Homeಅಂಕಣಗಳುನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ 'ಬುದ್ಧ ಬಾಬಾಸಾಹೇಬ ಮತ್ತು ನಾನು'

ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ ‘ಬುದ್ಧ ಬಾಬಾಸಾಹೇಬ ಮತ್ತು ನಾನು’

- Advertisement -
- Advertisement -

ಒಂದು ದಿನ ಸಂಜೆ ಮಹಾಲಕ್ಷ್ಮಿ ದಂತ ಚಿಕಿತ್ಸಾಲಯದ ಡಾಕ್ಟರ್ ಮತ್ತು ಕವಿ ಮಿತ್ರರಾದ ಶಿವಕುಮಾರ್ ಮಾಲಿಪಾಟೀಲ್‌ರವರ ಚೇಂಬರ್ ಪ್ರವೇಶಿಸಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡೆ. ಶೀರ್ಷಿಕೆ ಗಮನಸೆಳೆಯಿತು: ’ಬುದ್ಧ ಬಾಬಾಸಾಹೇಬ ಮತ್ತು ನಾನು’. ಅವರಿಂದ ಪುಸ್ತಕ ಪಡೆದು ಪುಟ ತಿರುವುತ್ತಾ ಹೋದೆ. ಕನ್ನಡ ನಾಡಿನ ಖ್ಯಾತ ನಟರಲ್ಲಿ ಒಬ್ಬರಾದ ಅಶೋಕ್ ಅವರಿಗೆ ಬುದ್ಧ ಮತ್ತು ಬಾಬಾಸಾಹೇಬರು ಹೇಗೆ ಅವಾಹಿಸಿಕೊಂಡಿರಬಹುದು, ನನ್ನ ಪ್ರೀತಿಯ ನಟನೊಬ್ಬನ ಮನದೊಳಗೆ ಬುದ್ಧ ಭೀಮರ ಪ್ರವೇಶ ಹೇಗಿರಬಹುದೆಂದು ಕುತೂಹಲದಿಂದ ಓದಲು ತೊಡಗಿದೆ.

ಶೂಟಿಂಗ್ ಸ್ಪಾಟ್ ಹಗಲು ಸ್ಟುಡಿಯೋ

ಶೂಟಿಂಗ್ ಸ್ಪಾಟ್‌ನಲ್ಲಿ ಪಾತ್ರಧಾರಿಯಾದ ಲೇಖಕರ ಪ್ರವೇಶದ ಜೊತೆಗೇ ಬುದ್ಧರ ಮತ್ತು ಪರಿವ್ರಾಜಕರ ಸಂಭಾಷಣೆ ಆರಂಭವಾಗುತ್ತದೆ. ಈ ಸಂಭಾಷಣೆಯನ್ನು ಹಲವು ಲೇಖಕರು ಬೇರೆಬೇರೆ ಪುಸ್ತಕಗಳಲ್ಲಿ ಬರೆದಿದ್ದಾರೆ. ಸ್ವತಃ ಅಂಬೇಡ್ಕರರು ತಮ್ಮ ಕೃತಿ ’ಬುದ್ಧ ಮತ್ತು ಆತನ ಧಮ್ಮ’ದಲ್ಲಿಯೂ ಬರೆದಿದ್ದಾರೆ. ಇಲ್ಲಿ ಬುದ್ಧ ಪರಿವ್ರಾಜಕರೊಡನೆ ಮಾತಾಡುತ್ತಿಲ್ಲ, ಬದಲಾಗಿ ಲೇಖಕರ ಒಳಗಿನ ಬುದ್ಧ ಜಾಗೃತನಾಗಿ, ಪಾತ್ರವಾಗಿ ಆವಾಹಿಸಿಕೊಂಡು ಮಾತನಾಡುವ ಬಗೆ ಮತ್ತು ಅಲ್ಲಿ ಕಟ್ಟಿಕೊಡುವ ಸನ್ನಿವೇಶಗಳಿಂದ, ಅಲ್ಲಿನ ಒಂದಷ್ಟು ಮಾತುಗಳು ಅತ್ಯುತ್ತಮವಾದ ಪ್ರವಚನದ ಹಿತ ನೀಡುತ್ತವೆ. ಮಹಾಜ್ಞಾನಿ ಬುದ್ಧನಿಗೆ ತಕ್ಕಂತೆ ಪಾತ್ರ ಮತ್ತು ಅದರ ವಿಚಾರಗಳನ್ನು ಇಲ್ಲಿ ಚರ್ಚೆ ಮಾಡಿಸಿರುವುದು ’ಬುದ್ಧ ಅಂಡ್ ಹಿಸ್ ಧಮ್ಮ’ವನ್ನು ಬಹಳ ಸರಳವಾಗಿ ವಿವರಿಸುತ್ತದೆ. ಈ ಮಾತುಗಳನ್ನು ಬರೆಯುವಾಗ ಲೇಖಕರು ಬಾಬಾಸಾಹೇಬರ ಸಂಪೂರ್ಣ ಮಾರ್ಗದ ಬಗ್ಗೆ ಸ್ಪಷ್ಟತೆಯನ್ನು ಹೊಂದಿ, ಅದನ್ನ ಮತ್ತೆ ಹೇಳುತ್ತಾ ತಮ್ಮ ಮಾರ್ಗವೂ ಸಹ ಇದೇ ಎಂಬುದನ್ನು ಇಲ್ಲಿ ಓದುಗರಿಗೆ ವಿಶದಪಡಿಸುತ್ತಾರೆ.

