Homeಕ್ರೀಡೆಒಲಂಪಿಕ್ಒಲಿಂಪಿಕ್ಸ್‌‌ | ಮಹಿಳಾ ಹಾಕಿ ತಂಡವನ್ನು ಮೊದಲ ಬಾರಿಗೆ ಸೆಮಿಗೆ ತಲುಪಿಸಿದ ಐತಿಹಾಸಿಕ ಗೋಲ್ ಇದು!

ಒಲಿಂಪಿಕ್ಸ್‌‌ | ಮಹಿಳಾ ಹಾಕಿ ತಂಡವನ್ನು ಮೊದಲ ಬಾರಿಗೆ ಸೆಮಿಗೆ ತಲುಪಿಸಿದ ಐತಿಹಾಸಿಕ ಗೋಲ್ ಇದು!

- Advertisement -
- Advertisement -

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡವು ಸೋಮವಾರದಂದು ವಿಶ್ವದ ಎರಡನೆ ರ್‍ಯಾಂಕಿಂಗ್‌ನಲ್ಲಿರುವ ಆಸ್ಟ್ರೇಲಿಯಾವನ್ನು ಸೋಲಿಸಿ, ಒಲಿಂಪಿಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್‌ ತಲುಪಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು 1-0 ಅಂತರದಲ್ಲಿ ಸೋಲಿಸಿದೆ.

ಆಟದ 22 ನೇ ನಿಮಿಷದಲ್ಲಿ ಗುರ್‌ಜಿತ್‌ ಕೌರ್‌‌ ಹೊಡೆದ ಏಕೈಕ ಪೆನಾಲ್ಟಿ ಕಾರ್ನರ್ ಗೋಲ್‌ ಆಗುವುದರೊಂದಿಗೆ ಭಾರತೀಯ ಮಹಿಳಾ ಹಾಕಿ ತಂಡವನ್ನು ಮೊದಲ ಬಾರಿಗೆ ಒಲಿಂಪಿಕ್‌ನಲ್ಲಿ ಸೆಮಿಫೈನಲ್‌ಗೆ ತಲುಪಿಸಿತು. ಆಸ್ಟ್ರೇಲಿಯಾವು ಭಾರತದ ಮುಂದೆ ಸೂಲುವುದರೊಂದಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೂರನೆ ಸ್ಥಾನಕ್ಕೆ ಇಳಿದಿದೆ. ರ್‍ಯಾಂಕಿಂಗ್‌ನಲ್ಲಿ ಒಂಬತ್ತನೆ ಸ್ಥಾನದಲ್ಲಿದ್ದ ಭಾರತವು ಏಳನೇ ಸ್ಥಾನಕ್ಕೆ ಏರಿದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ!

ಇದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಏಕೈಕ ಪೆನಾಲ್ಟಿ ಕಾರ್ನರ್ ಆಗಿತ್ತು. ಭಾರತವು ಐದು ಬಾರಿ ಗೋಲ್‌ಗೆ ಪ್ರಯತ್ನಿಸಿದ್ದರೆ, ಆಸ್ಟ್ರೇಲಿಯ ಆಟಗಾರರು 14 ಪ್ರಯತ್ನಗಳನ್ನು ದಾಖಲಿಸಿದ್ದಾರೆ. ಆದರೆ ಗುರ್ಜಿತ್‌ ಅವರ ಆಟವು ಭಾರತವನ್ನು ಗೆಲ್ಲಲು ಸಹಾಯ ಮಾಡಿತು. ಐತಿಹಾಸಿಕ ಗೋಲನ್ನು ಕೆಳಗೆ ವೀಕ್ಷಿಸಬಹುದಾಗಿದೆ.

ಭಾರತವು ಸೆಮಿಫೈನಲ್‌‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನಕ್ಕೇರಿರುವ ಅರ್ಜೈಂಟೀನಾವನ್ನು ಎದುರಿಸಲಿದೆ. ಪಂದ್ಯವು ಆಗಸ್ಟ್‌ 4 ರ ಬುಧವಾರ ನಡೆಯಲಿದೆ.

