Homeಮುಖಪುಟಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

ಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 16/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಆಂಡ್ರೆ ಡೆಲ್ವೋ (Andre Delvaux)

ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್ (ಡಚ್, 1965, The Man Who Had His Hair Cut Short)

ಮದುವೆಯಾಗಿ ಹತ್ತು ವರ್ಷದ ಮಗಳಿರುವ ಗೊವರ್ಟ್ ನಲವತ್ತು ವಯಸ್ಸಿನ ಅಸುಪಾಸಿನ ಶಿಕ್ಷಕ. ಯಾವುದೇ ರೀತಿಯ ವಿಶಿಷ್ಟ ಆಕರ್ಷಣೆ ಹೊಂದಿರದ ಸೀದಾಸಾದ ಬದುಕಿನ ಈ ವ್ಯಕ್ತಿ ತಾನು ಕೆಲಸ ಮಾಡುತ್ತಿರುವ ಶಾಲೆಯಲ್ಲಿ ಕಲಿಯುತ್ತಿರುವ ಆಕರ್ಷಕ ಮತ್ತು ಮೋಹಕ ರೂಪವುಳ್ಳ ಹದಿಹರೆಯದ ಹುಡುಗಿ ಫ್ರಾನ್‌ಳ ಸೆಳೆತಕ್ಕೆ ಸಿಕ್ಕಿಕೊಂಡರೆ? ಗೊವರ್ಟ್‌ನಿಗೆ ತನ್ನ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಲು ಭಯವಾಗಿ, ಫ್ರಾನ್‌ಳನ್ನು ನೋಡಬೇಕೆಂಬ, ಮಾತಾಡಿಸಬೇಕೆಂಬ ಹಂಬಲ ಗೀಳಾಗಿಬಿಟ್ಟರೆ? ಇದೇ ಈ ಸಿನಿಮಾದ ಅತಿ ನವಿರಾದ ಕಥೆ.

ಸಿನಿಮಾದ ಮೊದಲ ಫ್ರೇಮ್‌ನಲ್ಲಿ ಗೊವರ್ಟ್ ತನ್ನ ಮನೆಯ ಸೋಫಾದಲ್ಲಿ ಕಣ್ಮುಚ್ಚಿ ಕನಸ್ಸು ಕಾಣುವಂತೆ ಮಲಗಿರುತ್ತಾನೆ. ಫ್ರೇಮ್‌ನ ಹೊರಗಿಂದ ಹೆಂಡತಿಯ ಧ್ವನಿ ಕೇಳಿ ಮೇಲೇಳುತ್ತಾನೆ. ಮಗಳು ತಂದು ಕೊಡುವ ಕಾಫಿ ಹೀರಿ, ಶಾಲೆಯಲ್ಲಿ ನಡೆಯಲಿರುವ ಪದವಿ ಪುರಸ್ಕೃತರ ಸಮಾರಂಭಕ್ಕೆ ತಯಾರಾಗಿ ಹೋಗುವ ಮೊದಲು, ತನ್ನ ಸಂಪೂರ್ಣ ದೇಹ ಕಾಣುವ ಆಳೆತ್ತರದ ಕನ್ನಡಿಯ ಮುಂದೆ ನಿಂತು, ಅಲ್ಲಿ ಹಣ್ಣಾಗಿ ಒಣಗಿ ಹೋಗುತ್ತಿರುವ ಬಾಳೆಹಣ್ಣುಗಳನ್ನು ನೋಡಿ, “ಇವುಗಳನ್ನು ಇಂದೇ ತಿನ್ನಬೇಕು, ನಾಳೆಗೆ ಇವು ಹಾಳಾಗುತ್ತವೆ” ಎನ್ನುತ್ತಾನೆ.

ಸ್ಟಾನ್ಲಿ ಕ್ಯುಬ್ರಿಕ್‌ರ ಲೊಲಿತಾ(1962) ಸಿನಿಮಾದ ಗಾಢವಾದ ಛಾಯೆ ಇರುವ ಸಿನಿಮಾ ಇದು. ಲೊಲಿತಾ ವ್ಲಾಡಿಮಿರ್ ನಬಕೊವ್ ಅವರ ಅದೇ ಹೆಸರಿನ ಕಾದಂಬರಿಯಿಂದ ಪ್ರೇರೇಪಿತವಾಗಿತ್ತು. ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್ ಸಿನಿಮಾ ಅದೇ ಹೆಸರಿನ 1947ರಲ್ಲಿ ಪ್ರಕಟವಾದ ಬೆಲ್ಜಿಯಂ ಕಾದಂಬರಿಯೊಂದನ್ನು ಆಧರಿಸಿದೆ. ನಡುವಯಸ್ಸಿನ ಗಂಡಸಿನ ಮನಸ್ಸಿನ ತಳಮಳಗಳನ್ನು ಅತಿ ಪ್ರಬಲವಾಗಿ ಹಿಡಿದಿಟ್ಟಿದೆ.

ಮುಂದುವರೆದು, ಗೊವರ್ಟ್ ಕೂದಲನ್ನು ಕ್ಷೌರಿಕ ಕತ್ತರಿಸುವ ದೃಶ್ಯವನ್ನು ತೋರಿಸಿರುವ ವಿಧಾನ ಗಮನಾರ್ಹವಾಗಿ ಚಿತ್ರಿತವಾಗಿದೆ. ಕ್ಷೌರಿಕನ ಮಾತಲ್ಲೇ ಹೇಳುವಂತೆ “ವೈದ್ಯರ ಮೇಲೆ ಗೌರವವಿದೆ, ಆದ್ರೂ ನನ್ ಕೆಲಸ ಯಾವುದೇ ಕಲೆಗಿಂತ ಕಮ್ಮಿಯಿಲ್ಲ ಎಂಬುದನ್ನು ಅಷ್ಟೇ ಚೆನ್ನಾಗಿ ಚಿತ್ರಿಸಲಾಗಿದೆ. ಹೀಗೆ ಸಿನಿಮಾದ ಮತ್ತೊಂದು ಭಾಗದಲ್ಲಿ ವೈದ್ಯನೊಬ್ಬ ಸತ್ತು ಕೊಳೆಯುವ ಸ್ಥಿತಿಯಲ್ಲಿರುವ ಶವವನ್ನು ಪರೀಕ್ಷೆ ಮಾಡುವಾಗ, ಶವವನ್ನು ತೋರಿಸದೆ ಬರೀ ಶಬ್ದ ವಿನ್ಯಾಸ ಮತ್ತು ಮುಖಾಭಿನಯದಲ್ಲೇ ದೃಶ್ಯವನ್ನು ಕಟ್ಟಿರುವುದು ಆಸಕ್ತಿದಾಯಕವಾಗಿದೆ.

ಚಿತ್ರಕಥೆಗೆ ಬಂದರೆ, ಶಾಲೆಯಿಂದ ಹೊರಹೋಗುತ್ತಿರುವ ಫ್ರಾನ್‌ಳಿಗೆ ಗೊವರ್ಟ್ ತನ್ನ ಮನಸ್ಸಿನಲ್ಲಿರುವುದನ್ನು ಹೇಳಬೇಕೆಂದು ಪ್ರಯತ್ನಿಸಿ ಸೋಲುತ್ತಾನೆ. ಹೀಗೆ ಕೆಲವು ವರ್ಷಗಳು ಕಳೆದ ನಂತರ ನ್ಯಾಯಾಲಯದ ಕಾರಕೂನನಾಗಿ ಕೆಲಸ ಮಾಡುತ್ತಿರುವಾಗ, ಶವಪರೀಕ್ಷೆಗೆಂದು ವೈದ್ಯನ ಜೊತೆ ಬಂದು ಹೋಟೆಲಿನಲ್ಲಿ ತಂಗಿದ್ದಾಗ, ಫ್ರಾನ್ ಅಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾಳೆ. ಆಗ ಗೊವರ್ಟ್ ತನ್ನಲ್ಲಿ ಉಳಿದುಕೊಂಡಿದ್ದ ಭಾವನೆಯನ್ನು ನಿವೇದಿಸಿಕೊಂಡಾಗ, ಫ್ರಾನ್ ಬೇರೊಬ್ಬ ಶಿಕ್ಷಕನನ್ನು ಪ್ರೀತಿಸುತ್ತಿದ್ದ ವಿಷಯವನ್ನು ತಿಳಿಸುತ್ತಾಳೆ. ಅದನ್ನು ಅರಗಿಸಿಕೊಳ್ಳಲಾಗದೆ ಗೊವರ್ಟ್ ರಿವಾಲ್ವಾರ್‌ನಿಂದ ಆಕೆಯ ಮೇಲೆ ಗುಂಡು ಹಾರಿಸುತ್ತಾನೆ. ಶಬ್ದ ಕೇಳಿ ವೈದ್ಯ ರೂಮಿಗೆ ಬಂದಾಗ, ಗೊವರ್ಟ್ “ದಯವಿಟ್ಟು ಇವಳ ದೇಹವನ್ನು ಕತ್ತರಿಸಬೇಡಿ” ಎಂದು ಪರಿಪರಿಯಾಗಿ ವೈದ್ಯನನ್ನು ಬೇಡಿಕೊಳ್ಳುತ್ತಾನೆ.

ಹತ್ತು ವರ್ಷಗಳ ಕಾಲ ಜೈಲುವಾಸಕ್ಕೆ ತುತ್ತಾಗುವ ಗೊವರ್ಟ್ ಒಂದು ದಿನ ನ್ಯೂಸ್ ರೀಲ್‌ನಲ್ಲಿ ಫ್ರಾನ್‌ಳನ್ನು ನೋಡಿ ಮೊದಲಿಗೆ ಅಘಾತಕ್ಕೊಳಗಾಗುತ್ತಾನೆ. ಅಲ್ಲಿರುವ ವಾರ್ಡನ್ ಬಳಿ ಫ್ರಾನ್ ಬದುಕುಳಿದಿರುವ ವಿಷಯವನ್ನು ಕೇಳಿ, ನಿರಾಳಗೊಂಡು ನಿಟ್ಟುಸಿರುಬಿಡುವ ಮೂಲಕ ಸಿನಿಮಾ ಮುಗಿಯುತ್ತದೆ.

ರಾಂಡೆವೂ ಅಟ್ ಬ್ರೇ (ಫ್ರೆಂಚ್ 1971, Rendezvous at Bray)

ಅದು 1917ನೇ ಇಸವಿ. ಮೊದಲ ವಿಶ್ವಯುದ್ಧ ಎಲ್ಲ ಕಡೆಗೂ ಹರಡುತ್ತಿರುವ ಸಮಯವದು. ಜೂಲಿಯನ್ ಪಿಯಾನೋ ಕಲಿಯುತ್ತಿರುವ ಯುವಕ. ಗೆಳೆಯನನ್ನು ಭೇಟಿಯಾಗಲೆಂದು ಬ್ರೇ ಎಂಬ ಊರಿಗೆ ಹೋಗುತ್ತಾನೆ. ಗೆಳೆಯನಿಗಾಗಿ ಕಾಯುವಿಕೆಯಲ್ಲಾಗುವ ಘಟನೆಗಳೇ ಸಿನಿಮಾದ ಕಥಾನಕ. ಜೂಲಿಯನ್ ರೈಲಿನಲ್ಲಿ ಬಂದಿಳಿದ ನಿಲ್ದಾಣ ನಿರ್ಜನವಾಗಿದೆ. ತನ್ನ ಗೆಳೆಯನ ವಿಳಾಸದ ಕುರಿತು ಯಾರನ್ನಾದರೂ ಕೇಳಲೆಂದು ಊರಿನೊಳಗೆ ನಡೆದುಹೋಗುವಾಗ ಇಡೀ ಊರೇ ಖಾಲಿಯಾಗಿದೆ. ದಾರಿಯಲ್ಲಿ ಆಟವಾಡುತ್ತಿರುವ ಮಕ್ಕಳಿಬ್ಬರನ್ನು ಕೇಳುತ್ತಾನೆ. ಅವರು ಸನ್ನೆಯಲ್ಲಿಯೇ ಮುಂದೆ ಹೋಗುವಂತೆ ಹೇಳುತ್ತಾರೆ. ಕೊನೆಗೆ ಬಂಗಲೆಯೊಂದರ ಗೇಟಿನ ಬಳಿಗೆ ಬರಲು, ಸುಂದರ ಯುವತಿಯೊಬ್ಬಳು (ಮನೆಯ ಕೆಲಸದಾಕೆ) ಅವನನ್ನು ಬರಮಾಡಿಕೊಳ್ಳುತ್ತಾಳೆ.

ರಾಂಡೆವೂ ಅಂದರೆ ಫ್ರೆಂಚ್ ಭಾಷೆಯಲ್ಲಿ ಭೇಟಿ ಎಂದರ್ಥ. ಗೆಳೆಯನ ಭೇಟಿಗೆಂದು ಬಂದ ಜೂಲಿಯಾನ್‌ನಿಗೆ ನಿರಾಸೆ ಕಾದಿರುತ್ತದೆ. ಬಂಗಲೆಯಲ್ಲಿ ಗೆಳೆಯನ ಸುಳಿವಿಲ್ಲ. ಗೆಳೆಯನೂ ಕೂಡ ಪಿಯಾನೋ ಕಲಿಯುತ್ತಿದ್ದವನು. ಮೊದಲ ವಿಶ್ವಯುದ್ದದಲ್ಲಿ ಯುದ್ಧ ವಿಮಾನದ ಪೈಲೆಟ್‌ಆಗಿ ಪಾಲ್ಲೊಂಡಿದ್ದ ಗೆಳೆಯ ತನ್ನ ಊರಿಗೆ ಹಿಂದಿರುಗುತ್ತಿರುವ ಸುದ್ದಿಯನ್ನು ಜೂಲಿಯಾನ್‌ನಿಗೆ ತಿಳಿಸಿರುತ್ತಾನೆ.

ಮನೆಯ ಕೆಲಸದಾಕೆ ಸುಂದರಿ. ಮಿತ ಭಾಷಿ. ಜೂಲಿಯಾನ್ ಅವಳನ್ನು ಪದೇಪದೇ ಮಾತಿಗಿಳಿಯುವಂತೆ ಪ್ರೇರೇಪಿಸಿದರೂ, ಅವಳು ಮಾತ್ರ ತನ್ನ ಕೆಲಸದಲ್ಲಿ ಮಗ್ನರಾಗಿರುತ್ತಾಳೆ.

ಸಿನಿಮಾದ ಮೊದಲ ಭಾಗದಲ್ಲಿ ಚಿತ್ರಿತವಾಗಿರುವ, ಪುಟ್ಟ ಹುಡುಗಿಯೊಬ್ಬಳು ಕುಂಟೆಬಿಲ್ಲೆ ಆಡುವಾಗ ಹಾಡುತ್ತಿದ್ದ ಹಾಡೊಂದು ಜೂಲಿಯಾನ್‌ನನ್ನು ಕಾಡುತ್ತಿರುತ್ತದೆ. ಅದೇ ಹಾಡನ್ನು ಗೆಳೆಯನ ಬಂಗಲೆಯಲ್ಲಿದ್ದ ಪಿಯಾನೋದಲ್ಲಿ ನುಡಿಸುತ್ತಾ, ಪ್ಲಾಷ್‌ಬ್ಯಾಕಿಗೆ ಹೋಗುತ್ತಾನೆ. ಅಲ್ಲಿ ತನ್ನ ಗೆಳೆಯನೊಂದಿಗೆ ಕಾರು ವಿಹಾರ, ಕಾಡಿನ ಸುತ್ತಾಟ ನೆನಪಿಸಿಕೊಳ್ಳುತ್ತಾನೆ.

ಗೋಡೆಯ ಮೇಲಿದ್ದ ಚಿತ್ರಕಲೆಯನ್ನು ನೋಡಿ ತನ್ನ ಭವಿಷ್ಯದ ಕುರಿತು ಕನಸೊಂದನ್ನು ಕಾಣುತ್ತಾನೆ. ಆ ಕನಸಿನಲ್ಲಿ, ಅತಿ ಶ್ರೀಮಂತರು ಮತ್ತು ಗಣ್ಯರ ಮಧ್ಯೆ ಜೂಲಿಯಾನ್ ಪಿಯಾನೋ ನುಡಿಸುತ್ತಿದ್ದಂತೆ, ಗಣ್ಯರೊಬ್ಬರ ಪತ್ನಿ ಜೂಲಿಯಾನ್‌ನಿಗೆ ಆರ್ಕಷಿತಗೊಂಡ ಅವನಿಗೆ ಮುತ್ತಿಡುತ್ತಾಳೆ. ಅವಳ ಪತಿ ಜೂಲಿಯಾನ್‌ನ ಪಿಯಾನೋ ವಾದನೆಗೆ ಮನಸೋತು ಸಾವಿರ ಫ್ರಾಂಕ್ಸ್ ಕೊಡಲು ಬಂದಾಗ, ಜೂಲಿಯಾನ್ ಅದನ್ನು ತೆಗೆದುಕೊಂಡು ಬಿಸಾಕುತ್ತಾನೆ.

ಹೀಗೆ ಹಲವು ಬಾರಿ ಕನಸುಗಳನ್ನು ಕಾಣುತ್ತಾ ಮತ್ತು ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಗೆಳೆಯನಾಗಿ ಕಾಯುತ್ತಾ, ಪದೇಪದೇ ಸುಂದರಿ ಕೆಲಸದಾಕೆಯ ಗಮನ ಸೆಳೆಯಲು ಪ್ರಯತ್ನಿಸುತ್ತಾನೆ. ಆ ಹಳೆಯ ನೆನಪಿನ ಭಾಗವಾಗಿ ಮೂಕಿ ಸಿನಿಮಾವೊಂದಕ್ಕೆ ಲೈವ್ ಸಂಗೀತವನ್ನು ಪಿಯಾನೋದಲ್ಲಿ ನುಡಿಸುತ್ತಾನೆ. ಆ ಸಮಯದಲ್ಲಿ ಪ್ರೇಕ್ಷಕನಿಗೆ ಸಿನಿಮಾದೊಳಗೆ ಮತ್ತೊಂದು ಸಿನಿಮಾದ ವಿಶೇಷ ಅನುಭವ ನೀಡುತ್ತದೆ

ಕಾಯುವಿಕೆಯಲ್ಲಿ ತಿಂಡಿ, ಕಾಫಿ, ವೈನ್, ವಿಸ್ಕಿ, ಊಟವೆಲ್ಲ ಮುಗಿಯುತ್ತದೆ. ದಿನಕ್ಕೊಂದೆ ಬರುವ ರೈಲು ಕೂಡ ಹೊರಟುಹೋದ ಕಾರಣ ಅಂದು ರಾತ್ರಿ ಅಲ್ಲೇ ಉಳಿದುಕೊಳ್ಳದೆ ಬೇರೆ ದಾರಿ ಇಲ್ಲ. ಜೂಲಿಯಾನ್ ಊಟದ ನಂತರ ಮಲಗುವಾಗ ಕೆಲಸದಾಕೆಯೊಂದಿಗೆ ಸಂಭೋಗಿಸುತ್ತಾನೆ.

ಮರುದಿನ ಬೆಳಗಿನ ಸಮಯ ರೈಲಿನ ಶಬ್ದ ಕೇಳಿ ತನ್ನ ಬ್ಯಾಗನ್ನು ಹಿಡಿದು ವೇಗವಾಗಿ ನಿಲ್ದಾಣ ತಲುಪಿದರೆ, ಅಲ್ಲಿ ಸೈನಿಕರ ದಂಡೇ ತುಂಬಿರುತ್ತದೆ. ವಾರ್ತಾಪತ್ರಿಕೆಯಲ್ಲಿ ಯುದ್ಧ ತೀವ್ರವಾಗಿದ್ದು, ಪೈಲಟ್‌ಗಳು ಯುದ್ಧದಲ್ಲಿ ನಿರತರಾಗಿದ್ದಾರೆಂದು ಓದುತ್ತಾನೆ. ಅಷ್ಟರಲ್ಲಿ ನಿಂತಿದ್ದ ರೈಲು ನಿಲ್ದಾಣವನ್ನು ಬಿಟ್ಟು ಹೊರಟಿರುತ್ತದೆ. ಮತ್ತೆ ಜೂಲಿಯಾನ್‌ಗೆ ಎಲ್ಲಿಗೆ ಹೋಗಬೇಕೆಂಬ ಗೊಂದಲ ಮೂಡಿ ನಿಂತಲ್ಲೇ ನಿಂತಿರುತ್ತಾನೆ!

ಆಂಡ್ರೆ ಡೆಲ್ವೋ: ಆಂಡ್ರೆಯವರನ್ನು ಬೆಲ್ಜಿಯಂ ಸಿನಿಮಾದ ಗಾಡ್‌ಫಾದರ್ ಎನ್ನುತ್ತಾರೆ. ಇವರ ಸಿನಿಮಾಗಳಲ್ಲಿ ನಿರ್ದಿಷ್ಟ ಸ್ವರೂಪದ ಕಥೆಗಳು ಇರುವುದಿಲ್ಲ, ಬದಲಾಗಿ ಹಲವು ಸನ್ನಿವೇಶಗಳು ಮತ್ತು ಘಟನೆಗಳು ಇರುತ್ತದೆ. ಇವರ ಕಥಾವಿಷಯಗಳು ಕನಸ್ಸು, ಕಲ್ಪನೆ, ಫ್ಯಾಂಟಸಿ, ಒಂಟಿತನಗಳಿಂದ ಕೂಡಿರುವುದು ವಿಶೇಷ.

ಆಂಡ್ರೆರ ಸಿನಿಮಾ ಕಟ್ಟುವ ಶೈಲಿ ಅತಿ ವಿಭಿನ್ನ. ಸಿನಿಮಾವೆಂದರೆ ಕಥೆ ಇರಲೇಬೇಕು, ಅದರಲ್ಲಿ ಉಬ್ಬರ ಏರಿಳಿತಗಳಿಂದ ಪ್ರೇಕ್ಷಕ ಉಸಿರು ಬಿಗಿ ಹಿಡಿದು ನೋಡುವ ಸ್ಥಿತಿಗೆ ತಂದು ನಿಲ್ಲಸಬೇಕೆಂದುಕೊಳ್ಳದೆ, ಪ್ರೇಕ್ಷಕನನ್ನು ಸಿನಿಮಾದೊಳಗೆ ಎಳೆದು, ಅವನ ಬೌದ್ಧಿಕ ತಿಳಿವಳಿಕೆಗೆ ತಕ್ಕಂತೆ ಸಿನಿಮಾವನ್ನು ವ್ಯಾಖ್ಯನಿಸಲು ಬಿಡುವುದು ನಿರ್ದೇಶಕ ಆಂಡ್ರೆ ಅವರ ಸಾಹಸಮಯ ವಿಶಿಷ್ಟತೆ. ಯಾವುದನ್ನು ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಹೇಳದೆ, ಎಲ್ಲವನ್ನೂ ಒಂದೇ ರೀತಿಯಲ್ಲಿ ತೂಗದೆ, ತರ್ಕ ಮತ್ತು ಅರ್ಥಗಳನ್ನು ಬಿಟ್ಟು ದೃಶ್ಯ ಮತ್ತು ಶಬ್ದಗಳಿಂದಲೇ ಅನುಭವಗಳನ್ನು ಕಟ್ಟುವ ಅವರ ತಂತ್ರ ಶ್ಲಾಘನೀಯ.

ಆಂಡ್ರೆ ಸಿನಿಮಾಗಳಲ್ಲಿ ಕಟ್ಟಿಕೊಡುವ ಪಾತ್ರಗಳ ಮೂಡ್/ಮನಸ್ಥಿತಿಯೇ ಮುಖ್ಯಪಾತ್ರ ವಹಿಸುತ್ತವೆ. ಪದೇಪದೇ ದೃಶ್ಯವನ್ನು ತುಂಡರಿಸದೆ, ಸುದೀರ್ಘವಾದ ದೃಶ್ಯಗಳನ್ನು ಸೃಷ್ಟಿಸಿ, ಪಾತ್ರಗಳನ್ನು ಸದಾ ಹಿಂಬಾಲಿಸುತ್ತಾ ಅವರ ಮನಸ್ಸುಗಳಿಗೆ ಕನ್ನಡಿಯಾಗಿಸುತ್ತಾರೆ.

ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್(1965) ಫ್ರೇಮಿಂಗ್ ವಿನ್ಯಾಸದಲ್ಲೇ ಪಾತ್ರಗಳು ಮತ್ತು ಅವರ ನಡುವಿನ ಸಂಬಂಧಗಳನ್ನು ಒಂದೂ ಡೈಲಾಗ್ ಇಲ್ಲದೇ ಕಟ್ಟಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳನ್ನು ನೆನಪಿಗೆ ಬರುತ್ತವೆ. ಬಸ್ಸಿನಲ್ಲಿ ಗೊವರ್ಟ್ ಪ್ರಯಾಣಿಸುವಾಗ ಕಿಟಿಕಿಯಿಂದ ಕಾಣುವ ಆತ ಕುಳಿತಿರುವ ಒಂದೇ ಸೀಟು, ಅವನ ಒಂಟಿತನವನ್ನು ಹಿಡಿದಿಡುತ್ತದೆ.

ಸಿನಿಮಾದ ಸಾಧನಗಳಾದ ಹಿನ್ನೆಲೆ ಸಂಗೀತ, ಪಾತ್ರಗಳ ಸ್ವಗತಗಳನ್ನು ಬಳಸಿಕೊಳ್ಳುವ ಬಗೆಯನ್ನು ಆಂಡ್ರೆರ ಸಿನಿಮಾಗಳನ್ನು ನೋಡಿಯೇ ಅನುಭವಿಸಬೇಕು. ಒಂದು ಸಿನಿಮಾದಲ್ಲಿ ಅಂತರ್ಮುಖಿ ಪಾತ್ರವೊಂದು ಸ್ವಗತದಲ್ಲಿ ತನ್ನ ಪ್ರೀತಿಯ ನಿವೇದನೆ ಮಾಡಿದರೆ, ಇನ್ನೊಂದು ಸಿನಿಮಾದಲ್ಲಿ ಪಿಯಾನೋ ವಿದ್ಯಾರ್ಥಿಯ ಪಾತ್ರದ ದೆಸೆಯಿಂದ ಸಿನಿಮಾದೂದ್ದಕ್ಕೂ ಪಿಯಾನೋದ ಸಂಗೀತದಿಂದಲೇ ಆವರಿಸಿಕೊಳ್ಳುವಂತೆ ಮಾಡುವುದು ಆಂಡ್ರೆಯವರ ಸಿನಿಮಾ ಸಾಧನೆಯನ್ನು ಎತ್ತಿಹಿಡಿಯುತ್ತದೆ.


ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...