದ್ದ ಮೇಲೆ ಅಲ್ಲಿ ಅಧಿಕಾರ ಮುಂದುವರೆಸುವುದು ವಿವೇಕವಲ್ಲ ಅದಕ್ಕಾಗಿ ಅಧಿಕಾರ ಹಸ್ತಾಂತರ ಮಾಡಿದೆ’ ಎಂದು ಉತ್ತರಿಸಿದರು. ಹೀಗಾಗಿ ಭಾರತೀಯ ಸೈನಿಕರೂ ಸ್ವರಾಜ್ಯ ಪ್ರಾಪ್ತಿಗೆ ಕೆಲಸ ಮಾಡಿದವರೇ.

ಇನ್ನು ಈ ಕ್ರಾಂತಿಕಾರಿಗಳ ಹೋರಾಟದ ಇತಿಹಾಸವನ್ನು ಕೆದಕೋಣ. ಕ್ರಾಂತಿಕಾರಿಗಳು ಬ್ರಿಟಿಷರ ಮೇಲೆ ಅಲ್ಲೊಂದು ಇಲ್ಲೊಂದು ಗೆರಿಲ್ಲಾ ಯುದ್ಧಗಳನ್ನು ನಡೆಸಿದರಾದರೂ ಅನೇಕ ಯುವಕರು ವಿದ್ಯಾರ್ಥಿಗಳು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರಾನ್ನಾಗಿ ಕೊಂದರೆ, ಅವರೇ ಗಂಟುಮೂಟೆ ಕಟ್ಟಿಕೊಂಡು ಬ್ರಿಟನ್‌ಗೆ ಓಡಿ ಹೋಗುತ್ತಾರೆ ಆಗ ದೇಶ ಸ್ವಾತಂತ್ರವಾಗುತ್ತದೆ, ನಮ್ಮದೇ ಆಗುತ್ತದೆ ಎಂದು ಭಾವಿಸಿದ್ದರು. ಅದರಂತೆ ನಾಲ್ಕಾರು ಬ್ರಿಟಿಷ್ ಅಧಿಕಾರಿಗಳ ಕೊಲೆಯೂ ಆಯಿತು. ಆದರೆ ಬ್ರಿಟಿಷರು ಹೆದರಿ ಓಡಿ ಹೋದರೆ? ಅಂದಿನ ಬ್ರಿಟಿಷ್ ಸರ್ಕಾರ ವಸಾಹತುಶಾಹಿ ನೀತಿಯನ್ನು ಅನುಸರಿಸಿ ಪ್ರಪಂಚದ ಅನೇಕ ರಾಷ್ಟ್ರಗಳನ್ನು ತನ್ನ ಅಡಿಯಾಳಾಗಿ ಮಾಡಿಕೊಂಡಿತ್ತು. The Sun Never Sets On The British Empire ಎಂಬುದು ಅಂದಿನ Slogan ಆಗಿತ್ತು. ಇಷ್ಟು ಪ್ರಬಲರಾದ ಇಂಗ್ಲಿಷರು ನಾಲ್ಕು ಜನ ಬ್ರಿಟಿಷ್ ಅಧಿಕಾರಿಗಳನ್ನು ಗುಂಡಿಕ್ಕಿ ಕೊಂದ ಮಾತ್ರಕ್ಕೆ ಹೆದರಿ ಹೋಗುತ್ತಾರೆ ಎಂದು ಆ ಕ್ರಾಂತಿಕಾರಿ ಯುವಕರು ಭ್ರಮಾಧೀನರಾದದ್ದು ಒಂದು ದುರಂತವೇ ಸರಿ.

ಈ ಕ್ರಾಂತಿಕಾರಿಗಳ ಅವಿವೇಕ ಯಾವ ಮಟ್ಟ ಮುಟ್ಟಿತು ಅಂದರೆ ಓಬ್ಬ ಕೈಗಾರಿಕೋದ್ಯಮಿಯ ಪುತ್ರ ಕೆಲ ಬ್ರಿಟಿಷ್ ಅಧಿಕಾರಿಗಳನ್ನು ಚಹಾಪಾನಕ್ಕೆ ಆಹ್ವಾನಿಸಿದ. ಆಹ್ವಾನಿತರೆಲ್ಲ ಬಂದು ಚಹಾಪಾನದಲ್ಲಿ ಪಾಲ್ಗೊಂಡರು. ಆಗ ಆ ಯುವಕ ಹಠಾತ್ತಾಗಿ ಬಂದೂಕು ತೆಗೆದು ಇಬ್ಬರು ಆಹ್ವಾನಿತ ಅಧಿಕಾರಿಗಳನ್ನು ಕೊಂದು ಹಾಕಿದ.

ಈ ಘಟನೆಯನ್ನು ತಿಳಿದುಕೊಂಡ ಮಹಾತ್ಮಾಗಾಂಧಿ, “ಚಹಾ ಪಾನಕ್ಕೆಂದು ಆಹ್ವಾನಿಸಿ ಅವರನ್ನು ಕೊಲೆ ಮಾಡಿದ್ದು ಹೀನಾಯ ಕೃತ್ಯ. ಅದರ ಬದಲು ಅವರ ಕೈಗೂ ಒಂದೊಂದು ಬಂದೂಕ ಕೊಟ್ಟು ಈ ಯುವಕ ಹೋರಾಟ ಮಾಡಿದ್ದರೆ ನಾನು ಅವನನ್ನು ಮೆಚ್ಚಿಕೊಳ್ಳುತ್ತಿದೆ” ಎಂದರು. ಇದು ಕ್ರಾಂತಿಕಾರಿ ಹುಡುಗರ ಇತಿಹಾಸ.

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ.

,

ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

ಈ ಸಂದರ್ಭದಲ್ಲಿ ಹಿಂದೂ ಮತಾಂಧ ಸಂಸ್ಥೆಗಳು, ಆರ್‌ಎಸ್‌ಎಸ್, ಬಿಜೆಪಿಗಳು ಈ ಸೆಕ್ಯುಲರ್ ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಯುವಕರಿಗೆ ಹಿಂದಿನ ಕ್ರಾಂತಿವೀರರನ್ನು ನಿಮ್ಮ ಆದರ್ಶವಾಗಿ ಮಾಡಿಕೊಳ್ಳಿರಿ ಎಂದು ಬೋಧಿಸುತ್ತಾರೆ ಮತಾಂಧ ಗೋಖಲೆ ಅವರು.

ಆಗ ಆ ಕ್ರಾಂತಿವೀರರು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಸಂಚು ಮಾಡಿದರು. ಈಗ ಮತಾಂಧ ಗೋಖಲೆಯವರು ಸಹಜವಾಗಿ ಹಿಂದು ಮತಾಂಧತೆಯನ್ನು ಒಪ್ಪದ ಜನರ ಮೇಲೆ ಉಗ್ರದಾಳಿ ಮಾಡಿ ಎಂದು ಯುವಕರನ್ನು ಬಾಲಿಷ ಭಾಷೆಯಲ್ಲಿ ಪ್ರಚೋದನೆ ಮಾಡಲು ತೊಡಗಿದ್ದಾರೆ. ಇವರನ್ನು ಕೂಡಲೇ ಬಂಧಿಸಿ ಖಟ್ಳೆ ಹೂಡಬೇಕು.

ಬ್ರಿಟಿಷರ ಕಾಲದಲ್ಲಿ ಆ ಯುವಕರನ್ನು ಪ್ರಚೋದನೆ ಮಾಡಿ ಅವರ ಕೈಲಿ ದುಷ್ಕೃತ್ಯ ಮಾಡಿಸಿದ್ದನ್ನು ಅಲ್ಲಿಗೆ ಸಮಾಪ್ತಿಗೊಳಿಸಿ ಹಿಂದುತ್ವ ಪ್ರತಿಪಾದನೆಯ ಭರದಲ್ಲಿ ಭಾರತದಲ್ಲಿ ಅಶಾಂತಿ ಉಂಟು ಮಾಡಿ ಸಾಲ್ಗೊಲೆಗೆ ಪ್ರಚೋದನೆ ನೀಡುವ ಅಮಾನುಷ ಬರ್ಬರ ನೀತಿಯನ್ನು ಗೋಖಲೆಯಂತಹ ತಲೆಕೆಟ್ಟ ಹಿಂದು ಮತಾಂಧ ಮಾಡಬಯಸಿದ್ದಾರೇನೋ ಎಂಬ ಆತಂಕ ನನ್ನ ಮನಸ್ಸನ್ನು ಆವರಿಸಿದೆ. ಅಂಥ ಮನಸ್ಸುಗಳಿಗೆ ದೇವರು ಶ್ರೀರಾಮ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಮೋದಿ, ಷಾಗಳ ಸರ್ಕಾರ ಹಿಂದುತ್ವ ಪ್ರತಿಪಾದಕರ ಮೇಟಿಯಾಗಿದೆ. ಆದರೆ ಅವರ ಕಣ್ಮುಂದೆಯೇ ಯುವಕರನ್ನು ಹಿಂಸಾವೃತ್ತಿಗೆ ಪ್ರಚೋದಿಸುವ ಭಾಷಣಗಳು ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವ ನೀತಿಯನ್ನು ಪಾಲಿಸದಿದ್ದರೆ ಅವರು ಭಾರತೀಯರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸರ್ಕಾರ ಕೆಲ ಮತೀಯ ವಿಷ ಹರಡುವ ದುಷ್ಟ ಶಕ್ತಿಗಳನ್ನು ತಮ್ಮ ಸಂಪುಟದ ಮಂತ್ರಿಗಳನ್ನಾಗಿ, ಎಂಪಿಗಳನ್ನಾಗಿ, ರಾಜ್ಯಗಳ ಮೇಲ್ಮನೆ ಸದಸ್ಯರಾಗಿ ನೇಮಕ ಮಾಡುತ್ತಿದ್ದಾರೆ. ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ.

-ಎಚ್.ಎಸ್. ದೊರೆಸ್ವಾಮಿ


ಇದನ್ನೂ ಓದಿ: ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...