Homeಮುಖಪುಟರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ಹೊಸ ಬಾಟಲ್‌ನಲ್ಲಿ ಹಳೆ ಮದ್ಯ -ಎಚ್.ಎಸ್ ದೊರೆಸ್ವಾಮಿ

ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ಹೊಸ ಬಾಟಲ್‌ನಲ್ಲಿ ಹಳೆ ಮದ್ಯ -ಎಚ್.ಎಸ್ ದೊರೆಸ್ವಾಮಿ

ಮೇಕ್ ಇನ್ ಇಂಡಿಯಾ ಸಂದರ್ಭದಲ್ಲಿ ಮಾಡಿದಂತೆ ಕೇವಲ ಘೋಷಣೆಗಳಿಗೆ ಸೀಮಿತಗೊಳಿಸಿ, ಆತ್ಮಘಾತುಕತನವನ್ನು ಮಾಡಲಾಗುತ್ತದೆ ಎಂಬ ಬಗ್ಗೆ ಸಂದೇಹವೇನೂ ಉಳಿದಿಲ್ಲ.

- Advertisement -
- Advertisement -

ದೇಶ ರಕ್ಷಣೆಯಲ್ಲಿ ಆತ್ಮನಿರ್ಭರತೆ ಸಾಧಿಸಬೇಕೆಂದು ಸಂಕಲ್ಪ ಮಾಡಿರುವುದಾಗಿ ರಕ್ಷಣಾ ಮಂತ್ರಿ ರಾಜನಾಥ್‌ಸಿಂಗ್ ಹೇಳಿದ್ದಾರೆ. ಮೋದಿ ಮಂತ್ರ ಪಠಣವೂ ಇದೇ ಆಗಿದೆ. ಆದರೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆತ್ಮನಿರ್ಭರತೆ ಎಂದರೆ ಎಲ್ಲ ಆಮದನ್ನೂ ಕೈ ಬಿಡುವುದಲ್ಲ ಎಂದು ಹೇಳುತ್ತಾರೆ. ಈ ರೀತಿ ಹೇಳುವ ಮೂಲಕ ಆತ್ಮನಿರ್ಭರತೆಗೆ ಆರ್‌ಎಸ್‌ಎಸ್ ಹೊಸ ವ್ಯಾಖ್ಯಾನವನ್ನೆ ಮಂಡಿಸುತ್ತಿದೆ. ಒಟ್ಟಿನಲ್ಲಿ ಆತ್ಮನಿರ್ಭರತೆ ಒಂದು ಘೋಷಣೆಯೆ ಹೊರತು ಬೇರೇನೂ ಅಲ್ಲ ಎಂದು ಮತಾಂಧರು ಘೋಷಿಸುತ್ತಿದ್ದಾರೆ.

ರಾಜನಾಥ್‌ಸಿಂಗರು ಈಗ ದೇಶರಕ್ಷಣೆಯಲ್ಲಿ ಆತ್ಮನಿರ್ಭರತೆ ಮಾತನ್ನಾಡಿದರೆ ಈ ಹಿಂದೆ ಮೋದಿ ಅವರು ಮೇಡ್ ಇನ್ ಇಂಡಿಯಾ ಘೋಷಣೆ  ಕೂಗುವಾಗಲೂ ಇದನ್ನೇ ಹೇಳಿದ್ದರು. ರಾಜನಾಥ್‌ಸಿಂಗರು ಡಿಫೆನ್ಸ್ ಡಿಪಾರ್ಟ್ಮೆಂಟ್‌ಗೆ ಬೇಕಾದ 101 ಐಟಂಗಳ ಆಮದನ್ನು ನಿಲ್ಲಿಸಿ ಇನ್ನೂ ಐದು ವರ್ಷಗಳೊಳಗಾಗಿ ಅವನ್ನೆಲ್ಲ ಭಾರತದಲ್ಲೇ ತಯಾರಿಸುವ ನಿರ್ಧಾರವನ್ನು ಘೋಷಿಸಿದ್ದಾರೆ. ಇವರ ಘೋಷಣೆಯನ್ನು ಅತ್ಯುತ್ಸಾಹದಿಂದ ಯಾರೂ ಸ್ವಾಗತಿಸಿದಂತೆ ಕಾಣುವುದಿಲ್ಲ. ಅದಕ್ಕೆ ಕಾರಣವೆಂದರೆ, ಇದೇ ಮೋದಿ ಸರ್ಕಾರ ತನ್ನ ಆಡಳಿತದ ಮೊದಲ ಅವಧಿಯಲ್ಲಿ ನಾಲ್ಕಾರು ವರ್ಷಗಳ ಹಿಂದೆ ಮೇಕ್ ಇನ್ ಇಂಡಿಯಾ ಘೋಷಣೆ ಮೊಳಗಿಸಿತ್ತು. ಆಗಲೂ ಮೋದಿ ಭಾರತ ರಕ್ಷಣೆಗಾಗಿ ಆಮದಾಗುವ ಐಟಂಗಳನ್ನು ಸ್ವದೇಶದಲ್ಲೇ ತಯಾರಿಸುವ ಭರವಸೆ ನೀಡಿದ್ದರು. ರಾಜನಾಥ್‌ಸಿಂಗರ ಇಂದಿನ ಘೋಷಣೆ Old wine in New Bottle ಎಂಬಂತಿದೆ. ಆಗ ಮೋದಿ ನೀಡಿದ ಭರವಸೆಗಳೆಲ್ಲ ಕಾಗದದಲ್ಲಿ ಮಾತ್ರ ಉಳಿದಿದೆ.

2014ರಿಂದ ರಕ್ಷಣಾ ಸಚಿವಾಲಯ ತಿಳಿಸಿರುವಂತೆ 2019ರವರೆಗೆ 190 ಭಾರತೀಯ ಉದ್ದಿಮೆದಾರರು ಕಾಂಟ್ರಾಕ್ಟ್‌ಗೆ ಸಹಿ ಹಾಕಿದ್ದಾರೆ. ಇದರ ಮೊತ್ತ 25.8 ಬಿಲಿಯನ್‌ಗಳಾಗುತ್ತದೆ. ಈ ಪೈಕಿ ಮೇಕ್ ಇನ್ ಇಂಡಿಯಾದ ಭಾಗವಾಗಿಯೇ 3.5 ಲಕ್ಷ ಕೋಟಿಯ ಕಂಟ್ರಾಕ್ಟ್‌ಗೆ ಸಹಿ ಹಾಕಲಾಗಿತ್ತು. ಈ ಕಂಟ್ರಾಕ್ಟುಗಳಲ್ಲಿ ಐನಾತಿ ಐಟಂಗಳಾದ ನ್ಯೂಜನರೇಷನ್ ಸ್ಟೆಲ್ತ್ ಸಬ್‌ಮೆರಿನ್‌ಗಳು ಮತ್ತು ಮೈನ್ ಸ್ವೀಪರ್ ಳು, ಫೈಟರ್ ಜೆಟ್ಸ್ಗಳು ಇವುಗಳ್ಯಾವುವೂ ಕಂಟ್ರಾಕ್ಟ್ಗೆ ಸಹಿ ಹಾಕಿ ವರ್ಷಗಳೇ ಕಳೆದರೂ ಅವುಗಳನ್ನು ಸರಬರಾಜು ಮಾಡಿಲ್ಲ. ಅವುಗಳಲ್ಲಿ ತಯಾರಾಗಿರುವುದು ಎಕೆ 203 ಆಸ್ಸಾಲ್ಟ್ ರೈಫಲ್‌ಗಳು ಮಾತ್ರ. ಇವನ್ನು ರಷ್ಯಾದ ಸಹಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಉತ್ತರ ಪ್ರದೇಶದಲ್ಲಿರುವ ಕೊರ್ವಾ ಆರ್ಡಿನೆನ್ಸ್ ಫ್ಯಾಕ್ಟರಿ ಜಂಟಿಯಾಗಿ ತಯಾರಿಸಿದೆ. ಗೋವಾ ಷಿಪ್‌ಯಾರ್ಡ್ ಮತ್ತು ದಕ್ಷಿಣ ಕೊರಿಯಾದ ಕಂಪನಿಯೊಂದರ ಮಧ್ಯೆ 12 ಮೈನ್ ಸ್ವೀಪರ್ಸ್ ಸರಬರಾಜಿಗಾಗಿ 2015ರಲ್ಲಿ ಮಾಡಿಕೊಂಡಿದ್ದ 3200 ಕೋಟಿ ರೂ ಒಪ್ಪಂದವನ್ನು 2018ರಲ್ಲಿ ರದ್ದುಗೊಳಿಸಲಾಯಿತು. DRDOಒಂದು ಸರ್ಕಾರಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ. ಇದರ ಅಡಿಯಲ್ಲಿ 52ಪ್ರಗತಿಗಾಮಿ ಲ್ಯಾಬೋರೇಟರ್‌ಗಳು ಇವೆ. 5000 ಮಿಲಿಟರಿ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಇಲ್ಲಿ ಕೆಲಸ ಮಾಡುತ್ತಾರೆ. 25000 ಸಹಾಯ ಸಿಬ್ಬಂದಿ ಇದ್ದಾರೆ. 2016ರಲ್ಲಿ ಇದರ ಬಜೆಟ್ 13501ಕೋಟಿ ರೂ. ಇತ್ತು. ಅದು 2019-20ಕ್ಕೆ 19021 ಕೋಟಿ ರೂಗೆ ಏರಿತು. ಆದರೆ ಅದೇನೂ ಹೆಚ್ಚು ಪ್ರಗತಿ ಹೊಂದಿಲ್ಲ. ಭಾರತ ಸರ್ಕಾರದ ನೂರಾರು ರಕ್ಷಣಾ ಫ್ಯಾಕ್ಟರಿಗಳು ಇದ್ದಾಗ್ಯೂ ಬಜೆಟ್ಟಿನ ಶೇ.59ರಷ್ಟು ಇವರ ಸಂಬಳ, ಸಾರಿಗೆಗಳಿಗೆ, ವಿಶ್ರಾಂತಿವೇತನಕ್ಕೆ ವಿನಿಯೋಗವಾಗುತ್ತದೆ. ಶಸ್ತ್ರಾಸ್ತ್ರಬಳಸುವ ಸೈನಿಕರನ್ನು ಸರ್ಕಾರ ಆಮದು ನೀತಿಗೆ ಹೊಣೆಗಾರರನ್ನಾಗಿಸಲು ಸಾಧ್ಯವೇನು? ಅವರಿಗೆ ಆಮದಾದ ಶಸ್ತ್ರಾಸ್ತ್ರಗಳನ್ನು ಬಳಸುವುದಲ್ಲದೆ ಬೇರೇನು ಆಯ್ಕೆ ಇದೆ!

ದೇಶ ರಕ್ಷಣೆಗೆ ಬೇಕಾದ ಸಾಮಗ್ರಿಗಳಲ್ಲಿ ಶೇ.65 ರಷ್ಟನ್ನು ಭಾರತ ಸರ್ಕಾರ ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿ 2019ರಲ್ಲಿ ಮಿಲಿಟರಿಯ ಮೇಲೆ ಖರ್ಚಾದ ಹಣ 71.1ಬಿಲಿಯನ್ ಡಾಲರ್‌ಗಳು, ಚೈನಾ 261 ಬಿಲಿಯನ್ ಡಾಲರ್, ರಷ್ಯಾ 65 ಬಿಲಿಯನ್ ಡಾಲರ್ ಮಿಲಿಟರಿ ಮೇಲೆ ಖರ್ಚು ಮಾಡುತ್ತವೆ. 2020-21 ಭಾರತದ ಮಿಲಿಟರಿ ಬಜೆಟ್ 62.85 ಬಿಲಿಯನ್ ಅಥವಾ 4.9 ಲಕ್ಷ ಕೋಟಿ ರೂ.ಗಳಾಗಿವೆ. ರಕ್ಷಣಾ ಇಲಾಖೆಯ ಯುದ್ಧ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದೆ.

ಹೀಗಿರುವ ದೇಶವೊಂದು ತನ್ನ ಆಮದನ್ನು ನಿಲ್ಲಿಸಿ ಸ್ವಾವಲಂಬಿಯಾಗುತ್ತೇನೆ ಎಂದರೆ ಅದು ಸ್ವಾಗತಾರ್ಹವಲ್ಲವೇ? ಆದರೆ, ಮೇಕ್ ಇನ್ ಇಂಡಿಯಾ ಸಂದರ್ಭದಲ್ಲಿ ಮಾಡಿದಂತೆ ಕೇವಲ ಘೋಷಣೆಗಳಿಗೆ ಸೀಮಿತಗೊಳಿಸಿ, ಆತ್ಮಘಾತುಕತನವನ್ನು ಮಾಡಲಾಗುತ್ತದೆ ಎಂಬ ಬಗ್ಗೆ ಸಂದೇಹವೇನೂ ಉಳಿದಿಲ್ಲ.


ಇದನ್ನೂ ಓದಿ: ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...