ಕಪಿಲವಸ್ತು ಅಧ್ಯಾಯದಲ್ಲಿ ಅಂಬೇಡ್ಕರ್‌ರವರು ತಮ್ಮ ಪತ್ನಿಯ ಜೊತೆ ಸಂಭಾಷಿಸುತ್ತಾ ಬುದ್ಧನ ಪ್ರಸ್ತುತತೆಯನ್ನು ಓದುಗರಿಗೆ ತಿಳಿಸುತ್ತಾರೆ. ಇಲ್ಲಿ ಲೇಖಕರ ಬದ್ಧತೆ ಸ್ವಲ್ಪವೂ ಅಲುಗಾಡದೆ ಸ್ಥಿರವಾಗಿದೆ. ಬುದ್ಧ ಯಾಕೆ ಈಗ ನಮಗೆ ಪ್ರಸ್ತುತ ಎಂದು ಹೇಳುತ್ತಾ “ಬುದ್ಧನ ಚಿಂತನೆಗಳು ಧಾರ್ಮಿಕವಲ್ಲ, ಅವು ಸಮಾಜಮುಖಿ” ಎನ್ನುವಾಗ ಲೇಖಕರು ವರ್ತಮಾನದ ಎಲ್ಲಾ ತಾಕಲಾಟಗಳಿಗೂ ಮಧ್ಯಮ ಮಾರ್ಗವನ್ನು ಸೂಚಿಸುತ್ತಾರೆ. ದೃಶ್ಯಮಾಧ್ಯಮದಲ್ಲಿ ಬುದ್ಧನನ್ನು ತರುವ ಬಗ್ಗೆ ಯೋಚಿಸುತ್ತಲೇ ಆರಂಭವಾಗುವ ಕಪಿಲವಸ್ತು ಅಧ್ಯಾಯ, ಬುದ್ಧನ ಬಾಲ್ಯದಿಂದ ಆತ ಮನೆ ಬಿಟ್ಟು ಹೋಗುವವರೆಗಿನ ಘಟನೆಗಳು ಸಂಕಲಿಸಿಕೊಳ್ಳುವಾಗ ಸಂಪ್ರದಾಯವಾದಿಗಳು ಬರೆದ ಪಠ್ಯಗಳನ್ನು ಮತ್ತು ಬಾಬಾಸಾಹೇಬರ ಸಂಶೋಧನಾತ್ಮಕ ಪಠ್ಯಗಳನ್ನು ಮುಖಾಮುಖಿಯಾಗಿಸುತ್ತಾರೆ.

ಎಪಿಸೋಡ್ ಮೂರರಲ್ಲಿ ಲೇಖಕರು ಒಂದು ಕುತೂಹಲಕರವಾದ ಸನ್ನಿವೇಶವನ್ನು ಕಟ್ಟಿಕೊಡುತ್ತಾರೆ. ಅದು ಕರ್ನಾಟಕದಲ್ಲಿ ನಡೆದ ಬಹುಮುಖ್ಯ ಘಟನೆಯೊಂದಿಗೆ ಆರಂಭವಾಗುತ್ತದೆ ಮತ್ತು ವರ್ತಮಾನಕ್ಕೆ ತಳುಕು ಹಾಕುತ್ತ ಸಾಗುತ್ತದೆ. ಆ ಭಾಗದಲ್ಲಿ ಮೂಡಿರುವ, ಸಶಸ್ತ್ರ ಹೋರಾಟ ಮಾಡುವ ತಂಡವನ್ನು ಮುಖ್ಯವಾಹಿನಿಗೆ ತರುವುದರೊಂದಿಗಿನ ಮಾತುಕತೆ ಕುತೂಹಲಕರವಾಗಿದೆ. ಈ ಸಂಭಾಷಣೆ ಓದುವಾಗಲೆಲ್ಲ ನನಗೆ ಬುದ್ಧನನ್ನು ಎದುರುಗೊಂಡ ಅಂಗುಲಿಮಾಲ ನೆನಪಾಗುತ್ತಾನೆ. ಲೇಖಕರು ಇಲ್ಲಿನ ಸೂಕ್ಷ್ಮ ಸನ್ನಿವೇಶವನ್ನು, ಬುದ್ಧ ಮಾಡಿದ ಬದಲಾವಣೆಯಂತೆಯೇ ಕಟ್ಟಿಕೊಡಲು, ತಾವು ಒಂದು ಪಾತ್ರವಾಗಿ ಮೂಡಿಬಂದು, ಘಟನೆಯನ್ನು ಜೋಡಿಸಿಕೊಂಡು ಓದುಗರಿಗೆ ಕುತೂಹಲವನ್ನೂ, ತಿಳಿವಳಿಕೆಯನ್ನೂ ಮೂಡಿಸುತ್ತಾರೆ.

ಪ್ರಗತಿಪರ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಮತ್ತು ಅವರ ಹಿಂದೆ ಬಿದ್ದ ಪೊಲೀಸರ ನಡುವೆ ಸಮನ್ವಯ ಸಾಧಿಸುವ ಲೇಖಕರು, ಹೋರಾಟಗಾರರು ಮುಖ್ಯವಾಹಿನಿಗೆ ಬಂದ ನಂತರದ ಮುಂದಿನ ಯೋಜನೆಯನ್ನು ಜಾರಿಯಲ್ಲಿಡುವ ಭಾಗವಾಗಿ ಆರಂಭಿಕ ಸಭೆಗಳನ್ನು ನಡೆಸುತ್ತಾರೆ. ಅವರೇ ಕೊನೆಯಲ್ಲಿ ಹೇಳುವಂತೆ ಸಿದ್ಧತಾ ಪರ್ವ ಮುಗಿಯಿತೆಂದು ಕಥೆಯನ್ನು ಸಮಾಪ್ತಿ ಮಾಡುತ್ತಾರೆ. ಹೀಗೆ ಹೇಳುವಾಗ ಓದುಗನಿಗೆ ಧಾರಾವಾಹಿ ಎಪಿಸೋಡ್‌ಗಳ ಕಾಯುವಿಕೆಯ ಭಾಸವಾಗುತ್ತದೆ. ವರ್ತಮಾನದೊಂದಿಗೆ ಭೂತ ಮತ್ತು ಭವಿಷ್ಯತ್ತು ಬೆಸೆಯುವ ಈ ಭಾಗದಲ್ಲಿ ಲೇಖಕರ ವಿಶಿಷ್ಟ ನಿರೂಪಣೆ ಗಮನ ಸೆಳೆಯುತ್ತದೆ. ಎಪಿಸೋಡ್ 3 ಓದುವಾಗಲೆಲ್ಲಾ ನನ್ನೊಳಗಿನ ವಿಚಾರಗಳಿಗೆ ಪುಷ್ಟಿ ಸಿಗುತ್ತದೆ ಮತ್ತು ಸ್ಪಷ್ಟತೆ ದೊರಕುತ್ತದೆ. ಭ್ರಷ್ಟ ರಾಜಕಾರಣವನ್ನು ಕೊನೆಗಾಣಿಸಿ ಮತ್ತೊಂದು ಹೊಸ ಪಡೆಯನ್ನು ಕಟ್ಟುವ ಕನಸುಗಳ ಭಾಗವಾಗಿ ನಮ್ಮನ್ನು ಅದರಲ್ಲಿ ಸೇರಿಸಿಕೊಂಡು ಓದಿಸಿಕೊಂಡು ಹೋಗುತ್ತದೆ.

ಈ ಕೃತಿಯಲ್ಲಿ ಕಥೆಯನ್ನು ಜೋಡಿಸಿಕೊಂಡು ಹೊಸೆದಿರುವ ಬಗೆ ಹೊಸದು. ಇದು ಕಥೆಯೊಳಗಿನ ಕಾದಂಬರಿಯೋ, ಕಾದಂಬರಿಯೊಳಗಿನ ಅಧ್ಯಾಯವೋ, ಮಹಾ ಧಾರಾವಾಹಿಯ ಮೊದಲ ಕಂತೋ ಎಂಬ ಗೊಂದಲ ಉಂಟಾಗುತ್ತದೆ. ಆದರೆ, ಎಲ್ಲಿಯು ಬೋರಾಗದೆ ಓದಿಸಿಕೊಂಡುಹೋಗುವ, ಚರಿತ್ರೆಯೊಳಗಿನ ಹಲವು ಸಂಗತಿಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡುವ ಬಗೆ ಆಪ್ತವಾಗಿಯೂ, ಗಹನವಾಗಿಯೂ ಮೂಡಿದೆ. ಮತ್ತೊಂದು ವಿಶೇಷವೇನೆಂದರೆ ಪೂನಾ ಒಪ್ಪಂದವನ್ನು ಬಹಳ ಸರಳವಾಗಿ ಹೇಳುತ್ತಾ ಲೇಖಕರು ನಮಗೆ ಆಪ್ತರಾಗಿಬಿಡುತ್ತಾರೆ. ಈ ಕೃತಿಯನ್ನು ಪೂರ್ಣ ಓದಿದನಂತರ ಲೇಖಕರ ಒಳಗಿನ ಬುದ್ಧತ್ವ ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸಿ ಬಾಬಾಸಾಹೇಬರ ಹಾದಿ ಎಂತಹುದು ಎಂದು ಅರಿವಿಗೆ ತರುತ್ತದೆ.

ಲೇಖಕರಾದ ಅಶೋಕ್‌ರವರ ಬದ್ಧತೆ ಮತ್ತು ವಿಷಯದ ಪ್ರಸ್ತುತತೆ ಜೊತೆಗೆ ಅವರು ಆರಿಸಿಕೊಂಡ ಪ್ರಕಾರ ನನಗಿಷ್ಟವಾಯಿತು. ಬುದ್ಧನ ಪ್ರೀತಿ ಇಲ್ಲಿದೆ ಎಂದುಕೊಳ್ಳುತ್ತೇನೆ…

ನಮೋ ಬುದ್ಧಾಯ, ಜೈಭೀಮ್

ರಮೇಶ್ ಗಬ್ಬೂರ್

ರಮೇಶ್ ಗಬ್ಬೂರ್
ಎದೆಯೊಳಗಿನ ಸಿಟ್ಟನ್ನು ಬಸಿದು ಅಕ್ಷರ ರೂಪ ಕೊಡುವ ರಮೇಶ್ ಗಬ್ಬೂರ್ ರವರು ಜನಕವಿ ಎಂದೇ ಪರಿಚಿತರು. ‘ಒಲಿದಂತೆ ಹಾಡುವೆ’ ಸೇರಿ ಹಲವು ಹೋರಾಟದ ಹಾಡುಗಳ ಪುಸ್ತಕ ರಚಿಸಿದ್ದಾರೆ. ಸದ್ಯಕ್ಕೆ ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪುಸ್ತಕ ಮನೆʼಯ ಅಂಕೇಗೌಡ ಸೇರಿ ರಾಜ್ಯದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ

ಕರ್ನಾಟಕದ ಮೂವರು ಸೇರಿದಂತೆ ದೇಶದ ಒಟ್ಟು 45 ಸಾಧಕರನ್ನು 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಂಡ್ಯ ಮೂಲದ ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ವೈದ್ಯ...

ದೆಹಲಿ ಲೆಫ್ಟಿನೆಂಟ್ ಗವರ್ನರ್ ಮಾನನಷ್ಟ ಪ್ರಕರಣ : ಹೋರಾಟಗಾರ್ತಿ ಮೇಧಾ ಪಾಟ್ಕರ್ ಖುಲಾಸೆ

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 20 ವರ್ಷಗಳ ಹಿಂದಿನ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ (ಜ.24) ಖುಲಾಸೆಗೊಳಿಸಿದೆ ಎಂದು ಬಾರ್...

ಆರ್‌ಜೆಡಿ ರಾಷ್ಟ್ರೀಯ ಕಾರ್ಯಕಾರಿ ಸಭೆ; ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ನೇಮಕ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರನ್ನು, ಇಂದು (ಜ.25) ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 'ಮಹಾಘಟಬಂಧನ್' 36...

ಹಿಂದುತ್ವ ಗುಂಪಿನಿಂದ ಕಿರುಕುಳ : ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದ ಜೋಡಿ

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹಿಂದುತ್ವ ಗುಂಪು ಕಿರುಕುಳ ನೀಡಿದ್ದರಿಂದ ಜೋಡಿಯೊಂದು ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದಿದ್ದು, ಈ ಸಂಬಂಧ ಎಂಟು ಮಂದಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ದಿ ನ್ಯೂ...

