Homeಮುಖಪುಟಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

ಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

- Advertisement -
- Advertisement -

ಜೀವನ ಕಲೆಗಳು ಅಂಕಣ – 6

ವ್ಯಕ್ತಿತ್ವ ವಿಕಸನ –5 ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ) ಬಗ್ಗೆ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಇದೇ ರೀತಿಯ, ಆದರೆ ಅಧಿಕ ವೈಜ್ಞಾನಿಕ ಪದ್ಧತಿ ಎನಿಸಿಕೊಂಡಿರುವುದು ಬಿಗ್-5 (ಒ.ಸಿ.ಇ.ಎ.ಎನ್.) ಫೈವ್ ಫ್ಯಾಕ್ಟರ್ ಮಾಡೆಲ್. ಇದೂ ಸಹ ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಹಲವಾರು ಕಂಪನಿಗಳು ತಮ್ಮ ನೌಕರಿ ಆಕಾಂಕ್ಷಿ ಅಭ್ಯರ್ಥಿಗಳನ್ನು ಈ ಒರೆಗಲ್ಲಿಗೆ ಹಚ್ಚಿ ತಮ್ಮ ಆಯ್ಕೆ ಮಾಡಿಕೊಳ್ಳುತ್ತಾರೆ.

ಗ್ರೀಕ್ ತತ್ವಜ್ಞಾನಿ ಮತ್ತು ವೈದ್ಯಕೀಯ ಶಾಸ್ತ್ರದ ಪಿತಾಮಹ ಎಂದೇ ಖ್ಯಾತಿ ಪಡೆದ ಹಿಪ್ಪೊಕ್ರೇಟಿಸ್ II ಅವರ ತತ್ವವಾದ ಆಧರಿಸಿ, 1884ರಲ್ಲಿ ಸರ್ ಫ್ರಾನ್ಸಿಸ್ ಗಾಲ್ಟನ್ ಅವರ ವಾದವನ್ನು ಒರೆಹಚ್ಚಿದ ನಂತರ, 1936ರಲ್ಲಿ ಗೊರ್ಡನ್ ಆಲ್ಪೊರ್ಟ್ ಮತ್ತು ಎಸ್. ಒಡ್ಬರ್ಟ್ ಸೇರಿ ವ್ಯಕ್ತಿತ್ವದ ಬಗ್ಗೆ ಸುಮಾರು 4,500 ಗುಣಸೂಚಕಗಳ ಪಟ್ಟಿ ತಯಾರಿಸಿದರು. ಮುಂದೆ ಇನ್ನೂ ಹಲವಾರು ಸಂಶೋಧಕರು/ಶಾಸ್ತ್ರಜ್ಞರು ಇದಕ್ಕೆ ತಮ್ಮ ಮೌಲ್ಯವನ್ನು ಸೇರಿಸಿ, ಈಗಿರುವ ರೂಪಕ್ಕೆ ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ 2016ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಂಬ್ರಿಜ್ ಎನಲಿಟಿಕಾ ಎಂಬ ಸಂಸ್ಥೆ ಇದನ್ನು ಬಳಸಿ ವಿವಾದ ಎಬ್ಬಿಸಿತ್ತು.

ನಿಮಗೂ ನಿಮ್ಮ OCEAN ಸೂಚ್ಯಾಂಕ ತಿಳಿಯಲು ಇಷ್ಟವಿದ್ದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ಕಿಸಿ:

ಈ ಮಾದರಿಯಲ್ಲಿ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಐದು ವಿಧವಾಗಿ ವಿಂಗಡಿಸಿ ಅದರ ಆಧಾರದ ಮೇಲೆ ಅವರು ಒಂಟಿಯಾಗಿ ಮತ್ತು ಒಂದು ತಂಡದ ಸದಸ್ಯರಾಗಿ ಹೇಗೆ ಬೇರೆ ಬೇರೆ ಪಾತ್ರವನ್ನು ನಿರ್ವಹಿಸಬಲ್ಲರು ಎಂಬುದನ್ನು ಅರಿತುಕೊಳ್ಳಬಹುದು. ಈ ಐದು ಗುಣಲಕ್ಷಣಗಳು ಹೀಗಿವೆ.

ಓಪನ್ನೆಸ್ ಟು ಎಕ್ಸ್ಪಿರಿಯೆನ್ಸ್ (Openness to Experience): ಅಂದರೆ ಹೊಸ ಅನುಭವಕ್ಕೆ ಸಿದ್ಧರೇ ಎಂಬ ಪ್ರಶ್ನೆ. ಇದರಲ್ಲಿ ವ್ಯಕ್ತಿಯಲ್ಲಿ ಎಷ್ಟು ಹೊಸತನ ಹುಡುಕುವ, ತಿಳಿಯುವ ಕುತೂಹಲ ಇದೆಯೇ ಅಥವಾ ಹೇಳಿದಷ್ಟು ಮಾಡುವ/ಜಾಗರೂಕತೆ ಮಾತ್ರ ಇದೆಯೇ ಎಂಬುದನ್ನು ಅರಿಯುವ ಪ್ರಯತ್ನ.

ಕಾನ್ಸೆನ್ಷಿಯಸ್ನೆಸ್(Conscientiousness): ಅಂದರೆ ಇವರ ಆತ್ಮಸಾಕ್ಷಿ/ಕರ್ತವ್ಯಜ್ಞಾನ ಹೇಗಿದೆ, ವ್ಯಕ್ತಿ ಸಮರ್ಥನೋ, ವ್ಯವಸ್ಥಿತನೋ ಅಥವಾ ಉದಾಸೀನ ಮನೋಭಾವನೋ ಎಂದು ಅರಿಯುವ ಪ್ರಯತ್ನ.

ಎಕ್ಸ್ಟ್ರಾವರ್ಷನ್ (Extraversion): ಅಂದರೆ ಇವರ ವ್ಯಕ್ತಿತ್ವ ಸ್ಪೂರ್ತಿಯುತ ಮತ್ತು ಬಾಹ್ಯ ಪ್ರವೃತ್ತಿಯೋ ಅಥವಾ ಏಕಾಂಗಿ ಮತ್ತು ಸಂಕೋಚದ ಸ್ವಭಾವವೋ ಎಂದು ಅರಿಯುವ ಪ್ರಯತ್ನ.

ಅಗ್ರೀಯಬಲ್ನೆಸ್(Agreeableness): ಅಂದರೆ ಒಪ್ಪಬಹುದಾದ ವ್ಯಕ್ತಿತ್ವವೇ? ಸ್ನೇಹಪರವೋ, ಬೇರೆಯವರ ಬಗ್ಗೆ ಅನುಕಂಪ ಇರುವಂತಹುದೋ ಅಥವಾ ಸ್ಪರ್ಧಾತ್ಮಕ ಮತ್ತು ನಿರ್ಲಿಪ್ತವಾದಿಯೋ ಎಂಬುದನ್ನು ಅರಿಯುವ ಪ್ರಯತ್ನ.

ನ್ಯೂರೋಟಿಸಿಸ್ಮ್(Neuroticism): ಅಂದರೆ ಇವರ ವ್ಯಕ್ತಿತ್ವ ವಿಪರೀತ ಸೂಕ್ಷ್ಮವೇದಿಯೋ ಅಥವಾ ಸುಭದ್ರ ಮತ್ತು ಆತ್ಮಸ್ಥೈರ್ಯವುಳ್ಳದ್ದೋ ಅದನ್ನು ಅರಿಯುವ ಪ್ರಯತ್ನ.

ಹೊಸ ಅನುಭವಕ್ಕೆ ಸಿದ್ದವಾದ ವ್ಯಕ್ತಿ ಸಾಮಾನ್ಯವಾಗಿ ಕಲಾಪ್ರೇಮಿ, ಸಾಹಸಪ್ರಿಯ, ಊಹಾಶಕ್ತಿಯುಳ್ಳ ಮತ್ತು ಕುತೂಹಲಶಾಲಿಯಾಗಿರುತ್ತಾರೆ. ಹೊಸದನ್ನು ಪ್ರಯತ್ನಿಸಲು ಮುಂದಾಗಿರುತ್ತಾರೆ, ಸೃಜನಾತ್ಮಕವಾಗಿರುತ್ತಾರೆ. ಮಿಕ್ಕವರಿಗಿಂತ ಅವರ ನಂಬಿಕೆ ವಿಭಿನ್ನವಾಗಿರುತ್ತದೆ. ಆದರೆ ಅತಿ ಕುತೂಹಲಕಾರಿ ನಡತೆ ನಕಾರಾತ್ಮಕ ಸೂಚಕವೂ ಆಗಿರಬಹುದು. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ಹೊಸ ಯೋಚನೆಯನ್ನು ನಾನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲೆ.

·         ನಾನು ಕಷ್ಟಕರ ಪದಗಳನ್ನು ಬಳಸುತ್ತೇನೆ.

·         ನನಗೆ ಅಮೂರ್ತದಲ್ಲಿ ಆಸಕ್ತಿ ಇಲ್ಲ (ತದ್ವಿರುದ್ಧ).

·         ನನಗೆ ಇದನ್ನು ಊಹಿಸಿಕೊಳ್ಳುವುದು ಕಷ್ಟ (ತದ್ವಿರುದ್ಧ).

ಕರ್ತವ್ಯಜ್ಞಾನಿಗಳು ತಮ್ಮ ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಇನ್ನೊಬ್ಬರ ಅಪೇಕ್ಷೆಗೆ ಅಥವಾ ಅದನ್ನು ಮೀರಿ ಕೆಲಸ ಮಾಡುತ್ತಾರೆ. ಇವರನ್ನು ಕೆಲವರು ಕಟ್ಟುನಿಟ್ಟು ಅಥವಾ ಮೊಂಡರು ಎಂದೂ ಭಾವಿಸಬಹುದು. ಹಾಗೆಯೇ ನಿಯಮ ಪಾಲನೆ ಮಾಡದವರನ್ನು ಕಾಲಕ್ಕೆ ತಕ್ಕಂತೆ ಬಗ್ಗುವವರೆಂದು ಪರಿಗಣಿಸಬಹುದು. ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ನಿಯಮಪಾಲಕರಲ್ಲದವರು ವಯಸ್ಸಾಗುತ್ತ ಬಂದಂತೆ ಕಟ್ಟುನಿಟ್ಟಾಗುತ್ತಾರೆ. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನಾನು ಸದಾ ಸಿದ್ಧ, ಸಣ್ಣ ಸಣ್ಣ ವಸ್ತುಗಳಿಗೆ ನಾನು ಗಮನ ನೀಡುತ್ತೇನೆ.

·         ನಾನು ಎಲ್ಲಾ ಕೆಲ್ಸಗಳನ್ನು ಸಮಯಸಾರಣಿ ಪ್ರಕಾರ ಮಾಡುತ್ತೇನೆ.

·         ನಾನು ನನ್ನ ವಸ್ತುಗಳನ್ನು ಚೆಲ್ಲಪಿಲ್ಲಿಯಾಗಿ ಹರಡಿರುತ್ತೇನೆ (ತದ್ವಿರುದ್ಧ).

·         ನಾನು ತೆಗೆದುಕೊಂಡ ವಸ್ತುಗಳನ್ನು ಸ್ವಸ್ಥಾನದಲ್ಲಿ ಇಡುವುದಿಲ್ಲ. (ತದ್ವಿರುದ್ಧ).

ಬಾಹ್ಯಪ್ರವೃತ್ತಿಯ ವ್ಯಕ್ತಿಗಳು ಬಹಳಷ್ಟು ಕೆಲಸದಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ. ಇವರಿಗೆ ಸ್ಪೂರ್ತಿ ಹೊರಗಿನಿಂದ ಬರುತ್ತದೆ. ಹೊರಜಗತ್ತಿನ ಒಡನಾಟದಲ್ಲಿ, ಗುಂಪಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನಾನು ಜನರ ಮಧ್ಯೆ ಇರಲು ಬಯಸುತ್ತೇನೆ.

·         ಯಾವುದೇ ಚರ್ಚೆಯ ಕೇಂದ್ರಬಿಂದುವಾಗಲು ನಾನು ಸಿದ್ಧ.

·         ನಾನು ಹೆಚ್ಚಾಗಿ ಮಾತನಾಡುವುದಿಲ್ಲ (ತದ್ವಿರುದ್ಧ).

·         ಭಾಷಣ ಮಾಡಬೇಕೆಂದರೆ ನನಗೆ ಹೆದರಿಕೆ (ತದ್ವಿರುದ್ಧ).

ಒಪ್ಪಬಹುದಾದ ವ್ಯಕ್ತಿಗಳು ಸಾಮಾಜಿಕ ಸಾಮರಸ್ಯಕ್ಕೆ ಬಹಳಷ್ಟು ಮಟ್ಟಿಗೆ ಹೊಂದಿಕೊಳ್ಳುತ್ತಾರೆ. ಸ್ವಾರ್ಥಿಗಳಲ್ಲ. ಸಹಾಯ ಮಾಡುವವರು, ಆಶಾವಾದಿಗಳು. ವ್ಯತಿರಿಕ್ತರು ಸದಾ ಜಗಳವಾಡುವವರು ಅಥವಾ ನಂಬಿಕರ್ಹರಲ್ಲ.ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ಬೇರೆಯವರ ಬಗ್ಗೆ ನನಗೆ ಅನುಕಂಪವಿದೆ.

·         ಬೇರೆಯವರಿಗಾಗಿ ನಾನು ಸಮಯ ನೀಡುತ್ತೇನೆ.

·         ಬೇರೆಯವರ ಸಮಸ್ಯೆ ಕಟ್ಟಿಕೊಂಡು ನನಗೇನಾಗಬೇಕು (ತದ್ವಿರುದ್ಧ).

·         ನಾನು ಬೇರೆಯವರನ್ನು ಅವಮಾನಿಸುತ್ತೇನೆ (ತದ್ವಿರುದ್ಧ).

ಅತಿಸೂಕ್ಷ್ಮವೇದಿಗಳು ಋಣಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಕೋಪ, ಆತಂಕ ಅಥವಾ ಖಿನ್ನತೆ, ನಿರಾಶಾವಾದಿ ಇತ್ಯಾದಿ. ಸಾಧಾರಣವಾಗಿ ಭಾವನೆಗಳ ಅಸ್ಥಿರತೆ ಅಥವಾ ತದ್ವಿರುದ್ಧದಲ್ಲಿ ಭಾವನೆಗಳ ಸ್ಥಿರತೆ ಎಂದೂ ಕರೆಯಬಹುದು. ಜೀವನದಲ್ಲಿ ಅಸಂತೃಪ್ತರು.ಮಾತನಾಡುವಾಗ ಇವರ ಬಳಕೆಯ ವಾಕ್ಯಗಳು ಹೀಗಿರಬಹುದು:

·         ನನಗೆ ಬೇಗ ಸಿಟ್ಟು ಬರುತ್ತದೆ.

·         ನನಗೆ ಎಲ್ಲದರ ಬಗ್ಗೆಯೂ ಆತಂಕವಿರುತ್ತದೆ.

·         ನಾನು ಸದಾ ಜಾಲಿಯಾಗಿರುತ್ತೇನೆ (ತದ್ವಿರುದ್ಧ).

·         ನಾನು ಯಾವಾಗಲೂ ದುಃಖಿಯಾಗಿರುವುದಿಲ್ಲ (ತದ್ವಿರುದ್ಧ).

ನೀವು ಈ ಪರೀಕ್ಷೆ ತೆಗೆದುಕೊಂಡಲ್ಲಿ ನಿಮ್ಮ ಫಲಿತಾಂಶ ಈ ರೀತಿ ಇರಬಹುದು O93-C74-E31-A96-N5. ಅದರ ವಿಶ್ಲೇಷಣೆಯನ್ನೂ ಜಾಲತಾಣದಲ್ಲಿ ತಿಳಿಯಬಹುದು. ನಿಮಗೆ ಯಾವ ರೀತಿಯ ಕೆಲಸ ಸರಿಹೊಂದುತ್ತದೆ ಎಂದು ನೀವೇ ನಿರ್ಧರಿಸಿಕೊಳ್ಳಬಹುದು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚೀನಾ ನಿರ್ಮಿತ ರೋಬೋಟ್ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿದ್ದ ಗ್ಯಾಲ್ಗೋಟಿಯಾ ವಿವಿ AI ಸಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...

ಚೆನ್ನೈನಲ್ಲಿ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಹೋರಾಟ ನಡೆಸುತ್ತಿದ್ದ ಅಂಗವಿಕಲರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ

ಚೆನ್ನೈ: ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಒತ್ತಾಯಿಸಿ ಚೆನ್ನೈನಲ್ಲಿ ಅಂಗವಿಕಲರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.  ಅಂಗವಿಕಲರು ನಡೆಸುತ್ತಿದ್ದ ಈ ಪ್ರತಿಭಟನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವಾರು ಪ್ರತಿಭಟನಾಕಾರರನ್ನು...

ರಾಜ್ಯಸಭೆ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ; ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

10 ರಾಜ್ಯಗಳಿಂದ ಖಾಲಿ ಇರುವ 37 ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ. ಆಯೋಗದ ಪ್ರಕಾರ, ಮಾರ್ಚ್ 16 ರಂದು ಬೆಳಿಗ್ಗೆ 9:00...

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮಂಗಳವಾರ ಲಕ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ...

5% ಮುಸ್ಲಿಂ ಮೀಸಲಾತಿ ಪ್ರಕ್ರಿಯೆ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಜಾತಿ ಪರಿಶೀಲನೆ ಮತ್ತು ಪ್ರಮಾಣೀಕರಣ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ (ಫೆ.17) ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಕ್ಷಣದ ಬದಲಾವಣೆಯನ್ನು ತರದಿದ್ದರೂ,...

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...