Homeಮುಖಪುಟವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ಅಂಬೇಡ್ಕರ್ ಕುರಿತು 1,39,836 ಕನ್ನಡಿಗರು ಹುಡುಕಿದ್ದಾರೆ ಎಂದು ವಿಕಿಪೀಡಿಯಾ ತಿಳಿಸಿದೆ.

- Advertisement -
- Advertisement -

ಗೂಗಲ್‌ನಲ್ಲಿ ಯಾವುದೇ ವಿಷಯ, ವ್ಯಕ್ತಿ, ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಬಯಸುವವರು ಆಧರಿಸಿರುವುದು ವಿಕಿಪೀಡಿಯಾವನ್ನು. ಅದು ಜಾಗತಿಕವಾಗಿ ಇಂಟರ್ನೆಟ್ ಬಳಕೆದಾರರ ಕುರಿತಂತೆ ದತ್ತಾಂಶ ವಿಶ್ಲೇಷಣೆ ನಡೆಸಿ ಕುತೂಹಲಕಾರಿ ವಿಷಯಗಳನ್ನು ಹೊರಗೆಡವಿದೆ. ಅದು ಜಾಗತಿಕವಾಗಿ ಹೆಚ್ಚು ಹುಡುಕಾಟ ನಡೆಸಿದ ವಿಷಯ, ಭಾಷೆ, ಜನಸಂಖ್ಯೆ, ದೇಶಗಳ ಕುರಿತ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಕನ್ನಡ ಭಾಷೆಯ ಹುಡುಕಾಟದಲ್ಲಿ ಡಾ. ಅಂಬೇಡ್ಕರ್ ಕುರಿತಂತೆ ಹೆಚ್ಚಿನ ಹುಡುಕಾಟಗಳು ನಡೆದಿವೆ ಎಂದು ಅದರ ದತ್ತಾಂಶ ತೋರಿಸುತ್ತದೆ.

ಅಸ್ಸಾಮೀಗುರು ಕೋವಿಡ್‌19 ಅಂತಲೂ, ಬಂಗಾಳಿ ಭಾಷಿಗರು ಬಾಂಗ್ಲಾದೇಶದ ಬಗ್ಗೆಯೂ, ಹಿಂದಿ ಭಾಷಿಕರು ಕೊರೊನಾ ವೈರಸ್ ಬಗ್ಗೆ, ತಮಿಳರು ಕೆ.ಕಾಮರಾಜ್‌ ಬಗ್ಗೆಯೂ ಹುಡುಕಿದರೆ ಕನ್ನಡಿಗರು ಡಾ.ಬಿ.ಆರ್ ಅಂಬೇಡ್ಕರ್‌ರವರ ಹುಡುಕುವ ಮೂಲಕ ಗಮನ ಸೆಳೆದಿದ್ದಾರೆ.

ಮರಾಠಿಗರು ಶಿವಾಜಿ ಬಗ್ಗೆಯೂ, ಪಂಜಾಬಿಗರು ಗುರು ಗ್ರಂಥ ಸಾಹೇಬ್ ಬಗ್ಗೆ, ಮಲೆಯಾಳಿಗರು ವೈಕ್ಕಂ ಮಹಮ್ಮದ್ ಬಶೀರ್ ಬಗ್ಗೆ ಮತ್ತು ಒರಿಯನ್ನರು ಫಕೀರ್ ಮೋಹನ್ ಸೆನಪತಿ ಬಗ್ಗೆ ಹುಡುಕಿದ್ದಾರೆ ಎಂದು ವಿಕಿಪೀಡಿಯಾ ತಿಳಿಸಿದೆ.

ತೆಲುಗು ಭಾಷಿಕರು ಕೋಳಿ ಪಂದ್ಯ ನಡೆಸಲು ಹೇಗೆ ಕೋಳಿಗಳನ್ನ ಸಾಕಬೇಕು ಎಂಬುದರ ಬಗ್ಗೆ ಹೆಚ್ಚು ಹುಡುಕಿದ್ದಾರೆ.

ಕನ್ನಡ ಝೀ ಕನ್ನಡ ಚಾನೆಲ್‌ನಲ್ಲಿ ಡಾ.ಅಂಬೇಡ್ಕರರ ಜೀವನ ಚರಿತ್ರೆ ಕುರಿತ ‘ಮಹಾನಾಯಕ’ ಎಂಬ ಧಾರಾವಾಹಿ ಬಿಡುಗಡೆಯಾಗಿದ್ದು ಬಹಳಷ್ಟು ಜನರ ಮೆಚ್ಚುಗೆ ಗಳಿಸಿದೆ. ಧಾರವಾಹಿಯ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದ್ದು ಹಲವಾರು ಜನ ಧಾರವಾಹಿಗಾಗಿ ಕಾದು ಕುಳಿತಿದ್ದಾರೆ. ಹಲವು ಗ್ರಾಮಗಳಲ್ಲಿ ಮಹಾನಾಯಕ ಧಾರವಾಹಿಯಲ್ಲಿ ಬಾಲನಟನಾಗಿ ಅಂಬೇಡ್ಕರ್ ಪಾತ್ರ ವಹಿಸಿರುವ ಆಯುದ್ ಬಾನುಶಾಲಿ ಎಂಬ ಬಾಲಕನ ಪೋಸ್ಟರ್ ಕಟೌಟ್‌ ಹಾಕಿ ಸಂಭ್ರಮಿಸಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಧಾರವಾಹಿ ಇದಾಗಿದ್ದು, ಈ ಹಿನ್ನೆಲೆಯಲ್ಲಿಯೂ ಹಲವು ಕನ್ನಡಿಗರು ಅಂಬೇಡ್ಕರ್ ಕುರಿತು ವಿಕಿಪೀಡಿಯಾದಲ್ಲಿ ಹುಡುಕಿರುವ ಸಾಧ್ಯತೆಯಿದೆ.

ಅಂಬೇಡ್ಕರ್ ಕುರಿತು 1,39,836 ಕನ್ನಡಿಗರು ಹುಡುಕಿದ್ದಾರೆ ಎಂದು ವಿಕಿಪೀಡಿಯಾ ತಿಳಿಸಿದೆ.

ಭಾರತೀಯ ಅಂತರ್ಜಾಲ ಬಳಕೆದಾರರಿಗೆ ಸಂಬಂಧಿಸಿದಂತೆ ಕೆಲವು ಸ್ವಾರಸ್ಯಕರ ವಿಷಯಗಳನ್ನು ಲೈವ್‌ ಮಿಂಟ್‌ ಪತ್ರಿಕೆ ಪ್ರಕಟಿಸಿದೆ. ಭಾರತದಲ್ಲಿ 10 ದಶಲಕ್ಷಕ್ಕೂ ಹೆಚ್ಚು ಸ್ಥಳೀಯ ಭಾಷಿಕರನ್ನು ಹೊಂದಿರುವ ಮತ್ತು ತಮ್ಮದೇ ಆದ ವಿಕಿಪೀಡಿಯಾ ಆವೃತ್ತಿಯನ್ನು ಹೊಂದಿರುವ ಎಲ್ಲಾ 14 ಭಾಷೆಗಳನ್ನು ಈ ವಿಶ್ಲೇಷಣೆಯಲ್ಲಿ ಪರಿಗಣಿಸಲಾಗಿದೆ.

ಭಾರತೀಯ ಭಾಷೆಗಳು ವೈವಿಧ್ಯಮಯ ಉನ್ನತ ವಿಕಿಪೀಡಿಯ ಲೇಖನಗಳನ್ನು ಹೊಂದಿದ್ದವು. ಅವುಗಳಲ್ಲಿ ಭಾಷಾವಾರು ಹುಡುಕಾಟ ನಡೆಸಿರುವ ವಿಷಯಗಳ ಕುರಿತ ದತ್ತಾಂಶ ಇಲ್ಲಿದೆ.

ಈ ವರ್ಷ, ಇಲ್ಲಿಯವರೆಗೆ, ಭಾರತೀಯ ಅಂತರ್ಜಾಲ ಬಳಕೆದಾರರು ವಿಕಿಪೀಡಿಯಾದ ಪುಟಗಳನ್ನು ತಮ್ಮ ಸ್ಥಳೀಯ ಭಾಷೆಗಳಲ್ಲಿ ಸುಮಾರು 500 ದಶಲಕ್ಷಕ್ಕೂ ಹೆಚ್ಚು ಬಾರಿ ಬ್ರೌಸ್ ಮಾಡಿದ್ದಾರೆ.

14 ಪ್ರಮುಖ ಭಾರತೀಯ ಭಾಷೆಗಳಲ್ಲಿ 11 ಭಾಷೆಗಳಲ್ಲಿ ವಿಕಿಪೀಡಿಯ ಓದುಗರ ಸಂಖ್ಯೆ ಈ ವರ್ಷ ಗಮನಾರ್ಹವಾಗಿ ಹೆಚ್ಚಾಗಿದೆ ಎನ್ನಲಾಗಿದೆ.

ಇದರಲ್ಲಿ ಹುಡುಕಾಟದ ವಿಷಯಗಳ ವ್ಯಾಪ್ತಿಯು ಭಾಷೆಗನುಗುಣವಾಗಿ ವ್ಯಾಪಕವಾಗಿ ಬದಲಾಗಿರುವುದು ಕಂಡುಬಂದಿದೆ. ಮರಾಠಿ ಓದುಗರು ಮಹಾರಾಷ್ಟ್ರದ ಐತಿಹಾಸಿಕ ಐಕಾನ್ ಗಳ ಬಗ್ಗೆ ಸಾಕಷ್ಟು ಓದಿದ್ದರೆ, ಪಂಜಾಬಿ ಮತ್ತು ಉರ್ದು ಓದುಗರು ಧರ್ಮದ ಬಗ್ಗೆ ಹೆಚ್ಚು ಓದಿದ್ದಾರೆ.

ತಮಿಳು, ಅಸ್ಸಾಮಿ, ಒಡಿಯಾ, ಮತ್ತು ಕನ್ನಡ ಓದುಗರು ತಮ್ಮದೇ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚು ಓದುತ್ತಾರೆ. ಭೋಜ್‌ಪುರಿ ಓದುಗರು ಲೈಂಗಿಕತೆಯ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂದು ಈ ಸಮೀಕ್ಷೆಯಿಂದ ತಿಳಿದುಬಂದಿದೆ.

ಭಾರತೀಯ ಭಾಷೆಗಳಲ್ಲಿಯೇ ಅತಿಹೆಚ್ಚು ಹುಡುಕಾಟವನ್ನು ಹಿಂದಿಯಲ್ಲಿ ನಡೆಸಲಾಗಿದೆ. ಸುಮಾರು 8,53,987 ಹುಡುಕಾಟಗಳು ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ದಾಖಲಾಗಿವೆ. ಅತಿ ಕಡಿಮೆ ಹುಡುಕಾಟಗಳನ್ನು ಒಡಿಯಾ ಭಾಷೆಯಲ್ಲಿ ಸುಮಾರು 10,087 ಹುಡುಕಾಟಗಳು ಫಕೀರ್ ಮೋಹನ್ ಸೇನಪತಿ ಎಂಬುವವರ ಕುರಿತು ದಾಖಲಾಗಿವೆ.

ಉಳಿದ ಬೇರೆ ಬೇರೆ ರಾಜ್ಯಗಳಲ್ಲಿ  ಧರ್ಮ, ಸಾಹಿತ್ಯ, ಪ್ರಮುಖ ವ್ಯಕ್ತಿಗಳು ಮುಂತಾದ ವಿಷಯಗಳ ಬಗ್ಗೆ ಹುಡುಕಾಟ ನಡೆದಿದೆ.


ಇದನ್ನೂ ಓದಿ: ದಲಿತನೊಬ್ಬ ಗ್ರಾ.ಪಂ ಮುಖ್ಯಸ್ಥನಾದುದ್ದನ್ನು ಸಹಿಸದ ಮೇಲ್ಜಾತಿಗಳು: ಗುಂಡಿಕ್ಕಿ ಕೊಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...