ಹಿಂದಿ ಚಿತ್ರಗಳು ತಮ್ಮ ಬೇರುಗಳನ್ನು ಕಳೆದುಕೊಂಡಿವೆ, ಹಣ ಆಧಾರಿತವಾಗಿವೆ: ಪ್ರಕಾಶ್ ರಾಜ್

ದೃಢ, ವಿಷಯಾಧಾರಿತ ಕಥೆ ನಿರೂಪಣೆಯಿಂದ ಪ್ರಶಂಸಿಸಲಾದ ಮಲಯಾಳಂ ಮತ್ತು ತಮಿಳು ಸಿನಿಮಾಗಳಿಗಿಂತ ಭಿನ್ನವಾಗಿ, ಹಿಂದಿ ಸಿನಿಮಾ ತನ್ನ ಬೇರುಗಳನ್ನು ಕಳೆದುಕೊಂಡಿದೆ. ಹೆಚ್ಚು ಹೆಚ್ಚು ನಕಲಿ ಮತ್ತು ಹಣ-ಆಧಾರಿತವಾಗುತ್ತಿದೆ ಎಂದು ನಟ ಪ್ರಕಾಶ್ ರಾಜ್...

ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ದರೋಡೆ: ಏನಿದು ಪ್ರಕರಣ..ಬೆಳಗಾವಿ ಎಸ್ಪಿ ಹೇಳಿದ್ದೇನು?

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಚೋರ್ಲಾ ಘಾಟ್‌ನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ...

‘ಅಲೈಡ್ ಹೆಲ್ತ್ ಕೋರ್ಸ್‌ಗಳ ನೀಟ್ ಪರೀಕ್ಷೆಯಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ..’; ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಅಲೈಡ್ ಹೆಲ್ತ್ ಕೋರ್ಸ್‌ಗಳ ಪ್ರವೇಶದಿಂದ ಹೊರಗಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು...

ಬಾಂಗ್ಲಾದೇಶ| ಗ್ಯಾರೇಜ್ ಒಳಗೆ ಮಲಗಿದ್ದ ಹಿಂದೂ ಯುವಕ ಜೀವಂತ ದಹನ

ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ನರಸಿಂಗ್ಡಿಯಲ್ಲಿ ಗ್ಯಾರೇಜ್ ಒಳಗೆ ಮಲಗಿದ್ದ 23 ವರ್ಷದ ಹಿಂದೂ ವ್ಯಕ್ತಿ ಜೀವಂತವಾಗಿ ದಹನಗೊಂಡ ಘಟನೆ ನಡೆದಿದ್ದು, ಈ ಘಟನೆಯು ರಾಷ್ಟ್ರೀಯ ಚುನಾವಣೆಗೂ ಮುನ್ನ...

ಚುನಾವಣಾ ಆಯೋಗ ನಿರಂತರ ಒತ್ತಡ ಎದುರಿಸುತ್ತಿದೆ, ಅದರ ಸ್ವಾತಂತ್ರ್ಯ ರಕ್ಷಿಸಬೇಕಿದೆ : ಮಲ್ಲಿಕಾರ್ಜುನ ಖರ್ಗೆ

ಇತ್ತೀಚಿನ ದಿನಗಳಲ್ಲಿ, ಚುನಾವಣಾ ಆಯೋಗದಂತಹ ಸಂಸ್ಥೆಗಳು ನಿರಂತರ ಒತ್ತಡವನ್ನು ಎದುರಿಸುತ್ತಿವೆ. ಆದ್ದರಿಂದ ಪ್ರಜಾಪ್ರಭುತ್ವವು ಕೇವಲ ಉಳಿಯುವುದಲ್ಲದೆ, ನಿಜವಾಗಿಯೂ ಅಭಿವೃದ್ಧಿ ಹೊಂದುವಂತೆ ಅವುಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು 'ನಮ್ಮ ಜವಾಬ್ದಾರಿ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿ ‘ಮತ ಕಳ್ಳತನ’ಕ್ಕೆ ಎಸ್‌ಐಆರ್‌ ಬಳಕೆ: ರಾಹುಲ್ ಗಾಂಧಿ

ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಕುರಿತ ತಮ್ಮ ವಾಗ್ದಾಳಿಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರಗೊಳಿಸಿದ್ದಾರೆ. ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿ...