Homeಮುಖಪುಟಪುಲ್ವಾಮ ದಾಳಿ: ಬರೋಬ್ಬರಿ 18 ತಿಂಗಳ ನಂತರ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌‌ಐಎ

ಪುಲ್ವಾಮ ದಾಳಿ: ಬರೋಬ್ಬರಿ 18 ತಿಂಗಳ ನಂತರ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌‌ಐಎ

- Advertisement -
- Advertisement -

ಕಳೆದ ವರ್ಷ ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮದಲ್ಲಿ ಸೈನಿಕರ ಮೇಲೆ ನಡೆದಿದ್ದ ದಾಳಿ ಘಟನೆ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು 13 ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ಜಮ್ಮುವಿನ ಎನ್ಐಎ ಕೋರ್ಟ್‌ಗೆ ಸಲ್ಲಿಸಿದೆ.

ಚಾರ್ಜ್‌ಶೀಟ್‌‌ನಲ್ಲಿ ಪಾಕಿಸ್ತಾನ ಮೂಲದ ಜೆಎಂ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮತ್ತವರ ಕುಟುಂಬದ ಕೆಲ ಸದಸ್ಯರು ಸೇರಿದಂತೆ 19 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ದಾಳಿಯಲ್ಲಿ 40 ಸಿಆರರ್‌‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಮಸೂದ್ ಅಜರ್ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಆತನ ಇಬ್ಬರು ಸಹೋದರರಾದ ರೌಫ್ ಅಜ್ಗರ್ ಮತ್ತು ಮೊಹಮ್ಮದ್ ಅಮ್ಮರ್ ಕೂಡ ಈ ಸಂಚಿನಲ್ಲಿ ಭಾಗವಹಿಸಿದ್ದರು ಎಂದು ಚಾರ್ಜ್‌ಶೀಟ್ ಹೇಳಿದೆ.

ಮೊಹಮ್ಮದ್ ಉಮರ್ ಫಾರೂಕ್ ಈ ಪ್ರಕರಣದ ಪ್ರಮುಖ ಸಂಚುಕೋರ ಎಂದು ಅದು ತಿಳಿಸಿದೆ. ಈತನೆ ಆರ್‌ಡಿಎಕ್ಸ್ ಸ್ಫೋಟಕಗಳನ್ನ ಪಾಕಿಸ್ತಾನದ ಗಡಿಯಿಂದ ಕಾಶ್ಮೀರಕ್ಕೆ ತಂದಿದ್ದು, ದಾಳಿಗೆ ಬೇಕಾಗಿದ್ದ ಐಇಡಿ ಬಾಂಬ್‌ಗಳನ್ನು ಸ್ಥಳೀಯವಾಗಿ ತಯಾರಿಸಲು ಈತನ ಪಾತ್ರ ಇದೆ ಎನ್ನಲಾಗಿದೆ.

ಬರೋಬ್ಬರಿ 18 ತಿಂಗಳ ಕಾಲ ತೀವ್ರವಾಗಿ ತನಿಖೆ ನಡೆಸಿ ವೈಜ್ಞಾನಿಕ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನ ಆಧರಿಸಿ ಈ ಪ್ರಕರಣಕ್ಕೆ ಒಂದು ರೂಪ ಕೊಟ್ಟಿರುವ ಎನ್ಐಎ ಇಂದು ಜಮ್ಮುವಿನ ವಿಶೇಷ ಕೋರ್ಟ್‌ನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.


ಓದಿ: ಸಿಂಪಲ್ ಪ್ರಶ್ನೆ…! ಪುಲ್ವಾಮಾ ಸಂಭವಿಸಲು ಮೋದಿಯ ವೈಫಲ್ಯ ಕಾರಣವಲ್ಲವೇ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಹತ್ಯೆ ಪ್ರಕರಣ: ಬಿಜೆಪಿಯ ಮಾಜಿ ಸಂಸದ ಸೇರಿ ಎಲ್ಲಾ...

0
ಆರ್‌ಟಿಐ ಕಾರ್ಯಕರ್ತ ಮತ್ತು ಪರಿಸರವಾದಿ ಅಮಿತ್ ಜೇತ್ವಾ ಹತ್ಯೆ ಪ್ರಕರಣದಲ್ಲಿ ಜುನಾಗಡದ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಲಂಕಿ ಮತ್ತು ಇತರ ಆರು ಜನರನ್ನು ಗುಜರಾತ್ ಹೈಕೋರ್ಟ್‌ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ...