Homeಅಂಕಣಗಳುನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

- Advertisement -
- Advertisement -

ಕಥೆಯಾಗುವ ಮತ್ತು ಕಥೆಯಾಗಿಸುವ ಎರಡೂ ಪ್ರಕ್ರಿಯೆಗಳು ಬಹಳ ಸುಲಭದಂತೆ ಕಂಡರೂ ಅವು ಸಂಕೀರ್ಣವಾದವು ಮತ್ತು ಬೌದ್ಧಿಕವಾಗಿ ತೊಡಗಿಸಿಕೊಳ್ಳುವ ಕೆಲಸದಿಂದ ಕೂಡಿದ್ದಾಗಿರುತ್ತದೆ ಎಂಬುದು ಸಾಹಿತ್ಯದ ಅಭ್ಯಾಸಿಗಳಿಗೆ ಗೋಚರಿಸುವ ಸಂಗತಿಯಾಗಿವೆ. ಕಣ್ಣಾರೆ ಕಂಡದ್ದೋ, ಅಥವಾ ಕಿವಿಯಾರೆ ಕೇಳಿದ ವಿಷಯಗಳು ಕಥೆಗಾರನ ಕಲ್ಪನಾ ಮೂಸೆಯಲ್ಲಿ ರೂಪಾಂತರವಾಗುವುದು ಒಂದು ವಿಶೇಷ ಕ್ರಿಯೆ. ಅದರೊಂದಿಗೆ ಅನುಭವಕ್ಕೆ ದಕ್ಕಿದ ಮತ್ತು ದಕ್ಕದೇ ಉಳಿದ ಎಷ್ಟೋ ವಿಷಯ-ವಸ್ತುಗಳು ಕೂಡ ಕಥೆಯಾಗುವ ಪ್ರಕ್ರಿಯೆಯಲ್ಲಿ ಮುಖ್ಯವೆನಿಸುತ್ತವೆ. ಇಂಥ ಪ್ರಕ್ರಿಯೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ಕಾರಣಗಳಿಂದಲೇ ’ನೀಲಕುರಿಂಜಿ’ ಬಹುಮುಖ್ಯವಾದ ಕಥಾಸಂಕಲನ ಎಂದೆನಿಸುತ್ತದೆ.

ಯುವ ಬರಹಗಾರ ದಾದಾಪೀರ್ ಜೈಮನ್ ಅವರಿಗಿರುವ ವಿಶಾಲ ದೃಷ್ಟಿಕೋನ, ನಿರೂಪಣಾ ಶೈಲಿ ಮತ್ತು ಕಥೆ ಹೆಣೆಯುವ ತಂತ್ರ ಹೊಸ ಕಥಾಮೀಮಾಂಸೆಯನ್ನು ಕಟ್ಟುವ ಪ್ರಯತ್ನ ಮಾಡಿದೆ ಎಂದರೂ ಅತಿಶಯೋಕ್ತಿಯಾಗಲಾರದು!

ದಾದಾಪೀರ್ ಜೈಮನ್ ಅವರ ಚೊಚ್ಚಲ ಕಥಾಸಂಕಲನ ’ನೀಲಕುರಿಂಜಿ’. ಇದರಲ್ಲಿನ ಕಥೆಗಳು ಹೊಸ ಅಸ್ಮಿತೆಗಳ ಆತ್ಮನಿವೇದನೆಯಂತೆಯೇ ಕಾಣುತ್ತವೆ. ಇಲ್ಲಿನ ಸಾಕಷ್ಟು ಕಥೆಗಳು ಎತ್ತುವ ಪ್ರಶ್ನೆಗಳಿಗೆ ಹೃದಯಶೂನ್ಯ ಸ್ಥಿತಿಯಲ್ಲಿರುವ ಸಮಾಜ ಉತ್ತರವಿಲ್ಲದೆ ತತ್ತರಿಸಿ ಹೋಗಬಹುದೇ ಎಂದೆನಿಸುತ್ತದೆ. ಒಂಟಿತನದ ಒದ್ದಾಟದಿಂದ ಹಿಡಿದು ಸಾವಿಗಾಗಿ ಕಾಯುವವರೆಗೂ ಇರಬಹುದಾದ ಬದುಕಿನ ಎಲ್ಲ ಸ್ತರಗಳ ಚಿತ್ರಗಳು ’ನೀಲಕುರಿಂಜಿ’ಯ ಕ್ಯಾನ್ವಾಸಿನ ಮೇಲೆ ಮೂಡಿವೆ.

ದಾದಾಪೀರ್ ಜೈಮನ್

ಮತಧರ್ಮಗಳಲ್ಲಿರುವ ಸಣ್ಣತನ ಮತ್ತು ಮನುಷ್ಯಪ್ರೀತಿಯ ಧರ್ಮದೊಳಗಿನ ದೊಡ್ಡತನಗಳ ನಡುವೆ ಇರುವ ಗೆರೆಯನ್ನು ಮುಗ್ಧ ಮಗುವಿನ ಹಾಗೆ ನೋಡುವಂತೆ ಮಾಡುವ ಇಮ್ರಾನ್ ಎಂಬ ಕೂಸು, ’ಪ್ರೀತಿಯಿಂದ ಗೆಲ್ಲಬಹುದು’ ಎಂಬುದನ್ನು ಕಲಿಸಿಕೊಡುವ ಗೆಳತಿಯ ಸ್ಟೇಟಸ್‌ನ ಪಾಠವು, ’ಬಾಯಾರಿಕೆ ಆದಾಗ ನೀರು ಕುಡಿಯೋದು ತಪ್ಪಾ?’ ಎಂದು ಮಹಿಳೆಯ ಲೈಂಗಿಕ ಸ್ವಾತಂತ್ರ್ಯದ ಹಕ್ಕಿನ ಪ್ರಶ್ನೆಗೆ ದನಿಯಾಗುವ ಅಜ್ಜಿಯೂ, ಸಂಬಂಧಗಳ ಸಂಕೋಲೆಯಲ್ಲಿ ಸತ್ತು ಬದುಕುವ ಮತ್ತು ಬದುಕಿಯೂ ಸಾಯುವ ’ಕೊನೆಯ ಮಳೆ’ಯ ಹನಿಯೂ, ಹೀಗೆ ಕಥೆಗಳ ಹೂರಣ ಮನುಷ್ಯನ ಒದ್ದಾಟಗಳ ಅನುಭವಗಳನ್ನು ಯಥಾವತ್ತಾಗಿ ಅನುವಾದ ಮಾಡಿದಹಾಗಿದೆ.

ಮೇಲ್‌ಸ್ತರದ ಅಂಶಗಳಷ್ಟೇ ಈ ಸಂಕಲನದ ಕಥೆಗಳಲ್ಲಿ ಅಭಿವ್ಯಕ್ತಗೊಂಡಿದ್ದರೆ ಇದು ಮತ್ತೊಂದು ಕಥಾಸಂಕಲವಾಗಿ ಉಳಿದುಹೋಗುತ್ತಿತ್ತು. ಆದರೆ ಈ ಸಂಕಲನದ ಕಥೆಗಳ ವಿಶೇಷವೆಂದರೆ ಹೊಸ ಅಸ್ಮಿತೆಗಳನ್ನು ಆಲಂಗಿಸುವ ಮನಸ್ಥಿತಿಗಳನ್ನು ರೂಪಿಸಿರುವುದಾಗಿದೆ. ಸಲಿಂಗ ಪ್ರೇಮದ ಸೆಳೆತಗಳು ಮತ್ತು ಅದರಿಂದಲೂ ಬಿಡಿಸಿಕೊಂಡು ಬದುಕಬೇಕು ಎನ್ನುವ ಹಪಾಹಪಿಯ ವಿಚಿತ್ರ ಬದುಕಿನ ರೀತಿಯನ್ನು ಕಥೆಗಾರ ಚಿತ್ರಿಸಿರುವುದು ಈ ಹೊಸ ಅಸ್ಮಿತೆಗಳ ಮಾತಿಗೆ ರುಜುವಾತಿನಂತಿದೆ. ಅನಂತು ಅನು ಆಗಿ ಬದಲಾವಣೆ ಆಗುವುದನ್ನು ಈ ಸಮಾಜ ನೋಡುವ ರೀತಿಯ ಮನೋವೈಶಿಷ್ಟತೆಯನ್ನು ’ಆವರಣ’ ಕಥೆಯಲ್ಲಿ ಕಾಣಬಹುದು. ಇನ್ನು ’ಆಳದಾಕಾಶದ ಪ್ರತಿಬಿಂಬ’ ಎನ್ನುವ ಇಡೀ ಕಥೆ ಒಂದು ರೂಪಕವಾಗಿ ಚಿತ್ರಿಸಿರುವುದು ನಿಜಕ್ಕೂ ಸೋಜಿಗವೆನ್ನಿಸುತ್ತದೆ.

ಹೊಸ ಅಸ್ಮಿತೆಯಯನ್ನು ಕಟ್ಟಿಕೊಂಡು, ತನ್ನದಾಗಿಸಿಕೊಂಡು ಬದುಕ ಹೊರಟವರ ಸಂವೇದನೆಗಳು ಮತ್ತು ಒಡಲಾಳದ ಸಂಕಟಗಳು ಈ ಕತೆಗಳ ನೀತಿಸಂಹಿತೆಯಂತೆ ಇವೆ. ಲಿಂಗ ಅಲ್ಪಸಂಖ್ಯಾತರನ್ನು ನೋಡುವ ಕ್ರಮವನ್ನು ಬದಲಿಸಿಕೊಳ್ಳುವ ಮತ್ತು ತಿದ್ದಿಕೊಳ್ಳುವ, ಬದುಕಿನ ವ್ಯಾಕರಣವನ್ನು ಹೊಸದಾಗಿ ವ್ಯಾಖ್ಯಾನಿಸುವ ರೀತಿಯನ್ನು ಈ ನೀತಿಸಂಹಿತೆ ಒಳಗೊಂಡಿದ್ದು ಅನುಕರಣೀಯವಾಗಿದೆ.

ಇವುಗಳ ಜೊತೆಗೆ ಭಾಷೆಯನ್ನು ಅಗತ್ಯವಿದ್ದಲ್ಲಿ ಸೂಕ್ಷ್ಮವಾಗಿ ಮತ್ತು ಬೇಕಿದ್ದಲ್ಲಿ ತೀಕ್ಷ್ಣವಾಗಿ ಬಳಸುವ ನಿರೂಪಣಾ ತಂತ್ರ ಕಥೆಗಾರನಿಗೆ ಒಲಿದಿದೆ. ಕೆಲವು ಕಡೆಗೆ ಅನಗತ್ಯವೆನಿಸದರೂ ತನಗೇ ಅರಿವಿಲ್ಲದಂತೆ ಕಥೆಯನ್ನು ವಿವರಿಸುವ ಆಸ್ಥೆಯನ್ನು ಕತೆಗಾರ ತೋರಿದರೂ, ನಾಲ್ಕಾರು ಸಾಲುಗಳಲ್ಲಿ ಹೇಳಬಹುದಾದ ವಿಚಾರವನ್ನು ಒಂದೇ ರೂಪಕದ ಮೂಲಕವೂ ಹೇಳುವುದು ಕಥಾ ಕೌಶಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಒಟ್ಟಿನಲ್ಲಿ ’ನೀಲಕುರಿಂಜಿ’ ಕಥಾ ಸಂಕಲನ ವಿನೂತನ ಪ್ರಯೋಗಗಳ ವಿಶಿಷ್ಟವಾದ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್
ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ. ಬೆಂಗಳೂರು ವಿ ವಿ


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಯಾರು ಭಾರತ ಮಾತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...