ಪೆಗಾಸಸ್‌ ಹಗರಣ - ಸುಪ್ರೀಂನಲ್ಲಿ ಅಫಿಡವಿಟ್‌ಗಳನ್ನು ಸಲ್ಲಿಸುವುದಿಲ್ಲ ಎಂದ ಒಕ್ಕೂಟ ಸರ್ಕಾರ! | Naanu Gauri
Illustration: Guardian Design

ದಿನ ಕಳೆದಂತೆ ಪೆಗಾಸಸ್‌ ಹಗರಣವು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಇದೀಗ ಬಿಜೆಪಿಯ ಮೈತ್ರಿಯಲ್ಲಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪೆಗಾಸಸ್‌ ಗೂಡಾಚಾರದ ಹಗರಣದ ತನಿಖೆ ನಡೆಸುವಂತೆ ಪ್ರತಿಪಕ್ಷಗಳ ಬೇಡಿಕೆಗೆ ತಮ್ಮ ಧ್ವನಿಯನ್ನು ಸೇರಿಸಿದ್ದಾರೆ. ಇಡೀ ವಿಷಯವನ್ನು ಸಾರ್ವಜನಿಕಗೊಳಿಸಬೇಕು ಎಂದಿರುವ ಅವರು, “ಜನರನ್ನು ತೊಂದರೆಗೊಳಿಸಲು ಮತ್ತು ಕಿರುಕುಳ ನೀಡಲು ಇಂತಹ ಕೆಲಸಗಳನ್ನು ಮಾಡಬಾರದು” ಎಂದು ಹೇಳಿದ್ದಾರೆ.

ವಿಶ್ವದಾದ್ಯಂತ 17 ಮಾಧ್ಯಮ ಸಂಸ್ಥೆಗಳ ಒಕ್ಕೂಟವು ‘ಪೆಗಾಸಸ್‌ ಪ್ರಾಜೆಕ್ಟ್‌‌’ ವರದಿಗಳನ್ನು ಕಳೆದ ತಿಂಗಳಷ್ಟೇ ಬಹಿರಂಗ ಪಡಿಸಿತ್ತು. ನಂತರ ಭುಗಿಲೆದ್ದ ಈ ವಿವಾದವು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಇದೇ ಮೊದಲ ಬಾರಿಗೆ ಒಕ್ಕೂಟ ಸರ್ಕಾರದ ಮೈತ್ರಿ ಪಕ್ಷವೊಂದು ಪೆಗಾಸಸ್ ಕುರಿತು ತನಿಖೆ ಆಗಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ: ಪೆಗಾಸಸ್ ಗೂಢಚರ್ಯೆ ಸಮಸ್ಯೆಯಲ್ಲ: ವಿವಾದಿತ ಹೇಳಿಕೆ ನೀಡಿದ ಕೇಂದ್ರ ಸಚಿವ!

ಸಂಸತ್ತಿನಲ್ಲಿ ವಿಷಯವನ್ನು ಚರ್ಚೆಗೆ ತರಬೇಕು ಎಂದು ವಿರೋಧ ಪಕ್ಷಗಳು ಬೇಡಿಕೆ ಇಟ್ಟಿದೆ. ಆದರೆ ಒಕ್ಕೂಟ ಸರ್ಕಾರವು ಸಂಸತ್ತಿನಲ್ಲಿ ಹೇಳಿಕೆಯನ್ನು ನೀಡಿ, ತಾನು ಯಾವುದೇ ಅಕ್ರಮ ತಡೆ ನಡೆಸಿಲ್ಲ ಎಂದು ಹೇಳಿದೆ. ಆದರೆ ಸಂಸತ್ತಿನ ಎರಡೂ ಸದನಗಳಲ್ಲಿ ಈ ವಿಷಯದ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ.

“ಖಂಡಿತವಾಗಿಯೂ ಹಗರಣದ ಕುರಿತು ತನಿಖೆ ಆಗಬೇಕು. ಇಷ್ಟು ದಿನ ದೂರವಾಣಿ ಕದ್ದಾಲಿಕೆ ಕುರಿತು ಚರ್ಚೆ ನಡೆಯುತ್ತಿದೆ… ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ವರದಿಗಳಿವೆ… ಹಾಗಾಗಿ ಖಂಡಿತವಾಗಿಯೂ ಇದನ್ನು ಚರ್ಚಿಸಬೇಕು” ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಭಾರತದಲ್ಲಿ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ನ್ಯಾಯಾಧೀಶರು, ಸಾಮಾಜಿಕ ಹೋರಾಟಗಾರರು, ಉದ್ಯಮಿಗಳು  ಹಾಗೂ ಒಕ್ಕೂಟ ಸರ್ಕಾದ ಮಂತ್ರಿಗಳ ಮೇಲೆ ಕೂಡಾ ಗೂಡಾಚಾರ ನಡೆಸಲಾಗಿದೆ ಎಂದು ಪೆಗಾಸಸ್‌‌ ಕುರಿತು ವರದಿ ಹೇಳಿದೆ. ಪೆಗಾಸಸ್ ಹಗರಣದ ಕುರಿತು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ಪೆಗಾಸಸ್ ಹಗರಣ: ಗುರುವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

1 COMMENT

  1. ದುರಾದ್ಱುಷ್ಠ‌ ಡ‌ಕಾಯ‌ತ‌ರು ಜೈಲಿನ‌ಲ್ಲಿದ್ದಾರೆ.

    ಅದ್ಱುಷ್ಠ‌ವ‌0ತ‌ ಡ‌ಕಾಯ‌ತ‌ತು ಪಾರ್ಲಿಮೆ0ಟಿನ‌ಲ್ಲಿದ್ದಾರೆ.

LEAVE A REPLY

Please enter your comment!
Please enter your name here