ಇದನ್ನೂ ಓದಿ: ಒಂದಿಡೀ ಸಮುದಾಯ ಮತ್ತು ದೇಶ ಸಂಭ್ರಮಿಸುವ ಕ್ರೀಡಾಸ್ಪೂರ್ತಿ ರಾಷ್ಟ್ರೀಯತೆಯ ಒಲಿಂಪಿಕ್ಸ್ 

ಈ ಮಧ್ಯೆ ಭಾರತೀಯ ಪುರುಷರ ಹಾಕಿ ತಂಡವು ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ ಒಲಿಂಪಿಕ್ ಸೆಮಿಫೈನಲ್‌ಗೆ ತಲುಪಿದೆ. ತಂಡವು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಅನ್ನು 3-1 ಅಂತರದಿಂದ ಹಿಂದಿಕ್ಕಿತು. ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್ ತಲಾ ಒಂದರಂತೆ ಒಟ್ಟು ಮೂರು ಫೀಲ್ಡ್ ಗೋಲುಗಳನ್ನು ಗಳಿಸಿದರು.

ಸೆಮಿಫೈನಲ್‌ನಲ್ಲಿ ಪುರುಷರ ತಂಡವು ವಿಶ್ವದ ಎರಡನೆ ಶ್ರೇಯಾಂಕದಲ್ಲಿರವ ಬೆಲ್ಜಿಯಂನ ವಿರುದ್ದ ಮಂಗಳವಾರ(ನಾಳೆ) ಬೆಳಿಗ್ಗೆ ಸೆಣಸಲಿದೆ. ಕ್ವಾರ್ಟರ್‌ ಪೈನಲ್‌ ತಲುಪುವುದರೊಂದಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಐದನೆ ಸ್ಥಾನದಲ್ಲಿದ್ದ ಭಾರತವು ವಿಶ್ವದ ಮೂರನೆ ಅಗ್ರ ಶ್ರೇಯಾಂಕಕ್ಕೆ ಏರಿದೆ.

ಟೊಕಿಯೋ ಒಲಿಂಪಿಕ್‌ನ ಮಹಿಳೆಯರ ಡಿಸ್ಕಸ್‌ ಎಸೆತದ ಫೈನಲ್‌‌ ಸೋಮವಾರ(ಇಂದು) ಸಂಜೆ 4:30 ಕ್ಕೆ ನಡೆಯಲಿದ್ದು, ಇದರಲ್ಲಿ ಭಾರತದ ಡಿಸ್ಕಸ್ ಎಸೆತಗಾರ್ತಿ‌ ಕಮಲ್‌ಪ್ರೀತ್ ಕೌರ್ ಸ್ಥಾನಪಡೆದಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಕಮಲ್‌ಪ್ರೀತ್‌‌ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್‌ಗೆ ತಲುಪಿದ್ದಾರೆ. 25 ವರ್ಷದ ಕಮಲ್‌ಪ್ರೀತ್‌‌‌ ಬಿ ಗ್ರೂಪ್‌ನಲ್ಲಿದ್ದು ತನ್ನ ಮೂರನೇ ಮತ್ತು ಅಂತಿಮ ಎಸೆತದಲ್ಲಿ ಡಿಸ್ಕಸ್ ಅನ್ನು 64 ಮೀಟರ್ ದೂರಕ್ಕೆ ಎಸೆದು ಎರಡನೆ ಸ್ಥಾನಕ್ಕೆ ತಲುಪಿದ್ದಾರೆ. ಫೈನಲ್‌ನಲ್ಲಿ ಒಟ್ಟು 12 ಮಂದಿ ಸ್ಪರ್ಧಿಗಳಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಾತಿನಿಧ್ಯ; ಅಂದು-ಇಂದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...