ಜುಲೈನಲ್ಲಿ ನಡೆದ ಪ್ರತಿಭಟನೆಯ ಭಾಗವಾಗಿ ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನ ಗೋಡೆಯ ಮೇಲೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(NTA)ಯ ಬಗ್ಗೆ “ಆಕ್ಷೇಪಾರ್ಹ” ಘೋಷಣೆಗಳನ್ನು ಬರೆದ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬರನ್ನು ವಿಶ್ವವಿದ್ಯಾಲಯ ಆರು ತಿಂಗಳ ಕಾಲ ಹೊರಹಾಕಿದೆ ಎಂದು ಸೋಮವಾರ ವರದಿಯಾಗಿದೆ. ವಿದ್ಯಾರ್ಥಿಯನ್ನು 6 ತಿಂಗಳು
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ. ಈ ಸಂಸ್ಥೆಯು, ಸ್ನಾತಕಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸಿದ 2024ರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸೇರಿದಂತೆ ಹಲವಾರು ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದೆ ಎಂದು ಆರೋಪಿಸಿ ದೇಶದಾದ್ಯಂತ ಭಾರಿ ಪ್ರತಿಭಟನೆ ನಡೆದಿತ್ತು. ವಿದ್ಯಾರ್ಥಿಯನ್ನು 6 ತಿಂಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಶ್ವವಿದ್ಯಾಲಯ ಸೋಮವಾರ ಹೊರಡಿಸಿದ ಆದೇಶದಲ್ಲಿ, ಉಚ್ಚಾಟನೆಗೆ ಒಳಗಾಗಿರುವ 22 ವರ್ಷದ ವಿದ್ಯಾರ್ಥಿಯು ತರಗತಿಗಳಿಗೆ ಹಾಜರಾಗುವುದು, ಪರೀಕ್ಷೆಗಳನ್ನು ಬರೆಯುವುದು ಅಥವಾ ಸಾಂಸ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಆರು ತಿಂಗಳವರೆಗೆ ನಿರ್ಬಂಧಿಸಿದೆ.
ಸ್ಲಾವೊನಿಕ್ ಮತ್ತು ಫಿನ್ನೊ-ಉಗ್ರಿಯನ್ ಅಧ್ಯಯನ ವಿಭಾಗದಲ್ಲಿ ರಷ್ಯನ್ ಭಾಷೆಯಲ್ಲಿ ತನ್ನ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ತನ್ನನ್ನು ಉಚ್ಚಾಟನೆ ಮಾಡಿರುವ ವಿಶ್ವವಿದ್ಯಾಲಯದ ನಿರ್ಧಾರವು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ದಿಶಾ ವಿದ್ಯಾರ್ಥಿಗಳ ಸಂಘಟನೆಯ ಕಾರ್ಯಕರ್ತರಾಗಿರುವ ವಿದ್ಯಾರ್ಥಿಯು ಕಾನೂನು ಫ್ಯಾಕಲ್ಟಿ ಬಳಿ ಗೋಡೆಯ ಮೇಲೆ ಘೋಷಣೆಗಳನ್ನು ಬರೆಯುತ್ತಿದ್ದಾಗ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಗೆ ಜುಲೈ 31 ರಂದು ಸಿಕ್ಕಿಬಿದ್ದರು. “ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ವಿರುದ್ಧದ ನಮ್ಮ ಆಂದೋಲನದ ಭಾಗವಾಗಿ, ನಾನು ವಿಶ್ವವಿದ್ಯಾಲಯದ ಗೋಡೆಯೊಂದರಲ್ಲಿ ‘SCRAP NTA’ ಎಂಬ ಪದಗಳನ್ನು ಬರೆದಿದ್ದೇನೆ” ಎಂದು ವಿದ್ಯಾರ್ಥಿ ಹೇಳಿದ್ದಾರೆ.
ವಿದ್ಯಾರ್ಥಿಯ ಸಿಕ್ಕಿಬಿದ್ದ ಅದೇ ದಿನ, ಕಾವಲುಗಾರರ ದೂರಿನ ಆಧಾರದ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 173 ರ ಅಡಿಯಲ್ಲಿ ಮಾರಿಸ್ ನಗರ ಪೊಲೀಸ್ ಠಾಣೆಯಲ್ಲಿ ಈ ವಿದ್ಯಾರ್ಥಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಸೆಕ್ಷನ್ 173 ಕಾಗ್ನೈಸಬಲ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾದರೆ ಪೊಲೀಸರು ಮ್ಯಾಜಿಸ್ಟ್ರೇಟ್‌ನಿಂದ ಆದೇಶವಿಲ್ಲದೆ ತನಿಖೆ ಮಾಡಬಹುದು ಮತ್ತು ವಾರಂಟ್ ಇಲ್ಲದೆ ಬಂಧಿಸಬಹುದಾಗಿದೆ.
ಎಫ್‌ಐಆರ್‌ನ ಪ್ರತಿಯನ್ನು ಸ್ವೀಕರಿಸಿದ ನಂತರ ವಿಶ್ವವಿದ್ಯಾಲಯವು ಆಗಸ್ಟ್ 21 ರಂದು ಅವರನ್ನು ಅಮಾನತುಗೊಳಿಸಿತ್ತು. ವಿದ್ಯಾರ್ಥಿಯ ಮೇಲೆ ಎಫ್‌ಐಆರ್ ದಾಖಲಾದ ನಂತರ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲಾಗಿತ್ತು ಎಂದು ಪ್ರೊಕ್ಟರ್ ರಜನಿ ಅಬ್ಬಿ ಮಂಗಳವಾರ ಹೇಳಿದ್ದಾರೆ. ಆದರೆ, ವಿದ್ಯಾರ್ಥಿಯು ತನ್ನ ಕಾರ್ಯಗಳಿಗಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿರಲಿಲ್ಲ ಎಂದು ಈ ಸಮಿತಿಯು ಹೇಳಿದೆ.
“ವಿಶ್ವವಿದ್ಯಾನಿಲಯದಲ್ಲಿ ಘೋಷಣೆಗಳನ್ನು ಬರೆಯಲು ಅಥವಾ ಪೋಸ್ಟರ್‌ಗಳನ್ನು ಅಂಟಿಸಲು ಗೊತ್ತುಪಡಿಸಿದ ಸ್ಥಳಗಳಿವೆ. ಘೋಷಣೆಗಳನ್ನು ಬರೆಯಲು ಅಥವಾ ಪೋಸ್ಟರ್‌ಗಳನ್ನು ಅಂಟಿಸಲು ಎಲ್ಲೆಂದರಲ್ಲಿ ಮಾಡಬಾರದು. ಅವರು ಮಾಡಿರುವ ಕೃತ್ಯವು ವಿಶ್ವವಿದ್ಯಾನಿಲಯದ ವಿರೂಪಗೊಳಿಸುವ ಕಾಯಿದೆಗಳ ಉಲ್ಲಂಘನೆಯಾಗಿದೆ” ಎಂದು ತನಿಖಾ ಸಮಿತಿ ಹೇಳಿದೆ.
ನವೆಂಬರ್ 6 ರಂದು ನಡೆದ ಸಮಿತಿಯ ಸಭೆಯಲ್ಲಿ ವಿದ್ಯಾರ್ಥಿಯು ಘೋಷಣೆಗಳನ್ನು ಬರೆಯುವುದನ್ನು ಒಪ್ಪಿಕೊಂಡಿದ್ದು, ತಮ್ಮ ದಿಶಾ ಸಂಘಟನೆಯ “ಕಾರ್ಯತಂತ್ರದ ಯೋಜನೆ” ಭಾಗವಾಗಿ ಇದನ್ನು ಮಾಡಲಾಗಿತ್ತು ಎಂದು ಸಮಿತಿಯು ಸಿದ್ಧಪಡಿಸಿದ ವರದಿ ಹೇಳಿದೆ. “ಇದರ ಪರಿಣಾಮವಾಗಿ, ಕನಿಷ್ಠ ಆರು ತಿಂಗಳ ಅವಧಿಗೆ ಅವರನ್ನು ವಿಶ್ವವಿದ್ಯಾನಿಲಯದಿಂದ ಹೊರಹಾಕಬೇಕು ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ” ಎಂದು ಅದು ಹೇಳಿದೆ.
ಇದನ್ನೂ ಓದಿ: FACT CHECK : ಮುಂಬೈ ಸಿದ್ದಿ ವಿನಾಯಕ ದೇವಸ್ಥಾನದ ಜಾಗ ತನ್ನದೆಂದ ವಕ್ಫ್ ಬೋರ್ಡ್..ವೈರಲ್ ಸುದ್ದಿಯ ಅಸಲಿಯತ್ತೇನು?
FACT CHECK : ಮುಂಬೈ ಸಿದ್ದಿ ವಿನಾಯಕ ದೇವಸ್ಥಾನದ ಜಾಗ ತನ್ನದೆಂದ ವಕ್ಫ್ ಬೋರ್ಡ್..ವೈರಲ್ ಸುದ್ದಿಯ ಅಸಲಿಯತ್ತೇನು?


